ಸುಳ್ಯ: ದೈವಸಾನಿಧ್ಯದ ಮೈದಾನದಲ್ಲಿ ಆಡುತ್ತಿದ್ದ ಅನ್ಯಧರ್ಮೀಯನ ಹೊರಗಟ್ಟಿದ ಕಮಿಟಿ ಪ್ರತಿನಿಧಿ | ಸಾಮರಸ್ಯದ ನಡುವೆ ಕೋಮು ಬೀಜ ಬಿತ್ತುವ ಕೆಲಸವೇಕೆ ಮಹಾಸ್ವಾಮಿ…?
ಸುಳ್ಯ: ‘ದೇವಸ್ಥಾನದ ಮೈದಾನದಲ್ಲಿ ಹಿಂದೂಗಳು ಅಲ್ಲದೆ ಬೇರೆ ಧರ್ಮದವರಿಗೆ ಇಲ್ಲಿ ಅವಕಾಶವಿಲ್ಲ, ಇಲ್ಲಿಂದ ಹೊರಗೆ ನಿಂತು ಮಾತನಾಡು, ಇಲ್ಲಿ ನೀನು ಆಡಬಾರದು, ನಿನಗೆ ಚರ್ಚ್ ಆವರಣ ಇಲ್ಲವೇ?’ ಗದರಿದ ದೇವಸ್ಥಾನ ಆಡಳಿತ ಕಮಿಟಿಯ ಪ್ರತಿನಿಧಿಯೋರ್ವ ಹೇಳಿ ಆಟವಾಡುತ್ತಿದ್ದ ಅನ್ಯಕೋಮಿನ ಯುವಕನೋರ್ವನನ್ನು ಮೈದಾನದಿಂದ ಹೊರಗಟ್ಟಿದ ಘಟನೆ ಸುಳ್ಯದ ಜಯನಗರದಲ್ಲಿ ನಡೆದಿದ್ದು ಜಾಲತಾಣಗಳಲ್ಲಿ ವಿಡೀಯೋ ವೈರಲ್ ಆಗಿದೆ. ಹೊರಗಟ್ಟಿದವನನ್ನು ಜಯನಗರ ಕೊರಂಬಡ್ಕದ ಆದಿಮೊಗೇರ್ಕಳ ದೈವಸ್ಥಾನದ ಪದಾಧಿಕಾರಿ ಪ್ರವೀಣ್ ಕುಮಾರ್ ಜಯನಗರ ಎಂದು ತಿಳಿದುಬಂದಿದೆ. ದೈವಸಾನಿಧ್ಯದಲ್ಲಿ ಸುಮಾರು ಎರಡು ವರ್ಷದಿಂದ ಸ್ಥಳೀಯ










