ಮುಂದಿನ 6 ತಿಂಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳ ಭರ್ತಿ – ಸಿಎಂ

ಸಮಗ್ರ ನ್ಯೂಸ್: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.

. Ad Widget . Ad Widget . Ad Widget

ನಮ್ಮ ನಾಡಿನ 7.5 ಕೋಟಿ ಕನ್ನಡಿಗರಿಗೆ ಮತ್ತು ಎಲ್ಲ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಈ ಪವಿತ್ರ ದಿನದಂದು ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ.

. Ad Widget .

ನಮ್ಮ ದೇಶ ಸ್ವಾತಂತ್ರ್ಯದ 80ನೇ ವರ್ಷಕ್ಕೆ ಕಾಲಿಡುತ್ತಿದೆ. ಪ್ರತಿ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯನೀಡಿದ ನಮ್ಮ ಸಂವಿಧಾನವೇ ನಮ್ಮ ಶಕ್ತಿ. ಮಹಾತ್ಮ ಗಾಂಧೀಜಿ ನಮಗೆ ಸತ್ಯ, ಅಹಿಂಸೆ ಮತ್ತು ಸೇವೆಯ ದಾರಿ ತೋರಿಸಿದರು. ನಮ್ಮ ಸಾಂಸ್ಕೃತಿಕ ನಾಯಕ ಬಸವಣ್ಣನವರು – ಸಮಾನತೆ, ಕಾಯಕ ಮತ್ತು ದಾಸೋಹದ ದಾರಿ ತೋರಿಸಿದರು. ಸಮಾಜದ ಪ್ರತಿ ವ್ಯಕ್ತಿಯ ಬದುಕು ಚೆನ್ನಾಗಿದ್ದರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ. ಇದೇ ಬಸವಾದಿ ಶರಣರ ಆಶಯವಾಗಿತ್ತು ಎಂದರು.

ರಾಜ್ಯದ ಬೆಳವಣಿಗೆ ಮತ್ತು ಭಾರತದ ಬೆಳವಣಿಗೆ ಒಂದಕ್ಕೊಂದು ಪೂರಕ. ಭಾರತ ಒಂದು ದೇಗುಲವಾದರೆ, ರಾಜ್ಯಗಳು ದೇಗುಲದ ಕಂಬಗಳು. ಹೀಗಾಗಿ ದೇಗುಲ ಮತ್ತು ಕಂಬಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕು ಎನ್ನುವುದು ನನ್ನ ನಿಲುವು. ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಆರ್ಥಿಕತೆ, ಕೃಷಿ ಮತ್ತು ಸಂಸ್ಕೃತಿಯಲ್ಲಿ ದೇಶಕ್ಕೆ ದಾರಿ ತೋರಿಸುತ್ತಿರುವ ಕರ್ನಾಟಕದ ಶಕ್ತಿಯನ್ನು ಇನ್ನಷ್ಟು ಬೆಳೆಸುವುದು ನನ್ನ ಗುರಿ.

ನಾನು ಮುಖ್ಯಮಂತ್ರಿ ಆದ ಬಳಿಕ, ನಮ್ಮ ಸರ್ಕಾರ ಇದೇ ಆಶಯದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇಂದು ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ್ಯದ ಗಾಳಿ ಮತ್ತು ಬೆಳಕು ನಮ್ಮ ಹಿಂದಿನ ಪೀಳಿಗೆಯ ದೇಶಪ್ರೇಮಿಗಳ ಬಲಿದಾನದ ಫಲ. ಇದನ್ನು ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಹೊಣೆ.

ಗುಲಾಮಗಿರಿಯ ಸಂಕೋಲೆಗಳಿಂದ ದೇಶವನ್ನು ಮುಕ್ತಗೊಳಿಸಿದ ಮಹಾತ್ಮ ಗಾಂಧೀಜಿ, ಪಂಡಿತ್ ಜವಾಹರಲಾಲ್ ನೆಹರೂ, ಸರ್ದಾರ್‌ ವಲ್ಲಭಬಾಯಿ ಪಟೇಲ್‌, ಮೌಲಾನ ಆಜಾದ್‌, ಸರೋಜಿನಿ ನಾಯ್ಡು, ಭಗತ್ ಸಿಂಗ್, ಅಶ್ಫಾಕುಲ್ಲಾ ಖಾನ್, ಸುಭಾಷ್ ಚಂದ್ರ ಬೋಸ್‌ ಅವರಂತಹ ನೂರಾರು ನಾಯಕರನ್ನು ಸ್ವತಂತ್ರ ಭಾರತ ಸದಾ ನೆನಪಿಡುತ್ತದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮುನ್ನಡೆಸಿದ ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಹೊತ್ತಿಸಿದ ಸ್ಫೂರ್ತಿಯನ್ನು ನಾವು ಇಂದು ನೆನಪಿಸಿಕೊಳ್ಳುತ್ತೇವೆ. ಕನ್ನಡ ನಾಡು ಮತ್ತು ನುಡಿಗಾಗಿ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮೈಲಾರ ಮಹಾದೇವಪ್ಪ ಅವರಂತಹ ವೀರರ- ಧೈರ್ಯ ಮತ್ತು ಹೋರಾಟ ನಮಗೆ ಸದಾ ದಾರಿ ತೋರಲಿದೆ.

ದೊಡ್ಡಬಳ್ಳಾಪುರದಲ್ಲಿ ಕೈಗಾರಿಕಾ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಂಡಿದ್ದು ಒಟ್ಟು 3 ಲಕ್ಷ ಉದ್ಯೋಗಿಗಳಿಗೆ ಅವಕಾಶ ಸೃಷ್ಟಿ ಆಗಲಿದೆ. ಬ್ರಾಂಡ್ ಬೆಂಗಳೂರು ಅಡಿಯಲ್ಲಿ 5 ತಾಂತ್ರಿಕ ವಲಯ, ಆಧುನಿಕ ತಂತ್ರಜ್ಞಾನದ ಶಕ್ತಿಯನ್ನು ಬಳಸಲು ಚೈತನ್ಯ ಯೋಜನೆ, ಉಪಗ್ರಹ ಫೋಟೋ ಮೂಲಕ ಬೆಳೆ ವಿಮೆ ಸಮೀಕ್ಷೆ ಮಾಡಲಾಗುತ್ತಿದೆ. ಬೆಳೆಗಳಿಗೆ ಕೀಟ ಭಾದೆಗಳನ್ನು ಪತ್ತೆಹಚ್ಚಲು ಉಪಗ್ರಹ ಆದಾರಿತ ಮಾಹಿತಿ ರೈತರು ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಸಹಾಯ ಮಾಡಲಾಗುತ್ತಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅನುಕೂಲ ಆಗಲಿ ಎಂದು ಗ್ರಾಮೀಣ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಉತ್ತಮ ಅವಕಾಶ ನಗರ ಯೋಜನೆ ಜಾರಿಗೆ ತರಲು ಸರ್ಕಾರದಿಂದ ಕ್ರಮ ಕೈಗೊಂಡಿದ್ದು ಎಲ್ಲಾ ನಗರಗಳಿಗೆ ರಿಂಗ್ ರೋಡ್ ಸ್ಥಾಪನೆಗೆ ಚಿಂತನೆ ಮಾಡಲಾಗುತ್ತಿದೆ ಕೇಂದ್ರ ಸರ್ಕಾರ ಕೂಡ ನಮ್ಮ ಚಿಂತನೆಗೆ ಅಭಿನಂದಿಸಿದೆ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ 6ನೇ ತರಗತಿಯಿಂದ AI ಪರಿಚಯ ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಗುರುಕುಲ ಕಾರ್ಯಕ್ರಮ ಪ್ರತಿ ವಿದ್ಯಾರ್ಥಿಗೂ ಎಐ ಮತ್ತು ಕೋಡಿಂಗ್ ಕೌಶಲ್ಯ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಲ್ಲಿ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯ ಸ್ಥಾಪಿಸುತ್ತೇವೆ 2027ರ ಜನವರಿ ಒಳಗೆ AI ಸರ್ಟಿಫಿಕೇಟ್ ಕೋರ್ಸ್ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.

ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈಗಾಗಲೇ 72,000 ಹುದ್ದೆ ಭರ್ತಿ ಮಾಡಲು ಪ್ರಕ್ರಿಯ ಆರಂಭವಾಗಿದೆ.ಮುಂದಿನ ಆರು ತಿಂಗಳಲ್ಲಿ ಎಲ್ಲಾ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಯುವ ಉದ್ಯೋಗ ಸೇತು ಎಂಬ ಹೊಸ ಯೋಜನೆ ಆರಂಭಿಸುತ್ತೇವೆ. 5,000 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದರು.

Leave a Comment

Your email address will not be published. Required fields are marked *