August 2026

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಆಷಾಢ ಕಳೆದು ಶ್ರಾವಣ ಮಾಸ ಪ್ರಾರಂಭವಾಗಿದೆ. ದೇವತಾ ಕಾರ್ಯಗಳಿಗೆ ಮತ್ತೆ ಚಾಲನೆ ದೊರಕಿದೆ. ಆದ್ದರಿಂದ ಈ ವಾರದಲ್ಲಿ ರಾಶಿಗಳ ಗೋಚಾರ ಫಲಗಳೂ ಬದಲಾಗಿವೆ. ಈ ಶುಭ ವಾರದಲ್ಲಿ ಯಾವ ರಾಶಿಗೆ ಲಾಭ? ಯಾರಿಗೆ ಶುಭ? ನೋಡೋಣ ಬನ್ನಿ… ಮೇಷ ರಾಶಿ:ಶಿವ ಪೂಜೆ ಮಾಡಿದವನಿಗೆ ದೇವರೇ ದಾರಿಯನ್ನು ತೋರಿಸಿ ಬದುಕನ್ನು ತೋರಿಸುತ್ತಾನೆ. ಶ್ರಾವಣ ಮಾಸದಲ್ಲಿ ಸೋಮವಾರದಂದು ಕೇದಾರೇಶ್ವರ ವ್ರತ ಓದಿ. ಚತುರ್ಥದಲ್ಲಿ ಗುರು ಇರುವುದರಿಂದ ಕೇದಾರೇಶ್ವರ ಪೂಜೆ ಹಾಗೂ ಸುಬ್ರಹ್ಮಣ್ಯನನ್ನು ಪೂಜಿಸಿದರೆ ನಿಮ್ಮ ಪೂಜೆಗೆ ತಕ್ಕನಾದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಬೆಳ್ಳಾರೆ: ಅಕ್ರಮ ಮರ ಸಾಗಾಟ| ಲಾರಿ‌ ಸಹಿತ ಆರೋಪಿ ವಶಕ್ಕೆ

ಬೆಳ್ಳಾರೆ: ಅಕ್ರಮವಾಗಿ ಮರ ಕಡಿದು ಲಾರಿಯಲ್ಲಿ ಸಾಗಿಸುತ್ತಿದ್ದ ಜಾಲವನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭೇದಿಸಿದ್ದು, ಲಾರಿ ಹಾಗೂ ಮರದ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮಾಡಾವು ನಿವಾಸಿ ಇಸ್ಮಾಯಿಲ್ ಬಂಧಿತ ಆರೋಪಿ. ಅಗಸ್ಟ್ 14ರಂದು ನೆಟ್ಟಾರು ಎಂಬಲ್ಲಿ ಅಕ್ರಮವಾಗಿ ಕಡಿದ ಕಿರಾಲು ಭೋಗಿ ಜಾತಿಯ ಮರದ ದಿಮ್ಮಿಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಬೆಳ್ಳಾರೆಯಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಲಾರಿಯನ್ನು ಕೆಯ್ಯೂರು ಗ್ರಾಮದ ಸಂತೋಷ್ ನಗರ ಎಂಬಲ್ಲಿ ಅರಣ್ಯ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದಾಗ

ಬೆಳ್ಳಾರೆ: ಅಕ್ರಮ ಮರ ಸಾಗಾಟ| ಲಾರಿ‌ ಸಹಿತ ಆರೋಪಿ ವಶಕ್ಕೆ Read More »

ಆರ್ ಎಸ್ಎಸ್ ಇದುವರೆಗೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಮಾಡಿಕೊಳ್ಳುವುದಿಲ್ಲ| ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಬಿ.ಎಲ್ ಸಂತೋಷ್

ಸಮಗ್ರ ನ್ಯೂಸ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವೆ ಸೃಷ್ಟಿಯಾಗಿರುವ ರಾಜಕೀಯ ಸಂಘರ್ಷ ಈಗ ಮತ್ತಷ್ಟು ತೀವ್ರಗೊಂಡಿದೆ. ಆರ್‌ಎಸ್‌ಎಸ್‌ ಇದುವರೆಗೆ ಯಾವುದೇ ಕಾಯ್ದೆಯಡಿ ನೋಂದಣಿಯಾಗಿಲ್ಲ ಮತ್ತು ಭವಿಷ್ಯದಲ್ಲೂ ನೋಂದಣಿ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸ್ಪಷ್ಟವಾಗಿ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಐತಿಹಾಸಿಕ ಬನ್ನಪ್ಪ ಪಾರ್ಕ್‌ನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ

ಆರ್ ಎಸ್ಎಸ್ ಇದುವರೆಗೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಮಾಡಿಕೊಳ್ಳುವುದಿಲ್ಲ| ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಬಿ.ಎಲ್ ಸಂತೋಷ್ Read More »

ನಾಗರಪಂಚಮಿ ಹಿನ್ನೆಲೆ| ದ.ಕ ಜಿಲ್ಲೆಯಾದ್ಯಂತ ನಾಳೆ(ಆ.17) ಸಾರ್ವತ್ರಿಕ ರಜೆ ಘೋಷಣೆ

ಸಮಗ್ರ ನ್ಯೂಸ್: ನಾಗರಪಂಚಮಿ ಪ್ರಯುಕ್ತ ಆ. 17ರಂದು (ಸೋಮವಾರ) ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಸರಕಾರಿ ಕಚೇರಿಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ನಾಗರಪಂಚಮಿ ಹಿನ್ನೆಲೆ| ದ.ಕ ಜಿಲ್ಲೆಯಾದ್ಯಂತ ನಾಳೆ(ಆ.17) ಸಾರ್ವತ್ರಿಕ ರಜೆ ಘೋಷಣೆ Read More »

ಮುಂದಿನ 6 ತಿಂಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳ ಭರ್ತಿ – ಸಿಎಂ

ಸಮಗ್ರ ನ್ಯೂಸ್: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ನಾಡಿನ 7.5 ಕೋಟಿ ಕನ್ನಡಿಗರಿಗೆ ಮತ್ತು ಎಲ್ಲ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಈ ಪವಿತ್ರ ದಿನದಂದು ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ನಮ್ಮ ದೇಶ ಸ್ವಾತಂತ್ರ್ಯದ 80ನೇ ವರ್ಷಕ್ಕೆ ಕಾಲಿಡುತ್ತಿದೆ.

ಮುಂದಿನ 6 ತಿಂಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳ ಭರ್ತಿ – ಸಿಎಂ Read More »

ಬಸ್ ನಲ್ಲೂ ‘ವಂದೇಭಾರತ್’ ವೈಭೋಗ| ಶೌಚಾಲಯ, ಪ್ಯಾಂಟ್ರಿ, ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ ಕೇರಳ‌ KSRTC

ಸಮಗ್ರ ನ್ಯೂಸ್: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ದೇಶದ ಪ್ರತಿಷ್ಠಿತ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನಂತಹುದೇ ಐಷಾರಾಮಿ ಅನುಭವ ನೀಡಲು ಮುಂದಾಗಿದೆ. ಆಲಪ್ಪುಳ -ಬೆಂಗಳೂರು ಮಾರ್ಗದಲ್ಲಿ ಶೌಚಾಲಯ, ಪ್ಯಾಂಟ್ರಿ ಹಾಗೂ ವೈಯಕ್ತಿಕ ಮನರಂಜನಾ ಪರದೆಗಳನ್ನು ಒಳಗೊಂಡ ನೂತನ ‘ಎಕ್ಸಿಕ್ಯೂಟಿವ್ ಕ್ಲಾಸ್’ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ನೂತನ ಐಷಾರಾಮಿ ಬಸ್ ಸೇವೆಗೆ ಆಲಪ್ಪುಳದಲ್ಲಿ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಚಾಲನೆ ನೀಡಲಿದ್ದಾರೆ. ಆರಂಭಿಕ ಹಂತದಲ್ಲಿ ಈ ಬಸ್ ಸೇವೆ ದಿನಬಿಟ್ಟು ದಿನ (ಒಂದು ದಿನ

ಬಸ್ ನಲ್ಲೂ ‘ವಂದೇಭಾರತ್’ ವೈಭೋಗ| ಶೌಚಾಲಯ, ಪ್ಯಾಂಟ್ರಿ, ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ ಕೇರಳ‌ KSRTC Read More »

ಮಂಗಳೂರು: ವೀರರಾಣಿ ಅಬ್ಬಕ್ಕ ಸೇನಾ  ಪೂರ್ವತರಬೇತಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ 

ಸಮಗ್ರ ನ್ಯೂಸ್: ಮಂಗಳೂರಿನ ವೀರರಾಣಿ ಅಬ್ಬಕ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆ .15 ರಂದು ವಿಜೃಂಭಣೆಯಿಂದ ನೆರವೇರಿಸಲಾಯಿತು . ಧ್ವಜಾರೋಹಣವನ್ನು ಮಾಜಿ ಸೈನಿಕ ದಾಸಪ್ಪ ಅವರು ನೆರವೇರಿಸಿ, ಸ್ವಾತಂತ್ರ್ಯದ ಸಂದೇಶವನ್ನು  ಸಾರಿದರು. ಈ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ಶಾಲಾ ಸೇನಾ ತರಬೇತುದಾರರಾದ ಅಶ್ವಿನ್, ಹಾಸ್ಟೆಲ್ ಸಿಬ್ಬಂದಿ ಮಂಗೇಶ್ ಹಾಗೂ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಗಳೂರು: ವೀರರಾಣಿ ಅಬ್ಬಕ್ಕ ಸೇನಾ  ಪೂರ್ವತರಬೇತಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ  Read More »

ಸ್ವಾತಂತ್ರ್ಯ ಸಂಭ್ರಮಕ್ಕೆ ಕುಕ್ಕೆ‌ ದೇವಳದ ವತಿಯಿಂದ 60 ಸಾವಿರ ಲಡ್ಡು ವಿತರಣೆ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಸುಳ್ಯ ಹಾಗೂ ಕಡಬ ತಾಲ್ಲೂಕಿನ 161 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ, ಸುಳ್ಯ ಮತ್ತು ಕಡಬ ತಾಲ್ಲೂಕು ಪಂಚಾಯಿತಿ, ಕಡಬ ಪಟ್ಟಣ ಪಂಚಾಯಿತಿಗೆ ಸುಮಾರು ₹3 ಲಕ್ಷ ಮೌಲ್ಯದ 60 ಸಾವಿರ ಲಾಡು ಪ್ರಸಾದವನ್ನು ವಿತರಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ದಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಕ್ಷೇತ್ರದ ಪ್ರಸಾದ ತಲುಪಿಸುವ ಉದ್ದೇಶದಿಂದ ದೇವಳದ ವತಿಯಿಂದ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ್ಯ

ಸ್ವಾತಂತ್ರ್ಯ ಸಂಭ್ರಮಕ್ಕೆ ಕುಕ್ಕೆ‌ ದೇವಳದ ವತಿಯಿಂದ 60 ಸಾವಿರ ಲಡ್ಡು ವಿತರಣೆ Read More »

ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ| ‘ಭಾರತೀಯರ ಬಲದಿಂದ ದೇಶ ಪ್ರಗತಿಯತ್ತ‌ ಸಾಗುತ್ತಿದೆ’ – ಪ್ರಧಾನಿ ಮೋದಿ

ಸಮಗ್ರ ನ್ಯೂಸ್: 80ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ ಪ್ರಧಾನಿ, 140 ಕೋಟಿ ಭಾರತೀಯರಿಂದ ಬಲ ಪಡೆದು ದೇಶವು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸ ಎತ್ತರವನ್ನು ಏರುತ್ತಿದೆ ಎಂದು ಹೇಳಿದರು. ಹರ್‌ ಘರ್‌ ತಿರಂಗಾದ ಕುರಿತು ಮಾತನಾಡಿ, ಇಂದು ಪ್ರತಿಯೊಬ್ಬರ ಹೃದಯ ಬಡಿತವೂ ವಂದೇ ಮಾತರಂ ಘೋಷದಿಂದ ಪ್ರತಿಧ್ವನಿಸುತ್ತಿದೆ. ಇಂದು ಪ್ರತಿಯೊಂದು ಮನೆಯಲ್ಲೂ ಪ್ರತಿಯೊಂದು ಹೃದಯದಲ್ಲೂ ತ್ರಿವರ್ಣ

ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ| ‘ಭಾರತೀಯರ ಬಲದಿಂದ ದೇಶ ಪ್ರಗತಿಯತ್ತ‌ ಸಾಗುತ್ತಿದೆ’ – ಪ್ರಧಾನಿ ಮೋದಿ Read More »

ವಿಧಾನ ಪರಿಷತ್ ನ ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ಆಯ್ಕೆ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆಯ್ಕೆಯಾಗಿದ್ದಾರೆ. ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಪರ 38 ಮತಗಳು ಚಲಾವಣೆಯಾಗಿವೆ. ಇತ್ತೀಚೆಗೆ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಹುದ್ದೆ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಸಲೀಂ ಅಹ್ಮದ್ ಅವರನ್ನು ಕಾಂಗ್ರೆಸ್ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.ಸಲೀಂ ಅಹ್ಮದ್ ಪರ 38 ಮತಗಳು ಚಲಾವಣೆಯಾಗಿವೆ. ಹಾಗೂ ಅವರ

ವಿಧಾನ ಪರಿಷತ್ ನ ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ಆಯ್ಕೆ Read More »