ರಾಷ್ಟ್ರೀಯ

ದೇವಸ್ಥಾನಕ್ಕೆ 5 ಕೋಟಿ ರೂ ದೇಣಿಗೆ ನೀಡಿದ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ

ಸಮಗ್ರ ನ್ಯೂಸ್‌: ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಚೈತ್ರ ನವರಾತ್ರಿಯ ಅಷ್ಟಮಿಯ ಸಂದರ್ಭದಲ್ಲಿ ಭಾರತದ ಪ್ರಮುಖ ಎರಡು ದೇವಾಲಯಗಳಾದ ಒಡಿಶಾದ ಪುರಿ ಜಗನ್ನಾಥ ದೇವಾಲಯ ಮತ್ತು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಒಂದೊಂದು ದೇವಸ್ಥಾನಕ್ಕೂ ತಲಾ 2,51,00,000 ರೂ. ಅಂದರೆ ಒಟ್ಟು 5 ಕೋಟಿ ರೂ ದೇಣಿಗೆ ನೀಡಿದ್ದಾರೆ. ಹಿಂದೂ ಧರ್ಮ ಹಾಗೂ ದೇವಾಲಯದ ಬಗ್ಗೆ ಅಪಾರ ಗೌರವ ಹೊಂದಿರುವ ಅಂಬಾನಿ ಕುಟುಂಬ ಆಗಾಗ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. […]

ದೇವಸ್ಥಾನಕ್ಕೆ 5 ಕೋಟಿ ರೂ ದೇಣಿಗೆ ನೀಡಿದ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ Read More »

ಅಹಮದಾಬಾದ್ ನಲ್ಲಿ ಭೀಕರ ಅಪಘಾತ| 10 ಮಂದಿ ದುರ್ಮರಣ

ಸಮಗ್ರ ನ್ಯೂಸ್: ಅಹಮದಾಬಾದ್ ವಡೋದರಾ ಎಕ್ಸ್‌ಪ್ರೆಸ್‌ವೇಯ ನಾಡಿಯಾಡ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಕೆಟ್ಟು ನಿಂತಿದ ಟ್ಯಾಂಕರ್‌ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಈ ಕಾರು ವಡೋದರಾದಿಂದ ಅಹಮದಾಬಾದ್‌ಗೆ ಹೋಗುತ್ತಿತ್ತು. ಅಪಘಾತದ ನಂತರ, ವಡೋದರಾ-ಅಹಮದಾಬಾದ್ ಎಕ್ಸ್‌ಪ್ರೆಸ್ ಹೆದ್ದಾರಿ ಜಾಮ್ ಆಗಿದ್ದು, ಅಪಘಾತದಿಂದ ಕಾರಿನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ವಿಷಯ ತಿಳಿಯಿತ್ತಿದ್ದಂತೆಯೇ ಪೊಲೀಸರು ಹಾಗೂ ಖೇಡಾ ಜಿಲ್ಲೆಯ ಎಸ್ಪಿ

ಅಹಮದಾಬಾದ್ ನಲ್ಲಿ ಭೀಕರ ಅಪಘಾತ| 10 ಮಂದಿ ದುರ್ಮರಣ Read More »

ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ| ಬಾಲರಾಮನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ

ಸಮಗ್ರ ನ್ಯೂಸ್: ಇಂದು ರಾಮ ನವಮಿ ಸಂಭ್ರಮ. ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ಶ್ರೀ ರಾಮ ನವಮಿ. ಈ ವರ್ಷ ವಿಶೇಷವಾಗಿ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ಇಂದು ನೆರವೇರಿತು. ಕೋಟ್ಯಂತರ ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಂಡರು. ಸುಮಾರಾಗಿ ಮೂರರಿಂದ ನಾಲ್ಕು ನಿಮಿಷಗಳ ವರೆಗೆ ರಾಮನ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸಿದೆ.ಸೂರ್ಯರಶ್ಮಿ ನೇರವಾಗಿ ರಾಮ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು

ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ| ಬಾಲರಾಮನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ Read More »

ಹಿಂದೂಗಳ ಮೇಲೆ ದಾಳಿ ಹೆಚ್ಚಳ/ ಕಳವಳ ವ್ಯಕ್ತಪಡಿಸಿದ ಭಾರತೀಯ ಅಮೆರಿಕನ್ ಸಂಸದ,

ಸಮಗ್ರ ನ್ಯೂಸ್: ಅಮೆರಿಕದಲ್ಲಿ ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ ಎಂದು ಭಾರತೀಯ ಅಮೆರಿಕನ್ ಸಂಸದ, ಕರ್ನಾಟಕ ಮೂಲದ ಶ್ರೀ ಥಾನೇದಾರ್ ಕಳವಳ ವ್ಯಕ್ತಪಡಿಸಿದ್ದು, ಇದು ಸಂಘಟಿತ ಹಿಂದೂ ವಿರೋಧಿ ದಾಳಿಯ ಆರಂಭ. ಈ ದ್ವೇಷದ ವಿರುದ್ಧದ ಸದಸ್ಯರೆಲ್ಲರೂ ಒಂದಾಗಬೇಕು ಎಂದು ಕರೆ ಕೊಟ್ಟಿದ್ದಾರೆ. ಹಿಂದೂಗಳ ಮೇಲೆ ದಾಳಿಗಳು ಹೆಚ್ಚಳವಾಗುತ್ತಿದೆ. ಆನ್ಲೈನ್ ಗಳಲ್ಲಿ ಅವರ ವಿರುದ್ಧ ತಪ್ಪು ಮಾಹಿತಿಗಳನ್ನು ನೀಡುವ ಕೆಲಸ ನಡೆಯುತ್ತಿದೆ. ಹಿಂದೂ ಧರ್ಮ ಇತರರ ಮೇಲೆ ದಾಳಿ ಮಾಡುವ ಧರ್ಮವಲ್ಲ, ಆದರೆ ಅವರ ಮೇಲೆ ದೌರ್ಜನ್ಯ

ಹಿಂದೂಗಳ ಮೇಲೆ ದಾಳಿ ಹೆಚ್ಚಳ/ ಕಳವಳ ವ್ಯಕ್ತಪಡಿಸಿದ ಭಾರತೀಯ ಅಮೆರಿಕನ್ ಸಂಸದ, Read More »

ಪುಷ್ಪ 2ನ ಪೋಸ್ಟರ್‌ಗೆ ಮೋದಿ ಐಕಾನ್ ಲುಕ್ ಕೊಟ್ಟ ಫೋಟೋ ವೈರಲ್‌

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯ ಪ್ರಚಾರದ ಜೋರಾಗಿದ್ದು, ರಾಜಕೀಯ ನಾಯಕರು, ಅಭ್ಯರ್ಥಿಗಳು ದೇಶಾದ್ಯಂತ ಮತಯಾಚನೆ ನಡೆಸುತ್ತಿದ್ದಾರೆ. ಅಖಾಡದಲ್ಲಿ ಬೃಹತ್ ಸಮಾವೇಶಗಳು ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಲೋಕಸಭಾ ಚುನಾವಣೆಯ ಹವಾ ಹೇಗಿದೆ ಅನ್ನೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಫೋಟೋಗೆ ಅವರ ಅಭಿಮಾನಿಗಳು ಪುಷ್ಪ ಟಚ್‌ ಕೊಟ್ಟಿದ್ದು, ಫೋಟೋ ಸಖತ್ ವೈರಲ್ ಆಗಿದೆ. ಇತ್ತೀಚಿಗೆ ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಅದೇ ಪೋಸ್ಟರ್‌ ಅನ್ನ ಬಳಸಿಕೊಂಡಿರುವ

ಪುಷ್ಪ 2ನ ಪೋಸ್ಟರ್‌ಗೆ ಮೋದಿ ಐಕಾನ್ ಲುಕ್ ಕೊಟ್ಟ ಫೋಟೋ ವೈರಲ್‌ Read More »

RBI Rules: ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದೀರಾ? ಹಾಗಾದ್ರೆ ಈ ರೂಲ್ಸ್ ಗಳು ಗೊತ್ತಿರಲಿ

ಆಧುನಿಕ ಡಿಜಿಟಲ್ ವಹಿವಾಟಿಗೆ ಬ್ಯಾಂಕ್ ಖಾತೆ ಕೇಂದ್ರವಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು, ಆನ್‌ಲೈನ್‌ನಲ್ಲಿ ಉಳಿಸಲು ಮತ್ತು ವಹಿವಾಟು ನಡೆಸಲು ಬ್ಯಾಂಕ್ ಖಾತೆ ಕಡ್ಡಾಯವಾಗಿದೆ. ಅನೇಕ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲೂ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವವರು ಯಾವುದೇ ಕಂಪನಿ ಸೇರಿದರೂ.. ಸಂಬಳಕ್ಕಾಗಿ ಬ್ಯಾಂಕ್ ಖಾತೆಗಳಂತಹ ಹಲವು ಖಾತೆಗಳು ನಮ್ಮ ಹೆಸರಿನಲ್ಲಿವೆ. ಒಬ್ಬರು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಬಹುದು? ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ನಿಯಮಗಳೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ

RBI Rules: ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದೀರಾ? ಹಾಗಾದ್ರೆ ಈ ರೂಲ್ಸ್ ಗಳು ಗೊತ್ತಿರಲಿ Read More »

ಮಡಿಕೇರಿ: ಮನೆಯಿಂದಲೆ ಮತದಾನ| ಶೇ.41 ರಷ್ಟು ಸಾಧನೆ

ಸಮಗ್ರ ನ್ಯೂಸ್: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ವಯಸ್ಸು 85 ಮೀರಿರುವ ಹಿರಿಯ ನಾಗರೀಕರು(ಎವಿಎಸ್‍ಸಿ), ವಿಕಲಚೇತನರು (ಎವಿಪಿಡಿ) ಮತ್ತು ಕೋವಿಡ್ ಶಂಕಿತ/ಬಾಧಿತ ವ್ಯಕ್ತಿಗಳನ್ನು (ಎವಿಸಿಒ) ಮತ್ತು ಅಗತ್ಯ ಸೇವೆಗಳ ಮೇರೆ ನಿಯೋಜನೆಗೊಂಡಿರುವ (ಎವಿಇಎಸ್) ವ್ಯಕ್ತಿಗಳನ್ನು ಗೈರು ಹಾಜರಿ ಮತದಾರರು ಎಂದು ಪರಿಗಣಿಸಲಾಗುತ್ತದೆ. ಈ ಗೈರು ಹಾಜರಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದೆಂಬುದನ್ನು ಗಮನದಲ್ಲಿರಿಸಿ ಇವರುಗಳಿಗೆ ಮನೆಯಿಂದಲೆ ಮತದಾನ (ಹೋಮ್ ವೋಟಿಂಗ್) ಮಾಡುವ ಸೌಲಭ್ಯ ಕರ್ಣಾಟಕ ಸರಕಾರವು ಕಲ್ಪಿಸಲಾಗಿರುತ್ತದೆ. ಅದರಂತೆ ಮನೆಯಿಂದಲೆ ಮತದಾನ(ಹೋಮ್ ವೋಟಿಂಗ್) ಕಾರ್ಯಕ್ಕೆ ಇಬ್ಬರು

ಮಡಿಕೇರಿ: ಮನೆಯಿಂದಲೆ ಮತದಾನ| ಶೇ.41 ರಷ್ಟು ಸಾಧನೆ Read More »

ಹೈದರಾಬಾದ್: ಅಮ್ಮ ಬೀಡಿ ಕಾರ್ಮಿಕೆ: ಮಗ ಯುಪಿಎಸ್ಸಿಯಲ್ಲಿ 27ನೇ ರ್‍ಯಾಂಕ್

ಸಮಗ್ರ ನ್ಯೂಸ್ : ಯುಪಿಎಸ್ಸಿ ಸಿವಿಲ್ಸ್ ಅಂತಿಮ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ತೆಲುಗು ರಾಜ್ಯಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಈ ಪರೀಕ್ಷೆಗಳಲ್ಲಿ, ಬಡ ಕುಟುಂಬದ ಅನೇಕ ಜನರು ರ್ಯಾಂಕ್ ಪಡೆದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಬೀಡಿ ಕಾರ್ಮಿಕೆಯ ಮಗ ಸಾಯಿಕಿರಣ್ ಯುಪಿಎಸ್ಸಿಯಲ್ಲಿ 27ನೇ ರ್ಯಾಂಕ್ ಪಡೆಯುವ ಮೂಲಕ ಬಡತನವನ್ನು ಮೆಟ್ಟಿ ನಿಂತಿರುವ ಘಟನೆ ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದ ವೆಲಿಚಲ ಗ್ರಾಮದಲ್ಲಿ ನಡೆದಿದೆ. ಕಾಂತ ರಾವ್ ಮತ್ತು ಲಕ್ಷ್ಮಿ ದಂಪತಿ ಮಗ ಸಾಯಿಕಿರಣ್ ಮತ್ತು ಶ್ರವಂತಿ

ಹೈದರಾಬಾದ್: ಅಮ್ಮ ಬೀಡಿ ಕಾರ್ಮಿಕೆ: ಮಗ ಯುಪಿಎಸ್ಸಿಯಲ್ಲಿ 27ನೇ ರ್‍ಯಾಂಕ್ Read More »

Lokasabha election; ಬಲ್ಲವರ‌ ಜಿಲ್ಲೆಯಲ್ಲಿ ಬಿಲ್ಲವರೇ ನಿರ್ಣಾಯಕ| ಒಗ್ಗಟ್ಟು ಪ್ರದರ್ಶಿಸಿದರೆ ಒಡೆಯಲಿದೆ ಬಿಜೆಪಿ ಭದ್ರಕೋಟೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಚಾರ ಕಾರ್ಯ ಜೋರಾಗಿದೆ. ಈ ನಡುವೆ ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಬಿಲ್ಲವ ಮತಗಳೇ ನಿರ್ಣಾಯಕವಾಗಿದ್ದು, ಬಿಲ್ಲವ ವೋಟ್ ಛಿದ್ರವಾಗದಂತೆ ಮತಗಳನ್ನು ಭದ್ರಪಡಿಸಲು ಬಿಜೆಪಿ – – ಕಾಂಗ್ರೆಸ್ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಇದೇ ಸ್ಟ್ರಾಟಜಿಯನ್ನು ಮುಂದುವರಿಸಿರುವ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರಿಂದ ರೋಡ್ ಶೋನಲ್ಲಿ ನಾರಾಯಣ ಗುರುಗಳಿಗೆ ಗೌರವ ಸಹ ನೀಡಲಾಗಿದೆ. ಬಿಜೆಪಿಗೆ ಬಿಲ್ಲವ ಸಮಾಜದ ಪ್ರಭಾವಿ ನಾಯಕ ಪದ್ಮರಾಜ್ ಕಾಂಗ್ರೆಸ್ ನ

Lokasabha election; ಬಲ್ಲವರ‌ ಜಿಲ್ಲೆಯಲ್ಲಿ ಬಿಲ್ಲವರೇ ನಿರ್ಣಾಯಕ| ಒಗ್ಗಟ್ಟು ಪ್ರದರ್ಶಿಸಿದರೆ ಒಡೆಯಲಿದೆ ಬಿಜೆಪಿ ಭದ್ರಕೋಟೆ Read More »

ನವದೆಹಲಿ: ಸುರ್ಜೇವಾಲಾ ಬಿಜೆಪಿ ಸಂಸದೆ ವಿರುದ್ದ ಅವಹೇಳನಕಾರಿ ಹೇಳಿಕೆ: 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ

ಸಮಗ್ರ ನ್ಯೂಸ್‌ : ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರನ್ನು 2 ದಿನಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿರ್ಬಂಧಿಸಲಾಗಿದೆ. ರಣದೀಪ್ ಸುರ್ಜೇವಾಲಾ ಅವರು ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಭಾರತೀಯ ಚುನಾವಣಾ ಆಯೋಗ ಮಂಗಳವಾರ ಈ ಕ್ರಮ ತೆಗೆದುಕೊಂಡಿದೆ. ಇಸಿಐ ಆದೇಶದ ಪ್ರಕಾರ, ಸುರ್ಜೇವಾಲಾ ಅವರು ಇಂದು ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ಸಾರ್ವಜನಿಕ ಸಭೆಗಳನ್ನು ನಡೆಸಲು ನಿಷೇಧ ಹೇರಲಾಗಿದೆ. ಭಾರತದ ಸಂವಿಧಾನದ 324

ನವದೆಹಲಿ: ಸುರ್ಜೇವಾಲಾ ಬಿಜೆಪಿ ಸಂಸದೆ ವಿರುದ್ದ ಅವಹೇಳನಕಾರಿ ಹೇಳಿಕೆ: 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ Read More »