March 2026

ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ ಮಂಜೂರು| ಸುಳ್ಯವನ್ನು ಕೇಂದ್ರಸ್ಥಾನವನ್ನಾಗಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ(ಎಲಿಫೆಂಟ್ ಟಾಸ್ಕ್‌ಪೋರ್ಸ್) ಮಂಜೂರು ಮಾಡಿ ಸರಕಾರ‌ ಆದೇಶ ಮಾಡಿದೆ. ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಪ್ರತಿ ವರ್ಷವೂ ಬೆಳೆ ಪರಿಹಾರ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗಿದಾಗ ಅವುಗಳನ್ನು ಹಿಮ್ಮೆಟ್ಟಿಸಲು ಮಡಿಕೇರಿ ವಿಭಾಗದಿಂದ ಆನೆ ಕಾರ್ಯಪಡೆ ಕರೆಯಿಸಬೇಕಾಗುತ್ತಿತ್ತು. ಇದರಿಂದ ಹಿಮ್ಮೆಟ್ಟಿಸುವ ಪ್ರಕ್ರಿಯೆ […]

ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ ಮಂಜೂರು| ಸುಳ್ಯವನ್ನು ಕೇಂದ್ರಸ್ಥಾನವನ್ನಾಗಿಸಿ ರಾಜ್ಯ ಸರ್ಕಾರ ಆದೇಶ Read More »

ಅತ್ಯದಿಕ ತೆರಿಗೆ ಸಂಗ್ರಹಣೆ| ಕಡಬ ತಾಲ್ಲೂಕು ರಾಜ್ಯಕ್ಕೆ ಪ್ರಥಮ

ಸಮಗ್ರ ನ್ಯೂಸ್: ದ.ಕ‌ ಜಿಲ್ಲೆಯಲ್ಲೇ ಕಡಬ ತಾಲೂಕಿನ ತೆರಿಗೆ ಸಂಗ್ರಹಣೆಯು ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಪ್ರಥಮವಾಗಿರುವುದಾಗಿ ಕಡಬ ತಾ ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ. ಹೊಸ ತಾಲೂಕಾಗಿ ಘೋಷಣೆಯಾದಲ್ಲಿಂದ ಈವರೆಗೆ ಪ್ರತೀ ವರ್ಷ ತೆರಿಗೆ ಸಂಗ್ರಹಣೆಯಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಿದೆ. ಅಂತೆಯೇ ಈ ಆರ್ಥಿಕ ವರ್ಷದಲ್ಲಿಯೂ ಕಡಬ ತಾಲೂಕು ತನ್ನ ಪ್ರಸಕ್ತ ಸಾಲಿನ ತೆರಿಗೆ ಗುರಿಯನ್ನು ಮೀರಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಯ ಪಥದಲ್ಲಿ ಕಡಬದ ಈ ಸಾಧನೆಯು ಒಂದು ಮೈಲಿಗಲ್ಲಾಗಿದೆ. ಕಡಬ ತಾಲೂಕಿನ

ಅತ್ಯದಿಕ ತೆರಿಗೆ ಸಂಗ್ರಹಣೆ| ಕಡಬ ತಾಲ್ಲೂಕು ರಾಜ್ಯಕ್ಕೆ ಪ್ರಥಮ Read More »

ಇಸ್ರೇಲ್ ನಿಂದ ಟೆಹ್ರಾನ್ ಮೇಲೆ ಭಾರೀ ದಾಳಿ| ಐದನೇ ದಿನವೂ ಮುಂದುವರಿದ ಭೀಕರ ಯುದ್ಧ

ಸಮಗ್ರ ನ್ಯೂಸ್: ಇರಾನ್‌ನ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ ಸ್ಫೋಟಗಳ ಸದ್ದು ಕೇಳಿಬಂದಿದ್ದು, ಇರಾನ್‌ ಪರಮಾಣು ತಾಣದ ಮೇಲೆ ದಾಳಿ ನಡೆಸಿ, ಗಲ್‌್ಫ ಪ್ರದೇಶದಾದ್ಯಂತ ಇಸ್ಲಾಮಿಕ್‌ ಗಣರಾಜ್ಯವು ಪ್ರತೀಕಾರದ ದಾಳಿ ನಡೆಸಿದ ನಂತರ ಅಮೆರಿಕ ಮತ್ತು ಇಸ್ರೇಲ್‌ ಜೊತೆಗಿನ ಯುದ್ಧ ಐದನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನ ದೂರದರ್ಶನವು ಬೆಳಗಿನ ಜಾವ ಟೆಹ್ರಾನ್‌ ಸುತ್ತಲೂ ಸ್ಫೋಟಗಳನ್ನು ವರದಿ ಮಾಡಿದೆ. ಏತನ್ಮಧ್ಯೆ, ಇರಾನ್‌ನಿಂದ ಬರುವ ಕ್ಷಿಪಣಿ ದಾಳಿಯಿಂದಾಗಿ ತನ್ನ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯಗೊಂಡಿದೆ ಎಂದು ಇಸ್ರೇಲ್‌ ಹೇಳಿದೆ. ಯುಎಸ್‌‍ ಅಧ್ಯಕ್ಷ

ಇಸ್ರೇಲ್ ನಿಂದ ಟೆಹ್ರಾನ್ ಮೇಲೆ ಭಾರೀ ದಾಳಿ| ಐದನೇ ದಿನವೂ ಮುಂದುವರಿದ ಭೀಕರ ಯುದ್ಧ Read More »

ಇಂದು ಬಣ್ಣಗಳ ಹಬ್ಬ ಹೋಳಿ| ಬದುಕನ್ನು ರಂಗಾಗಿಸುವ ಈ ಹಬ್ಬದ ಮಹತ್ವ ಗೊತ್ತಾ?

ಸಮಗ್ರ ನ್ಯೂಸ್: ವಿಶ್ವದಲ್ಲಿ ಯುದ್ಧದ ಕಾರ್ಮೋಡ ಇದ್ದರೆ ನಮ್ಮ ಭಾರತ ದೇಶದಾದ್ಯಂತ ಹೋಳಿ ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಜಾತಿ-ಮತ ಭೇದವಿಲ್ಲದೆ ಜನರು ಒಂದಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಿದ್ದಾರೆ. ವಸಂತ ಋತುವಿನ ಆಗಮನವನ್ನು ಸೂಚಿಸುವ ಈ ಹಬ್ಬವು ಚಳಿಗಾಲದ ಅಂತ್ಯವನ್ನು ಸಾರುತ್ತದೆ. ಹೋಳಿ ಆಚರಣೆ ಸಾಮಾನ್ಯವಾಗಿ ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲ ದಿನ “ಹೋಲಿಕಾ ದಹನ” ನಡೆಸಿ ಕೆಟ್ಟದನ್ನು ನಾಶ ಮಾಡುವುದನ್ನು ಸಂಕೇತಿಸಲಾಗುತ್ತದೆ. ಎರಡನೇ ದಿನ ಜನರು ಬಣ್ಣಗಳನ್ನು ಎರಚಿಕೊಂಡು, ಪರಸ್ಪರ ಶುಭಾಶಯ ವಿನಿಮಯ

ಇಂದು ಬಣ್ಣಗಳ ಹಬ್ಬ ಹೋಳಿ| ಬದುಕನ್ನು ರಂಗಾಗಿಸುವ ಈ ಹಬ್ಬದ ಮಹತ್ವ ಗೊತ್ತಾ? Read More »

ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನ ರಕ್ಷಣಾ ಸಚಿವನ ಹತ್ಯೆ

ಸಮಗ್ರ ನ್ಯೂಸ್: ಇರಾನ್ ಅಕ್ಷರಶಃ ತತ್ತರಿಸಿ ಹೋಗಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ದಾಳಿಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಇರಾನ್ ಪ್ರಮುಖರೇ ಬಲಿಯಾಗುತ್ತಿದ್ದಾರೆ. ಇರಾನ್ ಸೇನಾ ಮುಖ್ಯಸ್ಥನ ಬೆನ್ನಲ್ಲೇ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು. ಇದೀಗ ಇರಾನ್ ನೂತನವಾಗಿ ನೇಮಕ ಮಾಡಿದ ರಕ್ಷಣಾ ಸಚಿವ ಸಯ್ಯದ್ ಮಜೀದ್ ಎಬಾ ಅಲ್ ರೆಜಾ ಹತ್ಯೆಯಾಗಿದ್ದಾರೆ. ಅಮೇರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ನೂತನ ಸಚಿವ ಹತ್ಯೆಯಾಗಿರುವುದಾಗಿ ಸ್ಪೆಕ್ಟೇಟರ್ ಇಂಡೆಕ್ಸ್ ವರದಿ

ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನ ರಕ್ಷಣಾ ಸಚಿವನ ಹತ್ಯೆ Read More »

ಅಯತುಲ್ಲಾ ಅಲಿ ಖಾಮಿನೈ ಪುತ್ರ ಮೊಜ್ತಬಾ ಖಾಮಿನೈ ಇರಾನ್ ನ ಸರ್ವೋಚ್ಚ ನಾಯಕನಾಗಿ ನೇಮಕ

ಸಮಗ್ರ ನ್ಯೂಸ್: ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಅವರ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಬುಧವಾರದ ಮಾಧ್ಯಮ ವರದಿ ತಿಳಿಸಿದೆ. ಇರಾನ್‌ನ ತಜ್ಞರ ಸಭೆಯು ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದು, ಪ್ರಭಾವಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (ಐಆರ್‌ಜಿಸಿ) ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ‘ಇರಾನ್ ಇಂಟರ್‌ನ್ಯಾಷನಲ್’ ವರದಿ ಹೇಳಿದೆ. 56 ವರ್ಷದ ಮೊಜ್ತಬಾ ಖಾಮಿನೈ, ದಿವಂಗತ ಅಲಿ ಖಾಮಿನೈ

ಅಯತುಲ್ಲಾ ಅಲಿ ಖಾಮಿನೈ ಪುತ್ರ ಮೊಜ್ತಬಾ ಖಾಮಿನೈ ಇರಾನ್ ನ ಸರ್ವೋಚ್ಚ ನಾಯಕನಾಗಿ ನೇಮಕ Read More »

ಒಮಾನ್: ಕೈತಪ್ಪಿದ ಪ್ರೀತಿಗಾಗಿ ಲೈವ್ ನಲ್ಲೇ ಸುಸೈಡ್ ಮಾಡಿಕೊಂಡ ಮಂಗಳೂರಿನ ಯುವಕ

ಸಮಗ್ರ ನ್ಯೂಸ್: ಒಮಾನ್ ದೇಶದಲ್ಲಿ ಉದ್ಯೋಗದಲ್ಲಿದ್ದ ತಾಲ್ಲೂಕಿನ ಸೋಮೇಶ್ವರ ಯುವಕ ಪ್ರೇಮ ವೈಫಲ್ಯದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೊ ಪ್ರಸಾರ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮೇಶ್ವರದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಮೃತ ಯುವಕ. ಒಂದೂವರೆ ವರ್ಷಗಳಿಂದ ಒಮಾನ್ ದೇಶದಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಊರಿಗೆ ಮರಳಿದ್ದ ಅವರು ರಜೆ ಮುಗಿಸಿ ಈಚೆಗಷ್ಟೇ ಒಮಾನ್‌ಗೆ ತೆರಳಿದ್ದರು. ಪುನೀತ್ ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವದ ಯುವತಿಯೊಬ್ಬರನ್ನು

ಒಮಾನ್: ಕೈತಪ್ಪಿದ ಪ್ರೀತಿಗಾಗಿ ಲೈವ್ ನಲ್ಲೇ ಸುಸೈಡ್ ಮಾಡಿಕೊಂಡ ಮಂಗಳೂರಿನ ಯುವಕ Read More »

ಇರಾನ್ ಧ್ವಜ ಹಿಡಿದಿದ್ದ ವ್ಯಕ್ತಿಯಿಂದ ಗುಂಡಿನ ದಾಳಿ| ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ಮೂವರು ಸಾವು

ಸಮಗ್ರ ನ್ಯೂಸ್: ಟೆಕ್ಸಾಸ್​ನ ಆಸ್ಟಿನ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದು, ಹನ್ನೆರಡಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಕೋರನನ್ನು ಎನ್‌ಡಿಯಾಗಾ ಡಯಾಗ್ನೆ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಸವಿತಾ ಶಾನ್ ಕೂಡ ಒಬ್ಬರು. ಸವಿತಾ ಅವರು ಟೆಕ್ಸಾಸ್​ ವಿಶ್ವವಿದ್ಯಾಲಯದಲ್ಲಿ ಹಾನರ್ಸ್ ಪದವಿ ಪಡೆಯುತ್ತಿದ್ದರು. ಬುಫೋರ್ಡ್‌ನ ಬ್ಯಾಕ್‌ಯಾರ್ಡ್ ಬಿಯರ್ ಗಾರ್ಡನ್‌ನಲ್ಲಿ ಈ ದಾಳಿ ನಡೆದಿದೆ. ಇದು ವಿದ್ಯಾರ್ಥಿಗಳ ನೆಚ್ಚಿನ ಹೋಟೆಲ್​ ಆಗಿದ್ದು, ವಿದ್ಯಾರ್ಥಿಗಳೆಲ್ಲರು ಆಗಾಗ್ಗೆ

ಇರಾನ್ ಧ್ವಜ ಹಿಡಿದಿದ್ದ ವ್ಯಕ್ತಿಯಿಂದ ಗುಂಡಿನ ದಾಳಿ| ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ಮೂವರು ಸಾವು Read More »

ಪುತ್ತೂರು: ಕೆಳಮಟ್ಟದಲ್ಲಿ ಹಾರಾಡಿ ಆತಂಕ ಸೃಷ್ಟಿಸಿದ ಮಿನಿ ಜೆಟ್ ವಿಮಾನ| ಸ್ಪಷ್ಟನೆ ನೀಡಿದ ವರಿಷ್ಠಾಧಿಕಾರಿ

ಸಮಗ್ರ ನ್ಯೂಸ್: ಪುತ್ತೂರು ನಗರದ ಆಕಾಶದಲ್ಲಿ ಮಂಗಳವಾರ (ಮಾ. 3) ಮಧ್ಯಾಹ್ನ ಮಿನಿ ಜೆಟ್ ವಿಮಾನವೊಂದು ಅತೀ ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಸಾರ್ವಜನಿಕ ವಲಯದಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದ ಘಟನೆ ನಡೆದಿದೆ. ಏನಿದು ಘಟನೆ? ಮಧ್ಯಾಹ್ನದ ವೇಳೆ ಹಠಾತ್ತನೆ ಬಂದ ಮಿನಿ ಜೆಟ್ ವಿಮಾನವೊಂದು ಭೂಮಿಗೆ ಅತೀ ಸಮೀಪದಲ್ಲಿ ಹಾರಾಟ ನಡೆಸತೊಡಗಿತು. ಅದರಲ್ಲೂ ವಿಶೇಷವಾಗಿ ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗದ್ದೆಯ ಮೇಲ್ಭಾಗದಲ್ಲಿ ಅತ್ಯಂತ ತಳಮಟ್ಟದಲ್ಲಿ ವಿಮಾನ ಹಾರಾಡುತ್ತಿರುವುದನ್ನು ಕಂಡು

ಪುತ್ತೂರು: ಕೆಳಮಟ್ಟದಲ್ಲಿ ಹಾರಾಡಿ ಆತಂಕ ಸೃಷ್ಟಿಸಿದ ಮಿನಿ ಜೆಟ್ ವಿಮಾನ| ಸ್ಪಷ್ಟನೆ ನೀಡಿದ ವರಿಷ್ಠಾಧಿಕಾರಿ Read More »

‘ ಇರಾನ್ ಗೆ ಇವರನ್ನೂ ಕಳುಹಿಸಿಬಿಡಿ, ತಮ್ಮ ಜನರ ಜೊತೆಗೆ ಪ್ರತಿಭಟಿಸಲಿ’| ನಟಿ ರಶ್ಮಿ ಗೌತಮ್ ಟ್ವೀಟ್

ಸಮಗ್ರ ನ್ಯೂಸ್: ಕಾಶ್ಮೀರ, ಕರ್ನಾಟಕ, ಕೇರಳದಲ್ಲಿ ಖಮೇನಿ ಹತ್ಯೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ಶಿಯಾ ಮುಸ್ಲಿಮರು ರಸ್ತೆಗಿಳಿದು ಭಾನುವಾರ ಪ್ರತಿಭಟನೆ ನಡೆಸಿದ್ದರು. ಅಮೆರಿಕಾ ಹಾಗೂ ಇಸ್ರೇಲ್ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರ ಹಾಕಿದ್ದಾರೆ. “ಈ ಪ್ರತಿಭಟನೆಕಾರರನ್ನು ಕೂಡ ಇರಾನ್ ದೇಶಕ್ಕೆ ಕಳುಹಿಸಿಬಿಡಿ” ಎಂದು ತೆಲುಗು ನಟಿ, ನಿರೂಪಕಿ ರಶ್ಮಿ ಗೌತಮ್ ಟ್ವೀಟ್ ಮಾಡಿದ್ದಾರೆ. ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆ ಸಂಬಂಧ ಮಾಡಿದ್ದ ಟ್ವೀಟ್ ಅನ್ನು ರಶ್ಮಿ ಗೌತಮ್ ರೀ-ಟ್ವೀಟ್ ಮಾಡಿ “ದಯವಿಟ್ಟು

‘ ಇರಾನ್ ಗೆ ಇವರನ್ನೂ ಕಳುಹಿಸಿಬಿಡಿ, ತಮ್ಮ ಜನರ ಜೊತೆಗೆ ಪ್ರತಿಭಟಿಸಲಿ’| ನಟಿ ರಶ್ಮಿ ಗೌತಮ್ ಟ್ವೀಟ್ Read More »