ಕರಾವಳಿ

ಸಂಪಾಜೆ ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತ ಲಾರಿಗಳು ದ.ಕ ಜಿಲ್ಲಾಡಳಿತದಿಂದ ಚಾಲಕರಿಗೆ ಮಾಹಿತಿ ಇಲ್ಲವೆ?

ಸುಳ್ಯ : ಸಂಪಾಜೆ ಮಡಿಕೇರಿ ರಸ್ತೆ ಕುಸಿತಗೊಂಡಿದ್ದು ಈ ರಸ್ತೆಯಲ್ಲಿ ಘನ ವಾಹನ ಸಂಚಾರವನ್ನು ಕೊಡಗು ಜಿಲ್ಲಾಡಳಿತ ನಿಷೇಧಿಸಿದ ಹಿನ್ನಲೆಯಲ್ಲಿ ಸಂಪಾಜೆ ಚೆಕ್ ಪೋಸ್ಟ್ ಬಳಿ ಘನವಾಹನಗಳು ಕಿ.ಮೀ ದೂರ ಸಾಲುಗಟ್ಡಿ ನಿಂತಿವೆ.ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘನ ವಾಹನ ಸಂಚಾರಿಸದಂತೆ ಯಾವುದೇ ಮಾಹಿತಿ ನೀಡದಿರುವುದರಿಂದ ನಮಗೆ ಸಮಸ್ಯೆಯಾಗಿದೆ ಎಂದು ಘನ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘನ ವಾಹನಗಳನ್ನು ತಡೆದಿರುವುದರಿಂದ ನಮಗೆ ಮೂಲಭೂತ ವ್ಯವಸ್ಥೆಗಳಿಲ್ಲದೆ ನಾವು ಸಮಸ್ಯೆಗೊಳಗಾಗಿದ್ದೇವೆ ಎಂದು ಚಾಲಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. ಚೆಕ್ ಪೋಸ್ಟ್ ನಲ್ಲಿಎರಡು […]

ಸಂಪಾಜೆ ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತ ಲಾರಿಗಳು ದ.ಕ ಜಿಲ್ಲಾಡಳಿತದಿಂದ ಚಾಲಕರಿಗೆ ಮಾಹಿತಿ ಇಲ್ಲವೆ? Read More »

ಆಸ್ಕರ್ ಗೆ ಶಸ್ತ್ರಚಿಕಿತ್ಸೆ ಯಶಸ್ವಿ- ಇದು‌ ಮಂಜುನಾಥನ ಪ್ರಸಾದ ಮಹಿಮೆ!?

ಮಂಗಳೂರು: ಇಲ್ಲಿನ ಯೆನಪೋಯ ಆಸ್ಪತ್ರೆಯಲ್ಲಿ ಕಳೆದ ಕೆಳವು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್‌ಗೆ ಮಾಡಲಾದ ಮೆದುಳಿನ ಶಸ್ತ್ರ ಚಿಕಿತ್ಸೆ ಯಶಸ್ವಿ ಯಾಗಿದ್ದು ಗುಣಮುಖರಾಗುತ್ತಿದ್ದಾರೆ. ಆಸ್ಕರ್ ಫರ್ನಾಂಡಿಸ್ ಯೋಗ ಮಾಡುವ ವೇಳೆ ಜಾರಿ ಬಿದ್ದು ತಲೆಯ ಒಳಭಾಗದಲ್ಲಿ ಗಾಯವಾಗಿತ್ತು. ಕಳೆದ ಒಂದು ವಾರದಿಂದ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದ್ದ ಅವರು ತೀವ್ರ ನಿಗಾ ಘಟಕದಲ್ಲಿದ್ದರು. ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದ ಅವರಿಗೆ ಮೆದುಳಿನ

ಆಸ್ಕರ್ ಗೆ ಶಸ್ತ್ರಚಿಕಿತ್ಸೆ ಯಶಸ್ವಿ- ಇದು‌ ಮಂಜುನಾಥನ ಪ್ರಸಾದ ಮಹಿಮೆ!? Read More »

ಕುಕ್ಕೆ: ಇಂದಿನಿಂದ ಪೂಜಾ ಕೈಂಕರ್ಯಗಳಿಗೆ ಅವಕಾಶ- ಜು.29ರಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆ ಆರಂಭ

ಪ್ರಸಿದ್ದ ಯಾತ್ರಾಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ(ಜು.27) ಕೆಲವೊಂದು ಸೇವೆಗಳು ಆರಂಭಗೊಳ್ಳಲಿದ್ದು, ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29 ರಿಂದ ಪ್ರಾರಂಭಗೊಳ್ಳಲಿದೆ. ಸರಕಾರದ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 8.30 ಗಂಟೆ ತನಕ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶಕಲ್ಪಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ. ಸರ್ಪಸಂಸ್ಕಾರ, ಆಶ್ಲೇಷ

ಕುಕ್ಕೆ: ಇಂದಿನಿಂದ ಪೂಜಾ ಕೈಂಕರ್ಯಗಳಿಗೆ ಅವಕಾಶ- ಜು.29ರಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆ ಆರಂಭ Read More »

ವೀರ್ಯಾಣು ಪರೀಕ್ಷೆ ಬಳಿಕ ನಿರಪರಾಧಿ ಎಂದು ಸಾಬೀತು- ಅತ್ಯಾಚಾರ ಆರೋಪಿ ಬಿಡುಗಡೆ

ಭಟ್ಕಳ: ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನವಾಗಿದ್ದರೂ, ಕೋರ್ಟ್ ಆತನನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿದ್ದು, ಸದ್ಯ ನೈಜ ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆಗೆ ಸೂಚಿಸಿದೆ. ಇತ್ತ ಯಾವ ತಪ್ಪು ಮಾಡದೆಯೂ ಸುಮಾರು ಆರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿ, ತನ್ನ ಮೇಲೆ ಆರೋಪ ಹೊರಿಸಿ, ಜೈಲಿಗಟ್ಟಿದ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಿಡಿಶಾಪಮಾತ್ರ ವಿಪರ್ಯಾಸ. ಘಟನೆ ವಿವರ: ಸುಮಾರು ಹತ್ತು ವರ್ಷಗಳ ಹಿಂದೆ, ಅಂದರೆ 2010 ರ ಅಕ್ಟೋಬರ್

ವೀರ್ಯಾಣು ಪರೀಕ್ಷೆ ಬಳಿಕ ನಿರಪರಾಧಿ ಎಂದು ಸಾಬೀತು- ಅತ್ಯಾಚಾರ ಆರೋಪಿ ಬಿಡುಗಡೆ Read More »

ಸುಳ್ಯ: ಕೊಲ್ಲಮೊಗ್ರು ಆರೋಗ್ಯ ಸಿಬ್ಬಂದಿಗೆ ರಾಜ್ಯ ಮಟ್ಟದಿಂದ ಮೆಚ್ಚುಗೆ

ಸುಳ್ಯ: ತಾಲೂಕಿನ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕರ್ತವ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ಮೆಚ್ಚುಗೆ ಸಲ್ಲಿಸಿದ್ದಾರೆ. ಕೋವಿಡ್ ಪರೀಕ್ಷೆಗೆ ಗಂಟಲ ದ್ರವ ಸಂಗ್ರಹಿಸಲು ಕೊಲ್ಲಮೊಗ್ರು ಆರೋಗ್ಯ ಕೇಂದ್ರದ ಲ್ಯಾಬ್ ಸಿಬ್ಬಂದಿ ನವ್ಯಾ, ಎಎನ್‌ಎಂ ಚಂದ್ರಾವತಿ, ಆಶಾ ಕಾರ್ಯಕರ್ತೆ ಯಶೋದಾ, ಹೇಮಾವತಿಯಾವರು ಪಿಪಿಇ ಕಿಟ್ ಧರಿಸಿ ಪಾಲ ದಾಟುತ್ತಿರುವ ಚಿತ್ರವೊಂದ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ “ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ

ಸುಳ್ಯ: ಕೊಲ್ಲಮೊಗ್ರು ಆರೋಗ್ಯ ಸಿಬ್ಬಂದಿಗೆ ರಾಜ್ಯ ಮಟ್ಟದಿಂದ ಮೆಚ್ಚುಗೆ Read More »

ಒಂಟಿ‌ ಮಹಿಳೆಯ ಕಾರಿನ ಟಯರ್ ಬದಲಿಸಿ‌ ಮಾನವೀಯತೆ ಮೆರೆದ ಮಂಗಳೂರು ಪೊಲೀಸರು.

ಮಂಗಳೂರು: ಮಹಿಳೆ ಮತ್ತು ಮಗುವಿದ್ದ ಕಾರಿನ ಟಯರ್ ಪಂಕ್ಚರ್ ಆಗಿದ್ದು, ಇದನ್ನು ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ಬೇರೆ ಟಯರ್ ಅಳವಡಿಸಿ ಮಾನವೀಯತೆ ಮೆರೆದಿದ್ದಾರೆ. ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ತೆರಳುವ ಸಂದರ್ಭ ಪಂಪ್ವೆಲ್ ಬಳಿ ಟಯರ್ ಪಂಕ್ಚರ್ ಆಗಿತ್ತು. ಇದೇ ಸಂದರ್ಭ ಹೈವೇ ಪ್ಯಾಟ್ರಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟಯರನ್ನು ಬದಲಿಸಿ ಮಾನವೀಯತೆ ಮೆರೆದರು.

ಒಂಟಿ‌ ಮಹಿಳೆಯ ಕಾರಿನ ಟಯರ್ ಬದಲಿಸಿ‌ ಮಾನವೀಯತೆ ಮೆರೆದ ಮಂಗಳೂರು ಪೊಲೀಸರು. Read More »

ಉತ್ಸವದ ಅಕ್ಕಿಗಾಗಿ ದೇವಳಕ್ಕೆ ಗದ್ದೆ ಬಿಟ್ಟು ಕೊಟ್ಟ ಮುಸ್ಲಿಂ ಕುಟುಂಬ: ಪುತ್ತೂರಿನಲ್ಲೊಂದು‌ ಕೋಮು ಸಾಮರಸ್ಯದ ನಡೆ

ಪುತ್ತೂರು: ದೇವಳದ ಉತ್ಸವಕ್ಕೆ ಅಕ್ಕಿಗಾಗಿ ತಮ್ಮ ಬೇಸಾಯದ ಗದ್ದೆಯನ್ನು ಅಬ್ಬಾಸ್, ಅಬೂಬಕ್ಕರ್, ಪುತ್ತು ಎಂಬವರು ಬಿಟ್ಟುಕೊಟ್ಟು ಧರ್ಮ ಸಾಮರಸ್ಯ‌ ಮೆರೆದ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಎಲಿಯ ಎಂಬಲ್ಲಿ ನಡೆದಿದೆ. ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ‘ಎಲಿಯ ಗದ್ದೆ ಕೃಷಿ ಕ್ಷೇತ್ರ’ ಎಂಬ ಹೆಸರಿನಲ್ಲಿ ನಡೆಯಲಿರುವ ಭತ್ತ ಕೃಷಿಗಾಗಿ ಇಲ್ಲಿನ ಮೂವರು ತಮ್ಮ ಸ್ವಂತ ಗದ್ದೆಯನ್ನು ಬಿಟ್ಟುಕೊಟ್ಟಿದ್ದಾರೆ. ಇಲ್ಲಿನ ಮಜಲುಗದ್ದೆ ಪ್ರದೇಶದ ನಿವಾಸಿಗಳಾದ ಒಂದೇ ಕುಟುಂಬಸ್ಥರಾಗಿರುವ ಪುತ್ತು ಮಜಲುಗದ್ದೆ, ಅಬ್ಬಾಸ್ ಮಜಲುಗದ್ದೆ ಮತ್ತು ಕೂಡುರಸ್ತೆ

ಉತ್ಸವದ ಅಕ್ಕಿಗಾಗಿ ದೇವಳಕ್ಕೆ ಗದ್ದೆ ಬಿಟ್ಟು ಕೊಟ್ಟ ಮುಸ್ಲಿಂ ಕುಟುಂಬ: ಪುತ್ತೂರಿನಲ್ಲೊಂದು‌ ಕೋಮು ಸಾಮರಸ್ಯದ ನಡೆ Read More »

ಹರೀಶ್ ಬಂಗೇರ ಪ್ರಕರಣ: ವಿದೇಶಾಂಗ ಸಚಿವರೊಂದಿಗೆ ಶೋಭಾ ಮಾತುಕತೆ

ಉಡುಪಿ: ಹರೀಶ್ ಬಂಗೇರ ಅವರ ಕೇಸಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕು. ಶೋಭಾ ಕರಂದ್ಲಾಜೆಯವರು ವಿದೇಶಾಂಗ ರಾಜ್ಯ ಸಚಿವರಾದ ವಿ. ಮುರಳೀಧರನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಹರೀಶ್ ಬಂಗೇರ ಅವರ ಹೆಸರಲ್ಲಿ ಫೆಕ್ ಫೇಸ್ ಬುಕ್ ಐಡಿ ನಿರ್ಮಿಸಿದ ಮೂಡಬಿದಿರೆಯ ಇಬ್ಬರು ಅಣ್ಣ-ತಮ್ಮಂದಿರನ್ನು ಬಂಧಿಸುವಲ್ಲಿ ನಮ್ಮ ಉಡುಪಿಯ ಸೇನ್ ಪೊಲೀಸ್ ಅಧಿಕಾರಿಗಳು ಉತ್ತಮ ಕೆಲಸವನ್ನು ನಿರ್ವಹಿಸಿದ್ದು, ನಂತರ ಈ ಕೇಸಿಗೆ ಸಂಬಂಧಿಸಿ ಕರ್ನಾಟಕ ಸರಕಾರದ ಮೂಲಕ ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆಸಿ, ತನಿಖೆಯನ್ನು ವೇಗಗೊಳಿಸುವಂತೆ ಸಂಸದೆ

ಹರೀಶ್ ಬಂಗೇರ ಪ್ರಕರಣ: ವಿದೇಶಾಂಗ ಸಚಿವರೊಂದಿಗೆ ಶೋಭಾ ಮಾತುಕತೆ Read More »

ದ.ಕ ಜಿಲ್ಲೆಯಲ್ಲಿ ಮಳೆ ನಡುವೆಯೂ ಕೊರೊನಾ ಹಾವಳಿ: ಆತಂಕ ಮೂಡಿಸುತ್ತಿರುವ ಪಾಸಿಟಿವಿಟಿ ದರ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವಾರು ಕಡೆ‌ ಅವಘಡಗಳು ಸಂಭವಿಸುತ್ತಿರುವ ನಡುವೆಯೇ ಕೊರೊನಾ ಹಾವಳಿಯೂ ಮುಂದುವರೆದಿದೆ. ರಾಜ್ಯದ ಒಟ್ಟು ಕೇಸ್ ಗಳನ್ನು ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ‌ಸೋಂಕಿತರ ಪ್ರಮಾಣ ದಿನೇದಿನೇ ಏರಿಕೆ ಕಾಣಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ‌ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಶುಕ್ರವಾರ 300 ಇದ್ದ ಹೊಸ ಕೇಸ್ ಗಳು‌ ಶನಿವಾರ 269 ಕ್ಕೆ ಇಳಿಕೆಯಾಗಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

ದ.ಕ ಜಿಲ್ಲೆಯಲ್ಲಿ ಮಳೆ ನಡುವೆಯೂ ಕೊರೊನಾ ಹಾವಳಿ: ಆತಂಕ ಮೂಡಿಸುತ್ತಿರುವ ಪಾಸಿಟಿವಿಟಿ ದರ Read More »

ಪ್ರವಾಹದಿಂದ ದ್ವೀಪವಾದ ಗ್ರಾಮ | ಹೆರಿಗೆ ನೋವು ಬಂದ ಗರ್ಭಿಣಿ ಬೋಟ್ ಮೂಲಕ ಆಸ್ಪತ್ರೆಗೆ | ಸ್ಥಳೀಯ ಯುವಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

ಕಾರವಾರ: ಜಲಪ್ರವಾಹದಿಂದ ದ್ವೀಪದಂತಾಗಿದ್ದ ಗ್ರಾಮದಿಂದ ಹೆರಿಗೆ ನೋವು ಬಂದ ಗರ್ಭಿಣಿಯನ್ನು ಸ್ಥಳೀಯ ಯುವಕರು ಬೋಟ್ ಮೂಲಕ ಸೂಕ್ತ ಸಮಯಕ್ಕೆ ಆಸ್ಪತ್ರೆ ಸೇರಿಸಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಮೌಳಂಗಿ ಗ್ರಾಮ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಜಾಲವೃತವಾಗಿತ್ತು. ಅದೇ ಸಮಯಕ್ಕೆ ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರಿಗೆ ತೀವ್ರ ಹೆರಿಗೆ ನೋವು ಬಂದಿದೆ. ಊರಿನ ಹೊರಗಿನ ನಗರದ ಆಸ್ಪತ್ರೆಗೆ ತೆರಳುವ ರಸ್ತೆಗಳೆಲ್ಲವು ಭಾರೀ ಮಳೆಗೆ ಸಂಪೂರ್ಣ ಜಾಲವೃತವಾಗಿದ್ದವು. ಮಹಿಳೆಯ ಕುಟುಂಬಕ್ಕೆ ದಿಕ್ಕು ತೋಚದೆ ಅಸಹಾಯಕ ಸ್ಥಿತಿ

ಪ್ರವಾಹದಿಂದ ದ್ವೀಪವಾದ ಗ್ರಾಮ | ಹೆರಿಗೆ ನೋವು ಬಂದ ಗರ್ಭಿಣಿ ಬೋಟ್ ಮೂಲಕ ಆಸ್ಪತ್ರೆಗೆ | ಸ್ಥಳೀಯ ಯುವಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ Read More »