ಮಂಗಳೂರು; ಚಪ್ಪಲಿ‌ ಅಂಗಡಿ ಮಾಲೀಕನಿಂದ ಗ್ರಾಹಕಿ ಜೊತೆ ಅಸಭ್ಯ ವರ್ತನೆ| ಆರೋಪಿಯ ಬಂಧನ|

Ad Widget ... ..

ಮಂಗಳೂರು: ಚಪ್ಪಲಿ ಖರೀದಿಗೆ ಅಂಗಡಿಗೆ ಬಂದ ಮಹಿಳೆಯ ಮೈಮೇಲೆ ಕೈ ಹಾಕಿ‌ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಅಂಗಡಿಯ ಮಾಲೀಕನನ್ನು ಬಂಧಿಸಿರುವ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget

ಇಂದು ಮಧ್ಯಾಹ್ನ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಎಂಬಲ್ಲಿರುವ ಚಪ್ಪಲಿ ಅಂಗಡಿಯೊಂದಕ್ಕೆ ಗ್ರಾಹಕಿಯೊಬ್ಬರು ಚಪ್ಪಲಿ ಖರೀದಿಗಾಗಿ ತೆರಳಿದ್ದರು. ಈ ವೇಳೆ ಅಂಗಡಿಯಲ್ಲಿದ್ದ ಅಂಗಡಿ ಮಾಲಿಕ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದು, ಗ್ರಾಹಕಿಗೆ ಆತ ತೋರಿಸಿದ ಚಪ್ಪಲಿ ಇಷ್ಟವಾಗಿರಲಿಲ್ಲ‌.

ಆದರೆ ಅಂಗಡಿ ಮಾಲಕ ಬೇರೆ ಚಪ್ಪಲಿಗಳನ್ನು ತೋರಿಸುವುದಾಗಿ ತಿಳಿಸಿ ಗ್ರಾಹಕಿಯನ್ನು ಅಂಗಡಿಯ ಒಳಗಿದ್ದ ಇನ್ನೊಂದು ಕಂಪಾರ್ಟ್ ಮೆಂಟ್ ಗೆ ಕರೆಸಿಕೊಂಡು ಗ್ರಾಹಕಿಯ ಭುಜ ಮತ್ತು ಎದೆಯ ಭಾಗಕ್ಕೆ ಮುಟ್ಟಿ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಗ್ರಾಹಕಿ ನೀಡಿದ ದೂರಿನಂತೆ ಅಂಗಡಿ ಮಾಲಿಕನಾದ ಸಂಶುದ್ದಿನ್ ಎಂಬಾತನ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಂಗಡಿ ಮಾಲಕನನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *