ರಾಜ್ಯ

ಮಾಜಿ‌ ಸಚಿವ ಭೀಮಣ್ಣ ಖಂಡ್ರೆ ನಿಧನ

ಸಮಗ್ರ ನ್ಯೂಸ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ಇಲ್ಲಿನ ಅವರ ಸ್ವಗೃಹದಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಜೀವರಕ್ಷಕಗಳ ಮೂಲಕ ಒಂದು ವಾರ ಬೀದರ್ ನಗರದ ಗುದಗೆ ಮಲ್ಟಿ ಸ್ಪೆಷಾಲಿಟಿ ಆಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಸತತವಾಗಿ ಆರೋಗ್ಯ ಕ್ಷೀಣಿಸಿದ ಕಾರಣ ಸೋಮವಾರ (ಜ.12) ಅವರನ್ನು ಮನೆಗೆ ಕೊಂಡೊಯ್ಯಲಾಗಿತ್ತು. ಬಳಿಕ ಮನೆಯಲ್ಲಿಯೇ ವೈದ್ಯರ […]

ಮಾಜಿ‌ ಸಚಿವ ಭೀಮಣ್ಣ ಖಂಡ್ರೆ ನಿಧನ Read More »

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ| ರಾಜೇವ್ ಗೌಡ ವಿರುದ್ದ ಕೇಸ್ ದಾಖಲಾದ ಬೆನ್ನಲ್ಲೇ ನಾಪತ್ತೆ

ಸಮಗ್ರ ನ್ಯೂಸ್: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ನಿಂದಿಸಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ಗೌಡ ಅವರಿಗೆ ಕೆಪಿಸಿಸಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ. ‘ನಿಮಗೆ ನೋಟಿಸ್‌ ತಲುಪಿದ ಒಂದು ವಾರದ ಒಳಗಾಗಿ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಕೆಪಿಸಿಸಿ ಶಿಸ್ತು ಸಮಿತಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಿದೆ’ ಎಂದು ರಾಜೀವ್‌ಗೌಡ ಅವರಿಗೆ ನೀಡಲಾಗಿರುವ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ. ಅಶ್ಲೀಲ ಪದಗಳಿಂದ ನಿಂದಿಸಿ ಬೆಂಕಿ ಹಾಕುವುದಾಗಿ ಧಮ್ಕಿ ಹಾಕಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡ ವಿರುದ್ಧ 2

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ| ರಾಜೇವ್ ಗೌಡ ವಿರುದ್ದ ಕೇಸ್ ದಾಖಲಾದ ಬೆನ್ನಲ್ಲೇ ನಾಪತ್ತೆ Read More »

ಬಿಗ್ ಬಾಸ್ 12| ಫಿನಾಲೆ ವಾರದಲ್ಲಿ ಪ್ರಬುದ್ಧತೆ ಮೆರೆದ ರಕ್ಷಿತಾ

ಸಮಗ್ರ ನ್ಯೂಸ್: ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದಲ್ಲಿ, ಸ್ಪರ್ಧಿ ರಕ್ಷಿತಾ ಶೆಟ್ಟಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೀನುಗಾರರಿಗೆ ವೇದಿಕೆ, ಕರಾವಳಿಯ ಹುಲಿವೇಷ ನೃತ್ಯ ಮತ್ತು ಕನ್ನಡ ನಾಟಕ ನೋಡುವ ಆಕೆಯ ಆಸೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಸ್ಪರ್ಧಿಗಳು ಹೇಳುವ ಮೂರು ಬೇಡಿಕೆಗಳ ಪೈಕಿ ಒಂದನ್ನು ಈಡೇರಿಸೋದಾಗಿ ಬಿಗ್‌ಬಾಸ್ ವಚನ ನೀಡಿದ್ದಾರೆ. ಸೋಮವಾರದ ಸಂಚಿಕಯಲ್ಲಿ ರಘು, ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ ಮತ್ತು ಗಿಲ್ಲಿ ನಟ ಅವರ ಆಸೆಗಳನ್ನು ತೋರಿಸಲಾಗಿತ್ತು. ಈ ನಾಲ್ವರ ಪೈಕಿ ರಕ್ಷಿತಾ ಹೇಳಿದ

ಬಿಗ್ ಬಾಸ್ 12| ಫಿನಾಲೆ ವಾರದಲ್ಲಿ ಪ್ರಬುದ್ಧತೆ ಮೆರೆದ ರಕ್ಷಿತಾ Read More »

ಸುಳ್ಯ, ಕಡಬ ತಾಲೂಕಿನ ಹಲವೆಡೆ ಭಾರೀ ಮಳೆ| ಮಲೆನಾಡಿನಲ್ಲೂ ಅಬ್ಬರಿಸಿದ ವರುಣ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ, ಕಡಬ ಸೇರಿದಂತೆ ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಸಂಜೆ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದ ಒಣ‌ಹಾಕಿದ್ದ ಅಡಿಕೆ, ಕಾಫಿ ಬೆಳೆ ಬಹುತೇಕ ಕಡೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಕಾಫಿನಾಡು ಚಿಕ್ಕಮಗಳೂರಲ್ಲಿ ಈ‌ ವರ್ಷದ ಮೊದಲ ‌ಮಳೆಯ ಸಿಂಚನವಾಗಿದೆ. ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ , ಕಳಸ, ಶೃಂಗೇರಿ, NR ಪುರ ಭಾಗದಲ್ಲಿ ವರುಣ ಅಬ್ಬರಿಸಿದ್ದು, ದಿಢೀರ್ ಸುರಿದ ಮಳೆಯಿಂದ ಜನರು ಕಂಗಾಲಾದ ಪ್ರಸಂಗ ನಡೆದಿದೆ.

ಸುಳ್ಯ, ಕಡಬ ತಾಲೂಕಿನ ಹಲವೆಡೆ ಭಾರೀ ಮಳೆ| ಮಲೆನಾಡಿನಲ್ಲೂ ಅಬ್ಬರಿಸಿದ ವರುಣ Read More »

ಹವಾಮಾನ ವರದಿ| ರಾಜ್ಯದ ಏಳು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ತಮಿಳುನಾಡಿನ ಕರಾವಳಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿದ್ದು ಕರ್ನಾಟಕದ ಅಲ್ಲಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಚಳಿಯೂ ಕಡಿಮೆಯಾಗಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಮಧ್ಯಪ್ರದೇಶ ಮತ್ತು ನಾಸಿಕ್ ವರೆಗೆ ಹಾಗೂ ರಾಯಗಢ, ರತ್ನಗಿರಿ,

ಹವಾಮಾನ ವರದಿ| ರಾಜ್ಯದ ಏಳು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ Read More »

ತುಮಕೂರು: ಲಾರಿ, ಕ್ರೂಸರ್ ನಡುವೆ ಡಿಕ್ಕಿ| ನಾಲ್ವರು ಮಾಲಾಧಾರಿಗಳು ಸಾವು 

ಸಮಗ್ರ ನ್ಯೂಸ್: ತುಮಕೂರಿನ ಕೋರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಅಯ್ಯಪ್ಪ ಭಕ್ತರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ  ನಡೆದಿದೆ.  ಕ್ರೂಸರ್ ವಾಹನದಲ್ಲಿದ್ದ ನಾಲ್ವರು ಅಯ್ಯಪ್ಪ ಭಕ್ತರು ದುರ್ಮರಣಕ್ಕೀಡಾಗಿದ್ದಾರೆ. ಮೃತರು ಸಾಕ್ಷಿ (7), ಮಾರುತಪ್ಪ, (45), ವೆಂಕಟೇಶ (30), ಗವಿಸಿದ್ದಪ್ಪ (28) ಎಲ್ಲರೂ ಕೊಪ್ಪಳ ಜಿಲ್ಲೆಯ ಕುಕನೂರು ನಿವಾಸಿಗಳು ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಂತಿದ್ದ ಲಾರಿಗೆ ವೇಗವಾಗಿ ಬರುತ್ತಿದ್ದ ಕ್ರೂಸರ್ ವಾಹನ ಡಿಕ್ಕಿಯಾಗಿದ್ದು

ತುಮಕೂರು: ಲಾರಿ, ಕ್ರೂಸರ್ ನಡುವೆ ಡಿಕ್ಕಿ| ನಾಲ್ವರು ಮಾಲಾಧಾರಿಗಳು ಸಾವು  Read More »

ಚಿಕ್ಕಮಗಳೂರು: ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರ್ಕಾರಿ ಶಾಲೆ

ಸಮಗ್ರ ನ್ಯೂಸ್: ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ ಸಾಧನೆ ಹಾಗೂ ಸೌಲಭ್ಯಗಳ  ಮೂಲಕ ಖಾಸಗಿ ಶಾಲೆಗಳಿಗೆ ಸವಾಲು ಹಾಕುವಂತ ಕಾರ್ಯ ಮಾಡಿ ಜಿಲ್ಲೆಯಾದ್ಯಂತ ಗಮನ ಸೆಳೆದಿದೆ.  ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಇದೇ ಮೊದಲ ಬಾರಿಗೆ ವಿಮಾನ ಪ್ರಯಾಣದ ಅವಕಾಶ ದೊರಕಿರುವುದು ವಿಶೇಷವಾಗಿದೆ. ಮುತ್ತಿಗೆಪುರ ಶಾಲೆಯ ವೈಶಿಷ್ಟ್ಯವೇನೆಂದರೆ, ಖಾಸಗಿ ಶಾಲೆಗಳಲ್ಲಿ ದೊರೆಯುವಂತ ಗುಣಮಟ್ಟದ ಶಿಕ್ಷಣ, ಶೈಕ್ಷಣಿಕ ಸೌಲಭ್ಯಗಳು ಮತ್ತು ಸಂಸ್ಕೃತಿಪೂರ್ಣ ವಾತಾವರಣವನ್ನು ಸರ್ಕಾರಿ ಶಾಲೆಯಲ್ಲೇ ಒದಗಿಸಲಾಗುತ್ತಿದೆ.

ಚಿಕ್ಕಮಗಳೂರು: ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರ್ಕಾರಿ ಶಾಲೆ Read More »

2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಡೇಟ್ ಫಿಕ್ಸ್| ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ 

ಸಮಗ್ರ ನ್ಯೂಸ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಜ.7 ರಂದು ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ಪ್ರಮುಖ ದಿನಾಂಕಗಳನ್ನು ಅನುಮೋದಿಸಿದೆ. ಸಂಸದೀಯ ಕ್ಯಾಲೆಂಡರ್ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, ಭಾನುವಾರದಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಅವರು ಸತತ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.  ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಜನವರಿ 28 ರಂದು ಭಾಷಣ ಮಾಡಲಿದ್ದು, ಬಜೆಟ್

2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಡೇಟ್ ಫಿಕ್ಸ್| ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ  Read More »

ಹೆಚ್ಚುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ| ಮೂಡಿಗೆರೆ ಎಸ್ಟೇಟ್ ಗೆ ಪಿಎಸ್ಐ ಹರ್ಷವರ್ಧನ್ ಭೇಟಿ 

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲ್ ಎಸ್ಟೇಟ್‌ಗೆ ಪಿಎಸ್ಐ ಹರ್ಷವರ್ಧನ್ ಅವರು ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದರು. ಈ ವೇಳೆ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಆಧಾರ್ ಕಾರ್ಡ್‌ಗಳನ್ನು ಎಂ-ಆಧಾರ್ ಆಪ್ ಮೂಲಕ ಪರಿಶೀಲನೆ ನಡೆಸಿದ್ದಾರೆ, ಈ ಪರಿಶೀಲನೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಅಕ್ರಮ ವಲಸಿಗರ ಪತ್ತೆಗಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ| ಮೂಡಿಗೆರೆ ಎಸ್ಟೇಟ್ ಗೆ ಪಿಎಸ್ಐ ಹರ್ಷವರ್ಧನ್ ಭೇಟಿ  Read More »

ತಲೆ ಕೂದಲು ನೀಡಿ ಪಾತ್ರೆ ಖರೀದಿಸುವಿರೇ|ಮಹಿಳೆಯರೇ ಎಚ್ಚೆತ್ತುಕೊಳ್ಳಿ 

ಸಮಗ್ರ ನ್ಯೂಸ್; ಬೀದಿಗಳಲ್ಲಿ ಕೂದಲನ್ನು ತೆಗೆದುಕೊಂಡು ಪ್ಲಾಸ್ಟಿಕ್ , ಸ್ಟೀಲ್ ಪಾತ್ರೆಗಳನ್ನು ಕೊಡುತ್ತಾರೆ  ಈ ರೀತಿ ಕೂದಲನ್ನ ಮಾರಾಟ ಮಾಡುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಯಾಕಂದ್ರೆ, ಇದರ ಹಿಂದೆ ಜ್ಯೋತಿಷ್ಯ, ಆರೋಗ್ಯ ಮತ್ತು ಧಾರ್ಮಿಕ ಕಾರಣಗಳಿವೆ. ಜ್ಯೋತಿಷ್ಯದ ಪ್ರಕಾರ, ಕೂದಲು ಮಾರಾಟ ಮಾಡುವುದು ತುಂಬಾ ಅಶುಭ. ವ್ಯಕ್ತಿಯ ಪ್ರಭಾವಲಯ ಶಕ್ತಿಯು ಅವರ ಕೂದಲಿನಲ್ಲಿರುತ್ತದೆ. ಅದರ ಮೂಲಕ ಸಂಮೋಹನದಂತಹ ಕಾರ್ಯವಿಧಾನಗಳನ್ನು ಮಾಡಲು ಸಾಧ್ಯವಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಕೂದಲು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ. ಕೂದಲು ಮಾರಾಟ ಮಾಡುವುದರಿಂದ ಈ

ತಲೆ ಕೂದಲು ನೀಡಿ ಪಾತ್ರೆ ಖರೀದಿಸುವಿರೇ|ಮಹಿಳೆಯರೇ ಎಚ್ಚೆತ್ತುಕೊಳ್ಳಿ  Read More »