ಕ್ರೈಂ

ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯ‌ ಶಂಕಾಸ್ಪದ ಸಾವು| ”ಆತ್ಮಹತ್ಯೆಯಲ್ಲ ಕೊಲೆ” ಎಂದ ಪೋಷಕರು

ಸಮಗ್ರ ನ್ಯೂಸ್: ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನ (AFTC) 27 ವರ್ಷದ ವಿದ್ಯಾರ್ಥಿನಿ ಅಂಕಿತ್ ಕುಮಾರ್ ಝಾ ಸೆಪ್ಟೆಂಬರ್ 21ರಂದು ರಾಜಧಾನಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಇದೊಂದು ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ. ಸಂತ್ರಸ್ತೆಯ ಸಹೋದರ ಅಮನ್ ಝಾ ನೀಡಿದ ದೂರಿನ ಆಧಾರದ ಮೇಲೆ ಉತ್ತರ ಬೆಂಗಳೂರಿನ ಯಶವಂತಪುರದ ಗಂಗಾಮಂಗುಡಿ ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರೆಲ್ಲರ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಉತ್ತರ ಬೆಂಗಳೂರು […]

ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯ‌ ಶಂಕಾಸ್ಪದ ಸಾವು| ”ಆತ್ಮಹತ್ಯೆಯಲ್ಲ ಕೊಲೆ” ಎಂದ ಪೋಷಕರು Read More »

ಸುಳ್ಯ: ಬೈಕ್-ರಿಕ್ಷಾ ನಡುವೆ ಭೀಕರ ಅಪಘಾತ| ಬೈಕ್ ಸವಾರ ಸಾವು, ಮತ್ತೊಬ್ಬ ಗಂಭೀರ

ಸಮಗ್ರ ನ್ಯೂಸ್: ಬೈಕ್ ಮತ್ತು‌ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಜಖಂಗೊಂಡ ಘಟನೆ ಮಾಣಿ- ಮೈಸೂರು‌ ರಾ.ಹೆದ್ದಾರಿಯ ಸುಳ್ಯ‌ ಸಮೀಪದ ಪರಿವಾರಕಾನ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಕೆವಿಜಿ ಐಟಿಐ ವಿದ್ಯಾರ್ಥಿ ಪ್ರತೀಕ್ ಎಂದು ಗುರುತಿಸಲಾಗಿದೆ. ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಮಗ ಪ್ರತೀಕ್ ಇಂದು ಬೆಳಿಗ್ಗೆ ಕಲ್ಲುಗುಂಡಿಯಿಂದ ರಾಘವೇಂದ್ರ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ತೇಜಸ್ ಎಂಬ ಯುವಕನ ಜೊತೆ ಬೈಕ್‌ನಲ್ಲಿ ಸುಳ್ಯಕ್ಕೆ

ಸುಳ್ಯ: ಬೈಕ್-ರಿಕ್ಷಾ ನಡುವೆ ಭೀಕರ ಅಪಘಾತ| ಬೈಕ್ ಸವಾರ ಸಾವು, ಮತ್ತೊಬ್ಬ ಗಂಭೀರ Read More »

ವಿಜಯಪುರ: ಸಹೋದರಿಬ್ಬರು ನೀರು ಪಾಲು

ಸಮಗ್ರ ನ್ಯೂಸ್: ಸಹೋದರಿಬ್ಬರು ನೀರು ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಪಟ್ಟಣದ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ನಡೆದಿದೆ. ಸುನೀಲ ಕಲ್ಲಪ್ಪ ಮಾದರ್, ಅನಿಲ ಕಲ್ಲಪ್ಪ ಮಾದರ ನೀರುಪಾಲಾದವರು. ಇವರು ಜಮೀನಿಗೆ ನೀರು ಹಾಯಿಸಲು ಹೋದಾಗ ಈ ದುರ್ಘಟನೆ ಸಂಬಂಧಿಸಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರ: ಸಹೋದರಿಬ್ಬರು ನೀರು ಪಾಲು Read More »

ಉಡುಪಿ: ಹೂಡೆ ಬೀಚ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು; ಮತ್ತೋರ್ವ ನಾಪತ್ತೆ

ಸಮಗ್ರ ನ್ಯೂಸ್: ಹೂಡೆ ಸಮೀಪದ ಬೀಚ್‌ನಲ್ಲಿ ರವಿವಾರ ಸಂಜೆ ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಓರ್ವ ಸಮುದ್ರಪಾಲಾಗಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ಬೆಂಗಳೂರಿನ ನಿಶಾಂತ್ (21) ಹಾಗೂ ಷಣ್ಮುಗ (21) ಎಂದು ಗುರುತಿಸಲಾಗಿದೆ.ಇನ್ನೋರ್ವ ವಿದ್ಯಾರ್ಥಿ ಶ್ರೀಕರ್ (21) ಎಂಬವರು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಇವರೆಲ್ಲರು ಮಣಿಪಾಲದ ಐಸಿಎಎಸ್ ವಿದ್ಯಾರ್ಥಿಗಳಾಗಿದ್ದಾರೆ. ವಾರಾಂತ್ಯ ಹಿನ್ನೆಲೆಯಲ್ಲಿ ಮಣಿಪಾಲದ ಸುಮಾರು 15 ಮಂದಿ ವಿದ್ಯಾರ್ಥಿಗಳು ಹೂಡೆ ಬೀಚ್‌ನಲ್ಲಿ ವಿಹಾರಕ್ಕೆಂದು ಬಂದಿದ್ದರು. ಅಲ್ಲಿ ಕೆಲವರು ಸಮುದ್ರದ ನೀರಿನಲ್ಲಿ ಆಡುತ್ತಿದ್ದ

ಉಡುಪಿ: ಹೂಡೆ ಬೀಚ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು; ಮತ್ತೋರ್ವ ನಾಪತ್ತೆ Read More »

ಲಂಚ, ಭ್ರಷ್ಟಾಚಾರಕ್ಕೆ ರಾಜ್ಯ ಸರ್ಕಾರದಿಂದ ತೇಪೆ ಕಾರ್ಯ| ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಕ್ತ ನಾಮಫಲಕ!

ಸಮಗ್ರ ನ್ಯೂಸ್: ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ಶೀರ್ಷಿಕೆಯ ನಾಮಫಲಕವನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಪೇ ಸಿಎಂ ಪೋಸ್ಟರ್ ಕಾಂಗ್ರೆಸ್ ಅಭಿಯಾನಕ್ಕೆ ರಾಜ್ಯ ಸರ್ಕಾರದಿಂದ ಟಕ್ಕರ್ ಕೊಡಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಳವಡಿಸಲು ಅದೇಶ ಮತ್ತು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ರಿಂದ ಮಹತ್ವದ ಆದೇಶ ಮಾಡಲಾಗಿದೆ. ಅಕ್ಟೋಬರ್

ಲಂಚ, ಭ್ರಷ್ಟಾಚಾರಕ್ಕೆ ರಾಜ್ಯ ಸರ್ಕಾರದಿಂದ ತೇಪೆ ಕಾರ್ಯ| ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಕ್ತ ನಾಮಫಲಕ! Read More »

ರಾಷ್ಟ್ರ ರಾಜಧಾನಿಯಲ್ಲಿ‌ ಬಾಲಕರೂ ಸೇಫಲ್ಲ| 12 ವರ್ಷದ ಬಾಲಕನ ಮೇಲೆ‌ ನಾಲ್ವರಿಂದ ಅತ್ಯಾಚಾರ ಮಾಡಿ ಹಲ್ಲೆ!!

ಸಮಗ್ರ ನ್ಯೂಸ್: 12 ವರ್ಷದ ಬಾಲಕನ ಮೇಲೆ ನಾಲ್ವರು ಅತ್ಯಾಚಾರ ಎಸಗಿ ಬಳಿಕ ಅಪ್ರಾಪ್ರನನ್ನು ದೊಣ್ಣೆಗಳಿಂದ ಹೊಡೆದು ಅರೆಬೆಂದ ಸ್ಥಿತಿಯಲ್ಲಿ ಬಿಟ್ಟು ಹೋದಂತಹ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದು, ದೆಹಲಿಯಲ್ಲಿ, ಹುಡುಗರು ಸಹ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ. ಮಹಿಳಾ ಸಮಿತಿಯು ಘಟನೆ ಸಂಬಂಧ ದೆಹಲಿ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿದೆ ಎಂದು ಸ್ವಾತಿ ಪಲಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಹುಡುಗಿಯರು ಬಿಡಿ,

ರಾಷ್ಟ್ರ ರಾಜಧಾನಿಯಲ್ಲಿ‌ ಬಾಲಕರೂ ಸೇಫಲ್ಲ| 12 ವರ್ಷದ ಬಾಲಕನ ಮೇಲೆ‌ ನಾಲ್ವರಿಂದ ಅತ್ಯಾಚಾರ ಮಾಡಿ ಹಲ್ಲೆ!! Read More »

ಅಮವಾಸ್ಯೆಯಂದೇ ಮಾಂತ್ರಿಕೆಯ ಮನೆ ಮೇಲೆ ದಾಳಿ| ಪೊಲೀಸರ ಮುಂದೆ ಮಹಿಳಾ ಮಾಂತ್ರಿಕೆಯ ಹೈಡ್ರಾಮಾ

ಸಮಗ್ರ ನ್ಯೂಸ್: ದೇವರ ಹೆಸರಿನಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ‌ ಮಹಿಳಾ ಮಾಂತ್ರಿಕೆಯ ಮನೆ ಮೇಲೆ ಅಮವಾಸ್ಯೆಯಂದೇ ಪೊಲೀಸ್ ದಾಳಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಡೆದಿದೆ. ಜೀಲಾನಿ ಅಬ್ದುಲ್ ವುಲ್ಲಾ ಪ್ರಕರಣದ ಆರೋಪಿ. ಈಕೆ ಮಾಟ ಮಂತ್ರ ಮಾಡುತ್ತೇನೆ ಎಂದು ನೂರಾರು ಜನರಿಗೆ ನಂಬಿಸಿ ಹಣ ಪೀಕುತಿದ್ದಳು. ಅಲ್ಲದೆ ದೇವರ ಹೆಸರಿನಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ‌ಳು. ಹೀಗಾಗಿ ಮಹಿಳೆಯ ಮೈದುನ ಶಮೀರ್ ಅಬ್ದುಲ್ ವುಲ್ಲಾರಿಂದ ದೂರು ದಾಖಲಾಗಿತ್ತು. ದೂರು ಹಿನ್ನೆಲೆ ಮತ್ತು

ಅಮವಾಸ್ಯೆಯಂದೇ ಮಾಂತ್ರಿಕೆಯ ಮನೆ ಮೇಲೆ ದಾಳಿ| ಪೊಲೀಸರ ಮುಂದೆ ಮಹಿಳಾ ಮಾಂತ್ರಿಕೆಯ ಹೈಡ್ರಾಮಾ Read More »

ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ
ಬಲವಂತವಾಗಿ ಮತಾಂತರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳಿ: ಅಂಬೇಡ್ಕರ್ ರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದವ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪೊಲೀಸ್ ಇಲಾಖೆಯವರಿಗೆ ಮನವಿ ಮಾಡಲಾಯಿತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಎಂಬವರು ಮತಾಂತರಕ್ಕೆ ಒಳಗಾಗಿರುವವರು. ಇವರನ್ನು ಬಲವಂತವಾಗಿ ಮಸೀದಿಯಲ್ಲಿ ಬಂಧಿಸಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಲಾಗಿತ್ತು. ಹಾಗಾಗಿ ಮತಾಂತರ ಮಾಡಿದ 11 ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಿ ಕಠಿಣ ಕ್ರಮ

ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ
ಬಲವಂತವಾಗಿ ಮತಾಂತರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳಿ: ಅಂಬೇಡ್ಕರ್ ರಕ್ಷಣಾ ವೇದಿಕೆ
Read More »

ಸೇತುವೆ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆ

ಸಮಗ್ರ ನ್ಯೂಸ್: ಸೇತುವೆ ಬಳಿ ಬೈಕ್ ಬಿಟ್ಟು ಯುವಕನೊಬ್ಬ ನಾಪತ್ತೆಯಾದ ಘಟನೆಯೊಂದು ಪಡುಕೆರೆಯ ಪಾಪನಾಸಿನಿ ನದಿ ಸಮೀಪ ನಡೆದಿದೆ. ನಾಪತ್ತೆಯಾದ ಯುವಕನನ್ನು ದಾವಣಗೆರೆ ಮೂಲದ ಶಿವ ಎಂದು ಗುರುತಿಸಲಾಗಿದೆ. ಯುವಕ ಉಡುಪಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗಿದ್ದು, ಪಾಪನಾಸಿನಿ ನದಿಗೆ ಕಟ್ಟಲಾಗಿರುವ ಸೇತುವೆ ಬಳಿ ಬೈಕ್ ಪತ್ತೆಯಾಗಿದ್ದು, ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದ ಯುವಕನಿಗಾಗಿ ಸ್ಥಳೀಯ ಮುಳುಗು ತಜ್ಞರಿಂದ ಶೋಧ ನಡೆಸಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇತುವೆ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆ Read More »

ಹಾವು ಕಚ್ಚಿ ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ವಿದ್ಯಾರ್ಥಿನಿಯೊಬ್ಬಳು ಹಾವು ಕಡಿದು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಶಿವನೂರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ 10ನೇ ತರಗತಿ ವಿದ್ಯಾರ್ಥಿನಿ ದೀಪಾ ಅಪ್ಪಾಸಾಬ ಮೇತ್ರಿ ಹಾವು ಕಚ್ಚಿ ಸಾವನ್ನಪ್ಪಿದ್ದ ದುರ್ದೈವಿ. ಶನಿವಾರ ಶಾಲೆ ಮುಗಿಸಿ ಮನೆಗೆ ಬಂದು ಮನೆಯಲ್ಲಿ ಮಲಗಿದಾಗ ಹಾವು ಕಚ್ಚಿದೆ. ತಕ್ಷಣ ಎಚ್ಚರಗೊಂಡು ಗಮನಿಸಿದಾಗ ಮನೆಯವರಿಗೆ ಹಾವು ಕಚ್ಚಿರುವ ವಿಷಯ ಗೊತ್ತಾಗಿದೆ. ನಂತರ ಚಿಕಿತ್ಸೆ ಕರೆದುಕೊಂಡು ಹೋಗುವ ಸಮಯದಲ್ಲಿ ನಡುದಾರಿಯಲ್ಲಿ ದಾರಿಯಲ್ಲಿ ಸಾವನ್ನಪ್ಪಿದ್ದು ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಾವು ಕಚ್ಚಿ ವಿದ್ಯಾರ್ಥಿನಿ ಸಾವು Read More »