ರಾಜ್ಯ

ಹಾಸನ: ಎಸಿ‌ ಗೆ ಹೊಡೆದ ಡಿ.ಸಿ; ಕಾರಣ!?

ಸಮಗ್ರ ನ್ಯೂಸ್: ಹಾಸನಾಂಬೆ ದೇಗುಲದಲ್ಲಿ 9ನೇ ದಿನವಾದ ಇಂದು ಜನಸಾಗರವೇ ಹರಿದು ಬಂದಿದ್ದು, ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಕಾಯುತ್ತಿದ್ದ ಭಕ್ತರು ಸಹನೆ ಕಳೆದುಕೊಂಡು ಪೊಲೀಸರನ್ನೇ ತಳ್ಳಿ ಒಳ ನುಗ್ಗಿದ್ದಾರೆ. ಲಕ್ಷಾಂತರ ಭಕ್ತರು ದೇವಾಲಯಕ್ಕೆ ಹರಿದು ಬಂದಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲೀಸರು, ಜಿಲ್ಲಾಡಳಿತ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಮಧ್ಯಾಹ್ನವಾದರೂ ದೇವಾಲಯದ ಮುಖ್ಯದ್ವಾರವನ್ನೂ ಪ್ರವೇಶಿಸಲಾಗದೇ ಭಕ್ತರು ಸಾಲಿನಲ್ಲಿಯೇ ನಿಂತು ನಿಂತು ಸುಸ್ತಾಗಿದ್ದಾರೆ. ಈ ವೇಳೆ ಶಾಸಕ ಮಂಜು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದು, ಶಾಸಕರ ಕುಟುಂಬ ಎಂದು ಪೊಲೀಸರು

ಹಾಸನ: ಎಸಿ‌ ಗೆ ಹೊಡೆದ ಡಿ.ಸಿ; ಕಾರಣ!? Read More »

ಬೆಂಗಳೂರು: ‘ಸಮಗ್ರ ಸಮಾಚಾರ’ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಿದ ಜೋಗಿ

ಸಮಗ್ರ ನ್ಯೂಸ್: ಸಮಗ್ರ ಸಮಾಚಾರ.ಕಾಂ ನ ಪ್ರಥಮ ದೀಪಾವಳಿ ವಿಶೇಷ ಸಂಚಿಕೆಯನ್ನು ಬೆಂಗಳೂರಿನ ಸಾವಣ್ಣ ಪ್ರಕಾಶನ ಆವರಣದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಗಿರೀಶ್ ರಾವ್ ಹತ್ವಾರ್(ಜೋಗಿ) ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಯುವ ಸಾಹಿತಿ ಮತ್ತು ಕಾದಂಬರಿಕಾರ ಸಂಪತ್ ಸಿರಿಮನೆ, ಸಮಗ್ರ ಸಮಾಚಾರ ಮುಖ್ಯಸ್ಥ ಜಯದೀಪ್ ಕುದ್ಕುಳಿ, ಸಂಪಾದಕ ಪ್ರಸಾದ್ ಕೋಲ್ಚಾರ್, ಸಂಚಿಕೆ ನಿರ್ವಾಹಕ ಕೀರ್ತನ್ ಕುಕ್ಕುಡೇಲು, ಸಿಬ್ಬಂದಿಗಳಾದ ಅನನ್ಯ ಕಾಟೂರು, ಧನ್ಯಶ್ರೀ ಅಮ್ಮುಂಜ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜೋಗಿಯವರು, ಪುಟ್ಟ

ಬೆಂಗಳೂರು: ‘ಸಮಗ್ರ ಸಮಾಚಾರ’ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಿದ ಜೋಗಿ Read More »

ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದು ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ಹಸೀನಾ ಅವರ ಮಕ್ಕಳಾದ ಅಫ್ನಾನ್(23), ಅಯ್ನಾಝ್ (21), ಅಸೀಮ್(14) ಎಂದು ಗುರುತಿಸಲಾಗಿದೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿ ಬಂದು ಈ ಕೃತ್ಯ ಎಸಗಿರುವ ಮಾಹಿತಿ ಲಭ್ಯವಾಗಿದೆ. ಅನುಮಾಸ್ಪದ ವ್ಯಕ್ತಿ ಬೋಳು ತಲೆಯವನಾಗಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಜಿಲ್ಲಾ

ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದು ಬರ್ಬರ ಹತ್ಯೆ Read More »

ಮೆಟ್ರೋದಲ್ಲಿ ಸಾಮಾನ್ಯನಂತೆ ಪ್ರಯಾಣಿಸಿದ ಸಚಿವ ಕೃಷ್ಣ ಬೈರೇಗೌಡ| ಪಕ್ಕದಲ್ಲೇ‌ ಕುಳಿತಿದ್ರೂ ಗುರುತೇ ಹಿಡಿಯದ ಪ್ರಯಾಣಿಕರು

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ಇಲಾಖೆಯಾದ ಕಂದಾಯ ಇಲಾಖೆ ಸಚಿವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡಿದರೂ ಮೆಟ್ರೋ ಪ್ರಯಾಣಿಕರು ಇವರನ್ನು ಗುರುತೇ ಹಿಡಿಯದ ಪ್ರಸಂಗ ನಡೆದಿದೆ. ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ಟ್ರಾಫಿಕ್‌ ರಹಿತ ಸಂಚಾರಕ್ಕೆ ಭಾರಿ ದೊಡ್ಡ ಪ್ರಮಾಣದ ಅನುಕೂಲವನ್ನು ಕಲ್ಪಿಸಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಶೇ.30ಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಬೆಂಗಳೂರಿಗರ ಆಗಮಿಸುವ ಶೇ.20 ಪ್ರಯಾಣಿಕರು ಮೆಟ್ರೋ ಪ್ರಯಾಣವನ್ನು ಮಾಡುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಸಿನಿಮಾ, ರಾಜಕೀಯ, ಐಟಿ-ಬಿಟಿ ಉದ್ಯಮಿಗಳು ಕೂಡ ಮೆಟ್ರೋ

ಮೆಟ್ರೋದಲ್ಲಿ ಸಾಮಾನ್ಯನಂತೆ ಪ್ರಯಾಣಿಸಿದ ಸಚಿವ ಕೃಷ್ಣ ಬೈರೇಗೌಡ| ಪಕ್ಕದಲ್ಲೇ‌ ಕುಳಿತಿದ್ರೂ ಗುರುತೇ ಹಿಡಿಯದ ಪ್ರಯಾಣಿಕರು Read More »

ಅನಂತಪುರ ದೇವಸ್ಥಾನದ ಕೆರೆಯಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷ; ಭಕ್ತರಲ್ಲಿ‌ ಸಂತಸ

ಸಮಗ್ರ ನ್ಯೂಸ್: ಅನಂತಪುರ ದೇವಸ್ಥಾನದ ಕೆರೆಯಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ಹಲವು ವರ್ಷಗಳಿಂದ ಕೆರೆಯಲ್ಲಿದ್ದ ಬಬಿಯಾ ಎಂಬ ಮೊಸಳೆ ಕಳೆದ ವರ್ಷ ಮೃತ ಪಟ್ಟಿತ್ತು. ಇದೀಗ ಮತ್ತೊಂದು ಮೊಸಳೆ ಕಾಣಿಸಿಕೊಂಡಿರುವುದರಿಂದ ಭಕ್ತರಲ್ಲಿ ಸಂತಸ ಮೂಡಿದೆ. ಕೇರಳದ ಕಾಸರಗೋಡಿನ ಅನಂತಪುರ ದೇವಸ್ಥಾನದ ಕೆರೆಯಲ್ಲಿ ಹಲವು ವರ್ಷಗಳ ಕಾಲ ಮೊಸಳೆ ವಾಸವಾಗಿತ್ತು. ಅದನ್ನು ಸಾಕ್ಷಾತ್ ದೇವರಾಗಿ ಭಕ್ತರು ಭಾವಿಸುತ್ತಿದ್ದರು. ಆದರೆ, ಅದು ಮೃತಪಟ್ಟ ನಂತರ ಕೆರೆಯಲ್ಲಿ ಇನ್ನೊಂದು ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ಆಸ್ತಿಕರ ನಂಬಿಕೆ ಮತ್ತಷ್ಟು ಬಲಗೊಂಡಿದೆ. ಕೆಲ ದಿನಗಳ ಹಿಂದೆ

ಅನಂತಪುರ ದೇವಸ್ಥಾನದ ಕೆರೆಯಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷ; ಭಕ್ತರಲ್ಲಿ‌ ಸಂತಸ Read More »

ನೆನೆಗುದಿಗೆ ಬಿದ್ದಿದ್ದ ಯರಗೋಳ್ ಅಣೆಕಟ್ಟು/ ಇಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ

ಸಮಗ್ರ ನ್ಯೂಸ್: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಗ್ರಾಮದಲ್ಲಿ ಕಳೆದ ಹದಿನೇಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು. ಅತಿವೃಷ್ಠಿಯ ಸಮಯದಲ್ಲಿ ಯರಗೋಳ್ ಮೂಲಕ ವ್ಯರ್ಥವಾಗಿ ತಮಿಳುನಾಡಿಗೆ ಹರಿದುಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ಈ ಅಣೆಕಟ್ಟು ನಿರ್ಮಿಸಲಾಗಿದ್ದು, ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲ್ಲೂಕಿನ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲು ಬಳಸಲಾಗುತ್ತಿದೆ. ಅಣೆಕಟ್ಟಿನ ಲೋಕಾರ್ಪಣೆ ಸಂದರ್ಭದಲ್ಲಿ ಆಹಾರ ಸಚಿವ ಕೆ ಎಚ್ ಮುನಿಯಪ್ಪ, ಬೈರತಿ ಸುರೇಶ್

ನೆನೆಗುದಿಗೆ ಬಿದ್ದಿದ್ದ ಯರಗೋಳ್ ಅಣೆಕಟ್ಟು/ ಇಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ Read More »

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ದೊರಕಿದಕ್ಕೆ ಬಿಜೆಪಿ ನಾಯಕರ ಅಸಮಾಧಾನ

ಸಮಗ್ರ ಸಮಾಚಾರ: ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯ ಅಧ್ಯಕ್ಷ ನೇಮಕವಾದ ಹಿನ್ನೆಲೆ ಬಿಜೆಪಿಯ ಕೆಲವು ನಾಯಕರಿಗೆ ಅಸಮಾಧಾನವಾಗಿದೆ.ಧಾರವಾಡದಲ್ಲಿ ಹಿರಿಯ ಶಾಸಕ ಅರವಿಂದ್​ ಬೆಲ್ಲದ್ ಅವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಮಾತಾಡೋಕೆ ಈ ಜಾಗ ಸೂಕ್ತವಲ್ಲ ಎಂದು ಹೇಳುತ್ತಲೇ ಮೈಕ್​ಗಳನ್ನು ತಳ್ಳಿ ಹೊರಟರು. ಈ ಮೂಲಕ ಬಿವೈ ವಿಜಯೇಂದ್ರ ನೇಮಕಕ್ಕೆ ಅರವಿಂದ್ ಬೆಲ್ಲದ್ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಇನ್ನೊಂದೆಡೆ ಮಾಜಿ ಸಚಿವ ಸಿಟಿ ರವಿ ಪರೋಕ್ಷವಾಗಿ ಅಸಮಾಧಾನ ಹಾಕಿದ್ರೆ, ಶ್ರೀರಾಮುಲು ನಾನು ಅಧ್ಯಕ್ಷ ಆಗೋದು ಪಕ್ಷದ ಹಿರಿಯರ

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ದೊರಕಿದಕ್ಕೆ ಬಿಜೆಪಿ ನಾಯಕರ ಅಸಮಾಧಾನ Read More »

ಗ್ರಾಂ ಪಂ ಸಭಾಭವನದಲ್ಲಿ ಸೆಕ್ರೆಟರಿಯಿಂದ ಬರ್ತಡೇ ಸೆಲೆಬ್ರೆಷೇನ್

ಸಮಗ್ರ ಸಮಾಚಾರ : ಅಥಣಿ, ಸರ್ಕಾರಿ ಕಚೇರಿಗಳಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಬಾರದು ಎಂಬ ನಿಯಮ ಇದ್ರೂ ಸಹ ನಿಯಮಗಳನ್ನು ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಯಾದ ವೆಂಕಟೇಶ್ ಕುಲಕರ್ಣಿ ಎಂಬುವರು ನಿಯಮ ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ ಜನ್ಮ ದಿನಾಚರಣೆ ಮಾಡಿಕೊಂಡ ಸಿಬ್ಬಂದಿ ಮೇಲೆ

ಗ್ರಾಂ ಪಂ ಸಭಾಭವನದಲ್ಲಿ ಸೆಕ್ರೆಟರಿಯಿಂದ ಬರ್ತಡೇ ಸೆಲೆಬ್ರೆಷೇನ್ Read More »

ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ| ನಕಲಿ ದಾಖಲೆ ಸೃಷ್ಟಿಸಿದ ಆರೋಪಿಗೆ ಜೈಲುಶಿಕ್ಷೆ

ಸಮಗ್ರ ನ್ಯೂಸ್: 15 ವರ್ಷಗಳ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಆರೋಪದಲ್ಲಿ ಆರೋಪಿ ಅತುಲ್ ರಾವ್ ಗೆ ಒಂದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ಅತುಲ್ ರಾವ್ 2008ರ ಜೂ.10ರಂದು ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆ ಯಾಗಲು ಸಹಾಯ ಮಾಡಿ ನಕಲಿ ದಾಖಲೆ ಸೃಷ್ಟಿ

ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ| ನಕಲಿ ದಾಖಲೆ ಸೃಷ್ಟಿಸಿದ ಆರೋಪಿಗೆ ಜೈಲುಶಿಕ್ಷೆ Read More »

ಮಡಿಕೇರಿ: ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸ್ಪಂದಿಸಿ: ಲೋಕಾಯುಕ್ತ ಎಸ್‍ಪಿ ಸುರೇಶ್ ಬಾಬು

ಸಮಗ್ರ ನ್ಯೂಸ್: ನ.10 ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು. ಅದನ್ನು ಬಿಟ್ಟು ಸತಾಯಿಸಬಾರದು ಎಂದು ಲೋಕಾಯುಕ್ತ ಎಸ್‍ಪಿ ಸುರೇಶ್ ಬಾಬು ಅವರು ಸಲಹೆ ಮಾಡಿದ್ದಾರೆ. ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನ. 10 ರಂದು ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಬಳಿಕ ಅವರು ಮಾತನಾಡಿದರು.ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುಂಬಾ ಎಚ್ಚರವಹಿಸಿ ನಿಯಮಾನುಸಾರಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕ ಸೇವೆಯನ್ನು ಸರ್ಕಾರದ ಸೇವೆ ಎಂದು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಸರ್ಕಾರಿ ಸೇವೆಗೆ

ಮಡಿಕೇರಿ: ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸ್ಪಂದಿಸಿ: ಲೋಕಾಯುಕ್ತ ಎಸ್‍ಪಿ ಸುರೇಶ್ ಬಾಬು Read More »