ಕರಾವಳಿ

ಇಂದು ಕೇರಳಕ್ಕೆ ಮುಂಗಾರು ಪ್ರವೇಶ| ರಾಜ್ಯದ ಹಲವೆಡೆ ಜೂ.6 ರವರೆಗೆ ಮಳೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಜೂನ್ 6ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 6 ವರೆಗೆ ಬೆಂಗಳೂರಿನಲ್ಲಿ ಗುಡುಗು , ಬಿರುಗಾಳಿ ಸಹಿತ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಹಗಲಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ದಕ್ಷಿಣ ಒಳ ಕರ್ನಾಟಕ, ಉತ್ತರಒಳ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ಭಾಗಗಳಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ವರ್ಷ ನೈಋತ್ಯ ಮುಂಗಾರು ವಿಳಂಬವಾಗಲಿದ್ದು, ಜೂನ್ 4 ರಂದು ಇಂದು ಕೇರಳಕ್ಕೆ ಪ್ರವೇಶಿಸಲಿದೆ ಎನ್ನಲಾಗಿದ್ದು,

ಇಂದು ಕೇರಳಕ್ಕೆ ಮುಂಗಾರು ಪ್ರವೇಶ| ರಾಜ್ಯದ ಹಲವೆಡೆ ಜೂ.6 ರವರೆಗೆ ಮಳೆ Read More »

ಪ.ಪೂ ಕಾಲೇಜು ಅತಿಥಿ ಉಪನ್ಯಾಸಕರ ನೇಮಕಾತಿಗೆ ಇಲಾಖೆ ಸೂಚನೆ

ಸಮಗ್ರ ನ್ಯೂಸ್: 2023 -24ನೇ ಶೈಕ್ಷಣಿಕ ಸಾರಿಗೆ 4055 ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಬಡ್ತಿ, ನಿಧನ, ವಯೋ ನಿವೃತ್ತಿ, ಖಾಲಿ ಇರುವ ಹುದ್ದೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಖಾಲಿ ಇರುವ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಕಾರ್ಯಭಾರ ಹೆಚ್ಚಾಗುವ ಹಿನ್ನೆಲೆಯಲ್ಲಿ ಒಟ್ಟಾರೆ 4055 ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ತಿಳಿಸಲಾಗಿದೆ. ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರಿಗೆ, ಕಾಲೇಜುಗಳಿಗೆ ಪದವಿ ಪೂರ್ವ ಶಿಕ್ಷಣ

ಪ.ಪೂ ಕಾಲೇಜು ಅತಿಥಿ ಉಪನ್ಯಾಸಕರ ನೇಮಕಾತಿಗೆ ಇಲಾಖೆ ಸೂಚನೆ Read More »

Breaking| ಮತ್ತೊಂದು ಗ್ಯಾರಂಟಿಗೆ ಸರ್ಕಾರ ಅಸ್ತು| “ಯುವನಿಧಿ” ಯೋಜನೆ ಜಾರಿಗೊಳಿಸಿ ಅಧಿಕೃತ ಆದೇಶ

ಸಮಗ್ರ ನ್ಯೂಸ್: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಅದರಂತೆ ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಕರ್ನಾಟಕ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಿ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ. ಈ ಸಂಬಂಧ ಇಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ

Breaking| ಮತ್ತೊಂದು ಗ್ಯಾರಂಟಿಗೆ ಸರ್ಕಾರ ಅಸ್ತು| “ಯುವನಿಧಿ” ಯೋಜನೆ ಜಾರಿಗೊಳಿಸಿ ಅಧಿಕೃತ ಆದೇಶ Read More »

ಕೆರೆಗೆ ಬಿದ್ದು ಒದ್ದಾಡಿದ ಕಾಡಾನೆ| ಅರಣ್ಯ ಇಲಾಖೆಯಿಂದ ರಕ್ಷಣೆ

ಸಮಗ್ರ ನ್ಯೂಸ್: ಕೆರೆಗೆ ಬಿದ್ದ ಕಾಡಾನೆಯನ್ನು ವಿರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬoದಿಗಳಿoದ ರಕ್ಷಣೆ ಮಾಡಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಕರಡ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಡಿಕೇರಿಯಂಡಐಯಣ್ಣರವರ ಕೆರೆಗೆ ಬಿದ್ದ ಕಾಡಾನೆಯನ್ನು ವಿರಾಜಪೇಟೆ ಅರಣ್ಯ ವಲಯದ ಸಿಬ್ಬoದಿಗಳುಸತತ 3 ಘoಟೆಗಳ ಕಾರ್ಯಾಚರಣೆ ಪ್ರಯತ್ನದಿಂದ ಕಾಡಾನೆಯನ್ನು ರಕ್ಷಣೆ ಮಾಡಲಾಯಿತು. ಕಾರ್ಯಚರಣೆಯನ್ನುವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶರಣಬಸಪ್ಪ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ. ಎ. ನೆಹರೂರವರ ಮಾರ್ಗದರ್ಶನದಲ್ಲಿ ಹಾಗೂ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಕಳ್ಳಿರ. ಎಂ.

ಕೆರೆಗೆ ಬಿದ್ದು ಒದ್ದಾಡಿದ ಕಾಡಾನೆ| ಅರಣ್ಯ ಇಲಾಖೆಯಿಂದ ರಕ್ಷಣೆ Read More »

ಕಾರ್ಕಳ: ಮರಕ್ಕೆ ಡಿಕ್ಕಿ ಹೊಡೆದ ಲಾರಿ| ಇಬ್ಬರು ಗಂಭೀರ ಗಾಯ

ಸಮಗ್ರ ನ್ಯೂಸ್: ಕಾರ್ಕಳ ತಾಲೂಕಿನ ನಲ್ಲೂರಿನ ಪರಪ್ಪಾಡಿಯಲ್ಲಿ ಮೀನು ಸಾಗಿಸುತ್ತಿದ್ದ ಲಾರಿಯ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಲ್ಪೆಯಿಂದ ಬೆಂಗಳೂರಿನ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿ ಪಾಜೆಗುಡ್ಡೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದ ರಭಸಕ್ಕೆ ಲಾರಿ ಜಖಂಗೊಂಡಿದ್ದು ಅದರಲ್ಲಿದ್ದ ಮೀನುಗಳು ಚೆಲ್ಲಾಪಿಲ್ಲಿಯಾಗಿ ಹೋಗಿದ್ದವು. ಲಾರಿ ಚಾಲಕ ಸೇರಿದಂತೆ ಮೂವರು ಇದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಗ್ರಾಮ ಪಂಚಾಯತ್ ನ ಸದಸ್ಯರಾದ ಸುಮಿತ್‌ ನಲ್ಲೂರು

ಕಾರ್ಕಳ: ಮರಕ್ಕೆ ಡಿಕ್ಕಿ ಹೊಡೆದ ಲಾರಿ| ಇಬ್ಬರು ಗಂಭೀರ ಗಾಯ Read More »

ಎರಡು-ಮೂರು ಹೆಂಡತಿಯರಿರುವ ಮುಸ್ಲಿಮರ ಮನೆ ಯಜಮಾನಿ ಯಾರು? ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಶುರು ಮಾಡಿದ ಪ್ರತಾಪ್ ಸಿಂಹ, ಪ್ರಶಾಂತ್ ಸಂಬರಗಿ

ಸಮಗ್ರ ನ್ಯೂಸ್: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರೆಂಟಿಗಳನ್ನೂ ಜಾರಿಗೊಳಿಸಿದೆ. ಗ್ಯಾರೆಂಟಿಗಳು ಜಾರಿಯಾಗುವುದಿಲ್ಲ ಎನ್ನುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಪಾಳಯಕ್ಕೆ ಇದೊಂದು ಸಹಿಸಲಾಗದ ತುತ್ತಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ ಗ್ಯಾರೆಂಟಿಗಳನ್ನು ಅಧಿಕೃತವಾಗಿ ಜಾರಿಗೆ ತಂದ ಬಳಿಕ ಬಿಜೆಪಿ ನಾಯಕರು ಮುಸ್ಲಿಮ್ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಲು ಆರಂಭಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಗೃಹ ಲಕ್ಷ್ಮೀ ಯೋಜನೆಯಲ್ಲಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದು, ಮುಸ್ಲಿಮರ

ಎರಡು-ಮೂರು ಹೆಂಡತಿಯರಿರುವ ಮುಸ್ಲಿಮರ ಮನೆ ಯಜಮಾನಿ ಯಾರು? ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಶುರು ಮಾಡಿದ ಪ್ರತಾಪ್ ಸಿಂಹ, ಪ್ರಶಾಂತ್ ಸಂಬರಗಿ Read More »

ಒಡಿಶಾ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ದುರಂತ| 50 ಜನ ದುರ್ಮರಣ; 200ರ ಸನಿಹದಲ್ಲಿ ಗಾಯಾಳುಗಳು| ಸಾವಿನ ಸಂಖ್ಯೆ ಮತ್ತಷ್ಟು‌ ಹೆಚ್ಚಳ ಸಾಧ್ಯತೆ

ಸಮಗ್ರ ನ್ಯೂಸ್: ಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ಬಾಲಸೋರ್ನ ಬಹನಾಗ ನಿಲ್ದಾಣದ ಬಳಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಎಷ್ಟು ತೀವ್ರವಾಗಿತ್ತೆಂದರೆ, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ ನ (12841) 7 ಬೋಗಿಗಳು ಹಳಿ ತಪ್ಪಿವೆ. ಮೂಲಗಳ ಪ್ರಕಾರ, ಅಪಘಾತದಲ್ಲಿ ಇದುವರೆಗೆ 179 ಜನರು ಗಾಯಗೊಂಡಿದ್ದಾರೆ ಮತ್ತು 50 ಜನರು ಸಾವನ್ನಪ್ಪಿದ್ದಾರೆ. ಆದರೆ ರೈಲ್ವೆ ಇಲಾಖೆ ಇನ್ನೂ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. ಗಾಯಗೊಂಡವರನ್ನು ಸೊರೊ ಸಿಎಚ್ಸಿ, ಗೋಪಾಲ್ಪುರ ಸಿಎಚ್ಸಿ

ಒಡಿಶಾ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ದುರಂತ| 50 ಜನ ದುರ್ಮರಣ; 200ರ ಸನಿಹದಲ್ಲಿ ಗಾಯಾಳುಗಳು| ಸಾವಿನ ಸಂಖ್ಯೆ ಮತ್ತಷ್ಟು‌ ಹೆಚ್ಚಳ ಸಾಧ್ಯತೆ Read More »

ಪಂಚಗ್ಯಾರಂಟಿಗೆ ಇದೆ ಹಲವು ಕಂಡೀಷನ್ಸ್| ಸಿಎಂ ಸಿದ್ದರಾಮಯ್ಯ ಹೇಳಿದ ವಿವರಗಳ‌ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ಐದು ಗ್ಯಾರೆಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಯಾವುದೇ ಕಠಿಣ ಷರತ್ತುಗಳನ್ನು ವಿಧಿಸದೆ ಸಮ್ಮತಿಸಿದೆ. ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಿಕ್ಕಿರಿದ ಪತ್ರಿಕಾ ಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗ್ಯಾರೆಂಟಿಗಳ‌ ಜಾರಿ ಕುರಿತಂತೆ ಮಾಹಿತಿ ನೀಡಿದ್ದಾರೆ. ಗೃಹ ಜ್ಯೋತಿ ಯೋಜನೆ :ರಾಜ್ಯದ ಗೃಹ ಬಳಕೆದಾರರಿಗೆ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಈ

ಪಂಚಗ್ಯಾರಂಟಿಗೆ ಇದೆ ಹಲವು ಕಂಡೀಷನ್ಸ್| ಸಿಎಂ ಸಿದ್ದರಾಮಯ್ಯ ಹೇಳಿದ ವಿವರಗಳ‌ ಸಂಪೂರ್ಣ ಮಾಹಿತಿ… Read More »

ಸುಳ್ಯ: ಮರ್ಕಂಜದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ| ಬಂದ್ ಮಾಡಲು ಜಿಲ್ಲಾಧಿಕಾರಿ ಸೂಚನೆ..?

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮವಾಗಿರುವ ಹಿನ್ನಲೆ ತಕ್ಷಣ ನಿಲ್ಲಿಸುವಂತೆ ಜಿಲ್ಲಾಧಿಕಾರಿಯ ಆದೇಶವಾಗಿರುವ ಬಗ್ಗೆ ತಿಳಿದು ಬಂದಿದೆ. ಕಳೆದ ಕೆಲ ವರ್ಷಗಳಿಂದ ಅಳವುಪಾರೆ ಎಂಬಲ್ಲಿ ಸ್ಥಳೀಯರ ವಿರೋಧದ ನಡುವೆಯೂ ನಡೆಯುತ್ತಿದ್ದ ಗಣಿಗಾರಿಕೆಯನ್ನು ಇದೀಗ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಸುತ್ತಮುತ್ತ ನೂರಾರು ಮನೆಗಳು, ಹತ್ತಿರದಲ್ಲಿ ಸರ್ಕಾರಿ ಶಾಲೆ, ನೀರಿನ ಟ್ಯಾಂಕ್,ಸರ್ಕಾರಿ ಕಟ್ಟಗಳು, ದೇವಸ್ಥಾನ ಇದೆಲ್ಲಾ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳದ ಹತ್ತಿರ

ಸುಳ್ಯ: ಮರ್ಕಂಜದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ| ಬಂದ್ ಮಾಡಲು ಜಿಲ್ಲಾಧಿಕಾರಿ ಸೂಚನೆ..? Read More »

ಜೂ.11 ರಿಂದ ಮಹಿಳೆಯರಿಗೆ ಸಾರಿಗೆ ಉಚಿತ ಪ್ರಯಾಣ| ‘ಶಕ್ತಿ’ಯೋಜನೆಗೆ ಅಧಿಕೃತ ಚಾಲನೆ – ಸಿಎಂ

ಸಮಗ್ರ ನ್ಯೂಸ್: ಇದೇ ತಿಂಗಳ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,’ AC ಬಸ್ ಮತ್ತು ಸ್ಲೀಪರ್ ಬಸ್ ಗಳನ್ನು ಹೊರತುಪಡಿಸಿ ಶಕ್ತಿ ಗ್ಯಾರೆಂಟಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿಗಳು ಉಚಿತವಾಗಿ ಸರ್ಕಾರಿ ಬಸ್​​ನಲ್ಲಿ ಸಂಚರಿಸಬಹುದಾಗಿದೆ’ ಎಂದು ತಿಳಿಸಿದರು.

ಜೂ.11 ರಿಂದ ಮಹಿಳೆಯರಿಗೆ ಸಾರಿಗೆ ಉಚಿತ ಪ್ರಯಾಣ| ‘ಶಕ್ತಿ’ಯೋಜನೆಗೆ ಅಧಿಕೃತ ಚಾಲನೆ – ಸಿಎಂ Read More »