ಆರ್ ಎಸ್ಎಸ್ ಇದುವರೆಗೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಮಾಡಿಕೊಳ್ಳುವುದಿಲ್ಲ| ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಬಿ.ಎಲ್ ಸಂತೋಷ್

ಸಮಗ್ರ ನ್ಯೂಸ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವೆ ಸೃಷ್ಟಿಯಾಗಿರುವ ರಾಜಕೀಯ ಸಂಘರ್ಷ ಈಗ ಮತ್ತಷ್ಟು ತೀವ್ರಗೊಂಡಿದೆ. ಆರ್‌ಎಸ್‌ಎಸ್‌ ಇದುವರೆಗೆ ಯಾವುದೇ ಕಾಯ್ದೆಯಡಿ ನೋಂದಣಿಯಾಗಿಲ್ಲ ಮತ್ತು ಭವಿಷ್ಯದಲ್ಲೂ ನೋಂದಣಿ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸ್ಪಷ್ಟವಾಗಿ ಹೇಳಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಐತಿಹಾಸಿಕ ಬನ್ನಪ್ಪ ಪಾರ್ಕ್‌ನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿ.ಎಲ್. ಸಂತೋಷ್, ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಂತರ ಆರೋಪಗಳಿಗೆ ನೇರ ತಿರುಗೇಟು ನೀಡಿದರು. ಆರ್‌ಎಸ್‌ಎಸ್ ಸಂಘಟನೆಯ ನೋಂದಣಿಯು ಯಾವುದೇ ವಿಷಯಕ್ಕೂ ಮಾನದಂಡವಲ್ಲ. ಪ್ರಿಯಾಂಕ್ ಖರ್ಗೆ ಅವರು ಎಲ್ಲದಕ್ಕೂ ಮಾನದಂಡವಾಗಲು ಸಾಧ್ಯವಿಲ್ಲ. ಇಂದು ಸರ್ಕಾರದ ಬಳಿ ನೋಂದಣಿ ಮಾಡಿಕೊಂಡಿರುವ ಅನೇಕ ಸಂಸ್ಥೆಗಳು ಮತ್ತು ಸಂಘಟನೆಗಳು ಯಾವ ರೀತಿಯ ದೇಶವಿರೋಧಿ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿವೆ ಎಂಬುದು ಇಡೀ ದೇಶದ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಮ್ಮ ಭಾಷಣದಲ್ಲಿ ಪ್ರಿಯಾಂಕ್ ಖರ್ಗೆ ಕುಟುಂಬದ ಇತಿಹಾಸವನ್ನು ಪ್ರಸ್ತಾಪಿಸಿದ ಬಿ.ಎಲ್. ಸಂತೋಷ್, ಹೈದರಾಬಾದ್ ಸಂಸ್ಥಾನದ ನಿಜಾಮ್ ಕಾಲದ ರಜಾಕರರ ದಾಳಿಯ ಕಪ್ಪು ಪುಟಗಳನ್ನು ನೆನಪಿಸಿದರು. ಅಂದು ರಜಾಕರರ ಕ್ರೌರ್ಯಕ್ಕೆ ಹೆದರಿ ಓಡಿಬಂದ ಕುಟುಂಬಗಳು ಇಂದು ಕಲಬುರಗಿಯಲ್ಲಿ ನೆಮ್ಮದಿಯಿಂದಿರಲು ಇದೇ ಆರ್‌ಎಸ್‌ಎಸ್ ಕಾರಣ. 1948ರ ಆ ಕಠಿಣ ಪರಿಸ್ಥಿತಿಯಲ್ಲಿ ಯಾವುದೇ ಪೊಲೀಸರು ಅಥವಾ ರಾಜಕಾರಣಿಗಳು ಬರಲಿಲ್ಲ. ಬದಲಿಗೆ ಸಂಘದ ಸ್ವಯಂಸೇವಕರು ತಮ್ಮ ಪ್ರಾಣವನ್ನು ಹಣೆಗಿಟ್ಟು ರಸ್ತೆಯಲ್ಲಿ ನಿಂತು ಜನರ ರಕ್ಷಣೆ ಮಾಡಿದ್ದರು. ಈ ಇತಿಹಾಸವನ್ನು ಖರ್ಗೆ ಕುಟುಂಬ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚುಚ್ಚಿದರು.

ಆರ್‌ಎಸ್‌ಎಸ್‌ ಸ್ವತಃ ಯಾವುದೇ ಸಾಮಾನ್ಯ ಕಾನೂನಿನಡಿ ನೋಂದಾಯಿತ ಸೊಸೈಟಿ, ಟ್ರಸ್ಟ್‌ ಅಥವಾ ರಾಜಕೀಯ ಪಕ್ಷವಲ್ಲ ಎಂಬುದು ವಿವಾದದ ಮೂಲ. ಆದರೆ ಭಾರತೀಯ ಕಾನೂನಿನ ಪ್ರಕಾರ ಪ್ರತಿಯೊಂದು ಸ್ವಯಂಪ್ರೇರಿತ ಸಂಘಟನೆಯೂ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲೇಬೇಕು ಎಂಬ ಯಾವುದೇ ಕಾನೂನು ಇಲ್ಲ. ಆರ್‌ಎಸ್‌ಎಸ್‌ ‘ಬಾಡಿ ಆಫ್ ಇಂಡಿವಿಜುವಲ್ಸ್’ ಆಗಿ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿದೆ. ನೋಂದಾಯಿತ ಸಂಸ್ಥೆಯಲ್ಲ ಎಂದ ಮಾತ್ರಕ್ಕೆ ಅದನ್ನು ‘ಕಾನೂನುಬಾಹಿರ ಸಂಸ್ಥೆ’ ಎನ್ನಲು ಬರುವುದಿಲ್ಲ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನಿಲುವನ್ನೇ ಬಿ.ಎಲ್. ಸಂತೋಷ್ ಪುನರುಚ್ಚರಿಸಿದ್ದು, ಸಂಘಟನೆಯ ಹೆಚ್ಚಿನ ಪಾರದರ್ಶಕತೆ ಬಯಸುತ್ತಿದ್ದ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದು ನೇರ ರಾಜಕೀಯ ಸವಾಲಾಗಿ ಪರಿಣಮಿಸಿದೆ.

Leave a Comment

Your email address will not be published. Required fields are marked *