ಭಾರೀ ಮಳೆಗೆ ಗುಡ್ಡ ಕುಸಿತ| ಶಿರಾಡಿ‌ಘಾಟ್ ಫುಲ್ ಬಂದ್

ಸಮಗ್ರ ನ್ಯೂಸ್: ಮಲೆನಾಡು ಹಾಗೂ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

Ad Widget ... .. Ad Widget .

ಸಕಲೇಶಪುರದ ಮಾರನಹಳ್ಳಿಯಿಂದ ಅಲ್ಲಲ್ಲಿ ಗುಡ್ ಕುಸಿತವಾಗಿದ್ದು, ರಸ್ತೆಗಳಿಗೆ ಮರಗಳು ಉರುಳಿವೆ ಎಂದು ಹೇಳಲಾಗಿದೆ. ಶಿರಾಡಿ‌ಘಾಟ್ ನ ಗಡಿ ಚಾಮುಂಡೇಶ್ವರಿ ದೇವಾಲಯದವರೆಗೂ ನೀರು ಬಂದಿದ್ದು, ರಸ್ತೆ ಸಂಚಾರ ಬಂದ್ ಆಗಿದೆ ಎಂದು ತಿಳಿದುಬಂದಿದೆ.

Ad Widget

ಮಾರನಹಳ್ಳಿಯಿಂದ ಗುಂಡ್ಯದವರೆಗೆ ಘಾಟ್ ರಸ್ತೆಯಲ್ಲಿ ಎಂಟು ಕಡೆ ಮರಗಳು ಧರೆಗುರುಳಿದ್ದು, ರಾತ್ರಿ ಸಂಚಾರ ಮಾಡದೇ ಇರುವುದು ಉತ್ತಮವೆಂದು ಸ್ಥಳೀಯರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *