ಆಕೆ ಪ್ರೀತಿಯಿಂದ ಗಂಡ, ಮಕ್ಳಿಗೆ ಚಹಾ ಮಾಡಿಕೊಟ್ಟಳು| ಆದರೆ ಅದನ್ನು ಕುಡಿದ ಬಳಿಕ ನಡೆದದ್ದು ಘೋರ ದುರಂತ!!

ಸಮಗ್ರ ನ್ಯೂಸ್: ಮಹಿಳೆಯೊಬ್ಬಳು ಮಾಡಿದ ಎಡವಟ್ಟಿನಿಂದಾಗಿ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಘೋರ ದುರಂತ ಸಂಭವಿಸಿದೆ. ಕೀಟನಾಶಕ ಔಷಧ ಬೆರೆಸಿದ ಚಹಾ ಕುಡಿದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಆಕೆ ಮಾಡಿದ ಒಂದು ಸಣ್ಣ ತಪ್ಪಿನಿಂದ ಗಂಡ ಮತ್ತು ಮುದ್ದಾದ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಕಳೆದುಕೊಂಡಿದ್ದಾರೆ.

. Ad Widget . Ad Widget

ಘಟನೆಯ ವಿವರಗಳ ಪ್ರಕಾರ, ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6), ದಿವ್ಯಾಂಶ್ (5), ಮಾವ ರವೀಂದ್ರಸಿಂಗ್ (55) ಮತ್ತು ನೆರೆಹೊರೆಯವರಾದ ಸೊಬ್ರಾನ್ (45) ಮನೆಯಲ್ಲಿ ಚಹಾ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಅವರೆಲ್ಲರನ್ನೂ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ರವೀಂದ್ರ ಸಿಂಗ್, ಶಿವಾಂಗ್ ಮತ್ತು ದಿವಾನ್ಶ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

. Ad Widget . . Ad Widget . Ad Widget

ಶಿವಾನಂದನ ಪತ್ನಿ ಭತ್ತದ ಬೆಳೆಗೆ ಸಿಂಪರಣೆ ಮಾಡಿದ ಔಷಧವನ್ನು ಟೀ ಪುಡಿ ಎಂದು ತಪ್ಪಾಗಿ ಭಾವಿಸಿ ಚಹಾ ಮಾಡಿದ್ದಾರೆ. ಇದನ್ನು ಕುಡಿದ ಆ ಐವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಕಮಲೇಶ್ ದೀಕ್ಷಿತ್ ಬಹಿರಂಗಪಡಿಸಿದ್ದಾರೆ.

Leave a Comment

Your email address will not be published. Required fields are marked *