ರಾಜ್ಯ

ಮಂಡ್ಯ, ಮೈಸೂರಿನಲ್ಲಿ ಐಎಎಸ್ ಗಂಡ ಹೆಂಡ್ತಿ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿ ಡಾ. ಗೌತಮ್ ಬಗಾದಿ ನೇಮಕಗೊಂಡಿದ್ದಾರೆ.ವಿಶೇಷ ಎಂದರೆ ಅವರ ಪತ್ನಿ ಪಕ್ಕದ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಅಶ್ವಥಿ. ಈ ಹಿಂದೆಯು ಅಕ್ಕಪಕ್ಕದ ಜಿಲ್ಲೆಯಲ್ಲಿ ಐಎಎಸ್ ಗಂಡ ಹೆಂಡ್ತಿ ಕೆಲಸ ಮಾಡಿದ್ದರು. ಈ ಹಿಂದೆ ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಶಿಖಾ ಹಾಗೂ ಅವರ ಗಂಡ ಅಜಯ್ ನಾಗಭೂಷಣ್ ಮಂಡ್ಯದಲ್ಲಿ ಜಿಲ್ಲಾಧಿಕಾರಿಯಾಗಿದ್ದರು.

ಮಂಡ್ಯ, ಮೈಸೂರಿನಲ್ಲಿ ಐಎಎಸ್ ಗಂಡ ಹೆಂಡ್ತಿ Read More »

ಮುಗಿಯದ ಎರಡು ಜಡೆ ಕಚ್ಚಾಟ: ಮೈಸೂರು ಡಿಸಿ ಮತ್ತು ಸಿಇಒ ಎತ್ತಂಗಡಿ

ಮೈಸೂರು: ಪರಸ್ಪರ ಕೆಸರೆರಚಾಟದ ಮೂಲಕ ರಾಜ್ಯದ ಗಮನ ಸೆಳೆದ ಇಬ್ಬರೂ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಆ ಮೂಲಕ ಇಬ್ಬರ ನಡುವಿನ ಸಂಘರ್ಷವನ್ನು ಶಮನಗೊಳಿಸುವ ಪ್ರಯತ್ನ ಮಾಡಿದೆ. ಕಳೆದ ಕೆಲವು ದಿನಗಳಿಂದ ಸಂಘರ್ಷದಲ್ಲಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ಹಾಗೂ ಶಿಲ್ಪಾ ನಾಗ್ ಅವರನ್ನು ಆರ್​​ಡಿಪಿಆರ್ ನಿರ್ದೇಶಕರಾಗಿ ವರ್ಗಾವಣೆ

ಮುಗಿಯದ ಎರಡು ಜಡೆ ಕಚ್ಚಾಟ: ಮೈಸೂರು ಡಿಸಿ ಮತ್ತು ಸಿಇಒ ಎತ್ತಂಗಡಿ Read More »

ಕುಂದಾಪುರ: ರೈಲಿನಡಿಗೆ ಬಿದ್ದು ಚಿರತೆ ಸಾವು

ಕುಂದಾಪುರ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟ ಘಟನೆ ತಾಲೂಕಿನ ಸೇನಾಪುರ ಬಳಿಯ ಕುಂದಬಾರಂದಾಡಿ ಎಂಬಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಘಟನೆ ನಡೆದಿದ್ದು, ಚಿರತೆ ರೈಲು ಹಳಿಯ ಮೇಲೆ ಸಂಚರಿಸುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸಾವನ್ನಪ್ಪಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಕುಂದಾಪುರ: ರೈಲಿನಡಿಗೆ ಬಿದ್ದು ಚಿರತೆ ಸಾವು Read More »

ಆಕ್ರೋಶದ ಬೆನ್ನೆಲ್ಲೆ ವಿವಾದಿತ ಚಿತ್ರ ತೆಗೆದು ಹಾಕಿದ ಅಮೆಜಾನ್

ಬೆಂಗಳೂರು ಕನ್ನಡದ ಬಾವುಟ ಹಾಗು ಲಾಂಛನವುಳ್ಳ ಬಿಕಿನಿಯನ್ನು ಮಾರಾಟಕ್ಕಿಟ್ಟಿದ್ದ ಅಮೆಜಾನ್ ಇದೀಗ ಆ ಚಿತ್ರವನ್ನು ಬದಲಾಯಿಸಿದೆ. ಕಳೆದೆರಡು ದಿನಗಳ ಹಿಂದೆ ಗೂಗಲ್ ಕೂಡ ಕನ್ನಡದ ಬಗ್ಗೆ ಅವಮಾನದ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಯಾಚಿಸಿತ್ತು. ಇದೀಗ ಅಮೆಜಾನ್ ಕೂಡ ಕನ್ನಡಿಗರ ಆಕ್ರೋಶದ ಬೆನ್ನಲ್ಲೆ ಚಿತ್ರ ಬದಲಾಯಿಸಿ ಆ ಜಾಗದಲ್ಲಿ ಬೇರೊಂದು ಫೋಟೋವನ್ನು ಪ್ರಕಟಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ

ಆಕ್ರೋಶದ ಬೆನ್ನೆಲ್ಲೆ ವಿವಾದಿತ ಚಿತ್ರ ತೆಗೆದು ಹಾಕಿದ ಅಮೆಜಾನ್ Read More »

ಗೂಗಲ್ ಆಯ್ತು ಇದೀಗ ಅಮೆಜಾನ್ ಸರದಿ | ಕನ್ನಡ ಬಾವುಟ ಮಾದರಿಯ ಬಿಕಿನಿ ತಯಾರಿಸಿ ಮಾರಾಟಕ್ಕಿಟ್ಟ ಇ-ಕಾಮರ್ಸ್ ದೈತ್ಯ

ಬೆಂಗಳೂರು: ಗೂಗಲ್ ಕನ್ನಡಕ್ಕೆ ಅವಮಾನ ಮಾಡಿ ಕ್ಷಮೆಯಾಚಿಸಿದ ಬೆನ್ನಲ್ಲೇ ಆನ್ಲೈನ್ ಮಾರ್ಕೆಟ್ ನಲ್ಲಿ ಹೆಸರುವಾಸಿ ತಾಣ ಅಮೆಜಾನ್ ಕನ್ನಡಕ್ಕೆ ಅವಮಾನ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಈ ಇ-ಕಾಮರ್ಸ್ ದೈತ್ಯ, ಕನ್ನಡದ ಬಾವುಟ ಮತ್ತು ಲಾಂಛನವುಳ್ಳ ಬಿಕಿನಿ ತಯಾರಿಸಿ ಮಾರಾಟಕ್ಕಿರಿಸಿ ಇದೀಗ ಆಕ್ರೋಶಕ್ಕೆ ಗುರಿಯಾಗಿದೆ. ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೆಜಾನ್ ವೆಬ್ಸೈಟ್ ಒಂದರಲ್ಲಿ ಈ ತರಹದ ಒಳಉಡುಪು ಮಾರಾಟಕ್ಕಿಟ್ಟಿರುವುದು ಗೋಚರಿಸಿತ್ತು. ಆ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಕನ್ನಡಾಭಿಮಾನಿಗಳು ಅಮೆಜಾನ್ ವಿರುದ್ಧ ಆಕ್ರೋಶದ ಕಿಡಿಕಾರಲು ಆರಂಭಿಸಿದ್ದಾರೆ. ಆದರೆ ಭಾರತದ

ಗೂಗಲ್ ಆಯ್ತು ಇದೀಗ ಅಮೆಜಾನ್ ಸರದಿ | ಕನ್ನಡ ಬಾವುಟ ಮಾದರಿಯ ಬಿಕಿನಿ ತಯಾರಿಸಿ ಮಾರಾಟಕ್ಕಿಟ್ಟ ಇ-ಕಾಮರ್ಸ್ ದೈತ್ಯ Read More »

ಇಳಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ?

ಬೆಂಗಳೂರು, ಜೂನ್ 05: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿರೀಕ್ಷಿತ ಮಟ್ಟದಲ್ಲಿ ಇಳಿಕೆ ಕಂಡುಬರದ ಕಾರಣ ಜೂನ್ 3ರಂದು ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿತ್ತು. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಲಾಕ್‌ಡೌನ್ ಸಡಿಲಿಕೆ ಕುರಿತು ಸುಳಿವು ಕೊಟ್ಟಿದ್ದಾರೆ. ಸೋಮವಾರದಿಂದ ಲಾಕ್‌ಡೌನ್‌ ಸಡಿಲಿಕೆ ಮಾಡುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು, “ಇನ್ನು ಮೂರ್ನಾಲ್ಕು ದಿನ

ಇಳಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ? Read More »

ಕಮರಿದ ಪೈಲಟ್ ಆಗುವ ಕನಸು: ಕೊಡಗು ಮೂಲದ ಯುವಕ ಅಹಮದಾಬಾದ್ ನಲ್ಲಿ ಆತ್ಮಹತ್ಯೆ

ಅಹಮದಾಬಾದ್: ಕೊಡಗು ಮೂಲದ ಮಹತ್ವಾಕಾಂಕ್ಷಿ ಪೈಲಟ್ ಆಗುವ ಕನಸು ಹೊಂದಿದ್ದ ಯುವಕ ಅಹಮದಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತ ಯುವಕನನ್ನು ಸೋಮವಾರಪೇಟೆ ತಾಲ್ಲೂಕಿನ ಜಂಬುರು ಗ್ರಾಮದ ಬೋಪಯ್ಯ ಮತ್ತು ಪೊನಮ್ಮ ಅವರ ಮಗ ಶಿಬಿ ಬೋಪಯ್ಯ (23) ಎಂದು ಗುರುತಿಸಲಾಗಿದೆ. ಶಿಬಿ ಯಾವಾಗಲೂ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದನು ಮತ್ತು ಅಹಮದಾಬಾದ್‌ನ ಏರೋನಾಟಿಕಲ್ ಸೆಂಟರ್‌ನಲ್ಲಿ ತನ್ನ ತರಬೇತಿ ಕೋರ್ಸ್ ಅನ್ನು ಓದುತ್ತಿದ್ದ. ದಿನಂಪ್ರತಿ ತನ್ನ ಹೆತ್ತವರ ಜೊತೆ ಫೋನಿನಲ್ಲಿ ಮಾತಾನಾಡುತ್ತಿದ್ದನು ಮತ್ತು ಗುರುವಾರ ರಾತ್ರಿ ಅವನ ಕಾಲ್ ಬಂದಿರಲಿಲ್ಲ.ಅಲ್ಲದೇ ಅವನಿಗೆ

ಕಮರಿದ ಪೈಲಟ್ ಆಗುವ ಕನಸು: ಕೊಡಗು ಮೂಲದ ಯುವಕ ಅಹಮದಾಬಾದ್ ನಲ್ಲಿ ಆತ್ಮಹತ್ಯೆ Read More »

ಪಿಯುಸಿ ಫಲಿತಾಂಶಕ್ಕೆ ಎಸ್ ಎಸ್ ಎಲ್ ಸಿ ಅಂಕವನ್ನೂ ಪರಿಗಣಿಸಲಾಗುವುದು: ಸುರೇಶ್ ಕುಮಾರ್

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ, ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ಅಂಕಗಳನ್ನೂ ಪರಿಗಣಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇದಕ್ಕೆ ಮಾನದಂಡವಾಗಿ ಪ್ರಥಮ ಪಿಯುಸಿ ಅಂಕ ಆಧರಿಸಿ, ಪಾಸ್ ಮಾಡುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದರು. ಅದರ ಬೆನ್ನಲ್ಲೆ ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಶುಭ ಸುದ್ದಿ ನೀಡಿಲಾಗಿದ್ದು,

ಪಿಯುಸಿ ಫಲಿತಾಂಶಕ್ಕೆ ಎಸ್ ಎಸ್ ಎಲ್ ಸಿ ಅಂಕವನ್ನೂ ಪರಿಗಣಿಸಲಾಗುವುದು: ಸುರೇಶ್ ಕುಮಾರ್ Read More »

ದೇಶದಲ್ಲಿ ಒಂದೇ ದಿನ 1.2 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ

ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕೊಂಚ ಕೊಂಚವಾಗಿ ಇಳಿಕೆಯಾಗುತ್ತಿದೆ. ಇದೀಗ ಕಳೆದ 24 ಗಂಟೆಗಳಲ್ಲಿ, ಭಾರತವು ಕೋವಿಡ್-19 ರ 1.2 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಕಳೆದ 58 ದಿನಗಳಲ್ಲಿ ಪ್ರಕರಣಗಳ ಕನಿಷ್ಠ ಏಕ ದಿನದ ಹೆಚ್ಚಳವಾಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು 15,55,248. ದೇಶಾದ್ಯಂತ ಕೋವಿಡ್ ಸೋಂಕಿನಿಂದ ಈವರೆಗೆ ೨.೬೭ ಕೋಟಿಗೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ, ಕಳೆದ ೨೪ ಗಂಟೆಗಳಲ್ಲಿ 1,97,894 ಜನರು ಚೇತರಿಸಿಕೊಂಡಿದ್ದಾರೆ.ದೈನಂದಿನ ಪಾಸಿಟಿವಿಟಿ ದರವು ಶೇಕಡಾ 5.78 ಕ್ಕೆ

ದೇಶದಲ್ಲಿ ಒಂದೇ ದಿನ 1.2 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ Read More »

ಹೇಳಿಕೊಟ್ಟಿದ್ದು ಒಂದು, ಕೇಳಿದ್ದು ಮತ್ತೊಂದು : ಎಕ್ಸಾಂ ಎಡವಟ್ಟಿನಲ್ಲಿ ಮಕ್ಳೆಲ್ಲಾ ಫೇಲ್

ಸಮಾಚಾರ ವರದಿ: ಸಾಮಾನ್ಯವಾಗಿ ಪರೀಕ್ಷೆಗಳು ಅಂದಾಗ ಮಕ್ಕಳಿಗೆ ಕಲಿಸಿದ್ದನ್ನೇ ಪ್ರಶ್ನೆಗಳನ್ನಾಗಿ ಕೇಳಿ ಉತ್ತರ ಪಡೆದುಕೊಳ್ತಾರೆ. ಸರಿ ಉತ್ತರ ಬರೆದವ್ನು ಪಾಸ್ ಆದ್ರೆ ಉತ್ತರ ಸರಿ ನೀಡದವ್ನಿಗೆ ಕಡಿಮೆ ಅಂಕವೋ ಅಥವಾ ಫೇಲೋ ಆಗ್ತಾನೆ. ಆದ್ರೆ ಎಕ್ಸಾಮಿನರ್ ತಪ್ಪು ಪ್ರಶ್ನೆ ಕೇಳಿ ಸರಿ ಉತ್ತರ ನಿರೀಕ್ಷಿಸಿದರೆ ಆಗೋದೇನು? ಇಲ್ಲಿ ಆಗಿದ್ದು ಅದೇ.ಪಾಠದಲ್ಲಿ ಇಲ್ಲದ ಪ್ರಶ್ನೆ ಕೇಳಿದ್ದು, ಮಕ್ಕಳಿಗೆ ಉತ್ತರಿಸಲಾಗದೇ ಹೆಚ್ಚೂ ಕಮ್ಮಿ ಎಲ್ಲಾ ಮಕ್ಕಳು ಫೇಲಾದ ಪ್ರಸಂಗ ನಡೆದಿದೆ. ಅಂದ ಹಾಗೆ ಈ ಪರೀಕ್ಷೆ ನಡೆದದ್ದು ಅಂತಿಮ ಸೆಮಿಸ್ಟರ್

ಹೇಳಿಕೊಟ್ಟಿದ್ದು ಒಂದು, ಕೇಳಿದ್ದು ಮತ್ತೊಂದು : ಎಕ್ಸಾಂ ಎಡವಟ್ಟಿನಲ್ಲಿ ಮಕ್ಳೆಲ್ಲಾ ಫೇಲ್ Read More »