March 2026

‘ಎನ್ ಡಿಎ ಜೊತೆಗೆ ಮುಂದುವರಿಯುವೆ’| ಕುಕ್ಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ

ಸಮಗ್ರ ನ್ಯೂಸ್: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಮಿತ್ರ ಪಕ್ಷಗಳೊಂದಿಗೆ ಸೇರಿ ಜನಪರ ಆಡಳಿತ ನಡೆಸುತ್ತಿದೆ. ನಮ್ಮ ಜೆಡಿಎಸ್ ಪಕ್ಷವೂ ಎನ್‌ಡಿಎ ಜತೆಗೆ ಮುಂದಿನ ಚುನಾವಣೆಯನ್ನೂ ಎದುರಿಸಲಿದೆ’ ಎಂದು ರಾಜ್ಯಸಭಾ ಸದಸ್ಯ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರದೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಜತೆಗಿನ ನಮ್ಮ ಮೈತ್ರಿ ನಿರಾತಂಕವಾಗಿದೆ. ನರೇಂದ್ರ ಮೋದಿ ನಾಯಕನಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಜನಪರ […]

‘ಎನ್ ಡಿಎ ಜೊತೆಗೆ ಮುಂದುವರಿಯುವೆ’| ಕುಕ್ಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ Read More »

ಇರಾನ್ ದಾಳಿಯಲ್ಲಿ ಅಮೇರಿಕಾದ ಶಕ್ತಿಶಾಲಿ ಯುದ್ಧವಿಮಾನ ಪತನ

ಸಮಗ್ರ ನ್ಯೂಸ್: ಅಮೆರಿಕಾ ಮತ್ತು ಇಸ್ರೇಲ್‌ ನಡೆಸಿದ ಇರಾನ್ ಮೇಲಿನ ದಾಳಿ ಹಾಗೂ ಇರಾನ್‌ನ ಸುಪ್ರೀಂ ಲೀಡರ್ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಮಧ್ಯೆ, ಕುವೈತ್ ಆಕಾಶದಲ್ಲಿ ಹಾರಾಡುತ್ತಿದ್ದ ಶಕ್ತಿಶಾಲಿ F-15 ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಇರಾನ್ ಸೋಮವಾರ ಘೋಷಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಎಫ್-15 ವಿಮಾನದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು, ಅದು ನಿಧಾನವಾಗಿ ಸುರುಳಿ ಸುತ್ತುತ್ತಾ ಕೆಳಕ್ಕೆ ಬೀಳುತ್ತಿರುವುದು ಕಂಡುಬಂದಿದೆ.ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್

ಇರಾನ್ ದಾಳಿಯಲ್ಲಿ ಅಮೇರಿಕಾದ ಶಕ್ತಿಶಾಲಿ ಯುದ್ಧವಿಮಾನ ಪತನ Read More »

ಸಾಲ ಮರುಪಾವತಿಯಲ್ಲಿ ದ.ಕ ಜಿಲ್ಲೆಗೆ ಅಗ್ರಸ್ಥಾನ – ಎಂ.ಎನ್ ರಾಜೇಂದ್ರ ಕುಮಾರ್

ಸಮಗ್ರ ನ್ಯೂಸ್: ಕಳೆದ 29 ವರ್ಷಗಳಲ್ಲಿ ಕೃಷಿ ಸಾಲ ಶೇ.100ರಷ್ಟು ಮರು ಪಾವತಿ ಮಾಡುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಈ ಬಗ್ಗೆ ನಬಾರ್ಡ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ನಬಾರ್ಡ್ ಕೂಡ ಮುಂದಾಗಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಅವರು ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ 5ನೇ ಬೋಳೂರು ಶಾಖೆಯ ನೂತನ ಸ್ವಂತ ಕಚೇರಿ ಕಟ್ಟಡ

ಸಾಲ ಮರುಪಾವತಿಯಲ್ಲಿ ದ.ಕ ಜಿಲ್ಲೆಗೆ ಅಗ್ರಸ್ಥಾನ – ಎಂ.ಎನ್ ರಾಜೇಂದ್ರ ಕುಮಾರ್ Read More »

ಹವಾಮಾನ ವರದಿ| ರಾಜ್ಯದಲ್ಲಿ ಮುಂದುವರಿದ ಒಣಹವೆ| ತಾಪಮಾನ ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಕರ್ನಾಟಕದಾದ್ಯಂತ ಇಂದು (ಮಾರ್ಚ್‌ 02) ಹವಾಮಾನವು ಒಣ ಹವೆ ಇರಲಿದೆ. ಬೇಸಿಗೆಯ ಆರಂಭದೊಂದಿಗೆ ತಾಪಮಾನ ಸಾಮಾನ್ಯಕ್ಕಿಂತಲೂ ಸ್ವಲ್ಪ ಹೆಚ್ಚಾಗಿದೆ ಎನ್ನಲಾಗಿದೆ. ಆದ್ದರಿಂದ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯ ಸೂಚನೆ ನೀಡಲಾಗಿಲ್ಲ. ಹವಾಮಾನ ಇಲಾಖೆಯ ಇಂದಿನ ವರದಿ ಪ್ರಕಾರ, ಉತ್ತರ ಒಳನಾಡಿನಲ್ಲಿ ಉಷ್ಣಾಂಶ ಏರಿಕೆಯಾಗಲಿದೆ. ಅಲ್ಲದೇ ದಕ್ಷಿಣ ಒಳನಾಡಿನಲ್ಲಿ ಸಾಧಾರಣವಾಗಿ ಮೋಡಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಕರ್ನಾಟಕದಲ್ಲಿ ಇಂದು ತಾಪಮಾನದಲ್ಲಿ ಏರಿಕೆ ಕಾಣುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 34 ಡಿಗ್ರಿ

ಹವಾಮಾನ ವರದಿ| ರಾಜ್ಯದಲ್ಲಿ ಮುಂದುವರಿದ ಒಣಹವೆ| ತಾಪಮಾನ ಏರಿಕೆ ಸಾಧ್ಯತೆ Read More »

ಅಮೇರಿಕಾದ ಎಚ್ಚರಿಕೆ ನಡುವೆಯೇ ಇಸ್ರೇಲ್ ರಾಜಧಾನಿ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ

ಸಮಗ್ರ ನ್ಯೂಸ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಏರಿಕೆಯಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಕಠಿಣ ಎಚ್ಚರಿಕೆಯ ಹೊರತಾಗಿಯೂ ಇರಾನ್ ಇಂದು ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಗರೆದಿದೆ. ಇಸ್ರೇಲ್‌ನ ರಾಜಧಾನಿ ಜೆರುಸಲೇಮ್ ಸೇರಿದಂತೆ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇರಾನ್ ಸೈನ್ಯವು ಇಸ್ರೇಲ್‌ನ ಆಯಕಟ್ಟಿನ ಪ್ರದೇಶಗಳು ಮತ್ತು ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಆಕಸ್ಮಿಕ ದಾಳಿಯಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ

ಅಮೇರಿಕಾದ ಎಚ್ಚರಿಕೆ ನಡುವೆಯೇ ಇಸ್ರೇಲ್ ರಾಜಧಾನಿ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ Read More »

ನಾಳೆ(ಮಾ.3) ಕೇತುಗ್ರಸ್ತ ಚಂದ್ರಗ್ರಹಣ| ಯಾವಾಗ ? ಸೂತಕದ ಅವಧಿಯೆಷ್ಟು? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಆಕಾಶದಲ್ಲಿ ನಾಳೆ (ಮಾರ್ಚ್ 3) ಒಂದು ಅಪರೂಪದ ಖಗೋಳ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದು, ವಿಶ್ವದಾದ್ಯಂತ ‘ಕೇತುಗ್ರಸ್ತ ಚಂದ್ರಗ್ರಹಣ’ ಸಂಭವಿಸಲಿದೆ. ವಿಶೇಷವೆಂದರೆ, ಬಣ್ಣಗಳ ಹಬ್ಬ ಹೋಳಿಯ ದಿನವೇ ಈ ಗ್ರಹಣ ಸಂಭವಿಸುತ್ತಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಭಾರೀ ಕುತೂಹಲ ಮೂಡಿಸಿದೆ. ಭಾರತದಲ್ಲಿ ಈ ಗ್ರಹಣವು ಚಂದ್ರೋದಯದ ಸಮಯದಲ್ಲಿ ಗೋಚರಿಸಲಿದ್ದು, ಗ್ರಹಣದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆಯಿಂದಲೇ ‘ಸೂತಕ ಕಾಲ’ ಆರಂಭವಾಗಲಿದೆ. ಈ ಅವಧಿಯಲ್ಲಿ ದೇವಸ್ಥಾನಗಳ ಬಾಗಿಲು ಮುಚ್ಚಲಿದ್ದು, ಯಾವುದೇ ಶುಭ ಕಾರ್ಯಗಳನ್ನು ನಡೆಸಲು ಅವಕಾಶವಿರುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು, ಮಕ್ಕಳು

ನಾಳೆ(ಮಾ.3) ಕೇತುಗ್ರಸ್ತ ಚಂದ್ರಗ್ರಹಣ| ಯಾವಾಗ ? ಸೂತಕದ ಅವಧಿಯೆಷ್ಟು? ಇಲ್ಲಿದೆ ಮಾಹಿತಿ Read More »

ಕುಣಿತ ಭಜನೆ ವೇಳೆ ಕುಸಿದು ಬಿದ್ದು ಮಹಿಳೆ ಸಾವು

ಸಮಗ್ರ‌ನ್ಯೂಸ್: ದೇವಸ್ಥಾನದ ಜಾತ್ರೋತ್ಸವದ ಸಂದರ್ಭ ಕುಣಿತ ಭಜನೆ ಮಾಡುತ್ತಾ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನಪ್ಪಿದ ಘಟನೆ ಫೆಬ್ರವರಿ 28ರ ರಾತ್ರಿ ಪುತ್ತೂರು ತಾಲೂಕಿನ ಕಾವು ಎಂಬಲ್ಲಿ ಸಂಭವಿಸಿದೆ. ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನ ಮಂಡಳಿಯ ಸದಸ್ಯೆ ರತ್ನಾವತಿ ಬಾಳಪ್ಪ ಪೂಜಾರಿ ಕನ್ನಡ್ಕ (63) ಮೃತರು. ಕಾವು ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದಲ್ಲಿ ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನ ಮಂಡಳಿಯ ಕುಣಿತ ಭಜನೆ ಕಾರ್ಯಕ್ರಮದಲ್ಲಿ ರತ್ನಾವತಿ ಬಾಳಪ್ಪ ಪೂಜಾರಿ ಭಾಗವಹಿಸಿದ್ದರು. ಭಜನೆ ಕುಣಿತ ಮಾಡುತ್ತಿರುವ ವೇಳೆ ಅವರು ಕುಸಿದು

ಕುಣಿತ ಭಜನೆ ವೇಳೆ ಕುಸಿದು ಬಿದ್ದು ಮಹಿಳೆ ಸಾವು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮಾರ್ಚ್ ತಿಂಗಳ ಮೊದಲ ವಾರ ಪ್ರಾರಂಭವಾಗಿದೆ. ಈ ತಿಂಗಳು ಹಲವು ರಾಶಿಗಳಿಗೆ ಶುಭಫಲವಿದೆ. ಈ ವಾರ ಯಾವ ರಾಶಿಯ ಫಲ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ 12 ರಾಶಿಗಳ ಸುಖ, ದುಃಖ, ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ ಹಾಗೂ ವೃತ್ತಿ ಜೀವನ ಸೇರಿದಂತೆ ಎಲ್ಲಾ ವಿಷಯಗಳು ಹೇಗೆ ಇರಲಿವೆ ಎಂದು ತಿಳಿಯೋಣ. ಮೇಷ ರಾಶಿ:ಈ ವಾರ ನಿಮಗೆ ಆಧ್ಯಾತ್ಮಿಕತೆ ಮತ್ತು ಒಳನೋಟದ ಶಕ್ತಿ ಹೆಚ್ಚಾಗುತ್ತದೆ. ಶಾಂತಿ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಇಸ್ರೇಲ್ ದಾಳಿಗೆ ಖಮೇನಿ ಕುಟುಂಬ ಸಹಿತ ಹಲವರು ಸಾವು

ಸಮಗ್ರ ನ್ಯೂಸ್: ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ (Iran) ಮೇಲೆ ನಡೆಸಿದ ಭಾರಿ ಸೇನಾ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khameni) ಮೃತಪಟ್ಟಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಅಲ್ಲದೇ ಅವರ ಕುಟುಂಬದ ಹಲವು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಇರಾನ್​ ಸರ್ವೋಚ್ಚ ನಾಯಕನ ಹತ್ಯೆ ಸುದ್ದಿ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಯುದ್ಧದ ಭಯ ಎಲ್ಲೆಡೆ ಹರಡಿದೆ. ಈ

ಇಸ್ರೇಲ್ ದಾಳಿಗೆ ಖಮೇನಿ ಕುಟುಂಬ ಸಹಿತ ಹಲವರು ಸಾವು Read More »

ಇರಾನ್ ನ ಸರ್ವೋಚ್ಚ ನಾಯಕ ಖಮೇನಿ ಸಾವು| ಅಮೇರಿಕಾ ಮತ್ತು ಇಸ್ರೇಲ್ ದಾಳಿಯಲ್ಲಿ ದುರ್ಮರಣವನ್ನಪ್ಪಿದ ಇಸ್ಲಾಂ ಕ್ರಾಂತಿಯ ನಾಯಕ

ಸಮಗ್ರ ನ್ಯೂಸ್: ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಇಸ್ಲಾಮಿಕ್ ಕ್ರಾಂತಿಯ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ ಮತ್ತು ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಪ್ರೆಸ್ ಟಿವಿ ವರದಿ ಮಾಡಿದೆ. ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹುತಾತ್ಮರಾಗಿದ್ದಾರೆ ಎಂದು ಪ್ರೆಸ್ ಟಿವಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ. ಇರಾನಿನ ಬಹುತೇಕ ಮಾಧ್ಯಮಗಳು ಸುಪ್ರೀಂ ಲೀಡರ್ ಅಲಿ ಖಮೇನಿಯವರ ನಿಧನವನ್ನು ದೃಢಪಡಿಸಿವೆ. ಅಯತೊಲ್ಲಾ ಅಲಿ ಖಮೇನಿ 1989 ರಿಂದ ಇರಾನ್‌ನ ಸುಪ್ರೀಂ ಲೀಡರ್

ಇರಾನ್ ನ ಸರ್ವೋಚ್ಚ ನಾಯಕ ಖಮೇನಿ ಸಾವು| ಅಮೇರಿಕಾ ಮತ್ತು ಇಸ್ರೇಲ್ ದಾಳಿಯಲ್ಲಿ ದುರ್ಮರಣವನ್ನಪ್ಪಿದ ಇಸ್ಲಾಂ ಕ್ರಾಂತಿಯ ನಾಯಕ Read More »