ಸಮಗ್ರ ನ್ಯೂಸ್: ಆಷಾಢ ಕಳೆದು ಶ್ರಾವಣ ಮಾಸ ಪ್ರಾರಂಭವಾಗಿದೆ. ದೇವತಾ ಕಾರ್ಯಗಳಿಗೆ ಮತ್ತೆ ಚಾಲನೆ ದೊರಕಿದೆ. ಆದ್ದರಿಂದ ಈ ವಾರದಲ್ಲಿ ರಾಶಿಗಳ ಗೋಚಾರ ಫಲಗಳೂ ಬದಲಾಗಿವೆ. ಈ ಶುಭ ವಾರದಲ್ಲಿ ಯಾವ ರಾಶಿಗೆ ಲಾಭ? ಯಾರಿಗೆ ಶುಭ? ನೋಡೋಣ ಬನ್ನಿ…
ಮೇಷ ರಾಶಿ:
ಶಿವ ಪೂಜೆ ಮಾಡಿದವನಿಗೆ ದೇವರೇ ದಾರಿಯನ್ನು ತೋರಿಸಿ ಬದುಕನ್ನು ತೋರಿಸುತ್ತಾನೆ. ಶ್ರಾವಣ ಮಾಸದಲ್ಲಿ ಸೋಮವಾರದಂದು ಕೇದಾರೇಶ್ವರ ವ್ರತ ಓದಿ. ಚತುರ್ಥದಲ್ಲಿ ಗುರು ಇರುವುದರಿಂದ ಕೇದಾರೇಶ್ವರ ಪೂಜೆ ಹಾಗೂ ಸುಬ್ರಹ್ಮಣ್ಯನನ್ನು ಪೂಜಿಸಿದರೆ ನಿಮ್ಮ ಪೂಜೆಗೆ ತಕ್ಕನಾದ ಪ್ರತಿಫಲ ಸಿಗುತ್ತದೆ.
ವೃಷಭ ರಾಶಿ:
ಕೃತ್ತಿಕಾ, ರೋಹಿಣಿ, ಮೃಗಶಿರಾ ನಕ್ಷತ್ರಕ್ಕೆ ಗುರು 3ರಲ್ಲಿದ್ದು ಹೆಚ್ಚಿನ ಲಾಭ ತರುವುದರಲ್ಲಿ ಸಂದೇಹ ಬೇಡ. ದೈವಾಂಶ ಸಂಭೂತರಾಗಿ ದೇವರ ಧ್ಯಾನ, ಪುಣ್ಯ ಪುರುಷರ ದರ್ಶನ, ಪುಣ್ಯಾತ್ಮರ ಪಾದ ನಿಮ್ಮ ಮನೆಯಲ್ಲಿ ಇಟ್ಟು ಪುಣ್ಯದ ರಾಶಿ ಕೊಟ್ಟು ಹರಸುತ್ತಾರೆ. ಧರ್ಮಕ್ಕೆ ಚ್ಯುತಿ ಬಾರದಂತೆ ಬಾಳನ್ನು ನಡೆಸಲು ಅವಕಾಶ ಕೊಟ್ಟಿರುತ್ತಾನೆ. ಅದನ್ನು ಸದುಪಯೋಗಪಡಿಸಿಕೊಳ್ಳಿ.
ಮಿಥುನ ರಾಶಿ:
ದ್ವಿತೀಯದಲ್ಲಿ ಗುರು ಇದ್ದು ಕುಟುಂಬ ಸೌಖ್ಯ, ವ್ಯವಹಾರದಲ್ಲಿ ನೆಮ್ಮದಿ ಕೊಡುವ ಕಾಲ. ಶನಿ ದಶಮದಲ್ಲಿ ಇದ್ದು ಗುರುವಿನ ಕರ್ಕಾಟಕ ರಾಶಿಯ ವಿಶೇಷ ಫಲವನ್ನು ನೀವು ಅನುಭವಿಸಬಹುದು. ಗುರು ಸೇವೆಯನ್ನು ಮಾಡಿ ಸುಖವನ್ನು ಅನುಭವಿಸಿ.
ಕಟಕ ರಾಶಿ:
ಗುರು ಲಗ್ನದಲ್ಲಿ ಇದ್ದು ಕೆಲಸ ತ್ವರಿತವಾಗಿ ಸಾಗದು. ಉಮಾಮಹೇಶ್ವರನನ್ನು ಪೂಜಿಸಿದರೆ ಸಾಕು ನೀರಿನಂತೆ ನಿಮ್ಮನ್ನು ಶುದ್ಧವಾಗಿ ಇಟ್ಟು ಶುದ್ಧವಾದ ಜ್ಞಾನ ಕೊಟ್ಟು ಬೆಳಕನ್ನು ಆರೋಗ್ಯವನ್ನು ಸುಖವನ್ನು ಕೊಡುತ್ತಾರೆ.
ಸಿಂಹ ರಾಶಿ:
ಈ ರಾಶಿಗೆ 12ರಲ್ಲಿ ಗುರುವು ಸುಮ್ಮನೆ ಕೂತರೂ ವಿಷಯವು ಅಲೆಯಂತೆ ಬಂದು ಅದು ತನ್ನ ಕೆಲಸವನ್ನು ಮಾಡುತ್ತಿರುತ್ತದೆ. ಸಿಂಹ ರಾಶಿಯವರು ದೇವಾನುಗ್ರಹಕ್ಕೆ ಪಾತ್ರರಾಗುವ ಏಕೈಕ ರಾಶಿಯವರು. ಕೆಲಸ ಕಾರ್ಯದ ಒತ್ತಡದಲ್ಲಿ ದೇವರನ್ನು ನಂಬಿ ಸಾಗಿರಿ. ಶಿವ ಪೂಜೆ ಮುಂದುವರಿಸಿ. ಸೂರ್ಯ ಅಷ್ಟಕ ಪಾರಾಯಣ ಮಾಡಲೇಬೇಕು.
ಕನ್ಯಾ ರಾಶಿ:
ಈ ರಾಶಿಯವರಿಗೆ ಹನ್ನೊಂದರ ಗುರು ಭಾಗ್ಯವನ್ನು ತರುತ್ತಾನೆ. ಸಪ್ತಮ, ಅಷ್ಟಮ ಶನಿ ಸಂಚಾರ ಮುಂದುವರಿಯುವುದರಿಂದ ಕಾರ್ಯ ಸಾಧಿಸಿಕೊಳ್ಳಲು ಹೆಜ್ಜೆಯನ್ನು ಅರಿತು ಹಾಕಬೇಕು. ಯಾರಿಗೂ ನೋವಾಗದ ಹಾಗೆ ಕೊಟ್ಟ ವಚನ ಕಾಪಾಡಿಕೊಳ್ಳಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಧರ್ಮ ಎಂಬ ಅಡಿಪಾಯದಲ್ಲಿ ದೇವರನ್ನು ಪೂಜಿಸಬೇಕು. ಆರೋಗ್ಯದ ಬಗ್ಗೆ ಎಚ್ಚರ.
ತುಲಾ ರಾಶಿ:
ನ್ಯಾಯಕ್ಕೆ ತಲೆಬಾಗಿ ಬಾಳಿದರೆ ದೇವರು ಮನುಷ್ಯನಿಗೆ ಒಳ್ಳೆಯ ಅವಕಾಶಗಳನ್ನೇ ನೀಡುತ್ತಾನೆ. ಧರ್ಮದ ಹಾದಿಯಲ್ಲಿ ನಡೆದರೆ ಶಿವನೇ ಮೆಚ್ಚುತ್ತಾನೆ. ಗ್ರಹಗಳ ಸಂಕೋಲೆ ತುಲಾ ರಾಶಿಯವರಿಗೆ ಬಾಧಿಸಲು ಸಾಧ್ಯವಿಲ್ಲ. ನಿಮ್ಮ ಭಾಗ್ಯವನ್ನು ಹೆಚ್ಚಿಸಿ ಕೈ ಹಿಡಿದು ನಡೆಸುತ್ತದೆ. ಮಕ್ಕಳಿಗೆ ಪ್ರೀತಿಯಿಂದ ಒಳ್ಳೆಯ ದಾರಿಯನ್ನು ತೋರುವ ಮಹಾ ಸಂಕಲ್ಪ ಮಾಡಿ. ನೀವು ಬೆಳೆದು ಮತ್ತೊಬ್ಬರನ್ನು ಬೆಳೆಸಿ. ದುರ್ಗೆಯನ್ನು ಸದಾ ಪ್ರಾರ್ಥಿಸಿ.
ವೃಶ್ಚಿಕ ರಾಶಿ:
ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಸಮಯ. ದೇವರು ಕೊಟ್ಟದ್ದನ್ನು ಯಾವಾಗಲೂ ಸದುಪಯೋಗ ಮಾಡದಿದ್ದರೆ ಒಳ್ಳೆಯ ಫಲ ಪಡೆಯಲು ಸಾಧ್ಯವಾಗುವುದಿಲ್ಲ. ಗುರು 9ರಲ್ಲಿ ಬಂದಿದ್ದು ನಿಮ್ಮ ಋಣ ಬಾಧೆಯನ್ನು ಸರಿಪಡಿಸಿ ಹಣದ ಹೊಳೆಯನ್ನೇ ಹರಿಸುತ್ತಾನೆ. ಎಚ್ಚರದಿಂದ ಸಾಗಿ. ಬಂದ ದುಡ್ಡನ್ನು ಸದ್ವಿನಿಯೋಗ ಮಾಡಿ. ಅದೇ ನಿಮ್ಮನ್ನು ಜೀವನದ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.
ಧನುಸ್ಸು ರಾಶಿ:
ಅಷ್ಟಮದಲ್ಲಿ ಗುರು ಇರುವುದರಿಂದ ದೇಹಾಲಸ್ಯ, ಜಡತ್ವ ಬಂದು ಕೆಲವೊಮ್ಮೆ ನಿಲ್ಲಲು ಕೂರಲು ಆಗದೇ ನೋವು ಉಂಟಾಗಬಹುದು. ಅದನ್ನು ನಿವಾರಿಸುವವನು ಸುಬ್ರಹ್ಮಣ್ಯ ದೇವರೊಬ್ಬನೇ. ಒಳ್ಳೆಯ ಫಲ ಪಡೆಯಲು ಷಣ್ಮುಖ ದೇವರನ್ನು ದರ್ಶಿಸಿ. ಜೀವನದ ಹೊಸ ರೂಪ ತೋರಿಸಿ ಒಳ್ಳೆಯ ಮಾರ್ಗದಲ್ಲಿ ನಡೆಸುತ್ತಾನೆ.
ಮಕರ ರಾಶಿ:
ಗುರು ಸಪ್ತಮದಲ್ಲಿ ಇದ್ದು ಇಷ್ಟಾರ್ಥಗಳು ಸಿದ್ಧಿಸುವ ಕಾಲ. ಮಕರ ರಾಶಿಯವರು ನಾಲ್ಕು ವಾರಗಳ ಕಾಲ ತಿಲ ಮತ್ತು ತೈಲದಾನ ನೀಡಿದರೆ ಕಾರ್ಯಗಳು ಸಿದ್ಧಿಸುತ್ತವೆ. ಶನಿಯ ಅನುಗ್ರಹವನ್ನು ಪಡೆದರೆ ಅವನೇ ನಿಮಗೆ ಶುಭವನ್ನು, ಸುಖ ಸಂತೋಷವನ್ನು ತರುತ್ತದೆ.
ಕುಂಭ ರಾಶಿ:
ಶನಿಯು ದ್ವಿತೀಯದಲ್ಲಿದ್ದಾನೆ. ಇನ್ನೂ ಒಂದು ವರ್ಷ ಕಾಲ ಶನಿ ಸಂಚಾರವಿದ್ದು ನಂತರವೇ ನಿಮಗೆ ಭಾಗ್ಯೋದಯದ ಸಮಯ. ನಿಧಾನವಾಗಿ ಸಾಗಿರಿ. ಆತುರವು ಅವಾಂತರವನ್ನು ಉಂಟು ಮಾಡುತ್ತದೆ. ಒಳ್ಳೆಯ ಮನಸ್ಸಿನಿಂದ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಶನಿ ಸಂಚಾರವು ಮುಗಿಯುವವರೆಗೂ ಸೋಮವಾರದಲ್ಲಿ ಶಿವಪೂಜೆಯನ್ನು ತಪ್ಪದೇ ಮಾಡಿರಿ.
ಮೀನ ರಾಶಿ:
ದ್ವಾದಶದಲ್ಲಿ ರಾಹು ಶನಿ ಲಗ್ನದಲ್ಲಿದ್ದು ಎರಡು ಪಾಪ ಗ್ರಹಗಳು ಏನನ್ನು ಕೊಡುತ್ತವೆಂದು ಯೋಚಿಸಲು ಆಗುವುದಿಲ್ಲ. ನೀವು ಈ ಸಮಯದಲ್ಲಿ ಉಪಾಯದಿಂದ ಜೀವನ ನಡೆಸಿ. ವಿಷ್ಣು ಶಿವನನ್ನು ಏಕಕಾಲದಲ್ಲಿ ಪೂಜಿಸಿ. ಅವರೇ ನಿಮಗೆ ಸಹಾಯಕರಾಗಿ ಇದ್ದು ನಿಮ್ಮ ಜೀವನದ ಸಂಕೋಲೆ ಬಿಡಿಸಿ ಜೀವನ ರೂಪಿಸಿಕೊಡುತ್ತಾರೆ.




























