ಕರಾವಳಿ

ಮೂಡುಬಿದಿರೆ: ಮೆಕ್ಯಾನಿಕ್ಸ್ V/s ಇಲೆಕ್ಟ್ರಿಕಲ್ ವಿದ್ಯಾರ್ಥಿಗಳ ನಡುವೆ ಡಿಶ್ಯುಂ…ಡಿಶ್ಯು…| 8 ಮಂದಿ ಡಿಬಾರ್

ಮಂಗಳೂರು: ಇಲ್ಲಿಗೆ ಸಮೀಪದ ತೋಡಾರುವಿನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ಮೆಕ್ಯಾನಿಕ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳ ಗುಂಪುಗಳ ಮಧ್ಯೆ ಹೊಡೆದಾಟ ನಡೆದು ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನು ಸಹಾಝ್ ಮತ್ತು ಮಹಮ್ಮದ್ ಸ್ವರೂಬ್ ಎಂದು ಗುರುತಿಸಲಾಗಿದೆ. ಇವರು ಸದ್ಯ ಸರಕಾರಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದರೆ.ಘಟನೆ ಹಿನ್ನೆಲೆ:ಸಂಪ್ರದಾಯ ದಿನ ಎಂಬ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪೂರ್ವ ತಯಾರಿ ನಡೆಸುತ್ತಿದ್ದರು. ಈ ವೇಳೆ ತೃತೀಯ ವರ್ಷದ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳ

ಮೂಡುಬಿದಿರೆ: ಮೆಕ್ಯಾನಿಕ್ಸ್ V/s ಇಲೆಕ್ಟ್ರಿಕಲ್ ವಿದ್ಯಾರ್ಥಿಗಳ ನಡುವೆ ಡಿಶ್ಯುಂ…ಡಿಶ್ಯು…| 8 ಮಂದಿ ಡಿಬಾರ್ Read More »

ಸುಳ್ಯ: ಜಡ ಹಿಡಿದ ಆಡಳಿತವರ್ಗಕ್ಕೆ ಬಿಸಿ ಮುಟ್ಟಿಸುತ್ತಿರುವ ನ್ಯಾಯಮೂರ್ತಿಗಳು| ನಮಗೆ ಇವರಿಬ್ಬರೇ ಸಾಕು| ಉಳಿದವರೆಲ್ಲ ಯಾಕೆ ಬೇಕು?

ಮಂಗಳೂರು: ಕಳೆದೊಂದು ವಾರದಿಂದ ಸುಳ್ಯ ಸಿವಿಲ್ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೋಮಶೇಖರ್ ಹಾಗೂ ಯಶವಂತಕುಮಾರ್ ರವರ ಕಾರ್ಯವೈಖರಿ ಗಮನಿಸಿದಾಗ ಸುಳ್ಯದ ಪ್ರತಿಯೊಬ್ಬ ‌ನಾಗರೀಕರ ಮನಸ್ಸಲ್ಲಿ ಬರುವ ಪ್ರಶ್ನೆಯೇ ಇದು..! ಪಾದರಸದಂತೆ ಸಮಸ್ಯೆ ಬಂದಲ್ಲಿಗೆ ತೆರಳಿ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಥಳದಲ್ಲೇ ಸೂಕ್ತ ಪರಿಹಾರ ಒದಗಿಸುತ್ತಾ ಜನಪ್ರತಿನಿಧಿ, ಅಧಿಕಾರ ವರ್ಗದವರು ಮಾಡಬೇಕಾದ ಕೆಲಸವನ್ನು‌ ಮಾಡುತ್ತಾ‌ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಿದ್ದಾಗ ನಮಗೆ ಅಸಡ್ಡೆ‌ ಹೊಂದಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಯಾಕೆ ಬೇಕು? ಎಂದು ‌ಅಂದುಕೊಳ್ಳುವುದು ಸಹಜ. ಕಳೆದೆ ಸೋಮವಾರ ಪ್ರಾಥಮಿಕ ಶಾಲೆಗಳು

ಸುಳ್ಯ: ಜಡ ಹಿಡಿದ ಆಡಳಿತವರ್ಗಕ್ಕೆ ಬಿಸಿ ಮುಟ್ಟಿಸುತ್ತಿರುವ ನ್ಯಾಯಮೂರ್ತಿಗಳು| ನಮಗೆ ಇವರಿಬ್ಬರೇ ಸಾಕು| ಉಳಿದವರೆಲ್ಲ ಯಾಕೆ ಬೇಕು? Read More »

ಸುಳ್ಯ| ಮಳೆ ನೀರಲ್ಲಿ ಕೊಚ್ಚಿ ಹೋದ ಬೈಕ್| 2 ದಿನಗಳ ಬಳಿಕ ನದಿಯಲ್ಲಿ ಪತ್ತೆ|

ಸುಳ್ಯ : ನದಿಯ ಬದಿ ನಿಲ್ಲಿಸಿದ ಪಲ್ಸರ್ ಬೈಕ್ ಒಂದು ಮಳೆ ನೀರಿಗೆ ಕೊಚ್ಚಿ ಎರಡು ದಿನಗಳ ಬಳಿಕ ಪತ್ತೆಯಾದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಬಳಿ ನಡೆದಿದೆ. ಕಳಂಜ ಗ್ರಾಮದ ಅಯ್ಯನಕಟ್ಟೆಯಲ್ಲಿ ಹೊಳೆ ಯೊಂದಿದ್ದು ಅದರ ಬದಿಯಲ್ಲಿ ಅ.25 ರ ಸಂಜೆ ರಂಜನ್ ಎಂಬವರು ತನ್ನ ಪಲ್ಸರ್ ಬೈಕ್ ಇರಿಸಿ ಬೆಳ್ಳಾರೆಗೆ ತೆರಳಿದ್ದರು. ಆ ವೇಳೆ ಸುರಿದ ಭಾರಿ ಮಳೆಗೆ ಭಾರಿ ಪ್ರಮಾಣದ ನೀರು ಬಂದು ನೀರಿನ ರಭಸಕ್ಕೆ ಬೈಕ್ ನೀರಿನಲ್ಲಿ ಕೊಚ್ಚಿಕೊಂಡು

ಸುಳ್ಯ| ಮಳೆ ನೀರಲ್ಲಿ ಕೊಚ್ಚಿ ಹೋದ ಬೈಕ್| 2 ದಿನಗಳ ಬಳಿಕ ನದಿಯಲ್ಲಿ ಪತ್ತೆ| Read More »

ಪುತ್ತೂರು: ಕಾಮದಾಸೆಯಿಂದ ಮೊಮ್ಮಗಳ ವಯಸ್ಸಿನ ಬಾಲಕಿ ಕೈಗೆ ಮಗುವಿತ್ತ ಆರ್ ಎಸ್ಎಸ್ ಮುಖಂಡ..!? ಪೊಲೀಸ್ ಕಣ್ತಪ್ಪಿಸಿ ನಾರಾಯಣ ರೈ ಕೋರ್ಟ್ ಗೆ ಶರಣಾಗಿದ್ಹೇಗೆ? ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದ ಆರೋಪಿ|

ಮಂಗಳೂರು: ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಪುತ್ತೂರು‌ ತಾಲೂಕಿನ ಬಡಗನ್ನೂರು ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಸಂಘಪರಿವಾರದ ಮುಖಂಡ, ಸುಳ್ಯಪದವು ಪಡವನ್ನೂರು ಗ್ರಾಮದ ಕುದ್ಕಾಡಿ ನಾರಾಯಣ ರೈ ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಆರೋಪಿ ನಾರಾಯಣ ರೈ ತನ್ನ ಮನೆಗೆ ಕೆಲಸಕ್ಕೆ ಬರುತ್ತಿದ್ದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ತನ್ನ ರಾಜಕೀಯ ಪ್ರಭಾವ ಬಳಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಈ ನಡುವೆ ಸಂತ್ರಸ್ತೆ ಸೆ.5ರಂದು ಮಗುವಿಗೆ

ಪುತ್ತೂರು: ಕಾಮದಾಸೆಯಿಂದ ಮೊಮ್ಮಗಳ ವಯಸ್ಸಿನ ಬಾಲಕಿ ಕೈಗೆ ಮಗುವಿತ್ತ ಆರ್ ಎಸ್ಎಸ್ ಮುಖಂಡ..!? ಪೊಲೀಸ್ ಕಣ್ತಪ್ಪಿಸಿ ನಾರಾಯಣ ರೈ ಕೋರ್ಟ್ ಗೆ ಶರಣಾಗಿದ್ಹೇಗೆ? ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದ ಆರೋಪಿ| Read More »

ನಂದಿನಿ ಉತ್ಪನ್ನಗಳನ್ನು ನಿಗದಿತ ದರಕ್ಕಿಂತ ಹೆಚ್ಚಿಗೆ ಮಾರಾಟ‌ ಮಾಡಿದರೆ ಡೀಲರ್ ಶಿಪ್ ರದ್ದು – ಕೆಎಂಎಫ್ ಆದೇಶ

ಮಂಗಳೂರು: ನಂದಿನಿ ಹಾಲಿನ ಡೀಲರುಗಳು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಡೀಲರ್‌ಶಿಪ್ ರದ್ದು ಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕರು ಆದೇಸಿಸಿದ್ದಾರೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಒಕ್ಕೂಟದೊಂದಿಗೆ ಮಾಡಿಕೊಂಡ ಕರಾರು ಒಪ್ಪಂದದ ಉಲ್ಲಂಘನೆಯಾಗುತ್ತದೆ. ಆದುದರಿಂದ ಕಾನೂನು ಮಾಪನ ಶಾಸ್ತ್ರದ ನಿಯಮದಂತೆ ಗ್ರಾಹಕರಿಗೆ ನಂದಿನಿ ಹಾಲು ಮತ್ತು

ನಂದಿನಿ ಉತ್ಪನ್ನಗಳನ್ನು ನಿಗದಿತ ದರಕ್ಕಿಂತ ಹೆಚ್ಚಿಗೆ ಮಾರಾಟ‌ ಮಾಡಿದರೆ ಡೀಲರ್ ಶಿಪ್ ರದ್ದು – ಕೆಎಂಎಫ್ ಆದೇಶ Read More »

ಮಂಗಳೂರು: ಫ್ಲೈಓವರ್‌ನಿಂದ ಕೆಳಗೆ ಬಿದ್ದ ಬೈಕ್| ಸವಾರ ಸಾವು

ಮಂಗಳೂರು: ಫ್ಲೈಓವರ್ ನಿಂದ ಕೆಳಕ್ಕೆ ಬಿದ್ದು ಬುಲೆಟ್ ಸವಾರ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ. ಮೃತರನ್ನು ಕುಂಪಲ ಸರಳಾಯಕಾಲನಿ ನಿವಾಸಿ, ಕುಂಪಲ ಯುವ ಮರಾಠದ ಮಾಜಿ ಅಧ್ಯಕ್ಷರಾಗಿದ್ದ ಸುಭ್ರಹ್ಮಣ್ಯ ರಾವ್ ಸಿಂದಿಯಾ (50) ಎಂದು ಗುರುತಿಸಲಾಗಿದೆ. ಇವರು ಮಂಗಳೂರು ಕಡೆಯಿಂದ ಕುಂಪಲ ಕಡೆಗೆ ಬುಲೆಟ್ ವಾಹನದಲ್ಲಿ ಬರುವ ಸಂದರ್ಭ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಬುಲೆಟ್ ಫ್ಲೈಓವರ್‌ಗೆ ಢಿಕ್ಕಿ ಹೊಡೆದಿದ್ದು, ಸವಾರ ಸೇತುವೆಯಿಂದ ಕೆಳಗೆ ರಸ್ತೆಗೆ ಬಿದ್ದು ಗಂಭೀರ

ಮಂಗಳೂರು: ಫ್ಲೈಓವರ್‌ನಿಂದ ಕೆಳಗೆ ಬಿದ್ದ ಬೈಕ್| ಸವಾರ ಸಾವು Read More »

ಬಿಜೆಪಿ ಮುಖಂಡನ ಮೇಲೆ ಹಲ್ಲೆ ಪ್ರಕರಣ| ಪೇಸ್‌ಬುಕ್ ಪೋಸ್ಟ್ ನಿಂದ‌ ಉಂಟಾದ ವಿವಾದ ಕತ್ತಿಯ ಅಂಚಿನವರೆಗೆ..!

ಬಂಟ್ವಾಳ: ಬಿಜೆಪಿ ಮುಖಂಡನ ಮೇಲೆ ಭಜರಂಗದಳ ಕಾರ್ಯಕರ್ತರಿಂದಲೇ ತಲವಾರು ದಾಳಿ ನಡೆಸಿ ಕೊಲೆ ಯತ್ನ‌ ನಡೆದ ಘಟನೆ ಅ26ರ ತಡ ರಾತ್ರಿ ಬಂಟ್ವಾಳದಲ್ಲಿ ನಡೆದಿದ್ದು, ಘಟನೆಗೆ ಪೇಸ್ ಬುಕ್ ನಲ್ಲಿ ಉಂಟಾದ ವಿವಾದವೇ ಕಾರಣ ಎನ್ನಲಾಗಿದೆ. ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ನಿವಾಸಿ ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ಹಲ್ಲೆಗೆ ಒಳಗಾಗಿದ್ದು, ಇವರ ಮೇಲೆ ಭಜರಂಗದಳ ಕಾರ್ಯಕರ್ತರು ಎನ್ನಲಾದ ನಿತಿನ್ ಬಡಗಬೆಳ್ಳೂರು, ನಿಶಾಂತ್ ಬಡಗಬೆಳ್ಳೂರು, ಪವನ್ ಕುಮ್ಡೇಲ್ ಹಾಗೂ ಇನ್ನಿತರರು ತಲವಾರು

ಬಿಜೆಪಿ ಮುಖಂಡನ ಮೇಲೆ ಹಲ್ಲೆ ಪ್ರಕರಣ| ಪೇಸ್‌ಬುಕ್ ಪೋಸ್ಟ್ ನಿಂದ‌ ಉಂಟಾದ ವಿವಾದ ಕತ್ತಿಯ ಅಂಚಿನವರೆಗೆ..! Read More »

ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ ಕೋವಿಡ್ 2ನೇ ಡೋಸ್ ಲಸಿಕೆ| ಆರೋಗ್ಯ ಇಲಾಖೆಯ ಎಡವಟ್ಟು|

ಪುತ್ತೂರು : ಆರು ತಿಂಗಳ ಹಿಂದೆ ಮೃತಪಟ್ಟಿರುವ ವ್ಯಕ್ತಿಯೊಬ್ಬರಿಗೆ ಇದೀಗ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗಿರುವ ಕುರಿತಂತೆ ಎಸ್ಎಂಎಸ್ ಬಂದಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್ ಎಂಬವರು ಏಪ್ರಿಲ್ 27ರಂದು ಮೃತಪಟ್ಟಿದ್ದಾರೆ. ಆದರೆ ಅಕ್ಟೋಬರ್ 14ರಂದು ಅವರಿಗೆ ಕೋವಿಡ್ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂಬ ಎಸ್ಎಂಎಸ್ ಬಂದಿದೆ ಎಂದು ಮೃತ ಹಸೈನಾರ್ ಅವರ ಪುತ್ರ ಸಾದಿಕ್ ಆರೋಪಿಸಿದ್ದಾರೆ. ಹಸೈನಾರ್ ಅವರಿಗೆ ಮಾರ್ಚ್ 24ರಂದು ಮಾಣಿ ಪ್ರಾಥಮಿಕ ಆರೋಗ್ಯ

ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ ಕೋವಿಡ್ 2ನೇ ಡೋಸ್ ಲಸಿಕೆ| ಆರೋಗ್ಯ ಇಲಾಖೆಯ ಎಡವಟ್ಟು| Read More »

ಮಂಗಳೂರಿನಲ್ಲಿ ನಿಲ್ಲದ ಲವ್ ಜಿಹಾದ್| ಯುವತಿ ಪರಿಚಯ ಲಾಡ್ಜ್ ಮಂಚದ ತನಕ !! ಮುಸ್ಲಿಂ ಯುವಕ ಅರೆಸ್ಟ್

ಮಂಗಳೂರು: ಮೊಬೈಲ್‌ ಅಂಗಡಿಯೊಂದರ ಸಿಬ್ಬಂದಿನೋರ್ವ ಮೊಬೈಲ್‌ ಖರೀದಿ ಮಾಡಲು ಬಂದ ಯುವತಿಯ ಪರಿಚಯ ಬೆಳೆಸಿಕೊಂಡು ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಸುರತ್ಕಲ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕಿನ್ನಿಗೋಳಿಯ ಮುನ್ನ ಯಾನೆ ಇಬ್ರಾಹಿಂ ಬಂಧಿತ ಆರೋಪಿ. ಈತ ಬೈಕಂಪಾಡಿಯ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಮೊಬೈ‌ಲ್‌ ಅಂಗಡಿಗೆ ಮೊಬೈಲ್ ಖರೀದಿಸಲು ಯುವತಿಯೊಬ್ಬಳು ಹೋಗಿದ್ದು, ಈ ವೇಳೆ ಯುವಕ ಯುವತಿಯ ಪರಿಚಯ ಬೆಳೆಸಿಕೊಂಡಿದ್ದ. ಬಳಿಕ ಯುವಕ ತನ್ನ ನಿಜವಾದ ಹೆಸರನ್ನು ಮರೆಮಾಚಿ ಹಿಂದೂ ಎಂದು

ಮಂಗಳೂರಿನಲ್ಲಿ ನಿಲ್ಲದ ಲವ್ ಜಿಹಾದ್| ಯುವತಿ ಪರಿಚಯ ಲಾಡ್ಜ್ ಮಂಚದ ತನಕ !! ಮುಸ್ಲಿಂ ಯುವಕ ಅರೆಸ್ಟ್ Read More »

ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ವಿದ್ಯಾರ್ಥಿಯನ್ನು ತರಗತಿಯಿಂದ ಹೊರದಬ್ಬಿದ ಕಾಲೇಜು| ಏಕಾಂಗಿಯಾಗಿ ಪ್ರತಿಭಟನೆಗಿಳಿದ ವಿದ್ಯಾರ್ಥಿ|

ಬೆಳ್ತಂಗಡಿ : ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಗುರುತಿಸಿದ್ದಾನೆ ಎಂಬ ನೆಪವೊಡ್ಡಿ ಕಾಲೇಜಿನಿಂದ ವಿದ್ಯಾರ್ಥಿಯೊಬ್ಬನ್ನು ಡಿಬಾರ್ ಮಾಡಿದ ಘಟನೆಯು ಬೆಳ್ತಂಗಡಿ ವಾಣಿ ಪಿ.ಯು ಕಾಲೇಜಿನಲ್ಲಿ ನಡೆದಿದ್ದು, ಇದನ್ನು ವಿರೋಧಿಸಿ ಕಾಲೇಜು ಮುಂಭಾಗ ಸಂತ್ರಸ್ತ ವಿದ್ಯಾರ್ಥಿ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾನೆ. ಬೆಳ್ತಂಗಡಿ ವಾಣಿ ಪಿಯು ದ್ವಿತೀಯ ಪಿಯು ವಿದ್ಯಾರ್ಥಿ ಸಅದ್ ಮುಹಮ್ಮದ್ ಸಮರ್ ಬುಧವಾರ ಕಾಲೇಜಿಗೆ ಆಗಮಿಸಿದ್ದು, ಅಲ್ಲಿ ಪ್ರಾಂಶುಪಾಲರು ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಿದರು. ಇದರಿಂದ ವಿದ್ಯಾರ್ಥಿ ಏಕಾಂಗಿಯಾಗಿ ಪ್ರತಿಭಟನೆಗಿಳಿದಿದ್ದಾನೆ. ಘಟನೆ ಹಿನ್ನೆಲೆ :ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ

ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ವಿದ್ಯಾರ್ಥಿಯನ್ನು ತರಗತಿಯಿಂದ ಹೊರದಬ್ಬಿದ ಕಾಲೇಜು| ಏಕಾಂಗಿಯಾಗಿ ಪ್ರತಿಭಟನೆಗಿಳಿದ ವಿದ್ಯಾರ್ಥಿ| Read More »