ಕರಾವಳಿಗೆ ಎಂಟ್ರಿ ಕೊಡದ ಮುಂಗಾರು| ಆತಂಕದಲ್ಲಿ ರೈತಾಪಿ ವರ್ಗ| ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದರೆ ಬಚಾವ್!!

ಸಮಗ್ರ ನ್ಯೂಸ್: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಬಾರಿ ಮುಂಗಾರು ಪ್ರವೇಶದ ಲೆಕ್ಕದಲ್ಲಿ ಗೊಂದಲದಲ್ಲಿ ಸಿಲುಕಿದೆ. ಈ ಬಾರಿ ನಿರೀಕ್ಷೆಯ ಪ್ರಕಾರ ಮುಂಗಾರು ಪ್ರವೇಶ ಕೇರಳಕ್ಕೆ ನಿಧಾನವಾಗುತ್ತಿದೆ. ಇದಕ್ಕಾಗಿ ಎರಡು ದಿನಗಳ ಕಾಲ ಮುಂಗಾರು ಕುರಿತು ಮತ್ತಷ್ಟು ಅಧ್ಯಯನಕ್ಕೆ ಇಳಿದು ಬಿಟ್ಟಿದೆ.

. Ad Widget . Ad Widget . Ad Widget .

ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 4ರ ಬಳಿಕ ಆಗಬಹುದು ಎಂದು ಐಎಂಡಿ ಮೊದಲು ವರದಿ ನೀಡಿತ್ತು. ಆದರೆ ಈ ಬಳಿಕ ಇದು ಜೂನ್ 7ರಿಂದ 8ರೊಳಗೆ ಆಗುವ ಸಾಧ್ಯತೆಗಳು ಇದೆ ಎನ್ನುವ ಅಂದಾಜು ವರದಿಯನ್ನು ನೀಡಿತು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಈಗ ಜೂನ್ 5ರಿಂದ ಕೇರಳದ ಮುಂಗಾರು ಪ್ರವೇಶದ ಕುರಿತು ಮತ್ತಷ್ಟು ಅಧ್ಯಯನಕ್ಕೆ ಇಳಿಯಲು ಪ್ರಯತ್ನ ಸಾಗುತ್ತಿದೆ. ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 8ಕ್ಕೆ ಆದರೆ ಈ ಬಳಿಕ ರಾಜ್ಯದ ಕರಾವಳಿಗೆ ಜೂನ್ 10ರಿಂದ 12ರೊಳಗೆ ಪ್ರವೇಶ ಪಡೆಯಲಿದೆ ಎನ್ನುವುದು ಹವಾಮಾನ ಇಲಾಖೆಯ ಸೂಚನೆ

ಜೂನ್ 8ರ ಬಳಿಕ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯ ಜತೆಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ಇದು ವಾಯಭಾರ ಕುಸಿತವಾಗಿ ಬಿಟ್ಟರೆ ಸಮಸ್ಯೆಯಾಗೋದಿಲ್ಲ. ಆದರೆ ಚಂಡಮಾರುತವಾಗಿ ಬದಲಾವಣೆಯಾದರೆ ಮುಂಗಾರು ಆರಂಭದ ವೇಗಕ್ಕೆ ಕಡಿವಾಣ ಬೀಳುವ ಸಾಧ್ಯತೆಗಳು ದಟ್ಟವಾಗಿದೆ ಎನ್ನುತ್ತಾರೆ.

Leave a Comment

Your email address will not be published. Required fields are marked *