ಕರಾವಳಿ

ಒಕ್ಕಲಿಗರ ಸಂಘದ ಚುನಾವಣೆ| ಡಾ. ರೇಣುಕಾಪ್ರಸಾದ್ ಗೆ ಗೆಲುವು

ಮಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಹುದ್ಧೆಗೆ ನಡೆದ ಚುನಾವಣೆಯಲ್ಲಿ ದಿ. ಕುರುಂಜಿ ವೆಂಕಟರಮಣ ಗೌಡರ ಕಿರಿಯ ಮಗ ಡಾ.ರೇಣುಕಾ ಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ರೇಣುಕಾ ಪ್ರಸಾದ್ 3295 ಮತಗಳನ್ನು ಪಡೆದುಕೊಂಡರೆ ಅವರ ಹಿರಿಯ ಸಹೋದರ ಡಾ ಚಿದಾನಂದ ಕೆವಿ 1741 ಮತ ಪಡೆದು ಸೋಲು ಅನುಭವಿಸಿದರು. ಕಣದಲ್ಲಿದ್ದ ಮತ್ತೋರ್ವ ಸ್ಪರ್ಧಿ ಹೇಮಚಂದ್ರ ಹಲ್ದಡ್ಕ 346 ಮತ ಪಡೆಯಲಷ್ಟೇ ಶಕ್ತರಾದರು.

ಒಕ್ಕಲಿಗರ ಸಂಘದ ಚುನಾವಣೆ| ಡಾ. ರೇಣುಕಾಪ್ರಸಾದ್ ಗೆ ಗೆಲುವು Read More »

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ| 221 ಅಭ್ಯರ್ಥಿಗಳ‌ ಭವಿಷ್ಯ ನಿರ್ಧಾರ

ಬೆಂಗಳೂರು: ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಡಿ.12ರಂದು ನಡೆದಿದ್ದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಜಿದ್ದಾಜಿದ್ದಿನ ಫೈಟ್​ನಲ್ಲಿ ಗೆಲ್ಲುವರು ಯಾರು ಎಂಬ ಕುತೂಹಲ ಕೆರಳಿಸಿದೆ. ಇಂದು (ಡಿ.15) ಫಲಿತಾಂಶ ಹೊರಬೀಳಲಿದ್ದು, ರಾಜ್ಯ ಒಕ್ಕಲಿಗ ಸಂಘದ ಆಡಳಿತ ಚುಕ್ಕಾಣಿ ಯಾರ ಕೈ ಸೇರಲಿದೆ ಅಂತ ಕಾದು ನೋಡಬೇಕಿದೆ. ಏಕ ಕಾಲದಲ್ಲಿ ಸುಮಾರು 389 ಬೂತ್ ಗಳ ಮತ ಎಣಿಕೆ ನಡೆಯುತ್ತದೆ. ಮತ ಎಣಿಕೆಗೆ

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ| 221 ಅಭ್ಯರ್ಥಿಗಳ‌ ಭವಿಷ್ಯ ನಿರ್ಧಾರ Read More »

ಡಿ.15,ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂಭ್ರಮ| ಊರುಲಿ ಪೊರ್ಲುನ ಕಾರ್ಯಕ್ರಮದ ಗೌಜಿ|

ಮಂಗಳೂರು: ‘ಹೇಂಗೊಳಯಾ ಬಾವ, ಮನೆಯವು ಏನ್ ಮಾಡ್ವೆ?ನೀವ್ ಉಸಾರ್ ಒಳರಿಯಾ…? ಮಲೆನಾಡು- ಕರಾವಳಿಯ ಪ್ರದೇಶಗಳಲ್ಲಿ ನಮಗೆ ನಿತ್ಯ ಕೇಳಿಬರುವ ಉಭಯ ಕುಶಲೋಪರಿಯ ನಿನಾದವಿದು. ಅಂದ ಹಾಗೆ ಈ ಭಾಷೆ ಅರೆಭಾಷೆ. ಡಿ. 15ರಂದು ಅರೆಭಾಷೆ ದಿನ ಆಚರಿಸಲಾಗುತ್ತಿದ್ದು, ಈಗ ಅದಕ್ಕೆ ದಶಮಾನೋತ್ಸವ ಸಂಭ್ರಮ. ‘ಅರೆಭಾಷೆ ಎಂದರೆ ಇತರ ಜನರಿಗೆ ಈ ಮಾತನ್ನು ಕೇಳುವಾಗ ಅರ್ಧಂಬರ್ಧ ಅರ್ಥವಾಗುವಂತೆ ಇದ್ದುದರಿಂದ ಇದನ್ನು ಅರೆಭಾಷೆ, ಅರೆಗನ್ನಡ ಎಂದು ಗುರುತಿಸಬಹುದು’ ಎಂದು ಸಂಶೋಧಕರು ಹೇಳಿದ್ದಾರೆ. ಅರೆಭಾಷೆ ಮತ್ತು ಸಂಸ್ಕೃತಿಯ ಅಭ್ಯುದಯಕ್ಕೆ ರಾಜ್ಯ ಸರ್ಕಾರವು

ಡಿ.15,ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂಭ್ರಮ| ಊರುಲಿ ಪೊರ್ಲುನ ಕಾರ್ಯಕ್ರಮದ ಗೌಜಿ| Read More »

ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಮೂವರ ಬಂಧನ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಮಂಗಳೂರು ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಮುಡಿಪು ಹತ್ತಿರದ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಗೊಂದಲಮಯ ವಾತಾವರಣ ನಿರ್ಮಾಣವಾಗಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಬಾಲಕಿಯ ತಾಯಿ ನೀಡಿರು ದೂರಿನಂತೆ ಪ್ರಕರಣ ದಾಖಲಾಗಿದೆ. ”ಅಪ್ರಾಪ್ತ ವಯಸ್ಸಿನವಳಾಗಿರುವ ಮಗಳಿಗೆ ಆಲ್ಕೋಹಾಲ್ ಕುಡಿಸಿ ಮತ್ತು

ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಮೂವರ ಬಂಧನ Read More »

ಪರಿಷತ್ ಫಲಿತಾಂಶ| ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವು

ಮಂಗಳೂರು: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ವಿಧಾನ ಪರಿಷತ್‍ನ ಏಕೈಕ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು 3,693 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಅವರು ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್‍ನ ಅಭ್ಯರ್ಥಿ ಮಂಜುನಾಥ ಭಂಡಾರಿ 2,077 ಮತಗಳನ್ನು ಪಡೆದಿದ್ದಾರೆ.‌ ಎಸ್‍ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 203 ಮತಗಳನ್ನಷ್ಟೇ ಪಡೆದಿದ್ದಾರೆ. 39 ಮತಗಳು ತಿರಸ್ಕೃತಗೊಂಡಿವೆ

ಪರಿಷತ್ ಫಲಿತಾಂಶ| ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವು Read More »

ಸುಳ್ಯ: ಅವಿನಾಶ್ ಬಸ್ ಮಾಲಕ ನಾರಾಯಣ ರೈ ಆತ್ಮಹತ್ಯೆಗೆ ಶರಣು

ಸುಳ್ಯ: ತಾಲೂಕಿನಲ್ಲಿ ಸಂಚಾರ ವ್ಯವಸ್ಥೆಗೆ ಮುನ್ನುಡಿ ಬರೆದು ಹೆಸರಾದ ಅವಿನಾಶ್ ಖಾಸಗಿ ಬಸ್ ನ ಮಾಲಕರಾದ ನಾರಾಯಣ ರೈ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಬಸ್ಸು ವ್ಯವಸ್ಥೆ ಇಲ್ಲದಿದ್ದ ಕಾಲದಲ್ಲಿ ಗ್ರಾಮೀಣ ರಸ್ತೆಗೆ ಖಾಸಗಿ ಬಸ್ ಇಳಿಸಿದ್ದರು. ಅವರ ಈ ಸಾಹಸ ಸುಳ್ಯದ ಸಂಚಾರಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿತ್ತು. ಕಳೆದ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದರು ಎನ್ನಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಸುಳ್ಯ: ಅವಿನಾಶ್ ಬಸ್ ಮಾಲಕ ನಾರಾಯಣ ರೈ ಆತ್ಮಹತ್ಯೆಗೆ ಶರಣು Read More »

ನೆಲ್ಯಾಡಿ: ಲಾರಿ ಮತ್ತು‌ ಬೈಕ್ ನಡುವೆ ಅಪಘಾತ, ಓರ್ವ ಸಾವು, ಮತ್ತೊಬ್ಬ ಗಂಭೀರ

ಉಪ್ಪಿನಂಗಡಿ: ಲಾರಿ ಹಾಗೂ ಬೈಕ್ ಹಾಗೂ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ನಲ್ಲಿದ್ದ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೊಳಿತ್ತೊಟ್ಟು ಸಮೀಪದ ಸಣ್ಣಂಪಾಡಿಯಲ್ಲಿ ನಡೆದಿದೆ. ಮೃತ ಯುವಕನನ್ನು ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಜಾರ್ಜ್ ಹಾಗೂ ಝಾನ್ಸಿ ದಂಪತಿ ಪುತ್ರ ಅಲ್ವಿನ್ (23) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ನೆಲ್ಯಾಡಿ ಗ್ರಾಮದ ಪಡಡ್ಕ ನಿವಾಸಿ ಸೆಬಿನ್ ಎನ್ನಲಾಗಿದೆ. ಕೊರಿಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸೆಬಿನ್ ಸೋಮವಾರದಂದು ರಾತ್ರಿ ಸೆಬಿನ್

ನೆಲ್ಯಾಡಿ: ಲಾರಿ ಮತ್ತು‌ ಬೈಕ್ ನಡುವೆ ಅಪಘಾತ, ಓರ್ವ ಸಾವು, ಮತ್ತೊಬ್ಬ ಗಂಭೀರ Read More »

ಬೆಳ್ತಂಗಡಿ: ಭೀಕರ ಅಪಘಾತಕ್ಕೆ ಯುವಕ ಬಲಿ| ಯಮ ಸ್ವರೂಪಿಯಾದ ಕಾರು ಬೈಕ್ ಗೆ ಢಿಕ್ಕಿ|

ಬೆಳ್ತಂಗಡಿಯ ಸಂತೆಕಟ್ಟೆ ಬಳಿ ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಮಡಂತ್ಯಾರಿನ ಬಂಗೇರ ಕಟ್ಟೆ ನಿವಾಸಿ ಯತಿನ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಇನ್ನೋರ್ವ ಸವಾರ ಪ್ರದೀಪ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಯತಿನ್ ಗುರುವಾಯನಕೆರೆಯಲ್ಲಿ ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಬೆಳ್ತಂಗಡಿ: ಭೀಕರ ಅಪಘಾತಕ್ಕೆ ಯುವಕ ಬಲಿ| ಯಮ ಸ್ವರೂಪಿಯಾದ ಕಾರು ಬೈಕ್ ಗೆ ಢಿಕ್ಕಿ| Read More »

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ| ಆರೋಪಿ ಬಂಧನ

ಬೆಳ್ತಂಗಡಿ: ನಾಲ್ಕನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಯುವಕನೋರ್ವ ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಆರೋಪಿ ಜಯಾನಂದ ಎಂಬಾತ ಬಾಲಕಿಯನ್ನು ನಿರ್ಮಾಣ ಹಂತದಲ್ಲಿರುವ ಮನೆಗೆ ಕರೆದೊಯ್ದು ಬೆದರಿಸಿ ಅತ್ಯಾಚಾರವೆಸಗಿದ್ದು, ಬಳಿಕ ಬಾಲಕಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿಯ ಪೋಷಕರು ಅರೋಪಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಜಯಾನಂದ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ| ಆರೋಪಿ ಬಂಧನ Read More »

ಉಪ್ಪಿನಂಗಡಿ: ಒಂಟಿ ಮಹಿಳೆ‌ಯ ಮನೆಗೆ ನುಗ್ಗಿ ಹಲ್ಲೆ, ದೂರು

ಬಂಟ್ವಾಳ: ಹಾಡುಹಗಲೇ ಮುಸ್ಲಿಂ ಮಹಿಳೆಯೊಬ್ಬರ ಮನೆಯೊಳಗೆ ನುಗ್ಗಿ ಆಕೆಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ನಡೆದಿದೆ. ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ. ಹಲ್ಲೆಗೊಳಗಾದ ಮಹಿಳೆ ಶಹನಾಜ್ ಅಬ್ದುಲ್ ರಹಿಮಾನ್ ಎಂಬವರ ಜೊತೆ ಮಾತನಾಡುತ್ತಿದ್ದ ವೇಳೆ ಇಬ್ಬರು ಮಹಿಳೆ ಮತ್ತು ಕೆಲವು ಯುವಕರು ಸೇರಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಹಸೀನಾ ಹಾಗೂ ಅಪ್ರೀದ್ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿ ಪೈಪ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಮಹಿಳೆಯ

ಉಪ್ಪಿನಂಗಡಿ: ಒಂಟಿ ಮಹಿಳೆ‌ಯ ಮನೆಗೆ ನುಗ್ಗಿ ಹಲ್ಲೆ, ದೂರು Read More »