ಕರಾವಳಿ

ಮಂಗಳೂರು| ಮೋಗರ್ನ್ ಗೇಟ್ ಶೂಟೌಟ್ ಪ್ರಕರಣ| ಮಗನ ಸಾವಿಗೆ ಕಾರಣನಾದ ರಾಜೇಶ್ ಪ್ರಭುಗೆ ಜಾಮೀನು|

ಮಂಗಳೂರು: ಅಕ್ಟೋಬರ್ 5ರಂದು ನಡೆದ ಮೋರ್ಗನ್ಸ್ ಗೇಟ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಶ್ ಪ್ರಭುಗೆ ಷರತ್ತು ಬದ್ಧ ಜಾಮೀನನ್ನು ಮಂಗಳೂರು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಂಜೂರುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ಕೋರ್ಟ್ ಆರೋಪಿಯಿಂದ ಐದು ಲಕ್ಷ ರೂ. ಬಾಂಡ್ ಪಡೆದಿದ್ದು, ಆಕಸ್ಮಿಕವಾಗಿ ಗುಂಡು ಹಾರಲ್ಪಟ್ಟಿದೆ ಹಾಗೂ ಸ್ವಂತ ಮಗ ಎನ್ನುವ ಕಾರಣಕ್ಕೆ ಜಾಮೀನು ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಅಕ್ಟೋಬರ್ 5ರಂದು ನಡೆದ ಈ ಶೂಟೌಟ್ ಪ್ರಕರಣದಲ್ಲಿ, ಸಿಬ್ಬಂದಿಗಳಿಬ್ಬರ

ಮಂಗಳೂರು| ಮೋಗರ್ನ್ ಗೇಟ್ ಶೂಟೌಟ್ ಪ್ರಕರಣ| ಮಗನ ಸಾವಿಗೆ ಕಾರಣನಾದ ರಾಜೇಶ್ ಪ್ರಭುಗೆ ಜಾಮೀನು| Read More »

ಬಂಟ್ವಾಳ: ಕಾರಿಂಜೇಶ್ವರ ಸನ್ನಿಧಿಯಲ್ಲಿ ವಿಕೃತಿ ಮೆರೆದ ಅನ್ಯಮತೀಯರು| ಚಪ್ಪಲಿ ಧರಿಸಿ ದೇಗುಲ ಪ್ರವೇಶಿಸಿ ಪುಂಡಾಟ| ಕಾನೂನು ಹೋರಾಟ ನಡೆಸಲು ಹಿಂದೂ ಪರ ಸಂಘಟನೆಗಳ ನಿರ್ಧಾರ|

ಬಂಟ್ವಾಳ: ಇಲ್ಲಿನ ಪುರಾಣ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದ ಒಳಗಡೆ ಪಾದರಕ್ಷೆ ಧರಿಸಿ ಅಕ್ರಮವಾಗಿ ದೇಗುಲ ಪ್ರವೇಶಿಸಿ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಪೋಟೊ, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇವಾಲಯದ ಭಕ್ತರಿಂದ ಹಾಗೂ ಹಿಂದೂ ಪರ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಂಟ್ವಾಳ ತಾಲ್ಲೂಕು ಹಿಂದು ಜಾಗರಣ ವೇದಿಕೆ ಘಟನೆಯನ್ನು ಖಂಡಿಸಿದ್ದು, ಕಾನೂನು ಸಮರಕ್ಕೆ ಸಿದ್ಧವಾಗುವ ಸೂಚನೆ ನೀಡಿದೆ. ಏನಿದು ವಿವಾದ?.ಶ್ರೀಕಾರಿಂಜೇಶ್ವರ ದೇವಸ್ಥಾನ ಬಂಟ್ವಾಳ ತಾಲೂಕಿನ ಕಾರಿಂಜ ಎಂಬ ಸ್ಥಳದಲ್ಲಿ ನೆಲೆಗೊಂಡಿರುವ ಪುರಾಣ ಪ್ರಸಿದ್ಧ

ಬಂಟ್ವಾಳ: ಕಾರಿಂಜೇಶ್ವರ ಸನ್ನಿಧಿಯಲ್ಲಿ ವಿಕೃತಿ ಮೆರೆದ ಅನ್ಯಮತೀಯರು| ಚಪ್ಪಲಿ ಧರಿಸಿ ದೇಗುಲ ಪ್ರವೇಶಿಸಿ ಪುಂಡಾಟ| ಕಾನೂನು ಹೋರಾಟ ನಡೆಸಲು ಹಿಂದೂ ಪರ ಸಂಘಟನೆಗಳ ನಿರ್ಧಾರ| Read More »

ಮಂಗಳೂರು | ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿಯನ್ನು ತಲೆಬೋಳಿಸಿ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಕಾರ್ಮಿಕರು

ಮಂಗಳೂರು: ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ನೀರಿನ ಹೊಂಡಕ್ಕೆ ಎಸೆದು ಹೋದ ದುಷ್ಕೃತ್ಯ ನಗರದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಿಹಾರ ಮೂಲದ ಚಂದನ್(33) ಎಂದು ಗುರುತಿಸಲಾಗಿದೆ. ಬಂದರಿನಲ್ಲಿ ಫಿಶ್ ಮಿಲ್ ಒಂದರಲ್ಲಿ ಬಿಹಾರ, ಉತ್ತರ ಪ್ರದೇಶ ಮೂಲದ 40ಕ್ಕೂ ಹೆಚ್ಚು ಕುಟುಂಬಗಳು ಕೆಲಸಕ್ಕಿದ್ದು, ಹೊಯ್ಗೆಬಜಾರ್ ನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದಾರೆ. ಅಲ್ಲಿನ ಕುಟುಂಬಗಳ ಮಕ್ಕಳು ಒಂದೇ ಕಡೆ ಆಟವಾಡಿಕೊಂಡು ಇದ್ದರು. ಈ ವೇಳೆ, ನಿನ್ನೆ ಸಂಜೆ ಹೆಣ್ಣು ಮಗುವೊಂದನ್ನು

ಮಂಗಳೂರು | ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿಯನ್ನು ತಲೆಬೋಳಿಸಿ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಕಾರ್ಮಿಕರು Read More »

ಡಿಜೆ ಆಪರೇಟ್ ಮಾಡಿದ “ಮಹಿಷಾಸುರ”- ಕ್ಷಮೆಗೆ ಆಗ್ರಹ

ಮಂಗಳೂರು : ಕರಾವಳಿಯ ಗಂಡುಕಲೆ ಯಕ್ಷಗಾನದ ವೇಷ ಧರಿಸಿದ ಯುವಕನೊಬ್ಬ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಉಡುಪಿಯ ಮಣಿಪಾಲದ ಪಬ್‌ಯೊಂದರಲ್ಲಿ, “ದೇವಿ ಮಹಾತ್ಮೆ” ಪ್ರಸಂಗದಲ್ಲಿ ಬರುವ ಮಹಿಷಾಸುರನ ವೇಷ ಧರಿಸಿದ ಯುವಕ ಡಿಜೆ ಅಪರೆಟ್ ಮಾಡುತ್ತಿದ್ದ, ಇದನ್ನು ಪಬ್ ಹೋದವರು ವಿಡಿಯೋ ಮಾಡಿ ಸಾಮಾಜಿಕವಾಗಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಯಕ್ಷಗಾನ ವೇಷದಾರಿ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಯಕ್ಷಗಾನ ಅಭಿಮಾನಿಗಳಿಂದ ಬಾರೀ

ಡಿಜೆ ಆಪರೇಟ್ ಮಾಡಿದ “ಮಹಿಷಾಸುರ”- ಕ್ಷಮೆಗೆ ಆಗ್ರಹ Read More »

ಸುಳ್ಯ| ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಸುಳ್ಯ: ಕಳೆದೊಂದು ವಾರದ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಅರಂತೋಡು ಗ್ರಾಮದ ಉಳುವಾರು ದೇವಣ್ಣ ಗೌಡ ಎಂಬವರ ಶವ ಇಂದು ಪತ್ತೆಯಾಗಿದೆ. ಅ.24 ರ ತಡರಾತ್ರಿ ಶೌಚಾಲಯಕ್ಕೆಂದು‌ ಮನೆಯಿಂದ ಹೊರಟಿದ್ದ ದೇವಣ್ಣ ಗೌಡರು ಯಾರ ಕಣ್ಣಿಗೂ ಕಾಣದೆ‌ ನಿಗೂಢವಾಗಿ ಕಣ್ಮರೆಯಾಗಿದ್ದರು. ಬಳಿಕ ಮನೆಯವರು ಹಾಗೂ ಊರವರು‌ ಪಯಸ್ವಿನಿ ನದಿಯ ಉದ್ದಗಲಕ್ಕೂ ಹಾಗೂ ವಿವಿಧ ಕಡೆ ಹುಡುಕಾಡಿದ್ದರು.‌ ಇಂದು ಮುಂಜಾನೆ ಅರಂತೋಡು‌- ತೊಡಿಕಾನ ರಸ್ತೆಯಲ್ಲಿನ ಸೇತುವೆ ಪಕ್ಕ ಕಾಡಿನಲ್ಲಿ ದೇವಣ್ಣ ಗೌಡರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ

ಸುಳ್ಯ| ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ Read More »

ಮಂಗಳೂರು- ಕುವೈಟ್ ವಿಮಾನಯಾನ| ಊಟಕ್ಕಿಲ್ಲದ ಉಪ್ಪಿನಕಾಯಿ

ಮಂಗಳೂರು: ಇಲ್ಲಿಂದ ಕುವೈತ್‌ಗೆ ತೆರಳುವ ಏರ್‌ ಇಂಡಿಯಾ ವಿಮಾನಗಳ ವೇಳಾಪಟ್ಟಿಯನ್ನು ನವೆಂಬರ್‌ನಿಂದ ಪರಿಷ್ಕರಿಸಲಾಗಿದ್ದು, ಈ ಬಾರಿಯೂ ಅನುಕೂಲ ಕಲ್ಪಿಸಿಲ್ಲ ಎನ್ನುವ ಆರೋಪ ಕುವೈತ್‌ನ ಅನಿವಾಸಿ ಕರಾವಳಿಗರಿಂದ ಕೇಳಿಬಂದಿದೆ. ಕೋವಿಡ್‌-19 ಮೊದಲ ಅಲೆಯವರೆಗೆ ಸಮರ್ಪಕವಾಗಿದ್ದ ಮಂಗಳೂರು-ಕುವೈತ್‌ ವಿಮಾನದ ವೇಳಾಪಟ್ಟಿ, ಬಳಿಕ ದಿಢೀರನೆ ಬದಲಾಗಿದೆ.ಗುರುವಾರ ಕುವೈತ್‌ನಿಂದ ಹೊರಟು ಮಂಗಳೂರಿಗೆ ಬರುವವರಿಗೆ ಮೊದಲಿನ ವೇಳಾಪಟ್ಟಿ ಅನುಕೂಲವಾಗಿತ್ತು. ಕುವೈತ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ರಜೆ ಇರುವುದರಿಂದ, ಕರಾವಳಿ ಜನರು ಊರಿಗೆ ಬಂದು ಹೋಗಲು ಪ್ರಯೋಜನವಾಗುತ್ತಿತ್ತು. ರಜೆ ಇಲ್ಲದೆ ಭಾನುವಾರ ಮತ್ತೆ ಕೆಲಸಕ್ಕೆ

ಮಂಗಳೂರು- ಕುವೈಟ್ ವಿಮಾನಯಾನ| ಊಟಕ್ಕಿಲ್ಲದ ಉಪ್ಪಿನಕಾಯಿ Read More »

ಮೂಡುಬಿದ್ರೆ ಪೊಲೀಸರ ಬಲೆಗೆ ಬಿದ್ದ ಅಂಡರ್ ವರ್ಲ್ಡ್ ಡಾನ್ ಸುರೇಶ ಪುಜಾರಿಯ ಬಂಟ

ಮಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಬಂಧನಕ್ಕೀಡಾಗಿರುವ ಅಂಡರ್ ವರ್ಲ್ಡ್ ಡಾನ್ ಸುರೇಶ ಪುಜಾರಿಯ ಬಂಟ ಪ್ರವೀಣ್ ಕುಮಾರ್ ಎಂಬತಾನನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಮುಂಬೈನಲ್ಲಿ ಛೋಟಾ ರಾಜನ್, ಆಬಳಿಕ ರವಿ ಪೂಜಾರಿ ಜೊತೆಗೆ ಖಾಸಾ ಬಂಟನಾಗಿ ಗುರುತಿಸಲ್ಪಟ್ಟಿದ್ದ ಸುರೇಶ ಪೂಜಾರಿ ಆನಂತರ ತಾನೇ ಅಂಡರ್ ವರ್ಲ್ಡ್ ಡಾನ್ ಎಂದು ಹೇಳಿ ವಿದೇಶದಲ್ಲಿದ್ದುಕೊಂಡು ಮುಂಬೈನಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ. ಈತನ ವಿರುದ್ಧ ಹಲವಾರು ಪ್ರಕರಣಗಳು ಮುಂಬೈ ಮತ್ತು ಥಾಣೆಯಲ್ಲಿ ದಾಖಲಾಗಿದ್ದವು. ಈತನ ಸಹಚರರ ಮೂಲಕ

ಮೂಡುಬಿದ್ರೆ ಪೊಲೀಸರ ಬಲೆಗೆ ಬಿದ್ದ ಅಂಡರ್ ವರ್ಲ್ಡ್ ಡಾನ್ ಸುರೇಶ ಪುಜಾರಿಯ ಬಂಟ Read More »

ಪುತ್ತೂರು: ಕಾರು‌ ಮತ್ತು ಆ್ಯಕ್ಟಿವಾ ನಡುವೆ ಅಪಘಾತ| ಸವಾರ ಸಾವು

ಪುತ್ತೂರು: ಇಲ್ಲಿನ ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಬಳಿಯ ಕೊಡನೀರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನ .1 ರಂದು ನಡೆದಿದೆ. ಪೆರಮೊಗರಿನ ಕೋಳಿ ಅಂಗಡಿಯ ಸೋಮಶೇಖರ್ ರೈ ಮೃತಪಟ್ಟವರು.ಮಾರುತಿ ಡಿಸೈರ್ ಕಾರು ಹಾಗೂ ಅಕ್ಟಿವಾ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಅಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದು ,ಕೂಡಲೇ ಸ್ಥಳೀಯರ ನೆರವಿನಿಂದ ಅರುಣ್ ಕುಮಾರ್ ಪುತ್ತಿಲರವರು ತಮ್ಮ ಕಾರಿನಲ್ಲಿ ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ

ಪುತ್ತೂರು: ಕಾರು‌ ಮತ್ತು ಆ್ಯಕ್ಟಿವಾ ನಡುವೆ ಅಪಘಾತ| ಸವಾರ ಸಾವು Read More »

2ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಉಪ್ಪು ನೀರಿನ ಟ್ಯಾಂಕ್ ಗೆ ಬಿಸಾಕಿದ ಕಿರಾತಕ

ಮಂಗಳೂರು: ಲೈಂಗಿಕ ಕಿರುಕುಳ ನೀಡಲು 2 ವರ್ಷದ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಹೊತ್ತೊಯ್ದಿದ್ದು, ಬಳಿಕ ಮಗುವನ್ನು ಉಪ್ಪು ನೀರಿನ ಟ್ಯಾಂಕ್ ಎಸೆದು ಹೋಗಿರುವ ಹೀನಾತಿಹೀನ ಕೃತ್ಯ ನಡೆದಿದೆ. ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುಕೃತ್ಯ ನಡೆದಿದೆ. ಫಿಶ್ ಕಟ್ಟಿಂಗ್ ಮಾಡುವ ಫ್ಯಾಕ್ಟರಿ ಬಳಿ ಬಿಹಾರ ಮೂಲದ ಕಾರ್ಮಿಕರು ನೆಲೆಸಿದ್ದಾರೆ. ಕಾರ್ಮಿಕರೆಲ್ಲರ ಮಕ್ಕಳನ್ನ ನೋಡಿಕೊಳ್ಳಲು ಒಂದು ಕ್ಯಾಂಪ್ ಇದೆ. ಆ ಶಿಬಿರದಿಂದ ಹೆಣ್ಣು ಮಗುವನ್ನು ಚಂದನ್ ಎಂಬ ಆರೋಪಿ ಹೊತ್ತೊಯ್ದಿದ್ದಾನೆ.

2ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಉಪ್ಪು ನೀರಿನ ಟ್ಯಾಂಕ್ ಗೆ ಬಿಸಾಕಿದ ಕಿರಾತಕ Read More »

ಮಂಗಳೂರು: ರಾಷ್ಟ್ರ ಧ್ವಜ ಉಲ್ಟಾಪಲ್ಟಾ

ಮಂಗಳೂರು : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿದ ಘಟನೆ ನ.1 ರ ಸೋಮವಾರ ನಡೆದಿದೆ. ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಸಚಿವ ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿಸಲ್ಪಟ್ಟಿತು. ಸಿಬ್ಬಂದಿಗಳ ಎಡವಟ್ಟಿನಿಂದ ಬಾವುಟವೂ ಉಲ್ಟಾ ಆಗಿ ಹಾರಿತು. ತಕ್ಷಣ ಅಧಿಕಾರಿಗಳು ಗಮನಿಸಿ ರಾಷ್ಟ್ರ ಧ್ವಜವನ್ನು ಸರಿಪಡಿಸಲಾಯಿತು.

ಮಂಗಳೂರು: ರಾಷ್ಟ್ರ ಧ್ವಜ ಉಲ್ಟಾಪಲ್ಟಾ Read More »