ಇಸ್ರೇಲ್: ನೆತನ್ಯಾಹುಗೆ ಭಾರೀ ಮುಖಭಂಗ| ಮೈತ್ರಿ ಸರ್ಕಾರ ರಚನೆಯತ್ತ ವಿಪಕ್ಷಗಳು ಸಜ್ಜು

ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿದ್ದ ಇಸ್ರೇಲ್‌ನ 2026ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಈ ಬಾರಿಯ ಚುನಾವಣಾ ಫಲಿತಾಂಶ ಇಸ್ರೇಲ್ ರಾಜಕೀಯದಲ್ಲಿ ಭಾರೀ ಬದಲಾವಣೆಗೆ ಮುನ್ನುಡಿ ಬರೆದಿದ್ದು, ಈಗಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತೀವ್ರ ಮುಖಭಂಗವಾಗಿದೆ.

. Ad Widget . Ad Widget . Ad Widget

120 ಸದಸ್ಯ ಬಲದ ಇಸ್ರೇಲ್ ಸಂಸತ್‌ (ನೆಸೆಟ್) ಚುನಾವಣೆಯಲ್ಲಿ ನೆತನ್ಯಾಹು ನೇತೃತ್ವದ ಮೈತ್ರಿಕೂಟ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದೆ. ಮತ್ತೊಂದೆಡೆ, ವಿರೋಧ ಪಕ್ಷಗಳು ಭರ್ಜರಿ ಪ್ರದರ್ಶನ ನೀಡಿದ್ದು, ಹೊಸ ಮೈತ್ರಿ ಸರ್ಕಾರ ರಚಿಸಲು ಅಧಿಕೃತವಾಗಿ ಸಜ್ಜಾಗಿವೆ.

. Ad Widget .

ಇಸ್ರೇಲ್ ಸಂಸತ್ ನೆಸೆಟ್ ಒಟ್ಟು 120 ಸ್ಥಾನಗಳನ್ನ ಹೊಂದಿದ್ದು, ಸರ್ಕಾರ ರಚಿಸಲು ಕನಿಷ್ಠ 61 ಸದಸ್ಯರ ಬಲದ ಅಗತ್ಯವಿದೆ. ಆದರೆ, ಮತ ಎಣಿಕೆಯ ಅಂತಿಮ ವರದಿಗಳ ಪ್ರಕಾರ ಬೆಂಜಮಿನ್ ನೆತನ್ಯಾಹು ಅವರ ಬಲಪಂಥೀಯ ಮೈತ್ರಿಕೂಟ ಕೇವಲ 53 ಸ್ಥಾನಗಳನ್ನ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ.

ಆಡಳಿತ ವಿರೋಧಿ ಅಲೆ, ದೇಶದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಆರ್ಥಿಕ ವಿಚಾರಗಳೇ ನೆತನ್ಯಾಹು ಮೈತ್ರಿಕೂಟದ ಈ ಹಿನ್ನಡೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಅವರ ರಾಜಕೀಯ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಇಸ್ರೇಲ್ ರಾಜಕಾರಣದಲ್ಲಿ ಅವರ ಪಾರುಪತ್ಯ ಅಂತ್ಯಗೊಳ್ಳುವ ಸುಳಿವು ನೀಡಿದೆ.

Leave a Comment

Your email address will not be published. Required fields are marked *