ರಾಜ್ಯ

ಡಿ.31ರ ಕರ್ನಾಟಕ ‌ಬಂದ್ ರದ್ದು| ಮತ್ತೊಂದು ದಿನ ನಿಗದಿಗೊಳಿಸಿದ ವಾಟಾಳ್ ನಾಗರಾಜ್| ಸಿಎಂ ಮನವೊಲಿಕೆ ಯಶಸ್ವಿ|

ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ವಾಪಸ್ ಪಡೆದಿದ್ದಾರೆ. ಬದಲಿಗೆ ಮತ್ತೊಂದು ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ. ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ನಾಳೆ ಅಂದ್ರೆ ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ವಾಟಾಳ್ ನಾಗರಾಜ್ ಬಂದ್ ವಾಪಸ್ ಪಡೆದುಕೊಂಡಿದ್ದು, ಜನವರಿ 22ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ವಾಟಾಳ್ ಸಿಎಂ ಭೇಟಿ ಬಳಿಕೆ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು. ಕರ್ನಾಟಕ […]

ಡಿ.31ರ ಕರ್ನಾಟಕ ‌ಬಂದ್ ರದ್ದು| ಮತ್ತೊಂದು ದಿನ ನಿಗದಿಗೊಳಿಸಿದ ವಾಟಾಳ್ ನಾಗರಾಜ್| ಸಿಎಂ ಮನವೊಲಿಕೆ ಯಶಸ್ವಿ| Read More »

ದ.ಕ ಜಿಲ್ಲೆಯಲ್ಲಿ ಜ.3ರಿಂದ ಮಕ್ಕಳಿಗೆ ಕೋವಿಡ್ ಲಸಿಕೆ – ಡಿ.ಸಿ ಡಾ| ರಾಜೇಂದ್ರ ಕೆ.ವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ 1,01,549 ಮಕ್ಕಳಿದ್ದು ಅವರಿಗೆ ಜ. 3ರಿಂದ ಕೋವಿಡ್‌ ಲಸಿಕೆ ನೀಡಲು ಪಟ್ಟಿ ಸಿದ್ಧಪಡಿಸಿ ಶಿಬಿರ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಜಿಲ್ಲಾ ಆರೋಗ್ಯ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಕೋವ್ಯಾಕ್ಸಿನ್‌ ಮಾತ್ರ ನೀಡಲಾಗುವುದು. ಆಯಾ ಶಾಲೆ-ಕಾಲೇಜುಗಳಲ್ಲಿ ಸ್ಥಳೀಯ ಪ್ರಾ.ಆ.ಕೇಂದ್ರದ ಲಸಿಕಾ ತಂಡದ ಮೂಲಕ ಲಸಿಕೆ ನೀಡಲು ಸಿದ್ಧತೆ

ದ.ಕ ಜಿಲ್ಲೆಯಲ್ಲಿ ಜ.3ರಿಂದ ಮಕ್ಕಳಿಗೆ ಕೋವಿಡ್ ಲಸಿಕೆ – ಡಿ.ಸಿ ಡಾ| ರಾಜೇಂದ್ರ ಕೆ.ವಿ Read More »

ದೇಗುಲಗಳಿನ್ನು ಸರ್ಕಾರಿ ಕಾನೂನುಗಳಿಂದ ಮುಕ್ತ| ಹೊಸ ಧಾರ್ಮಿಕ ‌ಕಾನೂನು ಜಾರಿಗೆ ಚಿಂತನೆ|

ಹುಬ್ಬಳ್ಳಿ : ವಿವಾದಾಸ್ಪದ ಮತಾಂತರ ವಿರೋಧಿ ಮಸೂದೆಯ ನಂತರ ರಾಜ್ಯ ಸರ್ಕಾರ ಈಗ ಧಾರ್ಮಿಕ ಸ್ಪರ್ಶ ಹೊಂದಿರುವ ಮತ್ತೊಂದು ಕಾನೂನನ್ನ ತರಲು ಯೋಜಿಸುತ್ತಿದೆ. ಈ ಬಾರಿ ಹಿಂದೂ ದೇವಾಲಯಗಳನ್ನು ಸರ್ಕಾರಿ ಕಾನೂನುಗಳಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಮ್ಮ ಸರ್ಕಾರವು ಹಿಂದೂ ದೇವಾಲಯಗಳನ್ನು ಕಾನೂನುಗಳು ಮತ್ತು ನಿಯಮಗಳಿಂದ ಮುಕ್ತಗೊಳಿಸಲಿದ್ದು, ದೇವಾಲಯದ ಆಡಳಿತ ಮಂಡಳಿಗಳು ತಮ್ಮ ಆದಾಯವನ್ನ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುಮತಿ ಪಡೆಯುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಿಎಂ ಬೊಮಾಯಿ

ದೇಗುಲಗಳಿನ್ನು ಸರ್ಕಾರಿ ಕಾನೂನುಗಳಿಂದ ಮುಕ್ತ| ಹೊಸ ಧಾರ್ಮಿಕ ‌ಕಾನೂನು ಜಾರಿಗೆ ಚಿಂತನೆ| Read More »

ಕರ್ನಾಟಕ ಬಂದ್‌ನ ದಿನಾಂಕವನ್ನು ಮುಂದೂಡಲು ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ವಾಟಳ್ ನಾಗರಾಜ್‌ಗೆ ಮನವಿ

ಬೆಂಗಳೂರು: ಕನ್ನಡ ಧ್ವಜಕ್ಕೆ, ನಾಡು-ನುಡಿಯನ್ನು ಅವಮಾನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಡಿ.31 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಆದರೆ ಬಂದ್‌ನ ದಿನಾಂಕವನ್ನು ಮುಂದೂಡಲು ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ವಾಟಳ್ ನಾಗರಾಜ್‌ಗೆ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮನವಿ ಪತ್ರ ಸಲ್ಲಿಸಿದ್ದಾರೆ. ಪತ್ರದಲ್ಲಿ ಏನಿದೆ?: ಕನ್ನಡದ, ಕನ್ನಡಿಗರ, ಕನ್ನಡಪರ ಹೋರಾಟಗಾರರ ಪ್ರಶ್ನಾತೀತ ನಾಯಕರೇ, ತಮ್ಮಲ್ಲಿ ವಿನಮ್ರತೆಯಿಂದ ನಿವೇದಿಸಿಕೊಳ್ಳುವುದೇನೆಂದರೆ ಡಿ.22 ರಂದು ನಾವೆಲ್ಲರೂ

ಕರ್ನಾಟಕ ಬಂದ್‌ನ ದಿನಾಂಕವನ್ನು ಮುಂದೂಡಲು ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ವಾಟಳ್ ನಾಗರಾಜ್‌ಗೆ ಮನವಿ Read More »

ಸೋಮವಾರಪೇಟೆಯಲ್ಲಿ ರೈತರ ಪ್ರತಿಭಟನೆ

ಸೋಮವಾರಪೇಟೆ:- ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪಟ್ಟಣದಲ್ಲಿ ಜಿಲ್ಲಾ ರೈತಸಂಘ ಪ್ರತಿಭಟನೆ ನಡೆಸಿದರು.ಕಳೆದ 17 ದಿನಗಳಿಂದ ಇಲ್ಲಿನ ಜೆ.ಸಿ.ವೇದಿಕೆಯಲ್ಲಿ ನಿರಂತರ ಧರಣಿ ನಡೆಸುತ್ತಿದ್ಫು ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಆದರೆ ರೈತರ ಬೇಡಿಕೆಗಳಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನಸೆಳೆಯುವಲ್ಲಿ ವಿಫಲರಾಗಿದ್ದಾರೆ,ರಾಜ್ಯ ಸರ್ಕಾರ ಕೊಡಗುರೈತರ ಬೇಡಿಕೆಗೆ ಸ್ಪಂದಿಸಿಲವೆಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಮನುಸೋಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. 17 ದಿನಗಳ ಧರಣಿ ಅಂತಿಮಗೊಳಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಪಟ್ಟಣದ ಬಸವೇಶ್ವರ ಪ್ರತಿಮೆ ಬಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ

ಸೋಮವಾರಪೇಟೆಯಲ್ಲಿ ರೈತರ ಪ್ರತಿಭಟನೆ Read More »

ಕೇಂದ್ರ ಸರ್ಕಾರದಿಂದ ಸರ್ಕಾರಿ ಇ ಕಾಮರ್ಸ್ ಶೀಘ್ರ ಲೋಕಾರ್ಪಣೆ| ಅಮೆಜಾನ್, ಪ್ಲಿಪ್ ಕಾರ್ಟ್ ಗೆ ಪೈಪೋಟಿ|

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಓಪನ್ ನೆಟ್​ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್​ಡಿಸಿ) ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಇದು ಯುಪಿಐಗೆ ಸರಿಸಮವಾದ ವಾಣಿಜ್ಯ ವಹಿವಾಟಿನ ವೇದಿಕೆಯಾಗಿ ರೂಪುಗೊಳ್ಳಲಿದೆ. ಈ ವೇದಿಕೆ ಅಮೆಜಾನ್, ಫ್ಲಿಪ್​ಕಾರ್ಟ್​ಗೆ ಪೈಪೋಟಿ ನೀಡಲಿದೆ. ಸದ್ಯ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿದ್ದು, 12 ಕಂಪನಿಗಳು ಇದರಲ್ಲಿ ಖಚಿತ ಪಾಲುದಾರರಾಗಿ ಸೇರಿಕೊಂಡಿವೆ. ಇವುಗಳು ಒಟ್ಟಾಗಿ 185 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ. ಈ ಪ್ಲಾಟ್​ಫಾರಂ ಅನ್ನು ಕಂಪನಿ ಕಾಯ್ದೆಯ ಪ್ರಕಾರ ಲಾಭದ ಉದ್ದೇಶವಿಲ್ಲದ ಕಂಪನಿ ಎಂದು ನೋಂದಣಿ ಮಾಡಿಸಲಾಗುವುದು

ಕೇಂದ್ರ ಸರ್ಕಾರದಿಂದ ಸರ್ಕಾರಿ ಇ ಕಾಮರ್ಸ್ ಶೀಘ್ರ ಲೋಕಾರ್ಪಣೆ| ಅಮೆಜಾನ್, ಪ್ಲಿಪ್ ಕಾರ್ಟ್ ಗೆ ಪೈಪೋಟಿ| Read More »

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ವೇಳೆ ಕಳಚಿ‌ ಬಿದ್ದ ಧ್ವಜ|

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಡೆದ ಧ್ವಜಾರೋಹಣದ ವೇಳೆ ಕಾಂಗ್ರೆಸ್ ಬಾವುಟ ಕೆಳಗೆ ಬಿದ್ದಿದ್ದು, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಡಿದಿದ್ದಾರೆ. ಮಂಗಳವಾರ ದೆಹಲಿಯ ಕಾಂಗ್ರೆಸ್ ಕಚೇರಿ ಮುಂದೆ 137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಈ ಎಡವಟ್ಟು ಸಂಭವಿಸಿದ್ದು, ನೆಲಕ್ಕೆ ಬೀಳದಂತೆ ಸೋನಿಯಾ ಗಾಂಧಿ ಬಾವುಟವನ್ನು ಹಿಡಿದಿದ್ದಾರೆ. ಘಟನೆ ಬೆನ್ನಲ್ಲೇ ಎಚ್ಚೆತ್ತ ಕಾರ್ಯಕರ್ತರು ಬಾವುಟವನ್ನು ಸರಿಪಡಿಸಿ ಮತ್ತೊಮ್ಮೆ ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಿದರು. ಭಾರತದ ತ್ರಿವರ್ಣ ಧ್ವಜವನ್ನು ಹೋಲುವ ರೀತಿ ಇರುವ ಕಾಂಗ್ರೆಸ್

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ವೇಳೆ ಕಳಚಿ‌ ಬಿದ್ದ ಧ್ವಜ| Read More »

ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ| ಕಠಿಣ ಕ್ರಮಕ್ಕೆ ಗೃಹ ಇಲಾಖೆ ಸಿದ್ದತೆ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಕ್ಕಾಗಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ರಾಜ್ಯಾದ್ಯಂತ ಇಂದಿನಿಂದ 10 ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇಂದು ಡಿಸಿಪಿಗಳ ಜೊತೆಗೆ ಬೆಂಗಳೂರು ಪೊಲೀಸರು ಆಯುಕ್ತ ಗೌರವ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ನೈಟ್ ಕರ್ಪ್ಯೂ ಜಾರಿ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ.

ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ| ಕಠಿಣ ಕ್ರಮಕ್ಕೆ ಗೃಹ ಇಲಾಖೆ ಸಿದ್ದತೆ Read More »

ನೈಟ್ ಕರ್ಪ್ಯೂ: ಯಕ್ಷಗಾನ, ಕಂಬಳ ಸೇರಿದಂತೆ ರಾತ್ರಿ 10ರಿಂದ ಎಲ್ಲವೂ ಬಂದ್ – ದ.ಕ ಡಿಸಿ ಆದೇಶ

ಮಂಗಳೂರು: ಓಮಿಕ್ರಾನ್ ಆತಂಕದ ಹಿನ್ನಲೆ ನಾಳೆಯಿಂದ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಜಾರಿಗೊಳಿಸಿರುವ ರಾಜ್ಯ ಸರಕಾರದ ಆದೇಶ ಕರಾವಳಿಯಲ್ಲಿ ನಡೆಯುವ ಯಕ್ಷಗಾನ ಹಾಗೂ ಕಂಬಳಕ್ಕೂ ಅನ್ವಯಿಸಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ನೈಟ್‌ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು. ಕಂಬಳ, ಯಕ್ಷಗಾನ ಸೇರಿದಂತೆ ರಾತ್ರಿ ನಡೆಯುವಂತಹ ಕಾರ್ಯಕ್ರಮಗಳನ್ನು 10 ಗಂಟೆಯೊಳಗೆ ಮುಗಿಸಬೇಕು, ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ. ರಾತ್ರಿ ವೇಳೆ ನಡೆಯುವಂತಹ ಯಕ್ಷಗಾನ, ಕಂಬಳಗಳನ್ನು

ನೈಟ್ ಕರ್ಪ್ಯೂ: ಯಕ್ಷಗಾನ, ಕಂಬಳ ಸೇರಿದಂತೆ ರಾತ್ರಿ 10ರಿಂದ ಎಲ್ಲವೂ ಬಂದ್ – ದ.ಕ ಡಿಸಿ ಆದೇಶ Read More »

ಬಿಸಿಯೂಟ ಸೇವಿಸಿದ 89 ಮಕ್ಕಳು ಅಸ್ವಸ್ಥ

ಹಾವೇರಿ: ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ ವಾಂತಿ, ಬೇಧಿ ಕಾಣಿಸಿಕೊಂಡು ಅಸ್ವಸ್ಥರಾಗಿ 89 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದಲ್ಲಿ ನಡೆದಿದೆ. ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದವು. ಊಟ ಸೇವಿಸಿದ ನಂತರ 89ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ, ಬೇಧಿ ಕಾಣಿಸಿಕೊಂಡು, ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದು ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಶಾಲಾ ಶಿಕ್ಷಕರು ಮಕ್ಕಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ತಾಲೂಕು ಆಸ್ಪತ್ರೆಗೆ ಡಿಡಿಪಿಐ ಅಂದಾನಪ್ಪ

ಬಿಸಿಯೂಟ ಸೇವಿಸಿದ 89 ಮಕ್ಕಳು ಅಸ್ವಸ್ಥ Read More »