ಕರಾವಳಿ

ಮೂಲ್ಕಿ: ಉರುಳಿಗೆ ಬಿದ್ದ ಚಿರತೆ ನರಳಿ ಸಾವು

ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿಯ ಗುಡ್ಡೆಯಲ್ಲಿ ಉರುಳಿಗೆ ಸಿಕ್ಕಿ ಚಿರತೆಯು ಒದ್ದಾಡಿ ಸಾವನ್ನಪ್ಪಿದೆ. ಇಲ್ಲಿನ ಉಳೆಪಾಡಿ ಮಿತ್ತಬೆಟ್ಟು ಬಳಿ ಗುಡ್ಡೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲಾರದೆ ಸ್ಥಳೀಯರು ಇಟ್ಟಿದ್ದ ಉರುಳಿಗೆ ಆಹಾರ ಹುಡುಕಿ ಬಂದಿದ್ದ ಚಿರತೆ ರಾತ್ರಿ ಹೊತ್ತು ಬಿದ್ದಿರುವುದು ಬೆಳಕಿನ. ಮುಂಜಾನೆ ಹೊತ್ತಿಗೆ ಆಸು-ಪಾಸಿನ ಮನೆಯವರು ಗುಡ್ಡೆಯಲ್ಲಿ ನಾಯಿ ಬೊಗಳುವ ಶಬ್ದವನ್ನು ಕೇಳಿ ಭಯಭೀತರಾಗಿ ಸ್ಥಳಕ್ಕೆ ಧಾವಿಸಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು

ಮೂಲ್ಕಿ: ಉರುಳಿಗೆ ಬಿದ್ದ ಚಿರತೆ ನರಳಿ ಸಾವು Read More »

ಚಾರ್ಮಾಡಿ: ಬಸ್ ನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಸರ್ಕಾರಿ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಕೂಟಿ ಸವಾರ ಸಾವನ್ನಪ್ಪಿದ ಘಟನೆ ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ನಡೆದಿದೆ. ಘಾಟಿಯ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸವಾರನು ಬಿದ್ದು ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಮಾಗುಂಡಿ ಗ್ರಾಮದ ಇರ್ಫಾನ್ (29) ಎನ್ನಲಾಗಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸರ್ಕಾರಿ ಬಸ್ ಧರ್ಮಸ್ಥಳದಿಂದ ಹರಪ್ಪನ ಹಳ್ಳಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮುಡಿ ಘಾಟ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಚಾರ್ಮಾಡಿ: ಬಸ್ ನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು Read More »

ಕರಾವಳಿಗೆ ಎಂಟ್ರಿ ಕೊಡದ ಮುಂಗಾರು| ಆತಂಕದಲ್ಲಿ ರೈತಾಪಿ ವರ್ಗ| ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದರೆ ಬಚಾವ್!!

ಸಮಗ್ರ ನ್ಯೂಸ್: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಬಾರಿ ಮುಂಗಾರು ಪ್ರವೇಶದ ಲೆಕ್ಕದಲ್ಲಿ ಗೊಂದಲದಲ್ಲಿ ಸಿಲುಕಿದೆ. ಈ ಬಾರಿ ನಿರೀಕ್ಷೆಯ ಪ್ರಕಾರ ಮುಂಗಾರು ಪ್ರವೇಶ ಕೇರಳಕ್ಕೆ ನಿಧಾನವಾಗುತ್ತಿದೆ. ಇದಕ್ಕಾಗಿ ಎರಡು ದಿನಗಳ ಕಾಲ ಮುಂಗಾರು ಕುರಿತು ಮತ್ತಷ್ಟು ಅಧ್ಯಯನಕ್ಕೆ ಇಳಿದು ಬಿಟ್ಟಿದೆ. ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 4ರ ಬಳಿಕ ಆಗಬಹುದು ಎಂದು ಐಎಂಡಿ ಮೊದಲು ವರದಿ ನೀಡಿತ್ತು. ಆದರೆ ಈ ಬಳಿಕ ಇದು ಜೂನ್ 7ರಿಂದ 8ರೊಳಗೆ ಆಗುವ ಸಾಧ್ಯತೆಗಳು ಇದೆ ಎನ್ನುವ ಅಂದಾಜು

ಕರಾವಳಿಗೆ ಎಂಟ್ರಿ ಕೊಡದ ಮುಂಗಾರು| ಆತಂಕದಲ್ಲಿ ರೈತಾಪಿ ವರ್ಗ| ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದರೆ ಬಚಾವ್!! Read More »

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

ಸಮಗ್ರ ನ್ಯೂಸ್: ನಗರದ ಕಲ್ಲಾಪು ಯುನಿಟಿ ಹಾಲ್ ಸಮೀಪ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 60 ವರ್ಷವಾಗಿರುವ ಇವರು 5.9 ಅಡಿ ಎತ್ತರ, ಗೋಧಿ-ಬಿಳಿ ಮೈಬಣ್ಣ ಹಾಗೂ ಸದೃಢ ಶರೀರ ಹೊಂದಿರುತ್ತಾರೆ. ಕುತ್ತಿಗೆ ಮತ್ತು ಸೊಂಟದ ಮೇಲೆ ಕಪ್ಪು ಎಳ್ಳು ಮಚ್ಚೆ ಇರುತ್ತದೆ. ಬಲಗೈ ಮೇಲೆ ಮುರುಗಾ ಚಿತ್ರದ ಅಚ್ಚೆ ದ್ದು, 2 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಮತ್ತು

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ Read More »

ಮಂಗಳೂರು: ಜೂ.6,7 ರಂದು ದ.ಕ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ

ಸಮಗ್ರನ್ಯೂಸ್: ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಜೂ.6 ಹಾಗೂ 7ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವಿವರ:ಜೂ.6ರಂದು ಬೆಳಿಗ್ಗೆ 8.35ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, 8.45ಕ್ಕೆ ನಗರದ ಸಕ್ರ್ಯೂಟ್ ಹೌಸ್‍ಗೆ ತೆರಳುವರು. ಬೆಳಿಗ್ಗೆ 10 ಗಂಟೆಗೆ ಪೊಲೀಸ್ ಪಶ್ಚಿಮ ವಲಯ ಕಚೇರಿ ಭೇಟಿ ಮತ್ತು ವಲಯ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 12.30ಕ್ಕೆ ಪೊಲೀಸ್ ಆಯುಕ್ತರ ಕಚೇರಿಗೆ

ಮಂಗಳೂರು: ಜೂ.6,7 ರಂದು ದ.ಕ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ Read More »

ಮಂಗಳೂರು: ವಿಶ್ವ ಪರಿಸರ ದಿನಾಚರಣೆ | ಕುದ್ರುವಿನಲ್ಲಿ ಕಾಂಡ್ಲಾ ಸಸಿ ನಾಟಿ

ಸಮಗ್ರನ್ಯೂಸ್: ಅರಣ್ಯ ಇಲಾಖೆಯ ಮಂಗಳೂರು ಅರಣ್ಯ ವಿಭಾಗದಿಂದ ಜೂ.5ರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಡಲತೀರದಲ್ಲಿ ಕಾಂಡ್ಲಾವನದ ಮಹತ್ವ ಮತ್ತು ಉಪಯುಕ್ತತೆ ಕಾಂಡ್ಲಾ ಸಸಿ ನೆಡುವ ಮತ್ತು ಒಲವು ಮೂಡಿಸುವ ಕಾರ್ಯಕ್ರಮವನ್ನು ಮಂಗಳೂರು ಪ್ಯಾರಡೈಸ್ ಐಲ್ಯಾಂಡ್ (ಕುದ್ರು)ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿ ಕಾಂಡ್ಲಾ ಬೀಜ ಬಿತ್ತನೆಯೊಂದಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾಂಡ್ಲಾ ವನ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಆನ್‍ಲೈನ್ ಮೂಲಕ ಪರಿಸರ

ಮಂಗಳೂರು: ವಿಶ್ವ ಪರಿಸರ ದಿನಾಚರಣೆ | ಕುದ್ರುವಿನಲ್ಲಿ ಕಾಂಡ್ಲಾ ಸಸಿ ನಾಟಿ Read More »

ರಾಜ್ಯಸರ್ಕಾರದಿಂದ ‘ಶಕ್ತಿ’ ಯೋಜನೆಗೆ ಅಧಿಕೃತ ಆದೇಶ ಜಾರಿ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಈಗಾಗಲೇ ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗೆ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಈ ಬೆನ್ನಲ್ಲೇ ಇಂದು ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಜಾರಿಗೊಳಿಸಿ, ಆಡಳಿತಾತ್ಮಕ ಅನುಮೋದನೆಯ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ.ವಿಎಸ್ ಅವರು ನಡವಳಿಗಳನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು ನಾಲ್ಕು

ರಾಜ್ಯಸರ್ಕಾರದಿಂದ ‘ಶಕ್ತಿ’ ಯೋಜನೆಗೆ ಅಧಿಕೃತ ಆದೇಶ ಜಾರಿ Read More »

ಕೇರಳಕ್ಕೆ ಪ್ರವೇಶಿಸದ ಮುಂಗಾರು| ಇನ್ನೊಂದು ವಾರ ಮಾನ್ಸೂನ್ ಮಳೆ ವಿಳಂಬ

ಸಮಗ್ರ ನ್ಯೂಸ್: ಮುಂಗಾರು ಮಾರುತಗಳು ಜೂನ್ 4 ರ ನಿನ್ನೆ ಕೇರಳ ಪ್ರವೇಶಿಸಲು ವಿಫಲವಾಗಿದ್ದು, ಇನ್ನೂ 3-4 ದಿನ ತಡವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಮಾರುತಗಳು ಜೂನ್ 4 ರಂದು ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಮುಂಗಾರು ಮಾರುತಗಳ ಕುರಿತಾಗಿ ಉತ್ತಮ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಮಾರುತ ಚಲನೆ ವೇಗ ಪಡೆದುಕೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಸಮುದ್ರಮಟ್ಟಕ್ಕಿಂತ 2 ಕಿ.

ಕೇರಳಕ್ಕೆ ಪ್ರವೇಶಿಸದ ಮುಂಗಾರು| ಇನ್ನೊಂದು ವಾರ ಮಾನ್ಸೂನ್ ಮಳೆ ವಿಳಂಬ Read More »

ಮಂಗಳೂರು: SSF ಮಂಚಿಲ ಯುನಿಟ್ ನಿಂದ ‘ಪರಿಸರ ದಿನ ಆಚರಣೆ’

ಸಮಗ್ರ ನ್ಯೂಸ್: SSF ಮಂಚಿಲ ಯುನಿಟ್ ವತಿಯಿಂದ ‘ಪರಿಸರ ದಿನ’ ಕಾರ್ಯಕ್ರಮವನ್ನು ಮಂಚಿಲ ಮದ್ರಸ ಹಾಲ್ ನಲ್ಲಿ ಜೂನ್ 04 ರಂದು ಏರ್ಪಡಿಲಾಗಿತ್ತು. ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷರು ಜಾಫರ್ ಯು.ಎಸ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸಿನನ್ ಮಿಸ್ಬಾಹಿ ಮುಅಝಿನ್ ಉಸ್ತಾದರು ಉದ್ಘಾಟಿಸಿದರು. ಶಾಹಿಲ್ ಮಂಚಿಲ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಅಯ್ಯುಬ್ ಮಂಚಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಸುಹಾನ್ ಅಲ್ವಾರವರು ದೇನಿಗೆಯಾಗಿ ನೀಡಿದ ಸಸಿಗಳನ್ನು SSF ಮಂಚಿಲ ಯೂನಿಟ್ ವತಿಯಿಂದ ವಿತರಿಸಲಾಯಿತು ಹಾಗೂ

ಮಂಗಳೂರು: SSF ಮಂಚಿಲ ಯುನಿಟ್ ನಿಂದ ‘ಪರಿಸರ ದಿನ ಆಚರಣೆ’ Read More »

ಪುತ್ತೂರು: ಕೇರಳದ ಕೊಲೆ ಆರೋಪಿಯ ಬಂಧಿಸಿದ ಕರ್ನಾಟಕ ಪೊಲೀಸ್

ಸಮಗ್ರ ನ್ಯೂಸ್: ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನ ವೇಳೆ ತಮ್ಮನನ್ನು ಕೊಲೆ ಮಾಡಿ ಪುತ್ತೂರು ಕಡೆಗೆ ತಪ್ಪಿಸಿಕೊಳ್ಳಲು ತೆರಳಿದ್ದ ಆರೋಪಿ ಅಣ್ಣನನ್ನು ಪುತ್ತೂರು ನಗರ ಠಾಣೆ ಪೊಲೀಸರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಪತ್ತೆ ಮಾಡಿ ಬಂಧಿಸಿದ್ದಾರೆ. ಬಳಿಕ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆಯ ನಿವಾಸಿ ಜಯರಾಮ ನೋಂಡ ಬಂಧಿತ ಆರೋಪಿ. ಜಯರಾಮ ನೋಂಡ ತನ್ನ ಸಹೋದರ ಪ್ರಭಾಕರ ನೋಂಡ ಅವರನ್ನು ಶನಿವಾರ ನಸುಕಿನ ವೇಳೆ ಕೊಲೆ

ಪುತ್ತೂರು: ಕೇರಳದ ಕೊಲೆ ಆರೋಪಿಯ ಬಂಧಿಸಿದ ಕರ್ನಾಟಕ ಪೊಲೀಸ್ Read More »