ಕರಾವಳಿ

ಭಾರೀ ಮಳೆ ಹಿನ್ನೆಲೆ| ಜು.24ರ ಇಂದು ದಕ್ಷಿಣ ಕನ್ನಡ ಹಾಗೂ ಉ. ಕನ್ನಡ ಜಿಲ್ಲೆಯಲ್ಲಿ ರಜೆ ಘೋಷಣೆ

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ಇಂದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.‌24 ರಂದು ಶುಕ್ರವಾರ ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಕಾರಣ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ

ಭಾರೀ ಮಳೆ ಹಿನ್ನೆಲೆ| ಜು.24ರ ಇಂದು ದಕ್ಷಿಣ ಕನ್ನಡ ಹಾಗೂ ಉ. ಕನ್ನಡ ಜಿಲ್ಲೆಯಲ್ಲಿ ರಜೆ ಘೋಷಣೆ Read More »

ಭಾರೀ ಮಳೆ‌ ಹಿನ್ನಲೆ| ಜು.23ರಂದು ದ.ಕ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: : ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಕಾರಣ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು.23ರ ಗುರುವಾರ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವುದು, ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿರುವುದು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಲಕರು ಹಾಗೂ ಸಾರ್ವಜನಿಕರು

ಭಾರೀ ಮಳೆ‌ ಹಿನ್ನಲೆ| ಜು.23ರಂದು ದ.ಕ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Read More »

ಸುಳ್ಯದ ಸಂಪಾಜೆಯಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು| ಗಂಡ ಹಾಗೂ ಮನಯವರ ವಿರುದ್ಧ ದೂರು ದಾಖಲು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ‌ ಸಂಪಾಜೆ‌ ಸಮೀಪದ ಕಡೆಪಾಲದಲ್ಲಿ ನಡೆದ 22 ವರ್ಷದ ಯುವತಿಯ ಅನುಮಾನಾಸ್ಪದ ಸಾವು ಇದೀಗ ಭಾರಿ ಕುತೂಹಲ ಹಾಗೂ ಅನುಮಾನಗಳಿಗೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕಳಿಸಿದ್ದಾರೆ. ಕಡೆಪಾಲ ಅಲಿಗುಡ್ಡೆಯ ನಿವಾಸಿ ಅಲವಿಕುಟ್ಟಿ ಎಂಬವರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ(22) ಮೃತಪಟ್ಟ ಮಹಿಳೆ. ಮೃತದೇಹವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿತ್ತು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜುಲೈ

ಸುಳ್ಯದ ಸಂಪಾಜೆಯಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು| ಗಂಡ ಹಾಗೂ ಮನಯವರ ವಿರುದ್ಧ ದೂರು ದಾಖಲು Read More »

ಬೆಳ್ತಂಗಡಿ: ನಕಲಿ ಕಳ್ಳನೋಟು ತಯಾರಿಕೆಯ ಬೃಹತ್ ಜಾಲ ಪತ್ತೆ| ಏಳು ಮಂದಿ ಖದೀಮರು ಅರೆಸ್ಟ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಕಲಿ ನೋಟು ತಯಾರಿಸುತ್ತಿದ್ದ ಬೃಹತ್ ಜಾಲಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಡಿಂಜೆ ಎಂಬಲ್ಲಿ ಪೊಲೀಸರು ದಾಳಿ ನಡೆಸಿದ್ದು ನಕಲಿ ನೋಟು ತಯಾರಿಸಲು ಬಳಸುತ್ತಿದ್ದ ಮುದ್ರಣ ಯಂತ್ರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಅಲ್ಲದೆ ಉಪ್ಪಿನಂಗಡಿ ಪೊಲೀಸರು 7 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 7 ಆರೋಪಿಗಳ ಬಂಧನವಾಗಿದ್ದು ನಕಲಿ ನೋಟು ತಯಾರಿಸಲು, ಹಾಗೂ ಬಳಸುತ್ತಿದ್ದ ಕಾಗದ ಬಂಡಲ್ ಸೀಜ್ ಮಾಡಿದ್ದಾರೆ. ಗುಣಮಟ್ಟದ ಕಾಗದ ಬಂಡಲ್ ಗಳನ್ನು

ಬೆಳ್ತಂಗಡಿ: ನಕಲಿ ಕಳ್ಳನೋಟು ತಯಾರಿಕೆಯ ಬೃಹತ್ ಜಾಲ ಪತ್ತೆ| ಏಳು ಮಂದಿ ಖದೀಮರು ಅರೆಸ್ಟ್ Read More »

ಸುಬ್ರಹ್ಮಣ್ಯ: ಮತದಾರರ ಭೇಟಿಗೆ ಹಗ್ಗದ ಸಹಾಯದಿಂದ ಹೊಳೆ ದಾಟಿದ ಬಿಎಲ್ಒ!!

ಸಮಗ್ರ ನ್ಯೂಸ್: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು ಹಗ್ಗಕ್ಕೆ ಕಟ್ಟಿರುವ ಪರಿಕರದ ಸಹಾಯದಿಂದ ಹೊಳೆ ದಾಟಿ ಮತದಾರರ ಎಸ್‌ಐಆರ್‌ ಪ್ರಕ್ರಿಯೆಗೆ ನೆರವಾದರು.ಸುಳ್ಯ ವಿಧಾನಸಭಾ ವ್ಯಾಪ್ತಿಯ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಕಟ್ಟೆಮನೆ ಸಮೀಪ ಹೊಳೆಯ ಆಚೆ ಮೂರು ಮನೆಗಳಿವೆ. ಅಲ್ಲಿಗೆ ನೇರ ರಸ್ತೆ ಸಂಪರ್ಕವಿಲ್ಲ. ರಸ್ತೆ ಮಾರ್ಗವಾಗಿ ತೆರಳಬೇಕಾದರೆ ಬಾಳುಗೋಡು ಮಾರ್ಗವಾಗಿ ಸುತ್ತು ಬಳಸಿ ಹೋಗಬೇಕಾಗುತ್ತದೆ. ಈ ಕಾರಣ ಬಿಳಿನೆಲೆಬೈಲು ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ

ಸುಬ್ರಹ್ಮಣ್ಯ: ಮತದಾರರ ಭೇಟಿಗೆ ಹಗ್ಗದ ಸಹಾಯದಿಂದ ಹೊಳೆ ದಾಟಿದ ಬಿಎಲ್ಒ!! Read More »

ಮತದಾರರ ಪಟ್ಟಿ ಪರಿಷ್ಕರಣೆ| ಜು.29ರೊಳಗೆ ಎಸ್ಐಆರ್ ಫಾರಂ ಹಿಂತಿರುಗಿಸಲು ಡಿಸಿ ಮನವಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ನಡೆಯುತ್ತಿರುವ ಎನ್‌ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರ ಸಕ್ರಿಯ ಸಹಭಾಗಿತ್ವ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತಲುಪಿಸಿರುವ ಎಸ್‌ಐಆರ್ (SIR) ಅರ್ಜಿಗಳನ್ನು ಮತದಾರರು ಜುಲೈ 29 ರ ಒಳಗಾಗಿ ಸರಿಯಾಗಿ ಭರ್ತಿ ಮಾಡಿ ಹಿಂತಿರುಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಅರ್ಹ ಮತದಾರರ ಹಕ್ಕನ್ನು ರಕ್ಷಿಸುವ ಈ ಪ್ರಕ್ರಿಯೆಯಲ್ಲಿ ನಾಗರಿಕರು ಆಡಳಿತದೊಂದಿಗೆ ಕೈಜೋಡಿಸುವುದು ಅನಿವಾರ್ಯವಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ| ಜು.29ರೊಳಗೆ ಎಸ್ಐಆರ್ ಫಾರಂ ಹಿಂತಿರುಗಿಸಲು ಡಿಸಿ ಮನವಿ Read More »

ಮಂಗಳೂರಿನಲ್ಲಿ ಮತ್ತೆ 11 ಮಂದಿ ಬಾಂಗ್ಲಾ ವಲಸಿಗರು ಪತ್ತೆ

ಸಮಗ್ರ ನ್ಯೂಸ್: ಕಡಲ‌ ನಗರಿ ಮಂಗಳೂರಿನಲ್ಲಿ ಅಕ್ರಮ ವಲಸಿಗರ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಉರ್ವಾ ಸಮೀಪದ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ದಾಳಿ ನಡೆಸಿ ನಾಲ್ವರು ಅಪ್ರಾಪ್ತರು ಸೇರಿದಂತೆ 11 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಸುರತ್ಕಲ್‌ನಲ್ಲಿ ನಡೆದ ಕಾರ್ಯಾಚರಣೆಯ ಬೆನ್ನಲ್ಲೇ ಈ ದಾಳಿ ನಡೆದಿದ್ದು, ಇದರೊಂದಿಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ಬಂಧಿತರಾದ ಅಕ್ರಮ ವಲಸಿಗರ ಒಟ್ಟು ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಬಂಧಿತ ಆರೋಪಿಗಳು ಪಶ್ಚಿಮ ಬಂಗಾಳದ ನಕಲಿ

ಮಂಗಳೂರಿನಲ್ಲಿ ಮತ್ತೆ 11 ಮಂದಿ ಬಾಂಗ್ಲಾ ವಲಸಿಗರು ಪತ್ತೆ Read More »

ಸುರತ್ಕಲ್: 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರು‌ ಪತ್ತೆ

ಸಮಗ್ರ ನ್ಯೂಸ್: ಸುರತ್ಕಲ್ ನ‌ ಮುಕ್ಕದ ಶ್ರೀನಿವಾಸ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 8 ಮಂದಿ ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದುಕೊಂಡು ವಿಚಾರಣೆಯ ಬಳಿಕ ಬಂಧಿಸಿದ್ದಾರೆ. ಬಂಧಿತರನ್ನು ಮುಹಮ್ಮದ್‌ ಮುಖ್ತಾರ್‌ ಅಲಿ ( 36), ಮುಹಮ್ಮದ್‌ ರಾಕಿಬುರ್‌ ಹುಸೈನ್‌ (44), ಮುಹಮ್ಮದ್‌ ಅಝರುಲ್‌ ಇಸ್ಲಾಂ ( 36), ಮುಹಮ್ಮದ್‌ ಝೈದ್‌ ಹುಸನ್‌ (18), ಮುಹಮ್ಮದ್‌ ಬಿಲಾಲ್‌ ಹುಸೈನ್‌ (36), ಮುಹಮ್ಮದ್‌ ಹಾಸಿಬುಲ್‌ ಹಸನ್‌ ಶನ್ಟೊ ( 37), ಮುಹಮ್ಮದ್‌

ಸುರತ್ಕಲ್: 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರು‌ ಪತ್ತೆ Read More »

ಸುಳ್ಯ: “ಅಧಿಕಾರ ಬಳಸಿಕೊಂಡು 2ನೇ ಮದುವೆಗೆ ಸಿದ್ಧತೆ”| ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ಮೇಲೆ ಗಂಭೀರ ಆರೋಪ ಮಾಡಿದ ಪತ್ನಿ

ಸಮಗ್ರ ನ್ಯೂಸ್: “ನನ್ನ ಪತಿ ಟಿ.ಎಂ.ಶಹೀದ್ ತೆಕ್ಕಿಲ್ ರವರು ನನ್ನ ಮದುವೆಯ ಸಂದರ್ಭದಲ್ಲಿ ನನ್ನ ತಂದೆ ನನಗಾಗಿ ನೀಡಿದ್ದ 110 ಪವನ್ ಚಿನ್ನ ಮತ್ತು ನನಗೆ ನೀಡಿರುವ ಆಸ್ತಿಯನ್ನು ಕಬಳಿಸಿ, ಇದೀಗ ನನಗೆ ಮತ್ತು ನನ್ನ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ಅದರ ಬಗ್ಗೆ ಅವರಲ್ಲಿ ಮಾತನಾಡಿದರೆ ‘ ನೀನು ಸಿ.ಎಂ. ಅಲ್ಲ ಪಿ.ಎಂ. ಬಳಿ ಹೋದರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಗದರಿಸುತ್ತಿದ್ದಾರೆ”, ಅಲ್ಲದೇ ರಾಜಕೀಯ ಪ್ರಭಾವ ಬಳಸಿಕೊಂಡು ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ” ಎಂದು

ಸುಳ್ಯ: “ಅಧಿಕಾರ ಬಳಸಿಕೊಂಡು 2ನೇ ಮದುವೆಗೆ ಸಿದ್ಧತೆ”| ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ಮೇಲೆ ಗಂಭೀರ ಆರೋಪ ಮಾಡಿದ ಪತ್ನಿ Read More »

ಜು.8ರಿಂದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ಬ್ರೇಕ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ‘ಗಡಾಯಿಕಲ್ಲು’ ಚಾರಣಕ್ಕೆ ಜುಲೈ 8 ರಿಂದ ಜಾರಿಗೆ ಬರುವಂತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಸಾರ್ವಜನಿಕರ ಹಾಗೂ ಚಾರಣಿಗರ ಪ್ರವೇಶಕ್ಕೆ ಕಡ್ಡಾಯ ನಿಬಂಧನೆ ವಿಧಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ವರ್ಷ ಜೂನ್ 1 ರಂದು ಗಡಾಯಿಕಲ್ಲು ಚಾರಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಆದರೆ, ಆರಂಭಗೊಂಡ ಕೆಲವೇ

ಜು.8ರಿಂದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ಬ್ರೇಕ್ Read More »