ಮತಾಂತರ ನಿಷೇಧ ವಿಧೇಯಕ ಚರ್ಚೆ ಹಿನ್ನೆಲೆ| ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಸ್ಪೀಕರ್ ಕಾಗೇರಿ|
ಬೆಳಗಾವಿ : ಇಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಮೇಲೆ ಚರ್ಚೆ ಹಿನ್ನೆಲೆಯಲ್ಲಿ ಸುವರ್ಣ ಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇಂದು ಮತಾಂತರ ನಿಷೇಧ ವಿಧೇಯಕದ ಮೇಲೆ ಚರ್ಚೆ ಹಿನ್ನೆಲೆಯಲ್ಲಿ ಸುವರ್ಣಸೌಧಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಸುವರ್ಣಸೌಧದ ಒಳಗೆ ಬಿಡದಂತೆ ಸ್ಪೀಕರ್ ಕಾಗೇರಿ ಸೂಚನೆ ನೀಡಿದ್ದಾರೆ. ಸುವರ್ಣಸೌಧದ ಒಳಗೆ ಯಾವುದೇ ಗೇಟ್ ಗಳಿಂದಲೂ ಮಾಧ್ಯಮ ಪ್ರತಿನಿಧಿಗಳನ್ನು ಬಿಡದಂತೆ ಮಾರ್ಷೆಲ್ ಗಳಿಗೆ ಸ್ಪೀಕರ್ ಕಾಗೇರಿ ಅವರು ಸೂಚನೆ ನೀಡಿದ್ದಾರೆ.
ಮತಾಂತರ ನಿಷೇಧ ವಿಧೇಯಕ ಚರ್ಚೆ ಹಿನ್ನೆಲೆ| ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಸ್ಪೀಕರ್ ಕಾಗೇರಿ| Read More »









