ಹರ್ಷ ಕುಟುಂಬಸ್ಥರಿಗೆ ಕೊಲೆ ಬೆದರಿಕೆ| ಶಿವಮೊಗ್ಗ ಎಸ್ ಪಿ ಹೇಳಿದ್ದೇನು?

ಸಮಗ್ರ ನ್ಯೂಸ್: ಕೆಲತಿಂಗಳ ಹಿಂದೆ ಜಿಹಾದಿಗಳಿಂದ ಕೊಲ್ಲಲ್ಪಟ್ಟ ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಬೆದರಿಕೆ ಹಾಕಿರುವ ಯಾವುದೇ ಅಂಶ ಕಂಡುಬಂದಿಲ್ಲ, ಹರ್ಷಾ ಕುಟುಂಬಕ್ಕೆ ಕೊಲೆ ಬೆದರಿಕೆ ಎಂಬುವುದೆಲ್ಲಾ ಸುಳ್ಳುಸುದ್ದಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದ್ದಾರೆ.

Ad Widget ... ..

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹರ್ಷನ ಕುಟುಂಬದಿಂದ ಜೀವ ಬೆದರಿಕೆ ಹಾಕಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ. ನಗರದಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇಲ್ಲಿಯವರೆಗಿನ ತನಿಖೆಯಲ್ಲಿ ಜೀವ ಬೆದರಿಕೆಯ ಯಾವುದೇ ಅಂಶ ಕಂಡುಬಂದಿಲ್ಲ ಎಂದು ಹೇಳಿದರು.

Ad Widget

ಹರ್ಷಾನ ಅಕ್ಕಾ ಆಶ್ವಿನಿಯವರು ಮಾಧ್ಯಮಗಳಲ್ಲಿ ನಮಗೆ ಕೊಲೆ ಬೆದರಿಕೆ ಬಂದಿದೆ ಎಂದು ಹೇಳಿದ್ದಾರೇ ವಿನ: ಅವರ ಕಡೆಯಿಂದ ಯಾವುದೇ ರೀತಿಯಾದ ಅಧಿಕೃತ ದೂರು ದಾಖಲೆಯಾಗಿಲ್ಲ. ಹಾಗೆ ಕೊಲೆಬೆದರಿಕೆ ಇದ್ದರೆ ಹರ್ಷನ ಸಹೋದರಿ ಅಶ್ವಿನಿ ಕುಟುಂಬಕ್ಕೆ ಮಾತ್ರವಲ್ಲ, ತೊಂದರೆಯಲ್ಲಿರುವ ಶಿವಮೊಗ್ಗದ ಎಲ್ಲರಿಗೂ ರಕ್ಷಣೆ ನೀಡಲು ಇಲಾಖೆ ಸಿದ್ಧವಿದೆ ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *