ರಾಜ್ಯ

ಕೋಮುಭಾವನೆ ಕೆರಳಿಸುವ ಫೋಸ್ಟ್ ಹಾಕಿದ್ದ ಸಂಬರಗಿ ವಿರುದ್ದ ಎಪ್ಐಆರ್

ಬೆಂಗಳೂರು: ಕೋಮುಭಾವನೆ ಕೆರಳಿಸುವಂತೆ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಂತ ಪ್ರಶಾಂತ್ ಸಂಬರಗಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿಯವರು ಡಿಕೆ ಶಿವಕುಮಾರ್ ಉರೂಪ್ ಡಿಕೆಎಸ್ ದೊಡ್ಡ ದೊಡ್ಡ ಬಂಡೆಗಳನ್ನೇ ಒಡೆದು ಹಾಕಿದವನಿಗೆ ಮತಾಂತರ ಕಾಯ್ದೆ ಹರಿಯೋದು ಕಷ್ಟವೇನಲ್ಲ ಬಿಡಿ ಎಂಬುದಾಗಿ ಕೋಮುಭಾವನೆ ಕೆರಳಿಸುವಂತ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಈ ಪ್ರಶಾಂತ ಸಂಬರಗಿಯವರ ಪೋಸ್ಟ್ ಗೆ ಅನೇಕರು ಆಕ್ಷೇಪ ಕೂಡ ವ್ಯಕ್ತ ಪಡಿಸಿದ್ದರು. ಈ ಪೋಸ್ಟ್ ಬಗ್ಗೆ ಇದೀಗ ಆಕ್ಷೇಪಿಸಿ ಹಾಗೂ […]

ಕೋಮುಭಾವನೆ ಕೆರಳಿಸುವ ಫೋಸ್ಟ್ ಹಾಕಿದ್ದ ಸಂಬರಗಿ ವಿರುದ್ದ ಎಪ್ಐಆರ್ Read More »

ಹೊಸವರ್ಷದಂದು ಅನಗತ್ಯವಾಗಿ ಓಡಾಡಿದರೆ ಕೇಸ್ – ಕಮಲ್ ಪಂತ್

ಬೆಂಗಳೂರು: ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಡಿ.28ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ 28ರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಕರ್ಫ್ಯೂ ಸಂದರ್ಭದಲ್ಲಿ ಯಾರೂ ಹೊರಗಡೆ ಅನಗತ್ಯವಾಗಿ ಓಡಾಟ ನಡೆಸುವಂತಿಲ್ಲ. ಎಲ್ಲೆಡೆ ನಾಕಾಬಂದಿ ಹಾಕಿ ನಿರ್ಬಂಧ ವಿಧಿಸಲಾಗುತ್ತಿದ್ದು, ಅನಗತ್ಯವಾಗಿ ಓಡಾಡಿದರೆ ಕೇಸ್ ಹಾಕಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್‌ಪಂತ್ ಹೇಳಿದ್ದಾರೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಹೊಸವರ್ಷದಂದು ಅನಗತ್ಯವಾಗಿ ಓಡಾಡಿದರೆ ಕೇಸ್ – ಕಮಲ್ ಪಂತ್ Read More »

ಮುರ್ಡೇಶ್ವರಕ್ಕೆ ಪತಿಯೊಂದಿಗೆ ಬಂದಿದ್ದ ನವ ವಿವಾಹಿತೆ ನಾಪತ್ತೆ!

ಮುರ್ಡೇಶ್ವರ: ಪತಿಯೊಂದಿಗೆ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಬಂದ ನವವಿವಾಹಿತೆ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನವವಿವಾಹಿತೆಯೊಬ್ಬಳು ಪತಿಯೊಂದಿಗೆ ಮುರ್ಡೇಶ್ವರಕ್ಕೆ ಬಂದಿದ್ದಳು. ಈ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ರೂಮ್ ನೋಡಲು ಪತಿ ಗೆಸ್ಟ್ ಹೌಸ್ ಗೆ ಹೋಗಿ ವಾಪಸ್ ಬಂದು ನೋಡಿದಾಗ ಪಾರ್ಕಿಂಗ್ ಸ್ಥಳದ ಕಟ್ಟೆ ಮೇಲೆ ಕುಳಿತಿದ್ದ ಮಹಿಳೆ ಕಾಣೆಯಾಗಿದ್ದಾಳೆ. ಗೋವಾದ ವಾಸ್ಕೋಡಗಾಮ ಬೈನಾದ ನಿವಾಸಿ ವಿದ್ಯಾ ಸಂದೀಪ ಹರಿಜನ ಕಾಣೆಯಾದ ಮಹಿಳೆ. ಎಷ್ಟು ಹುಡುಕಿದರೂ ಮಹಿಳೆ ಪತ್ತೆಯಾಗಿಲ್ಲ. ಹೀಗಾಗಿ

ಮುರ್ಡೇಶ್ವರಕ್ಕೆ ಪತಿಯೊಂದಿಗೆ ಬಂದಿದ್ದ ನವ ವಿವಾಹಿತೆ ನಾಪತ್ತೆ! Read More »

ರಾಜ್ಯದಲ್ಲಿ ನೈಟ್ ಕರ್ಪ್ಯೂ| ಹೊಸ‌ ಮಾರ್ಗಸೂಚಿಯ ನಿಯಮಗಳೇನು ಗೊತ್ತಾ?

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊರೋನಾ ಹಾಗೂ ಓಮಿಕ್ರಾನ್ ನಿಯಂತ್ರಣಕ್ಕೆ ತಡೆ ನೀಡೋ ಕಾರಣದಿಂದಾಗಿ ಡಿಸೆಂಬರ್ 28ರಿಂದ ಜಾರಿಗೆ ಬರುವಂತೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದಕ್ಕೆ ಅನುಮತಿ, ಯಾವುದಕ್ಕೆ ಇಲ್ಲ ಎಂಬ ಮಾಹಿತಿ ಇಲ್ಲಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಡಿ.28ರಿಂದ ಜ.07ರವರೆಗೆ ರಾಜ್ಯಾದ್ಯಂತ ನೈಟ್ ಕರ್ಪ್ಯೂವನ್ನು ಜಾರಿಗೊಳಿಸಲಾಗಿದೆ. ಹೊಸ ವರ್ಷದ ದಿನಗಳಾದ‌ ಡಿ.30,31 ಮತ್ತು ಜ.01ರಂದು ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಪಬ್ ಗಳಲ್ಲಿ

ರಾಜ್ಯದಲ್ಲಿ ನೈಟ್ ಕರ್ಪ್ಯೂ| ಹೊಸ‌ ಮಾರ್ಗಸೂಚಿಯ ನಿಯಮಗಳೇನು ಗೊತ್ತಾ? Read More »

ರಾಜ್ಯದಲ್ಲಿ ಡಿ.28 ರಿಂದ ನೈಟ್ ಕರ್ಪ್ಯೂ| ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್|

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಿ ಭಾನುವಾರ ಸರಕಾರ ಆದೇಶ ಹೊರಡಿಸಿದೆ. ಸಚಿವ ಡಾ. ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಡಿ. 28 ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ 10 ದಿನ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಕೋವಿಡ್ ಮತ್ತು ಒಮಿ ಕ್ರಾನ್ ಆತಂಕದ ಹಿನ್ನಲೆ ಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಡಿ.28 ರಿಂದ ನೈಟ್ ಕರ್ಪ್ಯೂ| ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್| Read More »

ಕರ್ನಾಟಕದಲ್ಲಿ ನೈಟ್ ಕರ್ಪ್ಯೂ! ನಾಳೆ ಮಹತ್ವದ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಿಧಾನಗತಿಯಲ್ಲಿ ಕೋವಿಡ್ ಸೋಂಕಿನ ಜೊತೆಗೆ ಓಮೈಕ್ರಾನ್ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮಧ್ಯಪ್ರದೇಶದಲ್ಲಿ ಒಂದೇ ಒಂದು ಪ್ರಕರಣಗಳು ದಾಖಲಾಗದಿದ್ದರೂ ಅಲ್ಲಿನ ಸರ್ಕಾರ ಮೂರು ದಿನಗಳ ಹಿಂದೆಯೇ ನೈಟ್ ಕಫ್ರ್ಯೂನ್ನು ಆದೇಶ ಹೊರಡಿಸಿದೆ. ಇದೀಗ ರಾಜ್ಯದಲ್ಲೂ ನಿನ್ನೆ 400ಕ್ಕೂ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ಜೊತೆಗೆ ಓಮೈಕ್ರಾನ್ ಹೆಚ್ಚಾಗುತ್ತಿರುವ ಕಾರಣ ಈಗಿರುವ ನಿಬಂಧನೆಗಳ ಜೊತೆಗೆ ಬಿಗಿಯಾದ ಕ್ರಮಗಳನ್ನು ಜಾರಿಗೊಳಿಸಲು ತೀರ್ಮಾನಿಸಿದೆ.ನಾಳೆ

ಕರ್ನಾಟಕದಲ್ಲಿ ನೈಟ್ ಕರ್ಪ್ಯೂ! ನಾಳೆ ಮಹತ್ವದ ನಿರ್ಧಾರ Read More »

ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ

ಬೆಳಗಾವಿ: ಕರ್ನಾಟಕದ ವಿಧಾನಸಭಾ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದು, ಅದರ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ.

ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ Read More »

ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ‘ಪುಟ್ಟಕ್ಕನ ಮಕ್ಕಳು’| ವಾರದಲ್ಲೇ ಭರ್ಜರಿ ಟಿಆರ್ ಪಿ|

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಅಪಾರ​ ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ​ ಗಿಟ್ಟಿಸಿಕೊಂಡಿರುವ ಟಿಆರ್​ಪಿ ಕಂಡು ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಹಿರಿಯ ನಟಿ ಉಮಾಶ್ರಿ ನಟಿಸಿರುವ ಹೊಸ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’ ಪ್ರಸಾರ ಆರಂಭಿಸಿರುವ ಈ ಧಾರಾವಾಹಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಟಿಆರ್​ಪಿ ವಿಚಾರದಲ್ಲಿ ಈ ಸೀರಿಯಲ್​ ದಾಖಲೆ ಬರೆದಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಬೇರೆ ಯಾವುದೇ ಧಾರಾವಾಹಿ ಪಡೆದುಕೊಳ್ಳದಷ್ಟು ಗ್ರ್ಯಾಂಡ್​ ಓಪನಿಂಗ್​ ಅನ್ನು ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ ಪಡೆದುಕೊಂಡಿದೆ.

ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ‘ಪುಟ್ಟಕ್ಕನ ಮಕ್ಕಳು’| ವಾರದಲ್ಲೇ ಭರ್ಜರಿ ಟಿಆರ್ ಪಿ| Read More »

ಬೆಳ್ತಂಗಡಿ: ನಮಾಜ್ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು

ಬೆಳ್ತಂಗಡಿ : ಯುವಕನೊರ್ವ ಇದ್ದಕ್ಕಿದ್ದಂತೆ ತನ್ನ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳ್ತಂಗಡಿಯ ಜಾರಿಗೆ ಬೈಲ್ ನಲ್ಲಿ ನಡೆದಿದೆ. ಮೃತಪಟ್ಟ ಯುವಕ ಶಾಕಿರ್(24) ಎಂದು ತಿಳಿದು ಬಂದಿದೆ. ಎಂದಿನಂತೆ ಬೆಳಿಗ್ಗೆ ನಮಾಝ್ ಮಾಡಲು ಜಾರಿಗೆ ಬೈಲ್ ಮಸೀದಿಗೆ ತೆರಳಿದ್ದರು. ಮಸೀದಿಯಿಂದ ಬಂದ ಯುವಕ ತಾಯಿ ಬಳಿ ಸ್ವಲ್ಪ ಎದೆನೋವು ಇದೆ ಎಂದು ಹೇಳಿಕೊಂಡಿದ್ದರು. ತಾಯಿಯಲ್ಲಿ ನೋವಿನ ಬಗ್ಗೆ ತಿಳಿಸಿ ಒಂದಷ್ಟು ನಿಮಿಷಗಳ ಬಳಿಕ ದಿಢೀರ್ ಆಗಿ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ: ನಮಾಜ್ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು Read More »

ಕರ್ನಾಟಕದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ| ಡಿ.31 ಕ್ಕೆ “ಕರ್ನಾಟಕ ಬಂದ್”

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡಿಗರು, ಕನ್ನಡ ನಾಡಿನ ಆಸ್ತಿಪಾಸ್ತಿ ಮೇಲೆ ಎಂಇಎಸ್ ದಬ್ಬಾಳಿಕೆ ಹಾಗೂ ಖಂಡಿಸಿ, ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧ ಮಾಡಬೇಕೆಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಹೊಸ ವರ್ಷ ಮುನ್ನಾದಿನ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್: ಕರ್ನಾಟಕ, ಕನ್ನಡ ನಾಡು ನುಡಿಯ ಒಗ್ಗಟ್ಟಿಗೆ ಕನ್ನಡಿಗರು ಈ ಸಂದರ್ಭದಲ್ಲಿ ಒಟ್ಟಾಗಿ ಶಕ್ತಿಯನ್ನು ಪ್ರದರ್ಶಿಸಬೇಕು. 25ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಕನ್ನಡಿಗರೆಲ್ಲರೂ ನಮಗೆ ಬೆಂಬಲ ನೀಡಬೇಕು.

ಕರ್ನಾಟಕದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ| ಡಿ.31 ಕ್ಕೆ “ಕರ್ನಾಟಕ ಬಂದ್” Read More »