October 2026

ಉಪ್ಪಿನಂಗಡಿ: ಬೈಕ್ ತಡೆದು ಚೂರಿ ತೋರಿಸಿ ದರೋಡೆ| ಮೂವರ ವಿರುದ್ಧ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯಲ್ಲಿ ಬೈಕ್ ತಡೆದು, ಚೂರಿ ತೋರಿಸಿ, ಬೆದರಿಸಿ 2 ಮೊಬೈಲ್ ಮತ್ತು ನಗದು ದರೋಡೆ ಮಾಡಿರುವ ಘಟನೆ ಶುಕ್ರವಾರ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಡಬ ತಾಲ್ಲೂಕು ಕೋನಾಜೆ ಗ್ರಾಮದ ಸಿ.ಆರ್.ಸಿ. ಕಾಲೊನಿ ನಿವಾಸಿ ಮಿಥಿಲೇಶ್ ದೂರು ನೀಡಿದ್ದು, ‘ನಾನು ಮತ್ತು ನನ್ನ ಅತ್ತೆ ಮಗಾಧೇವಿ ಬೆಳ್ತಂಗಡಿ ಕಡೆಯಿಂಂದ ಬೈಕ್‌ನಲ್ಲಿ ಬರುತ್ತಿದ್ದಾಗ ಆರೋಪಿಗಳಾದ ತನ್ವೀಶ್ ಮತ್ತು ಇನ್ನಿಬ್ಬರು ಕಾರಿನಿಂದ ಇಳಿದು ನನ್ನ ಹಣ

ಉಪ್ಪಿನಂಗಡಿ: ಬೈಕ್ ತಡೆದು ಚೂರಿ ತೋರಿಸಿ ದರೋಡೆ| ಮೂವರ ವಿರುದ್ಧ ಪ್ರಕರಣ ದಾಖಲು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಈ ವಾರ ಯಾವ ರಾಶಿಯವರಿಗೆ ಶುಭವಾಗಲಿದೆ? ವೃತ್ತಿ, ವ್ಯವಹಾರ, ಶಿಕ್ಷಣ, ಕುಟುಂಬ, ಆರೋಗ್ಯ ಮತ್ತು ಪ್ರೇಮ ಜೀವನದ ದೃಷ್ಟಿಯಿಂದ ಈ ವಾರದಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಬೆಂಬಲ ನೀಡಲಿದೆ? ನೋಡೋಣ… ಮೇಷ:ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದ್ದು, ನಿಮ್ಮ ಸಮರ್ಥ ಕಾರ್ಯವೈಖರಿಯಿಂದ ಎಲ್ಲರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರಲಿದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ಕೋಲ್ಕತಾ: ದುರ್ಗಾ ಪೂಜೆ ವೇಳೆ ಪೆಂಡಾಲ್ ಕುಸಿದು 17 ಮಂದಿ ಸಾವು

ಸಮಗ್ರ ನ್ಯೂಸ್: ಕೊಲ್ಕತ್ತಾದ ಚೋರ್‌ಬಾಗನ್ ಸಾರ್ವಜನಿಕ ದುರ್ಗೋತ್ಸವ ಸಮಿತಿಯ ಪೂಜಾ ಪೆಂಡಾಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 17 ಜನ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ವಿಪರೀತ ಜನದಟ್ಟಣೆಯಿಂದ ಅದು ಕುಸಿದಿದ್ದು, ಭಕ್ತರಲ್ಲಿ ಆತಂಕ ಉಂಟಾಗಿ, ನೂಕುನುಗ್ಗಲು ಸಂಭವಿಸಿದ ಪರಿಣಾಮವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಸ್ಥಿತಿ ವಿಚಾರಿಸಿದರು. ಈ ದುರ್ಘಟನೆಯ ಕುರಿತು ಪಶ್ಚಿಮ ಬಂಗಾಳದ

ಕೋಲ್ಕತಾ: ದುರ್ಗಾ ಪೂಜೆ ವೇಳೆ ಪೆಂಡಾಲ್ ಕುಸಿದು 17 ಮಂದಿ ಸಾವು Read More »

ಕಚ್ಚಾವಸ್ತುಗಳ‌ ಬೆಲೆ ಏರಿಕೆ| ಪಟಾಕಿ ಬೆಲೆಯಲ್ಲಿ ಶೇ.15ರಷ್ಟು ಏರಿಕೆ

ಸಮಗ್ರ ನ್ಯೂಸ್: ಕಚ್ಚಾ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಹಾಗೂ ಕಾರ್ಖಾನೆಗಳ ಮೇಲೆ ಕಠಿಣ ಸುರಕ್ಷತಾ ತನಿಖೆ ನಡೆಯುತ್ತಿರುವುದರಿಂದ, ಈ ವರ್ಷ ಪಟಾಕಿಗಳ ಬೆಲೆ ಶೇಕಡಾ 15 ರಿಂದ 20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಭಾರತದಲ್ಲಿ ಪಟಾಕಿ ಉತ್ಪಾದನೆಯ ಪ್ರಮುಖ ಕೇಂದ್ರವು ತಮಿಳುನಾಡಿನ ಶಿವಕಾಶಿ ಆಗಿದೆ. ಇಲ್ಲಿ ತಯಾರಾಗುವ ಪಟಾಕಿಗಳನ್ನು ದೇಶದ ವಿವಿಧ ಭಾಗಗಳಿಗೆ ಪೂರೈಸಲಾಗುತ್ತದೆ. ಈ ಬಾರಿ ಉತ್ಪಾದನೆಯಲ್ಲಿ ಬಳಕೆಯಾಗುವ ರಸಾಯನಗಳ ಬೆಲೆ ಹೆಚ್ಚಾಗಿರುವುದರಿಂದ ತಯಾರಕರ ವೆಚ್ಚ ಹೆಚ್ಚಾಗಿದೆ. ವರದಿಗಳ ಪ್ರಕಾರ, ಸಲ್ಫರ್ ಬೆಲೆಯು ಒಂದು ಸಮಯದಲ್ಲಿ

ಕಚ್ಚಾವಸ್ತುಗಳ‌ ಬೆಲೆ ಏರಿಕೆ| ಪಟಾಕಿ ಬೆಲೆಯಲ್ಲಿ ಶೇ.15ರಷ್ಟು ಏರಿಕೆ Read More »

ಪಾಕಿಸ್ತಾನಕ್ಕೆ ನಮ್ಮ ಬೆಂಬಲ| ರಾಜಸ್ಥಾನ ಬಿಜೆಪಿ ಅಧ್ಯಕ್ಷನ ಹೇಳಿಕೆಗೆ ವ್ಯಾಪಕ ಆಕ್ರೋಶ

ಸಮಗ್ರ ನ್ಯೂಸ್: ವಾಗಲೂ ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಮತ್ತು ಭಯೋತ್ಪಾದನೆಯ ಕೇಂದ್ರ ಎಂದು ಕರೆಯುವ ಬಿಜೆಪಿ ಪಕ್ಷದ ನಾಯಕರೊಬ್ಬರು ಈಗ ಅದೇ ದೇಶದ ಪರವಾಗಿ ಬ್ಯಾಟ್ ಬೀಸಿರುವುದು ಅಚ್ಚರಿ ಮೂಡಿಸಿದೆ. ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ನಾವು ಪಾಕಿಸ್ತಾನದ ಪರವಾಗಿ ನಿಲ್ಲುತ್ತೇವೆ ಎಂದು ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ನೀಡಿರುವ ಹೇಳಿಕೆ ಈಗ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮದಿನಾಚರಣೆಯ

ಪಾಕಿಸ್ತಾನಕ್ಕೆ ನಮ್ಮ ಬೆಂಬಲ| ರಾಜಸ್ಥಾನ ಬಿಜೆಪಿ ಅಧ್ಯಕ್ಷನ ಹೇಳಿಕೆಗೆ ವ್ಯಾಪಕ ಆಕ್ರೋಶ Read More »

ಬಂಟ್ವಾಳ: ಗೃಹಲಕ್ಷ್ಮಿ ಹಣದಲ್ಲಿ ವಸ್ತ್ರ ಮಳಿಗೆ ಆರಂಭಿಸಿದ ಮಹಿಳೆ

ಸಮಗ್ರ ನ್ಯೂಸ್: ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ‘ಗೃಹಲಕ್ಷ್ಮಿ’ಯ ಹಣ ಬಳಸಿ ಟೈಲರಿಂಗ್ ಮತ್ತು ವಸ್ತ್ರಮಳಿಗೆ ಆರಂಭಿಸಿ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ. ಇಲ್ಲಿನ ಮಾವಿನಕಟ್ಟೆ ನಿವಾಸಿ, ‘ಗೃಹಲಕ್ಷ್ಮಿ’ ಯೊಜನೆಯ ಫಲಾನುಭವಿ ಶಕುಂತಲಾ ಅವರು, ಪ್ರತಿ ತಿಂಗಳು ಬರುತ್ತಿದ್ದ ತಲಾ ₹2 ಸಾವಿರವನ್ನು ಕೂಡಿಟ್ಟು ಕನಸಿನಂತೆ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ ಟೈಲ್ಸ್ ಆಯಂಡ್‌ ಗಾರ್ಮೆಂಟ್ಸ್‌’ ಆರಂಭಿಸಿದ್ದಾರೆ. ಗುರುವಾರ ಆರಂಭಗೊಂಡ ಈ ಮಳಿಗೆಗೆ ಭೇಟಿ ನೀಡಿದ ಬಂಟ್ವಾಳ ತಾಲ್ಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ

ಬಂಟ್ವಾಳ: ಗೃಹಲಕ್ಷ್ಮಿ ಹಣದಲ್ಲಿ ವಸ್ತ್ರ ಮಳಿಗೆ ಆರಂಭಿಸಿದ ಮಹಿಳೆ Read More »

ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯಾದ್ಯಂತ ಮಳೆ‌ ಅಬ್ಬರಿಸುವ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ವರುಣನ ಅಬ್ಬರ ಮತ್ತಷ್ಟು ತೀವ್ರಗೊಳ್ಳಲಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮತ್ತು ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ತಾಜಾ ನಕ್ಷೆಯ ಪ್ರಕಾರ, ದಕ್ಷಿಣ ಒಳನಾಡಿನ 3 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ಕರಾವಳಿ, ಮಲೆನಾಡು ಮತ್ತು ರಾಜಧಾನಿ ಬೆಂಗಳೂರಿಗೆ ‘ಯೆಲ್ಲೋ ಅಲರ್ಟ್’

ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯಾದ್ಯಂತ ಮಳೆ‌ ಅಬ್ಬರಿಸುವ ಸಾಧ್ಯತೆ Read More »

ನವರಂಗದ ಸೀರೆ ನಾರಿಯ ಸೊಬಗು| ಹಸಿರು ಬಣ್ಣದ ಮೆರಗು

ಸಮಗ್ರ ನ್ಯೂಸ್: ‘ನವರಂಗದ ಸೀರೆ, ನಾರಿಯ ಸೊಬಗು’ ನವರಾತ್ರಿಯ ಆರನೇ ದಿನದಂದು ನಮ್ಮ ನಾರಿಯರು ಹಸಿರು ಬಣ್ಣದ ಸಾರಿಯಲ್ಲಿ ಕಂಗೊಳಿಸಿದರು. ನಮ್ಮ ಓದುಗರು ಕಳುಹಿಸಿದ ಕೆಲವು ಆಯ್ದ ಫೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಫೋಟೋ ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು – ಸಂ .

ನವರಂಗದ ಸೀರೆ ನಾರಿಯ ಸೊಬಗು| ಹಸಿರು ಬಣ್ಣದ ಮೆರಗು Read More »

ಅ.17: ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋಧ್ಭವ

ಸಮಗ್ರ ನ್ಯೂಸ್: ಕಾವೇರಿ ನಾಡಿನ ಮಹೋನ್ನತ ಧಾರ್ಮಿಕ ಉತ್ಸವ ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಪವಿತ್ರ ಕಾವೇರಿ ಉಗಮ ಕ್ಷೇತ್ರವಾದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್ 17ರ ಗುರುವಾರ ರಾತ್ರಿ 7:50 ಕ್ಕೆ ಸಲ್ಲುವ ಮಹೂರ್ತದಲ್ಲಿ ತೀರ್ಥೋದ್ಭವ ಜರುಗಲಿದ್ದು, ತೀರ್ಥ ರೂಪಿಣಿಯಾಗಿ ಕಾವೇರಿ ಮಾತೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಈ ಬಾರಿ ತೀರ್ಥೋದ್ಭವವು ತಡರಾತ್ರಿ ನೆರವೇರಲಿರುವ ಹಿನ್ನೆಲೆಯಲ್ಲಿ ಭಾಗಮಂಡಲದಿಂದ ತಲಕಾವೇರಿವರೆಗಿನ ಸುಮಾರು 10 ಕಿಲೋಮೀಟರ್ ರಸ್ತೆಯುದ್ದಕ್ಕೂ ವಿಶೇಷ ದೀಪಾಲಂಕಾರ ಮಾಡಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಕಾಲ್ನಡಿಗೆಯಲ್ಲಿ ಹಾಗೂ ವಾಹನಗಳಲ್ಲಿ ಬರುವ

ಅ.17: ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋಧ್ಭವ Read More »

ಕರಾವಳಿಗೆ ಪ್ರತ್ಯೇಕ ಟೂರಿಸಂ ನೀತಿ – ಸಿಎಂ

ಸಮಗ್ರ ನ್ಯೂಸ್: ರಾಜ್ಯ ಸರಕಾರ ಕರಾವಳಿ ಕರ್ನಾಟಕವನ್ನು ‘ವಿಶ್ವ ದರ್ಜೆಯ ಟೂರಿಸಂ ಹಬ್’ ಆಗಿ ಅಭಿವೃದ್ಧಿ ಪಡಿಸಲಿದ್ದು, ಇದಕ್ಕಾಗಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಿಗೆ ಪ್ರತ್ಯೇಕ ಟೂರಿಸಂ ಪಾಲಿಸಿ (ನೀತಿ)ಯನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ಕಾಪು ತಾಲೂಕಿನ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ- 2026ರಲ್ಲಿ ಗುರುವಾರ ಸಂಜೆ ಮಹಿಳಾ ದಸರಾವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯದ 320

ಕರಾವಳಿಗೆ ಪ್ರತ್ಯೇಕ ಟೂರಿಸಂ ನೀತಿ – ಸಿಎಂ Read More »