ರಾಜ್ಯಾದ್ಯಂತ ಮುಂದುವರೆದ ಒಣಹವೆ| ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತದ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಸಂಪೂರ್ಣವಾಗಿ ಕಡಿಮೆಯಾದ ಬೆನ್ನಲ್ಲೇ, ಇದೀಗ ರಾಜ್ಯದಾದ್ಯಂತ ಒಣ ಹವೆ ಮುಂದುವರಿದಿದೆ. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ನಡುವಿನ ಈ ಇನ್ ಬಿಟ್ವೀನ್ ಫೇಸ್’ ಅವಧಿಯಲ್ಲಿ ವಾತಾವರಣದಲ್ಲಿ ಗಣನೀಯ ಏರುಪೇರು ಕಂಡುಬರುತ್ತಿದ್ದು, ಮುಂದಿನ ಕೆಲ ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ತೀರಾ ವಿರಳ ಎಂದು ಹವಾಮಾನ ವರದಿಗಳು ತಿಳಿಸಿವೆ.

. Ad Widget . Ad Widget . Ad Widget

ರಾಜ್ಯದಲ್ಲಿ ಒಣ ಹವೆ ಮುಂದುವರಿದಿರುವಾಗಲೇ, ದಕ್ಷಿಣ-ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಭಾಗದಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಿದೆ. ಈ ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ತೀರದತ್ತ ಸಾಗುವ ನಿರೀಕ್ಷೆಯಿದೆ.

. Ad Widget .

ಈ ವಾಯುಭಾರ ಕುಸಿತವು ಚಂಡಮಾರುತವಾಗಿ ಅಥವಾ ತೀವ್ರ ಸ್ವರೂಪ ಪಡೆದುಕೊಳ್ಳಲಿದೆಯೇ ಎಂಬುದರ ಬಗ್ಗೆ ಹವಾಮಾನ ತಜ್ಞರು ನಿರಂತರ ನಿಗಾ ಇರಿಸಿದ್ದಾರೆ. ಸದ್ಯದ ಮಟ್ಟಿಗೆ ಈ ಹವಾಮಾನ ವ್ಯವಸ್ಥೆಯಿಂದ ಕರ್ನಾಟಕದ ಮೇಲೆ ತಕ್ಷಣದ ಯಾವುದೇ ನೇರ ಪರಿಣಾಮ ಬೀರುವ ಮುನ್ಸೂಚನೆಗಳಿಲ್ಲ.

ಮುಂಗಾರು ನಿರ್ಗಮನದ ಬಳಿಕ ಕರ್ನಾಟಕದ ಹವಾಮಾನ ಸಂಪೂರ್ಣವಾಗಿ ಬದಲಾಗಿದ್ದು, ಚಳಿಗಾಲದ ಅಧಿಕೃತ ಆರಂಭಕ್ಕೂ ಮುನ್ನ ಬಿಸಿಲಿನ ತಾಪದಲ್ಲಿ ಏರಿಕೆಯಾಗಿದೆ. ಹವಾಮಾನ ತಜ್ಞರ ಮಾಹಿತಿಯ ಪ್ರಕಾರ, ಇಂದು (ಅಕ್ಟೋಬರ್ 30) ರಾಜ್ಯದಾದ್ಯಂತ ಒಣ ಹವೆಯೇ ಇರಲಿದ್ದು, ಹಗಲಿನ ಗರಿಷ್ಠ ತಾಪಮಾನವು ವಾಡಿಕೆಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅದೇ ರೀತಿ ರಾತ್ರಿಯ ಕನಿಷ್ಠ ತಾಪಮಾನದಲ್ಲೂ ಕೊಂಚ ಬದಲಾವಣೆಯಾಗಲಿದ್ದು, ವಾಡಿಕೆಗಿಂತ -0.5 ರಿಂದ +1.5 ಡಿಗ್ರಿ ಸೆಲ್ಸಿಯಸ್‌ನಷ್ಟು ವ್ಯತ್ಯಾಸ ಕಂಡುಬರಬಹುದು ಎಂದು ಅಂದಾಜಿಸಲಾಗಿದೆ.

Leave a Comment

Your email address will not be published. Required fields are marked *