ರಾಜ್ಯ

ನ.29ರಂದು ನಡೆಯಬೇಕಿದ್ದ ಕೆ.ಸೆಟ್ ಪರೀಕ್ಷೆ ಮುಂದೂಡಿಕೆ

ಸಮಗ್ರ ನ್ಯೂಸ್: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸೋದಕ್ಕೆ ನ.26 ರಂದು ಕೆ-ಸೆಟ್ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಈ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಮಾಹಿತಿ ಹಂಚಿಕೊಂಡಿದ್ದು, ನ.26 ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು (K-SET -2023) ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ನವೆಂಬರ್.26ರಂದು ನಡೆಯಬೇಕಿದ್ದಂತ ಕೆ-ಸೆಟ್ ಪರೀಕ್ಷೆ ಮುಂದೂಡಿಕೆಯ ನಂತ್ರ, ಡಿ 31ರಂದು ನಡೆಸಲು ತಾತ್ಕಾಲಿಕ ದಿನಾಂಕವನ್ನು ನಿಗದಿ

ನ.29ರಂದು ನಡೆಯಬೇಕಿದ್ದ ಕೆ.ಸೆಟ್ ಪರೀಕ್ಷೆ ಮುಂದೂಡಿಕೆ Read More »

ಸೇವಾದಳದ ಶತಮಾನೋತ್ಸವ/ ನವೆಂಬರ್ 9ರಂದು ರಾಜ್ಯ ಮಟ್ಟದ ಸಮಾವೇಶ

ಸಮಗ್ರ ಸಮಾಚಾರ: ನವೆಂಬರ್ 28ರಂದು ಸೇವಾದಳ ನೂರು ವರ್ಷಗಳನ್ನು ಪೂರೈಸಲಿದ್ದು, ಈ ಹಿನ್ನಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಸಿದ್ದತೆ ನಡೆಸುತ್ತಿದೆ. ಇದೇ ತಿಂಗಳ 09ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಸಲು ರಾಜ್ಯ ಕಾಂಗ್ರೆಸ್ ಸಿದ್ದತೆ ನಡೆಸುತ್ತಿದೆ. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ನವೆಂಬರ್ 09ರಂದು ಸೇವಾದಳದ ರಾಜ್ಯಮಟ್ಟದ ಸಮಾವೇಶ ನಡೆಸಲಾಗುವುದು. ರಾಷ್ಟ್ರೀಯ ಸೇವಾದಳದ ಅಧ್ಯಕ್ಷ ಧ್ವಜಾರೋಹಣ ನಡೆಸಲಿದ್ದು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸೇವಾದಳದ ಶತಮಾನೋತ್ಸವ/ ನವೆಂಬರ್ 9ರಂದು ರಾಜ್ಯ ಮಟ್ಟದ ಸಮಾವೇಶ Read More »

ಬಿಗ್ ನ್ಯೂಸ್ ನೀಡಿದ ಡಿ. ವಿ. ಸದಾನಂದ ಗೌಡ/ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಗೌಡರು

ಸಮಗ್ರ ನ್ಯೂಸ್: ಸುಳ್ಯದ ಮಣ್ಣಿನ ಮಗ, ಬಿಜೆಪಿಯ ಹಿರಿಯ ನಾಯಕ ಡಿ. ವಿ. ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ. ಇನ್ನೂ ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ ಎಂದು ಪತ್ರಕರ್ತರೊಂದಿಗೆ ಸದಾನಂದ ಗೌಡರು ಹೇಳಿದರು. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದ್ದು, ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದೇನೆ. 10 ವರ್ಷಗಳ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ ಮತ್ತು

ಬಿಗ್ ನ್ಯೂಸ್ ನೀಡಿದ ಡಿ. ವಿ. ಸದಾನಂದ ಗೌಡ/ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಗೌಡರು Read More »

15 ದಿನದೊಳಗೆ ಬ್ಯಾಂಕ್​​ ಖಾತೆಗೆ ಗೃಹಲಕ್ಷ್ಮೀ ಹಣ ಬರಲಿದೆ

ಸಮಗ್ರ ಸಮಾಚಾರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದವರಲ್ಲಿ ಕೆಲವರಿಗೆ ಒಂದು ಬಾರಿ ಹಣ ಬಂದಿದ್ದರೆ ಇನ್ನು ಕೆಲವರಿಗೆ ಇದುವರೆಗೆ ಹಣವೇ ಬಂದಿಲ್ಲ. ಅರ್ಜಿ ಸಲ್ಲಿಸಲು ಹೋದರೆ ಹತ್ತಾರು ದಾಖಲೆ ಕೇಳುತ್ತಾರೆ, ಅದು ಸರಿ ಇಲ್ಲ, ಬದಲಾಯಿಸಿಕೊಂಡು ಬನ್ನಿ ಎನ್ನುತ್ತಾರೆ ಎಂದು ಮಹಿಳೆಯರು ಆರೋಪಿಸುತ್ತಿದ್ದರು. ಕಳೆದ ಮೂರು ತಿಂಗಳುಗಳಿಂದ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ರಾಜ್ಯದ 1.2 ಕೋಟಿ ಗೃಹಿಣಿಯರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ ಯೋಜನೆ ಅನುಷ್ಠಾನಗೊಂಡು ಮೂರು

15 ದಿನದೊಳಗೆ ಬ್ಯಾಂಕ್​​ ಖಾತೆಗೆ ಗೃಹಲಕ್ಷ್ಮೀ ಹಣ ಬರಲಿದೆ Read More »

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ| ಚಿತ್ರದುರ್ಗದ ಮುರುಘಾ ಶ್ರೀಗೆ ಹೈಕೋರ್ಟ್ ಜಾಮೀನು

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಆಲಿಸಿದ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಮುರುಘಾ ಶರಣರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರ ಪೀಠ ಈ ಆದೇಶ ನೀಡಿದೆ. ವಿಸ್ತೃತವಾದ ಆದೇಶದ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಆದೇಶದಿಂದಾಗಿ

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ| ಚಿತ್ರದುರ್ಗದ ಮುರುಘಾ ಶ್ರೀಗೆ ಹೈಕೋರ್ಟ್ ಜಾಮೀನು Read More »

ಸೌಜನ್ಯ ಪ್ರಕರಣದ ಮರುತನಿಖೆ ಕೋರಿ‌ ಹೈಕೋರ್ಟ್ ಗೆ ಸಿಬಿಐ ಅಪೀಲ್| ಮತ್ತೆ ಜೈಲು ಪಾಲಾಗ್ತಾನಾ ಸಂತೋಷ್ ರಾವ್| ಆರೋಪಿಯನ್ನು ಅಪರಾಧಿಯನ್ನಾಗಿ ಸಾಬೀತು ಮಾಡಲು ಸಿದ್ಧತೆ

ಸಮಗ್ರ ನ್ಯೂಸ್: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಅತ್ಯಾಚಾರ ಹಾಗೂ ಕೊಲೆ ಘಟನೆಗೆ ಸಾಕ್ಷಿಯಾಗಿರುವ ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಮೂಲಕ ಸೌಜನ್ಯಾಳನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿ ಸಂತೋಷ್‌ರಾವ್‌ ಎಂದು ಸಾಬೀತು ಮಾಡಲು ಮುಂದಾಗಿದೆ. ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಬಂದು 4 ತಿಂಗಳ ಬಳಿಕ

ಸೌಜನ್ಯ ಪ್ರಕರಣದ ಮರುತನಿಖೆ ಕೋರಿ‌ ಹೈಕೋರ್ಟ್ ಗೆ ಸಿಬಿಐ ಅಪೀಲ್| ಮತ್ತೆ ಜೈಲು ಪಾಲಾಗ್ತಾನಾ ಸಂತೋಷ್ ರಾವ್| ಆರೋಪಿಯನ್ನು ಅಪರಾಧಿಯನ್ನಾಗಿ ಸಾಬೀತು ಮಾಡಲು ಸಿದ್ಧತೆ Read More »

ಮಂಡ್ಯದಲ್ಲಿ ಘೋರ ದುರಂತ| ನಾಲೆಗುರುಳಿದ ಸ್ವಿಫ್ಟ್ ಕಾರು; ಐವರು ಸಾವು

ಸಮಗ್ರ ನ್ಯೂಸ್: ಮಂಡ್ಯ ಪಟ್ಟಣದ ಹೊರವಲಯದ ಶ್ರೀರಂಗಪಟ್ಟಣ-‌ಜೇವರ್ಗಿ ರಾಜ್ಯ ಹೆದ್ದಾರಿ, ಬನಘಟ್ಟ ಗ್ರಾಮದ ಬಳಿ ಮಂಗಳವಾರ ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಐವರು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕು, ನೊಣವಿನಕೆರೆ ಬಳಿಯ ಕೈದಾಳ ಗ್ರಾಮದ ಚಂದ್ರಪ್ಪ, ಕೃಷ್ಣಪ್ಪ, ಧನಂಜಯ, ಬಾಬು, ಜಯಣ್ಣ ಮೃತಪಟ್ಟವರು. ಅವರೆಲ್ಲರೂ ಸೋದರ ಸಂಬಂಧಿಗಳಾಗಿದ್ದು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನೆಲೆಸಿದ್ದರು. ಮೈಸೂರಿನ ಬಿಳಿಕೆರೆಯಲ್ಲಿ ಮಂಗಳವಾರ ನಡೆದ ಸಂಬಂಧಿಕರ ಬೀಗರೂಟ ಮುಗಿಸಿಕೊಂಡು ಇಂಡಿಕಾ ವಿಸ್ಟಾ ಕಾರಿನಲ್ಲಿ ತಿಪಟೂರಿಗೆ ತೆರಳುತ್ತಿದ್ದರು. ತಾಲ್ಲೂಕಿನ ಮಾಣಿಕನಹಳ್ಳಿಯ ಪ್ರಕಾಶ್‌ ಮೃತರ

ಮಂಡ್ಯದಲ್ಲಿ ಘೋರ ದುರಂತ| ನಾಲೆಗುರುಳಿದ ಸ್ವಿಫ್ಟ್ ಕಾರು; ಐವರು ಸಾವು Read More »

ಹವಾಮಾನ ವರದಿ| ಹಿಂಗಾರು ಮಳೆ ಚುರುಕು| ಮುಂದಿನ ಮೂರು ದಿನ ಉತ್ತಮ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಂಗಾರು ಚುರುಕುಗೊಂಡಿದ್ದು, ಮುಂದಿನ ಮೂರು ದಿನ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ‘ಕಳೆದ ಮೂರು ದಿನದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಜಿಲ್ಲೆ ಹಾಗೂ ಉತ್ತರ ಒಳನಾಡಿನ ಎರಡು ಜಿಲ್ಲೆಗಳಾದ ಗದಗ ಹಾಗೂ ಹಾವೇರಿಯಲ್ಲಿ ಭಾರೀ ಮಳೆಯಾಗಲಿರುವುದರಿಂದ ಈ ಜಿಲ್ಲೆಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದೆ. ಈಗಾಗಲೇ ಬರದಿಂದ

ಹವಾಮಾನ ವರದಿ| ಹಿಂಗಾರು ಮಳೆ ಚುರುಕು| ಮುಂದಿನ ಮೂರು ದಿನ ಉತ್ತಮ ಮಳೆ ಸಾಧ್ಯತೆ Read More »

‘ನಾನು ಭ್ರಷ್ಟನಲ್ಲ’ ಎಂದು ಬೋರ್ಡ್ ಹಾಕಿಕೊಂಡ ಬಿಇಒ ಕಛೇರಿ ಅಧಿಕ್ಷಕ| ಅಧಿಕಾರಿಯ ಈ ಕೆಲಸಕ್ಕೆ ಎಲ್ಲರೂ ಫಿದಾ!

ಸಮಗ್ರ ನ್ಯೂಸ್: ಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ. ಗುಮಾಸ್ತನಿಂದ ಹಿಡಿದು ಮೇಲಾಧಿಕಾರಿವರೆಗೆ ಎಲ್ಲರೂ ಲಂಚ ತೆಗೆದುಕೊಂಡು ಭ್ರಷ್ಟರಾಗುತ್ತಿದ್ದಾರೆ. ಜನರಿಗೆ ದುಡ್ಡು ಕೊಡದೆ ಕೆಲಸವಾಗುವುದಿಲ್ಲ ಎಂಬ ಭಾವನೆ ಬೇರೂರಿದೆ. ಆದರೆ ಹಾಸನದಲ್ಲೊಬ್ಬ ಅಧಿಕಾರಿ ತಮ್ಮ ಮೇಜಿನ ಮೇಲೆ “ನಾನು ಭ್ರಷ್ಟನಲ್ಲ,ಇಲ್ಲಿ ಲಂಚ ಸ್ವೀಕರಿಸುವುದಿಲ್ಲ” ಎಂಬ ಫಲಕ ಹಾಕಿಕೊಂಡು ಪ್ರಾಮಾಣಿಕತೆ ಮೆರೆದಿದ್ದಾರೆ.ಆ ಮುಖಾಂತರ ಪ್ರಾಮಾಣಿಕತೆ ಇನ್ನೂ ಇದೆ ಎಂದು ತೋರಿಸಿದ್ದಾರೆ. ಈ ಲಂಚಾಸುರಗಳ ಹಾವಳಿಯ ಮಧ್ಯೆ ಹಾಸನದ ಬಿಇಒ ಕಛೇರಿಯ ಅಧೀಕ್ಷಕ ಡಿಎಸ್ ಲೋಕೇಶ್ ಅವರು

‘ನಾನು ಭ್ರಷ್ಟನಲ್ಲ’ ಎಂದು ಬೋರ್ಡ್ ಹಾಕಿಕೊಂಡ ಬಿಇಒ ಕಛೇರಿ ಅಧಿಕ್ಷಕ| ಅಧಿಕಾರಿಯ ಈ ಕೆಲಸಕ್ಕೆ ಎಲ್ಲರೂ ಫಿದಾ! Read More »

ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ| ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಮೊತ್ತ ಬಿಡುಗಡೆ ಮಾಡಲಿ | ಸುಳ್ಯದಲ್ಲಿ ಸರ್ಕಾರದ ವಿರುದ್ದ ಕೋಟ ಕಿಡಿ

ಸಮಗ್ರ ನ್ಯೂಸ್: ರಾಜ್ಯದ ಬರಗಾರ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆಗೆ ಸರಕಾರ 10 ಸಾವಿರ ಕೋಟಿ ಬರ ಪರಿಹಾರ ಬಿಡುಗಡೆ ಮಾಡಬೇಕೆಂದು‌ ನಾವು ಆಗ್ರಹಿಸುತ್ತೇವೆ, ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ‌ಹೇಳಿದ್ದಾರೆ. ನ.7 ರಂದು ಸುಳ್ಯ ಪ್ರವಾಸದಲ್ಲಿದ್ದ ಅವರು‌ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಬರ ಇದ್ದು ಈ ಸಂದರ್ಭದಲ್ಲಿ ಸರಕಾರ ನಿರ್ವಹಣೆಯಲ್ಲಿ ತೊಡಗಬೇಕು. ರೈತರಿಗೆ‌ ಬೀಜ ಬಿತ್ತನೆಗೆ ಸಹಕಾರ ನೀಡಬೇಕು. ಕೆರೆಯಲ್ಲಿ ಹೂಳು ತುಂಬಿದ್ದರೆ

ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ| ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಮೊತ್ತ ಬಿಡುಗಡೆ ಮಾಡಲಿ | ಸುಳ್ಯದಲ್ಲಿ ಸರ್ಕಾರದ ವಿರುದ್ದ ಕೋಟ ಕಿಡಿ Read More »