ಬಿಡದಿಯವರೆಗೆ ರೈಲು/ ಸಮಗ್ರ ಯೋಜನಾ ವರದಿಗೆ ಸಿದ್ಧತೆ
ಸಮಗ್ರ ನ್ಯೂಸ್: ಬೆಂಗಳೂರಿನ ಬಿಡದಿಯವರೆಗೆ ನೇರಳೆ ಮಾರ್ಗ ಮೆಟ್ರೋ ರೈಲು ವಿಸ್ತರಣೆ ಮಾಡುವ ವಿಚಾರವಾಗಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಬಿಡದಿ ಪ್ರದೇಶದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಮಾಡುತ್ತಿದ್ದು, ಅವರ ಪ್ರಯಾಣಕ್ಕೆ ಅನುಕೂಲವಾಗಲಿ ಎಂಬ ಆಲೋಚನೆಯಿಂದ ಮೆಟ್ರೋ ವಿಸ್ತರಣೆಯ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಬಿಡದಿ ಪ್ರಾಧಿಕಾರ ರದ್ದು ಮಾಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಬದಲಾಯಿಸಲು ಆದೇಶ ನೀಡಲಾಗಿದೆ ಎಂದು ಅವರು ಹೇಳಿದರು.
ಬಿಡದಿಯವರೆಗೆ ರೈಲು/ ಸಮಗ್ರ ಯೋಜನಾ ವರದಿಗೆ ಸಿದ್ಧತೆ Read More »










