ರಾಜ್ಯದಲ್ಲಿ ಮತ್ತೊಂದು ಹೇಯ ಕೃತ್ಯ| ಟಿವಿ ತೋರಿಸುವ ನೆಪದಲ್ಲಿ 3 ವರ್ಷದ ಕಂದಮ್ಮನ ಅತ್ಯಾಚಾರ|

Ad Widget ... ..

ಶಿವಮೊಗ್ಗ: 3 ವರ್ಷದ ಕಂದಮ್ಮನ ಮೇಲೆ ಪಕ್ಕದ ಮನೆಯ ಯುವಕನೇ ಅತ್ಯಾಚಾರವೆಸಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.

Ad Widget

ಮಗುವಿಗೆ ಟಿವಿ ತೋರಿಸುವ ಆಮಿಷವೊಡ್ಡಿ ಕರೆದೊಯ್ದ ನೆರೆಮನೆ ಯುವಕ ಬಳಿಕ ನೀಚ ಕೃತ್ಯವೆಸಗಿದ್ದಾನೆ. ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಪೋಷಕರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೃತ್ಯದ ಬಗ್ಗೆ ಗೊತ್ತಾಗಿದೆ.

ಆರೋಪಿ ಯುವಕನನ್ನು ಹಿಡಿದು ಪೋಷಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *