ಇರಾನ್ ದಾಳಿಯಲ್ಲಿ ಅಮೇರಿಕಾದ ಶಕ್ತಿಶಾಲಿ ಯುದ್ಧವಿಮಾನ ಪತನ

ಸಮಗ್ರ ನ್ಯೂಸ್: ಅಮೆರಿಕಾ ಮತ್ತು ಇಸ್ರೇಲ್‌ ನಡೆಸಿದ ಇರಾನ್ ಮೇಲಿನ ದಾಳಿ ಹಾಗೂ ಇರಾನ್‌ನ ಸುಪ್ರೀಂ ಲೀಡರ್ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಮಧ್ಯೆ, ಕುವೈತ್ ಆಕಾಶದಲ್ಲಿ ಹಾರಾಡುತ್ತಿದ್ದ ಶಕ್ತಿಶಾಲಿ F-15 ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಇರಾನ್ ಸೋಮವಾರ ಘೋಷಿಸಿದೆ.

. Ad Widget . Ad Widget . Ad Widget .

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಎಫ್-15 ವಿಮಾನದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು, ಅದು ನಿಧಾನವಾಗಿ ಸುರುಳಿ ಸುತ್ತುತ್ತಾ ಕೆಳಕ್ಕೆ ಬೀಳುತ್ತಿರುವುದು ಕಂಡುಬಂದಿದೆ.
ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಜಿಗಿದಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಇದು ತಾಂತ್ರಿಕ ದೋಷದಿಂದ ಅಥವಾ ‘ಫ್ರೆಂಡ್ಲಿ ಫೈರ್’ (ತನ್ನದೇ ಪಡೆಯಿಂದ ತಪ್ಪಾಗಿ ನಡೆದ ದಾಳಿ) ನಿಂದ ಸಂಭವಿಸಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ದಕ್ಷಿಣ ಇರಾನ್‌ನ ಮಿನಾಬ್ ಪಟ್ಟಣದ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಟೆಹರಾನ್ ಆರೋಪಿಸಿದೆ. ಒಟ್ಟಾರೆ ಈ ಮೂರು ದಿನಗಳ ಸಂಘರ್ಷದಲ್ಲಿ ಸಾವಿನ ಸಂಖ್ಯೆ 200 ದಾಟಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ.

Leave a Comment

Your email address will not be published. Required fields are marked *