ಯುಪಿಎಸ್ಸಿ ಪರೀಕ್ಷೆಯಲ್ಲಿ 42ನೆ ರ್ಯಾಂಕ್| ಮಂಗಳೂರಿನ ಪ್ರಜ್ವಲ್ ಈಗ ರಫೆಲ್ ಪೈಲೆಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರು ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಸಾಧನೆ ಮಾಡಿದ್ದಾರೆ.

. Ad Widget . Ad Widget . Ad Widget

ಅ. 25ರಂದು ವಾರಣಾಸಿಯ ನಮೋ ಘಾಟ್ ನಲ್ಲಿ ಗಂಗಾ ನದಿಯ ಮೇಲೆ ನಡೆದ ಭಾರತೀಯ ವಾಯುಪಡೆಯ 94ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ‘ವಿಂಗ್ಸ್ ಓವರ್ ಗಂಗಾಸ್’ ವೈಮಾನಿಕ ಪ್ರದರ್ಶನದಲ್ಲಿ ಅವರು ಭಾಗವಹಿಸಿದ್ದರು.

. Ad Widget .

ಈ ವೇಳೆ ಮೂರು ರಫೇಲ್ ಯುದ್ಧವಿಮಾನಗಳನ್ನೊಳಗೊಂಡ ‘ನೀಲಕಂಠ’ ರಚನೆಯ ಮಧ್ಯಭಾಗದಲ್ಲಿ ಹಾರಾಟ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಈ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು.

ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ UPSC ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್‌ ಪಡೆದ ಪ್ರಜ್ವಲ್, ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಪ್ರವೇಶಿಸಿದರು. ಅಲ್ಲಿ ಮೂರು ವರ್ಷಗಳ ತರಬೇತಿ ಪಡೆದ ಅವರು, ‘ಸೂಪರ್ ಡಿಮೋನಾ’ ವಿಮಾನದಲ್ಲಿ ಹಾರಾಟದ ತರಬೇತಿ ಪಡೆದರು.

ಡಿಸೆಂಬರ್ 2022ರಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನ ವಿಭಾಗಕ್ಕೆ ನಿಯೋಜನೆಗೊಂಡ ಪ್ರಜ್ವಲ್, ಪಶ್ಚಿಮ ಬಂಗಾಳದ ಕಲೈಕುಂಡ ವಾಯುನೆಲೆಯಲ್ಲಿ ‘ಹಾಕ್ Mk 132’ ವಿಮಾನದ ಮೂಲಕ ಒಂದು ವರ್ಷದ ಯುದ್ಧವಿಮಾನ ತರಬೇತಿ ಪೂರ್ಣಗೊಳಿಸಿದರು. ಈ ಹಂತದಲ್ಲಿಯೂ ಅವರು ಅತ್ಯುತ್ತಮ ಸಾಧನೆ ಮಾಡಿದರು.

ಇದಕ್ಕೂ ಮೊದಲು ಹೈದರಾಬಾದ್ ನ ವಾಯುಪಡೆ ಅಕಾಡೆಮಿಯಲ್ಲಿ (AFA) ಒಂದು ವರ್ಷದ ಹಾರಾಟ ತರಬೇತಿ ಪೂರ್ಣ ಗೊಳಿಸಿದರು. ಈ ಅವಧಿಯಲ್ಲಿ ‘ಪಿಲಾಟಸ್’ ಮತ್ತು ‘ಕಿರಣ್’ ವಿಮಾನಗಳನ್ನು ಹಾರಿಸಿದರು. ವಾಯುಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಅವರು, B.Tech ಪದವಿಯನ್ನೂ ಪಡೆದರು.

Leave a Comment

Your email address will not be published. Required fields are marked *