ರಾಜ್ಯ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ| ಭಾರೀ ಮಳೆ ಮುನ್ಸೂಚನೆ| ಕರಾವಳಿ‌ ಜಿಲ್ಲೆಗಳಿಗೆ ರೆಡ್ ಅಲರ್ಟ್

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಾವಣಗೆರೆಗೆ ಆರೆಂಜ್ ಅಲರ್ಟ್ ಮತ್ತು ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ ಮತ್ತು ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತುಮಕೂರು, ರಾಮನಗರ, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ […]

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ| ಭಾರೀ ಮಳೆ ಮುನ್ಸೂಚನೆ| ಕರಾವಳಿ‌ ಜಿಲ್ಲೆಗಳಿಗೆ ರೆಡ್ ಅಲರ್ಟ್ Read More »

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್, ಗುಟ್ಕಾ, ಸಿಗರೇಟ್ ಮಾರಾಟ ಸಂಪೂರ್ಣ ನಿಷೇಧ

ಸಮಗ್ರ ನ್ಯೂಸ್: ಪ್ಲಾಸ್ಟಿಕ್ ನಿಷೇಧದ ಕುರಿತು ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯಾಪ್ತಿಯ ಅಂಗಡಿ ಕಟ್ಟಡಗಳ ಬಾಡಿಗೆದಾರರು, ವ್ಯಾಪಾರಸ್ಥರಿಗೆ ಮಾಹಿತಿ ನೀಡುವ ಸಭೆ ನಡೆಯಿತು. ಬೀಡಿ, ಸಿಗರೇಟ್, ಗುಟ್ಕಾ ಮಾರಾಟವನ್ನು ನಿಷೇಧಿಸಿರುವ ಬಗ್ಗೆ ತಿಳಿಸಲಾಯಿತು. ಎಲ್ಲ ಅಂಗಡಿಗಳಿಗೆ ಪರಿಶೀಲನಾ ತಂಡ ಭೇಟಿ ನೀಡಿ, ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಇರುವ ಪ್ಲಾಸ್ಟಿಕ್ ಮುಗಿಯುವವರೆಗೆ ಮಾರಾಟಕ್ಕೆ ಅಭ್ಯಂತರವಿಲ್ಲ. ಆದರೆ ಇಲ್ಲಿ ಶಾಶ್ವತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವಂತಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್, ಗುಟ್ಕಾ, ಸಿಗರೇಟ್ ಮಾರಾಟ ಸಂಪೂರ್ಣ ನಿಷೇಧ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ಸೂರ್ಯನು ಸ್ವಸ್ಥಾನಕ್ಕೆ ಬರಲಿದ್ದಾನೆ. ಶುಕ್ರನೂ ಚಂದ್ರನ ರಾಶಿಯನ್ನು ಪ್ರವೇಶಿಸಿದ್ದಾನೆ. ದೇವಿಯ ಉಪಾಸಕರಿಗೆ ಶುಭಕಾಲ. ವಾರಾಂತ್ಯದಲ್ಲಿ ಪ್ರಮಾಣಗಳನ್ನು ಇಟ್ಟುಕೊಳ್ಳದೇ, ಯಾವುದೇ ಮಹತ್ಕಾರ್ಯವನ್ನು ಆರಂಭಿಸದೇ ದೈವಬಲವನ್ನು ತಂದುಕೊಳ್ಳಿ. ಆ.17ರಿಂದ 24ರವರೆಗಿನ ನಿಮ್ಮ ರಾಶಿಗಳ ಫಲಾಫಲ ಈ ಕೆಳಗಿನಂತಿವೆ ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಯಾರು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಗಳಿಸಿದ ಹಣವೂ ಗೊತ್ತಾಗದಂತೆ ಖಾಲಿಯಾಗಬಹುದು. ಯಾವ ಭಾವವೂ ಇಲ್ಲದೇ ಏನನ್ನೋ ಯೋಚಿಸುತ್ತಲೇ ಇರುವಿರಿ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಫೋಟೋ ಕಳುಹಿಸಲು ಇಂದು(ಆ17) ಕೊನೆ ದಿನ

ಸಮಗ್ರ ನ್ಯೂಸ್: ಸಮಗ್ರ ಮೀಡಿಯಾ ನೆಟ್ವರ್ಕ್ ಹಾಗೂ ಸಮಗ್ರ ಸಮಾಚಾರ.ಕಾಂ ಅರ್ಪಿಸುವ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಫೋಟೋ ಕಳುಹಿಸಲು ಇಂದು(ಆ.17) ಕೊನೆ ದಿನವಾಗಿದೆ. ನಿಮ್ಮ ಮೂರು ವರ್ಷದೊಳಗಿನ ಕಂದಮ್ಮಗಳ ಕೃಷ್ಣ ವೇಷದ ಫೋಟೋ ಹಾಗೂ ಜನನ ಪ್ರಮಾಣ ಪತ್ರ, ಸಂಪರ್ಕ ವಿಳಾಸವನ್ನು 91081 31193 ನಂಬರ್ ಗೆ ವಾಟ್ಸಾಪ್ ಮಾಡುವುದು. ಸ್ಪರ್ಧೆಗೆ ಪ್ರವೇಶ ಶುಲ್ಕ ₹100 ಆಗಿದ್ದು ಯುಪಿಐ ಮೂಲಕ ಪಾವತಿಸಬಹುದು. ಸ್ಪರ್ಧೆಯ ಫಲಿತಾಂಶ ಆ. 17ರಂದು ಪ್ರಕಟವಾಗಲಿದ್ದು, ಆಸಕ್ತರು ಈ ಕೂಡಲೇ ಸ್ಪರ್ಧೆಯಲ್ಲಿ ಭಾಗವಹಿಸುವರೇ

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಫೋಟೋ ಕಳುಹಿಸಲು ಇಂದು(ಆ17) ಕೊನೆ ದಿನ Read More »

ಭಾರೀ ಮಳೆಯಿಂದ ಘಾಟ್ ನಲ್ಲಿ ಭೂಕುಸಿತ| ಸುಬ್ರಹ್ಮಣ್ಯ ರೋಡ್ – ಹಾಸನ ಮಾರ್ಗದಲ್ಲಿ ರೈಲು ಸಂಚಾರ ಬಂದ್| ಹಲವು ರೈಲುಗಳ ಮಾರ್ಗ ಬದಲಾವಣೆ

ಸಮಗ್ರ ನ್ಯೂಸ್: ಭಾರಿ ಮಳೆಯಿಂದ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ರೈಲು ನಿಲ್ದಾಣದ ನಡುವಿನ ಘಾಟ್ ಪ್ರದೇಶದ ರೈಲು ಮಾರ್ಗದ ಮೂರು ಕಡೆ ಶನಿವಾರ ಭೂ ಕುಸಿತ ಉಂಟಾದ ಪರಿಣಾಮ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಸಂಜೆ 4.40ರ ವೇಳೆಗೆ ಸಿರಿಬಾಗಿಲು-ಎಡಕುಮೇರಿ, ಎಡಕುಮೇರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ಡೋಣಿಗಲ್ ನಡುವಿನ ಕೆಲವೆಡೆ ಮಣ್ಣು ಮತ್ತು ಬಂಡೆಗಳು ಹಳಿಗಳ ಮೇಲೆ ಬಿದ್ದಿದೆ. ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 07378) ಶನಿವಾರ ಪ್ರಯಾಣವನ್ನು ತೋಕೂರು, ಕಾರವಾರ, ಮಡಗಾಂವ್, ಲೋಂಡಾ

ಭಾರೀ ಮಳೆಯಿಂದ ಘಾಟ್ ನಲ್ಲಿ ಭೂಕುಸಿತ| ಸುಬ್ರಹ್ಮಣ್ಯ ರೋಡ್ – ಹಾಸನ ಮಾರ್ಗದಲ್ಲಿ ರೈಲು ಸಂಚಾರ ಬಂದ್| ಹಲವು ರೈಲುಗಳ ಮಾರ್ಗ ಬದಲಾವಣೆ Read More »

ಭಾರೀ ಮಳೆಗೆ ಗುಡ್ಡ ಕುಸಿತ| ಶಿರಾಡಿ‌ಘಾಟ್ ಫುಲ್ ಬಂದ್

ಸಮಗ್ರ ನ್ಯೂಸ್: ಮಲೆನಾಡು ಹಾಗೂ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸಕಲೇಶಪುರದ ಮಾರನಹಳ್ಳಿಯಿಂದ ಅಲ್ಲಲ್ಲಿ ಗುಡ್ ಕುಸಿತವಾಗಿದ್ದು, ರಸ್ತೆಗಳಿಗೆ ಮರಗಳು ಉರುಳಿವೆ ಎಂದು ಹೇಳಲಾಗಿದೆ. ಶಿರಾಡಿ‌ಘಾಟ್ ನ ಗಡಿ ಚಾಮುಂಡೇಶ್ವರಿ ದೇವಾಲಯದವರೆಗೂ ನೀರು ಬಂದಿದ್ದು, ರಸ್ತೆ ಸಂಚಾರ ಬಂದ್ ಆಗಿದೆ ಎಂದು ತಿಳಿದುಬಂದಿದೆ. ಮಾರನಹಳ್ಳಿಯಿಂದ ಗುಂಡ್ಯದವರೆಗೆ ಘಾಟ್ ರಸ್ತೆಯಲ್ಲಿ ಎಂಟು ಕಡೆ ಮರಗಳು ಧರೆಗುರುಳಿದ್ದು, ರಾತ್ರಿ ಸಂಚಾರ ಮಾಡದೇ ಇರುವುದು ಉತ್ತಮವೆಂದು

ಭಾರೀ ಮಳೆಗೆ ಗುಡ್ಡ ಕುಸಿತ| ಶಿರಾಡಿ‌ಘಾಟ್ ಫುಲ್ ಬಂದ್ Read More »

ಧರ್ಮಸ್ಥಳ: ಅನಿಯಂತ್ರಿತ ಅಗೆಯುವಿಕೆಯಿಂದ ಸಾಕ್ಷ್ಯ ನಾಶ| ಎಸ್ಐಟಿ ಗೆ ಹಿರಿಯ ವಿಜ್ಞಾನಿಯೊಬ್ಬರ ಸಲಹೆ

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ಕಾರ್ಯಾಚರಣೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಮಣ್ಣಿನ ವಿಜ್ಞಾನಿಗಳು, ಅನಿಯಂತ್ರಿತ ಅಗೆಯುವಿಕೆಯಿಂದ ಸಾಮೂಹಿಕ ಅಂತ್ಯಕ್ರಿಯೆಯ ಸಾಕ್ಷ್ಯ ನಾಶವಾಗಬಹುದು ಎಂದು ಎಸ್‌ಐಟಿಗೆ ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಭೌಗೋಳಿಕ ರಚನೆಯಿಂದಾಗಿ ಧರ್ಮಸ್ಥಳದಲ್ಲಿನ ಮಣ್ಣು ಮತ್ತು ನೆಲದಲ್ಲಿ ಹುದುಗಿದ ಮೂಳೆಗಳು ವರ್ಷಗಳು ಕಳೆದಂತೆ ಕರಗಿ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಬಯಸದ ಮಣ್ಣಿನ ವಿಜ್ಞಾನಿಯೊಬ್ಬರು ಧರ್ಮಸ್ಥಳದಲ್ಲಿ ಹುಡುಕಬೇಕಿರುವುದು ಮೂಳೆಗಳನ್ನಲ್ಲ. ಕಳೆಬರವೂ ಅಲ್ಲ. ಬದಲಾಗಿ ಮೂಳೆಯ

ಧರ್ಮಸ್ಥಳ: ಅನಿಯಂತ್ರಿತ ಅಗೆಯುವಿಕೆಯಿಂದ ಸಾಕ್ಷ್ಯ ನಾಶ| ಎಸ್ಐಟಿ ಗೆ ಹಿರಿಯ ವಿಜ್ಞಾನಿಯೊಬ್ಬರ ಸಲಹೆ Read More »

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ನೆಹರು ಮೈದಾನದಲ್ಲಿ ಧ್ವಜಾರೋಹಣ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಂಗಳೂರು ನೆಹರು ಮೈದಾನಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಧ್ವಜಾರೋಹಣ ನಡೆಸಿದರು. ಗೌರವ ವಂದನೆ ಸ್ವೀಕರಿಸಿದ ಬಳಿಕ ವಿವಿಧ ಪರೇಡ್ ತಂಡಗಳ ಪಥಸಂಚಲನ ವೀಕ್ಷಿಸಿದರು. ಬಳಿಕ‌ ಮಾತನಾಡಿದ ಅವರು, ಹಲವು ಸವಾಲುಗಳ ಮಧ್ಯೆ ದೇಶದ ಪ್ರಥಮ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಈ ದೇಶದ ವಿಕಾಸಕ್ಕೆ ಮಹತ್ತರ ಮುನ್ನುಡಿ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ನೆಹರು ಮೈದಾನದಲ್ಲಿ ಧ್ವಜಾರೋಹಣ Read More »

ಆ.16ರಿಂದ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಆಗಸ್ಟ್‌ 16ರಂದು ಕರಾವಳಿ ಜಿಲ್ಲೆಗಳು, ಬೆಳಗಾವಿ, ಬೀದರ್‌ ಸೇರಿ ಐದು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ,

ಆ.16ರಿಂದ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ Read More »

ಕೊಪ್ಪಳ: ತುಂಗಭದ್ರಾ ಡ್ಯಾಂ ನ ಏಳು ಗೇಟ್ ಗಳು ಶಿಥಿಲ – ಸಚಿವ ತಂಗಡಗಿ

ಸಮಗ್ರ ನ್ಯೂಸ್: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಏಳು ಗೇಟ್​ಗಳು ಬೆಂಡ್ ಆಗಿವೆ ಎಂದು ಡ್ಯಾಂ ಸೇಫ್ಟಿ ರೀವಿವ್ ಕಮೀಟಿ ವರದಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಗೇಟ್ ನಂಬರ್ 4, 11, 18, 20, 24, 27 ಹಾಗೂ 28ನೇ ಗೇಟ್​ ಸೇರಿದಂತೆ 7 ಗೇಟ್​ಗಳು ಬೆಂಡ್ ಆಗಿವೆ. ಇದರಲ್ಲಿ, 6 ಗೇಟ್​ಗಳನ್ನು ಮೇಲೆ ಎತ್ತಲು

ಕೊಪ್ಪಳ: ತುಂಗಭದ್ರಾ ಡ್ಯಾಂ ನ ಏಳು ಗೇಟ್ ಗಳು ಶಿಥಿಲ – ಸಚಿವ ತಂಗಡಗಿ Read More »