ಕ್ರೈಂ

ಸುಳ್ಯ: ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಶಂಕಾಸ್ಪದ ವ್ಯಕ್ತಿಗಳ ತಿರುಗಾಟ; ಮಾಹಿತಿ ತಿಳಿಸಲು ಠಾಣಾಧಿಕಾರಿ ಸೂಚನೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ,ಮುರೂರು, ಬಡ್ಡಡ್ಕ, ಕನ್ನಡಿ ತೋಡು ಚೆಕ್ ಪಾಯಿಂಟ್ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ನೀಡಿರುವ ಮಾಹಿತಿಯಂತೆ ನಂಬರ್ ಪ್ಲೇಟ್ ಇಲ್ಲದೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಸ್ಕೂಟರ್ ನಲ್ಲಿ ಅನುಮಾನಾಸ್ಪದವಾಗಿ ತಿರುಗಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಅನುಮಾನಾಸ್ಪದ ವ್ಯಕ್ತಿಗಳು ಚೆಕ್ ಪಾಯಿಂಟ್ ನಲ್ಲಿ ಕಂಡು ಬಂದರೆ ಅವರನ್ನು ಚೆಕ್ ಪಾಯಿಂಟ್ ನಲ್ಲಿ ತಡೆದು ನಿಲ್ಲಿಸಲು ಸುಳ್ಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.

ಸುಳ್ಯ: ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಶಂಕಾಸ್ಪದ ವ್ಯಕ್ತಿಗಳ ತಿರುಗಾಟ; ಮಾಹಿತಿ ತಿಳಿಸಲು ಠಾಣಾಧಿಕಾರಿ ಸೂಚನೆ Read More »

ಶಿರಾಡಿ: ಕೆ.ಎಸ್.ಆರ್.ಟಿ.ಸಿ ಹಾಗೂ ಕಾರು ನಡುವೆ ಡಿಕ್ಕಿ; ಪ್ರಯಾಣಿಕರು ಜಖಂ

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವಂತ್ತಡ್ಕ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಧರ್ಮಸ್ಥಳದಿಂದ ಕೋಲಾರಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್, ಹಾಸನದಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಶಿರಾಡಿ ಹೊರಠಾಣೆಯ

ಶಿರಾಡಿ: ಕೆ.ಎಸ್.ಆರ್.ಟಿ.ಸಿ ಹಾಗೂ ಕಾರು ನಡುವೆ ಡಿಕ್ಕಿ; ಪ್ರಯಾಣಿಕರು ಜಖಂ Read More »

ಕುವೈತ್ ನಲ್ಲಿ ಅಪಘಾತಕ್ಕೆ ಮಂಗಳೂರು ಮೂಲದ ಯುವಕ ಬಲಿ

ಸಮಗ್ರ ನ್ಯೂಸ್: ಕುವೈತ್‌ನಲ್ಲಿ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ ಬಜಾಲ್‌ ಪಕ್ಕಲಡ್ಕದ ಸಫಿಯಾ ಅವರ ಪುತ್ರ ಆಸೀಫ್ ಪಕ್ಕಲಡ್ಕ (33) ಮೃತಪಟ್ಟಿದ್ದಾರೆ. ಕುವೈತ್‌ನ ಕಂಪೆನಿಯೊಂದರಲ್ಲಿ ಸೇಲ್ಸ್‌ಮನ್‌ ಆಗಿದ್ದ ಅವರು ಶುಕ್ರವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬೈಕ್‌ನಲ್ಲಿ ಮರಳುವ ವೇಳೆ ಕಾರು ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.ಮೃತರು ಪತ್ನಿ, ತಾಯಿಯನ್ನು ಅಗಲಿದ್ದಾರೆ.

ಕುವೈತ್ ನಲ್ಲಿ ಅಪಘಾತಕ್ಕೆ ಮಂಗಳೂರು ಮೂಲದ ಯುವಕ ಬಲಿ Read More »

ಮಗ ಉಗ್ರನೆಂದು ತಿಳಿಯುತ್ತಿದ್ದಂತೆ ಮಾಝ್ ತಂದೆಗೆ ಹೃದಯಾಘಾತವಾಯಿತೇ? ಅಂತ್ಯ ಸಂಸ್ಕಾರಕ್ಕೆ ಬಂದವನಿಗೆ ತಾಯಿ‌ ಹೇಳಿದ್ದೇನು?

ಸಮಗ್ರ ನ್ಯೂಸ್: ಉಗ್ರ ಸಂಘಟನೆಯ ಜತೆಗೆ ಸಂಪರ್ಕ ಹೊಂದಿ ಹಲವು ವಿಧ್ವಂಸಕ ಕೃತ್ಯಗಳಿಗೆ ಸ್ಕೆಚ್​ ಹಾಕಿದ ಆರೋಪದ ಮೇಲೆ ಶಿವಮೊಗ್ಗದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಮುನೀರ್​ ಅಲಿಯಾಸ್ ಮಾಝ್ ​​​ ತಂದೆ ಮನೀರ್ ಅಹಮದ್​(57) ನಿನ್ನೆ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟರು. ತೀರ್ಥಹಳ್ಳಿ ಮೂಲದವರಾದ ಮುನೀರ್ ಅಹಮದ್ ತಮ್ಮ ಮಕ್ಕಳ ಶಿಕ್ಷಣದ ಕಾರಣದಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದರು‌. ಆದರೆ ತಮ್ಮ ಮಗ ಮಾಝ್, ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ ವಿಷಯ ಕೇಳಿ ಅವರಿಗೆ ತಡೆದುಕೊಳ್ಳಲು ಆಗದೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ

ಮಗ ಉಗ್ರನೆಂದು ತಿಳಿಯುತ್ತಿದ್ದಂತೆ ಮಾಝ್ ತಂದೆಗೆ ಹೃದಯಾಘಾತವಾಯಿತೇ? ಅಂತ್ಯ ಸಂಸ್ಕಾರಕ್ಕೆ ಬಂದವನಿಗೆ ತಾಯಿ‌ ಹೇಳಿದ್ದೇನು? Read More »

ಬೆಳ್ತಂಗಡಿ ; ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಯುವಕನೊಬ್ಬ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ನೆರಿಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೆರಿಯ ಗ್ರಾಮದ ಚಂದ್ರಶೇಖರ್ (24) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಗಾರೆ ಮತ್ತು ವೈರಿಂಗ್ ಕೆಲಸ ಮಾಡುತ್ತಿದ್ದ ಈತ , ಗೆಳೆಯರ ಜೊತೆಗೆ ಸೇರಿ ಶಬರಿ ಎಂಬ ಸ್ವಸಹಾಯ ಸಂಘ ರಚಿಸಿದ್ದು, ಈ ಸಂಘದ ಮೂಲಕ ಉಜಿರೆಯ ಖಾಸಗಿ ಬ್ಯಾಂಕಿನಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣವನ್ನು ಎಂಟು ಜನ ಹಂಚಿಕೊಂಡಿದ್ದರು. ಆದರೆ ಚಂದ್ರಶೇಖರ್ ತೆಗೆದ

ಬೆಳ್ತಂಗಡಿ ; ಸಾಲ ಬಾಧೆಯಿಂದ ಯುವಕ ಆತ್ಮಹತ್ಯೆಗೆ ಶರಣು Read More »

ಭಟ್ಕಳ: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು| ಚಾಲಕ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಅತಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿರುವ ಘಟನೆ ಭಟ್ಕಳ ತಾಲೂಕಿನ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಉನೈಜ್ ಹಮ್ಜದ ಖತೀಬ್ (20) ರಂಗಿನಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಕಾರಿನಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಕಾರು ಚಲಾಸಿಕೊಂಡು ಬರುತ್ತಿರುವಾಗ ದುರ್ಘಟನೆ ಸಂಭವಿಸಿದೆ. ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು

ಭಟ್ಕಳ: ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು| ಚಾಲಕ ಸ್ಥಳದಲ್ಲೇ ಸಾವು Read More »

ಉಪ್ಪಿನಂಗಡಿ: ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಟ

ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆಸಿದ್ದ ವಿದ್ಯಾರ್ಥಿಗಳ ಎರಡು ತಂಡಗಳು ಸಂಘರ್ಷಕ್ಕೆ ಸಿದ್ಧವಾಗಿ ಅನಪೇಕ್ಷಿತ ಘಟನಾವಳಿಗೆ ಕಾರಣವಾಗುವ ಸಾಧ್ಯತೆಯನ್ನು ಪೊಲೀಸರ ಸಕಾಲಿಕ ಮಧ್ಯೆ ಪ್ರವೇಶದಿಂದಾಗಿ ತಡೆಗಟ್ಟಿದ ಘಟನೆ ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ. ಗುರುವಾರ ಸಂಜೆ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಯೋರ್ವ ದ್ವಿತೀಯ ಪಿಯು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿ ಶುಕ್ರವಾರ ಉಭಯ ವಿದ್ಯಾರ್ಥಿಗಳ ಬೆಂಬಲಿಗರು ಜಮಾಯಿಸಿ ಹೊಡೆದಾಟಕ್ಕೆ ಸಿದ್ಧರಾಗಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಎಸ್ಸೆ„

ಉಪ್ಪಿನಂಗಡಿ: ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಟ Read More »

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ‌ಜೀವಾವಧಿ ಶಿಕ್ಷೆಯಾದವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ಮಾಧ್ಯಮದ ಮುಂದೆ ಗುಲಾಬಿ ಶೆಟ್ಟಿ ಅಳಲು

ಸಮಗ್ರ ನ್ಯೂಸ್: ಉದ್ಯಮಿ ಭಾಸ್ಕರ ಶೆಟ್ಟಿಯವರನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೀಡಾದ ಭಾಸ್ಕರ ಶೆಟ್ಟಿ ತಾಯಿ‌ ಗುಲಾಬಿ‌ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಹಣ ಇದ್ದವರಿಗೆ ಒಂದು ಕಾನೂನು, ಪಾಪದವರಿಗೆ ಇನ್ನೊಂದು ಕಾನೂನಾ? ಜೀವಾವಧಿ ಶಿಕ್ಷೆ ಪ್ರಕಟ ಆದವರಿಗೆ ಜಾಮೀನು ಹೇಗೆ ಸಿಕ್ಕಿದೆ? ಎಂದು ಪ್ರಶ್ನಿಸಿದ್ದಾರೆ. ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ರಾಜೇಶ್ವರಿ ಶೆಟ್ಟಿ, ನವನೀತ್, ನಿರಂಜನ್ ಭಟ್‌ಗೆ ಜಾಮೀನು ಮಂಜೂರು ಮಾಡಿದೆ. ಜೂನ್ 8,

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ| ‌ಜೀವಾವಧಿ ಶಿಕ್ಷೆಯಾದವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ಮಾಧ್ಯಮದ ಮುಂದೆ ಗುಲಾಬಿ ಶೆಟ್ಟಿ ಅಳಲು Read More »

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ಸಮಗ್ರ ನ್ಯೂಸ್ : ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಬುಧವಾರ ಮುಂಜಾನೆ ಸುಮಾರು 3.30 ಕ್ಕೆಬೆಂಗಳೂರಿನ ಇಬ್ಬರು ಹಾಗೂ ಚಿಕ್ಕಮಗಳೂರಿನ ಓರ್ವ ವಿದ್ಯಾರ್ಥಿನಿ ನಿಗೂಢವಾಗಿ ಕಾಣೆಯಾಗಿದ್ದರು. ಘಟನೆ ಸಂಬಂಧ ಕಂಕನಾಡಿಯ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ Read More »

ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಿಎಫ್ಐ ಬ್ಯಾನ್ ಮಾಡಿ| ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಸಂಘಟನೆಗಳು

ಸಮಗ್ರ ನ್ಯೂಸ್: ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ತ್ವರಿತ ಕ್ರಮವನ್ನು ತೆಗೆದುಕೊಳ್ಳಲು ಪ್ರಧಾನಿ ಮೋದಿಗೆ ಮುಸ್ಲಿಂ ಸಂಘಟನೆಗಳು ಪತ್ರ ಬರೆದಿವೆ. ಈ ಸಂಘಟನೆಗಳಲ್ಲಿ ಸೂಫಿ ಖಾನ್ಖಾಹ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಪಾಸ್ಮಾಂಡಾ ಮುಸ್ಲಿಂ ಮಹಾಜ್ ಕೂಡ ಸೇರಿವೆ. ಸೂಫಿ ಖಾನಖಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಕೌಸರ್ ಹಸನ್ ಮಜಿದಿ ಪಿಎಫ್‌ಐ ನಿಷೇಧಿಸುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವರದಿಗಳ ಪ್ರಕಾರ, ಸೂಫಿ ಖಾನ್ಖಾಹ್ ರಾಷ್ಟ್ರೀಯ ಅಧ್ಯಕ್ಷ ಕೌಸರ್

ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಿಎಫ್ಐ ಬ್ಯಾನ್ ಮಾಡಿ| ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಸಂಘಟನೆಗಳು Read More »