ಕರಾವಳಿ

ಮನೆ ಬಾಗಿಲು ಮುರಿದು 18.35 ಲಕ್ಷ ನಗದು ದೋಚಿದ ಕಳ್ಳರು

ಉಡುಪಿ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿ ಸುಮಾರು ನಗದು, ಚಿನ್ನಾಭರಣ ಸಹಿತ ಸುಮಾರು 18.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಎಗರಿಸಿದ ಘಟನೆ ಅಂಬಲ್ಪಾಡಿ ಗ್ರಾಮದ ಸಿಪಿಸಿ ಲೇಔಟ್‌ನ ಜಯಗಣೇಶ ಬೀಡು ಎಂಬವರ ಮನೆಯಲ್ಲಿ ನಡೆದಿದೆ. ನ.6 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಕಿರು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳ ಪ್ರವೇಶಿಸಿ, ಒಳಗಿನ ಬಾಗಿಲಿನ ಚಿಲಕದ ಬದಿ ಮುರಿದು ಮಾಸ್ಟರ್‌

ಮನೆ ಬಾಗಿಲು ಮುರಿದು 18.35 ಲಕ್ಷ ನಗದು ದೋಚಿದ ಕಳ್ಳರು Read More »

ಬಂಟ್ವಾಳ: ತೆಂಗಿನ ಮರ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ: ತೆಂಗಿನ ಮರ ಮೈಮೇಲೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಪೆರ್ಲಾಪು ಎಂಬಲ್ಲಿ ನಡೆದಿದೆ. ಪೆರ್ಲಾಪು ನಿವಾಸಿ ಸುರೇಶ್(38) ಮೃತಪಟ್ಟ ವ್ಯಕ್ತಿ.ಸುರೇಶ್ ಎಂಬಾತ ನೆರೆ ಮನೆಯ ಬೆಂಗದಡಿ ಭುಜಂಗ ಶೆಟ್ಟಿ ಅವರ ಮನೆಯ ತೋಟದಲ್ಲಿದ್ದ ತೆಂಗಿನ ಮರವನ್ನು ಕಡಿಯಲು ಲಕ್ಷಣ ಅವರ ಜೊತೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಧ್ಯಾಹ್ನ ತೆಂಗಿನ ಮರ ಕಡಿದು ನೆಲಕ್ಕೆ ಬಿದ್ದಾಗ, ಅದರ ಪಕ್ಕದಲ್ಲೆ ಇದ್ದ ಸತ್ತ ಒಣಗಿದ ತೆಂಗಿನ ಮರ ಆಕಸ್ಮಿಕವಾಗಿ ಸುರೇಶ್ ಅವರ ಮೈಮೇಲೆ ಬಿದ್ದು

ಬಂಟ್ವಾಳ: ತೆಂಗಿನ ಮರ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು Read More »

ಸುಳ್ಯ| ಶಾಂತಿನಗರ ತಿರುವಲ್ಲೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೈಮಾಸ್ಟ್ ಲ್ಯಾಂಪ್|

ಸುಳ್ಯ: ಬೆಳೆಯುತ್ತಿರುವ ಸುಳ್ಯದಲ್ಲಿ ಕೊರತೆಗಳು ಹಲವಾರಿವೆ. ಕೆಲವೊಂದು ಜನಪ್ರತಿನಿಧಿಗಳ ಗಮನಕ್ಕೆ ಬಂದು ನಿವಾರಣೆಯಾಗುತ್ತವೆ. ಇನ್ನೂ ಹಲವು ಸಮಸ್ಯೆಗಳು ಅರಿವಿದ್ದರೂ ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು‌ ಸುಮ್ಮನಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆ ಶಾಂತಿನಗರ ಜಂಕ್ಷನ್ ನಲ್ಲಿರುವ ಹೈಮಾಸ್ಟ್ ದೀಪಸ್ಥಂಭ. ಹೌದು, ಕಳೆದೊಂದು ವರ್ಷದಿಂದ ಈ ಹೈಮಾಸ್ಟ್ ದೀಪ ತಟಸ್ಥವಾಗಿದೆ. ನಗರ ಪಂಚಾಯತ್ ನ ಸದಸ್ಯರಿಗೆ ಈ ಸಮಸ್ಯೆಯ ಅರಿವಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ. ದೀಪಸ್ತಂಭವೇನೋ ಐದು ದೀಪಗಳನ್ನು ಹೊಂದಿ ಬೃಹತ್ತಾಗಿ ನಿರ್ಮಾಣಗೊಂಡಿದೆ.

ಸುಳ್ಯ| ಶಾಂತಿನಗರ ತಿರುವಲ್ಲೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೈಮಾಸ್ಟ್ ಲ್ಯಾಂಪ್| Read More »

ಕಡಬ| ಆಪರೇಶನ್ ಚೀತಾ ಸಕ್ಸಸ್| ಕೋಳಿ ಹಿಡಿಯಲು ಬಂದ ಚಿರತೆ ಬೋನೊಳಗೆ ಬಂಧಿ|

ಕಡಬ: ಕೋಳಿ ಹಿಡಿಯಲು ಬಂದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳ ಯಶಸ್ವಿ ಕಾರ್ಯಾಚರಣೆಯಿಂದ ಚಿರತೆಯನ್ನು ರಕ್ಷಿಸುವ ಕಾರ್ಯ ನಡೆದಿದೆ. ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರ ರಾಮಯ್ಯ ಗೌಡ ಎಂಬವರ ಮನೆಯ ಮುಂಭಾಗದ ಬಾವಿಗೆ ಬಿದ್ದಿತ್ತು. ಮಾಹಿತಿ‌ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಸೂಕ್ತ ಭದ್ರತೆಯೊಂದಿಗೆ ಸಂಜೆಯ ವೇಳೆಗೆ ಚಿರತೆಯ ರಕ್ಷಣಾ ಕಾರ್ಯವನ್ನು ಆರಂಭಿಸಿದ್ದರು. ಬೋನು ತಂದು ಬಾವಿಯ ಕಟ್ಟೆಯ ಸಮೀಪ ಇಟ್ಟು ಬಾವಿಯ ಮೇಲಿನ ಭಾಗಕ್ಕೆ ಬಲೆ ಹಾಸಿ ಏಣಿ ಇಳಿಸಲಾಗಿದ್ದು,

ಕಡಬ| ಆಪರೇಶನ್ ಚೀತಾ ಸಕ್ಸಸ್| ಕೋಳಿ ಹಿಡಿಯಲು ಬಂದ ಚಿರತೆ ಬೋನೊಳಗೆ ಬಂಧಿ| Read More »

ಉಡುಪಿ : ಜಿಪ್ ಜಾರಿಸಿ ಖಾಸಗಿ ಅಂಗ ತೋರಿಸುತ್ತಿದ್ದ ಕಂಡಕ್ಟರ್‌ನ ಕಾಮದ ಪಿತ್ತ ಇಳಿಸಿದ ನರ್ಸಿಂಗ್ ವಿದ್ಯಾರ್ಥಿನಿಯರು

ಉಡುಪಿ: ಕಾಲೇಜು ವಿಧ್ಯಾರ್ಥಿನಿಯರಿಗೆ ಪ್ರತಿನಿತ್ಯ ಗುಪ್ತಾಂಗ ತೋರಿಸಿ ವಿಕೃತಿ ಮೆರೆಯುತ್ತಿದ್ದ ಖಾಸಗಿ ಬಸ್ ಕಂಡಕ್ಟರ್ ಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸ್ ವಶಕ್ಕೆ ನೀಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಹೆಬ್ರಿಯ ಹೆಸರಾಂತ ಖಾಸಗಿ ಬಸ್ ನ‌ ಕಂಡಕ್ಟರ್ ಉಪೇಂದ್ರ ಎಂಬಾತನೇ ಪ್ರಕರಣದ ಆರೋಪಿ. ಈತ ಸಂತೆಕಟ್ಟೆಯ ನರ್ಸಿಂಗ್ ಕಾಲೇಜ್ ಬಳಿ ತನ್ನ ಸ್ಕೂಟಿಯಲ್ಲಿ ಬಂದು ಅಲ್ಲಿನ ವಿದ್ಯಾರ್ಥಿನಿಯರಿಗೆ ಪ್ಯಾಂಟ್ ಜಿಪ್ ಜಾರಿಸಿ ಕಳೆದ ಕೆಲವು ದಿನಗಳಿಂದ ಗುಪ್ತಾಂಗ ತೋರಿಸುತ್ತಿದ್ದ. ಮಾತ್ರವಲ್ಲದೆ ಕೈಸನ್ನೆ, ಕಣ್ಣ್ ಸನ್ನೆ ಮಾಡುತ್ತ

ಉಡುಪಿ : ಜಿಪ್ ಜಾರಿಸಿ ಖಾಸಗಿ ಅಂಗ ತೋರಿಸುತ್ತಿದ್ದ ಕಂಡಕ್ಟರ್‌ನ ಕಾಮದ ಪಿತ್ತ ಇಳಿಸಿದ ನರ್ಸಿಂಗ್ ವಿದ್ಯಾರ್ಥಿನಿಯರು Read More »

ಉಳ್ಳಾಲ: ಹಿಟ್ & ರನ್ ಗೆ ಕೂಲಿ ಕಾರ್ಮಿಕ ಬಲಿ

ಉಳ್ಳಾಲ: ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ.66 ರ ಬೀರಿ ಎಂಬಲ್ಲಿ ನಡೆದಿದೆ. ಧಾರವಾಡ ಮೂಲದ ವಲಸೆ ಕಾರ್ಮಿಕ ಆನಂದ್ ಅಲಿಯಾಸ್ ಸಾಗರ್(28)ಸಾವನಪ್ಪಿದ ಯುವಕ. ಈತ ಸಂಕೋಳಿಗೆಯ ಎ.ಕೆ ಟ್ರೇಡರ್ಸ್ ಎಂಬ ಸಿಮೆಂಟ್ ಅಂಗಡಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಅವರು ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೀರಿಯ ಹೆದ್ದಾರಿ ಬದಿಯಲ್ಲಿರುವ ಠಿಕ್ಕ ಪಾಯಿಂಟ್ ಎಂಬ ರೆಸ್ಟೋರಂಟಿಗೆ ತೆರಳಿದ್ದರು. ಅಲ್ಲಿ ಠಿಕ್ಕ ಸವಿದು ಹಿಂತಿರುಗುತ್ತಿದ್ದ ವೇಳೆ ಅಪರಿಚಿತ

ಉಳ್ಳಾಲ: ಹಿಟ್ & ರನ್ ಗೆ ಕೂಲಿ ಕಾರ್ಮಿಕ ಬಲಿ Read More »

ಸಮುದ್ರದಲ್ಲೆ ಹೊತ್ತಿ ಉರಿದ ಮಲ್ಪೆ ಮೂಲದ ಬೋಟ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸನಿಹ ಅರಬ್ಬಿ ಸಮುದ್ರದಲ್ಲಿ ಬೋಟ್ ಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಬೋಟ್ ನಲ್ಲಿದ್ದ 7 ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ. ಅರಬ್ಬಿ ಸಮುದ್ರದಲ್ಲಿ ಮಲ್ಪೆ ಮೂಲದ “ವರದ ವಿನಾಯಕ ” ಎಂಬ ಹೆಸರಿನ ಬೋಟ್ ಮೀನುಗಾರಿಕೆ ನಡೆಸುತಿತ್ತು. ಈ ವೇಳೆ ಬೋಟ್ ನ ಇಂಜಿನ್ ರೂಮ್ ನಲ್ಲಾದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಮಾಹಿತಿ ಪಡೆದ ಭಾರತೀಯ ಕರಾವಳಿ ಪಡೆ

ಸಮುದ್ರದಲ್ಲೆ ಹೊತ್ತಿ ಉರಿದ ಮಲ್ಪೆ ಮೂಲದ ಬೋಟ್ Read More »

“ಐಡಿಯಲ್ ಐಸ್ ಕ್ರೀಂ” ಸಂಸ್ಥಾಪಕ ಪ್ರಭಾಕರ ಕಾಮತ್ ವಿಧಿವಶ

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಖ್ಯಾತ ಐಡಿಯಲ್ ಐಸ್ ಕ್ರೀಮ್ ನ ಸಂಸ್ಥಾಪಕ ಪ್ರಭಾಕರ್ ಕಾಮತ್ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ನಗರದಲ್ಲಿ ‘ಪಬ್ಬ ಮಾಮ್’ ಎಂದೇ ಕರೆಯಲ್ಪಡುತ್ತಿದ್ದ ಪ್ರಭಾಕರ್ ಕಾಮತ್ ಅವರು ಮೊದಲ ಐಡಿಯಲ್ ಐಸ್ ಕ್ರೀಮ್ ಮಳಿಗೆಯನ್ನು 1975ರಲ್ಲಿ ಮಂಗಳೂರಿನಲ್ಲಿ ಆರಂಭಿಸಿದ್ದರು. 14 ಫ್ಲೇವರ್ ಗಳೊಂದಿಗೆ ಮೊದಲ ಬಾರಿಗೆ ಐಡಿಯಲ್ ಐಸ್ ಕ್ರೀಮ್ ಮಳಿಗೆಯನ್ನು ಪ್ರಾರಂಭಿಸಿದ್ದ ಪ್ರಭಾಕರ್ ಕಾಮತ್ ಅವರು ಸ್ವತಃ ಐಸ್ ಕ್ರೀಮ್ ತಯಾರಿ ನಡೆಸುತ್ತಿದ್ದರು. ಐಡಿಯಲ್ ಐಸ್ ಕ್ರೀಮ್ ಕರಾವಳಿ ಭಾಗದಲ್ಲಿ

“ಐಡಿಯಲ್ ಐಸ್ ಕ್ರೀಂ” ಸಂಸ್ಥಾಪಕ ಪ್ರಭಾಕರ ಕಾಮತ್ ವಿಧಿವಶ Read More »

ಸುಳ್ಯ| ಹಣತೆಗಳಿಂದ ಕಂಗೊಳಿಸಿತು ಗ್ರಾಮಸ್ಥರ “ಗ್ರಾಮಸೇತು”

ಸುಳ್ಯ: ದೀಪಗಳ ಮಹತ್ವ ದೀಪಾವಳಿಯಂದು ಅರಿವಾಗುತ್ತದೆ. ದೀಪಗಳ ಬೆಳಕು ಅಂದರೆ ಸುಜ್ಞಾನದ ಬೆಳಕು. ಈ ಬೆಳಕಿನ ಮೂಲಕ ಅಸುರೀ ಶಕ್ತಿಗಳು ದೂರವಾಗಲಿ , ಗ್ರಾಮಗಳಲ್ಲಿ ಸುಜ್ಞಾನದ ಬೆಳಕು ಹರಿಯಲಿ ಎಂದು ಸಾಮಾಜಿಕ ಕಾರ್ಯಕರ್ತ, ಜೇಸೀ ಸದಸ್ಯ ಶಶಿಧರ ಪಳಂಗಾಯ ಹೇಳಿದರು. ಅವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಜನರಿಂದಲೇ ನಿರ್ಮಾಣವಾದ ಕಾಲುಸಂಕ “ಗ್ರಾಮಸೇತು” ಮೇಲೆ ಹಣತೆ ಬೆಳಗಿ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಬೆಳಕಿನ ಮಹತ್ವ ದೀಪಾವಳಿಯಂದು ತಿಳಿಯುತ್ತದೆ. ಈ ದಿನ ಬೆಳಕಿನ ಮಹತ್ವ

ಸುಳ್ಯ| ಹಣತೆಗಳಿಂದ ಕಂಗೊಳಿಸಿತು ಗ್ರಾಮಸ್ಥರ “ಗ್ರಾಮಸೇತು” Read More »

ದೀಪದ ಬತ್ತಿಯಂತೆ ಉರಿಯುತ್ತೆ ಈ ಎಲೆ ಚಿಗುರು| ಪಂಜದಲ್ಲೊಂದು ವಿಚಿತ್ರ ಗಿಡ ಪತ್ತೆ|

ಸುಳ್ಯ: ನಾಗರಿಕ ಸಮಾಜಕ್ಕೆ ಹೊಂದಿಕೊಳ್ಳುವ ಮೊದಲು‌ ಮನುಷ್ಯ ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದ ಎಂಬ ಬಗ್ಗೆ ಇತಿಹಾಸದಲ್ಲಿ ತಿಳಿದಿದ್ದು, ಹೀಗೆ ತಯಾರಿಸಿದ ಬೆಂಕಿಯನ್ನು ಬೆಳಕಾಗಿ ಉಪಯೋಗಿಸಲು ಬಳಸುತ್ತಿದ್ದ. ಆದರೆ ಪ್ರಕೃತಿಯ ಮಡಿಲಲ್ಲಿಯೂ ಇಂತದ್ದೇ ಒಂದು ಅಪರೂಪದ ಗಿಡವೊಂದು ಇದೀಗ ಪತ್ತೆಯಾಗಿದೆ. ತಾಲೂಕಿನ ಪಂಜ ಎಂಬಲ್ಲಿ ಈ ಅಪರೂಪದ ಗಿಡ ಪತ್ತೆಯಾಗಿದೆ. ಇಲ್ಲಿನ ಅಳ್ಪೆ ನಿವಾಸಿ ಜಿನ್ನಪ್ಪ ಎನ್ನುವವರ ರಬ್ಬರ್ ತೋಟದಲ್ಲಿ ಈ ಗಿಡ ಪತ್ತೆಯಾಗಿದ್ದು, ಈ ಗಿಡ ಜಿನ್ನಪ್ಪ ಅವರ ಗಮನಕ್ಕೆ ಬರಲೂ ಒಂದು ಕಾರಣವಿದೆ. ಬೆಳದಿಂಗಳ

ದೀಪದ ಬತ್ತಿಯಂತೆ ಉರಿಯುತ್ತೆ ಈ ಎಲೆ ಚಿಗುರು| ಪಂಜದಲ್ಲೊಂದು ವಿಚಿತ್ರ ಗಿಡ ಪತ್ತೆ| Read More »