ಸಮಗ್ರ ನ್ಯೂಸ್: ಮ್ಯಾನ್ಮಾರ್‌ನ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ 2 ದೋಣಿಗಳು ಬಂಗಾಳಕೊಲ್ಲಿಯಲ್ಲಿ ಮಗುಚಿ ಬಿದ್ದು ಅದರಲ್ಲಿರುವ ನೂರಾರು ಜನ ನೀರಿನಲ್ಲಿ ಮುಳುಗಿರುವ ಭೀಕರ ಘಟನೆ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕನಿಷ್ಠ 500 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್(UNHCR) ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಇದರ ಪ್ರಕಾರ, “2 ದೋಣಿಗಳು ಜೂನ್ ಅಂತ್ಯದಲ್ಲಿ ಮ್ಯಾನ್ಮಾರ್‌ನ ಸಂಘರ್ಷ ಪೀಡಿತ ರಾಖೈನ್ ರಾಜ್ಯದಿಂದ ಹೊರಟಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೋಹಿಂಗ್ಯಾ ನಿರಾಶ್ರಿತ ಪ್ರಯಾಣಿಕರನ್ನು ಹೊತ್ತೊಯ್ದಿದ್ದವು, ಇದರಲ್ಲಿ ಕೆಲವರು ಬಾಂಗ್ಲಾದೇಶದ ಗಡಿಯಾಚೆಗಿನ ನಿರಾಶ್ರಿತರ ಶಿಬಿರಗಳಿಂದ ಪ್ರಯಾಣಿಸಿದ್ದರು” ಎಂದು ತಿಳಿಸಿದೆ.
ಈ ಹೇಳಿಕೆ ಪ್ರಕಾರ, ಸುಮಾರು 250 ರೋಹಿಂಗ್ಯಾಗಳನ್ನು ಹೊತ್ತೊಯ್ಯುತ್ತಿದ್ದ ಮೊದಲ ಹಡಗು ಪ್ರಯಾಣ ಆರಂಭಿಸಿದ ಸ್ವಲ್ಪ ಸಮಯದ ನಂತರ ಸಂಪರ್ಕ ಕಳೆದುಕೊಂಡಿದೆ. ಇದಾದ ಬಳಿಕ ಸುಮಾರು 280 ರೋಹಿಂಗ್ಯಾಗಗಳನ್ನು ಹೊತ್ತೊಯುತ್ತಿದ್ದ ಎರಡನೇ ಹಡಗು ಜುಲೈ 8 ರಂದು ಮ್ಯಾನ್ಮಾರ್‌ನ ಅಯೆಯರ್‌ವಾಡಿ ಕರಾವಳಿಯಲ್ಲಿ ಮುಳುಗಿದೆ. ಈ ದುರ್ಘಟನೆಯಲ್ಲಿ ಹಡಗಿನಲ್ಲಿದ್ದ ಬಹುತೇಕರು ಅಂದೆ ಕನಿಷ್ಠ 500 ಜನ ಸಾವನ್ನಪ್ಪಿರುವ ಶಂಕೆಯನ್ನು UNHCR ಮತ್ತು IMO ವ್ಯಕ್ತಪಡಿಸಿದ್ದು, ಇದು ಅಧಿಕೃತವಾಗಿ ದೃಢವಾಗದಿದ್ದಾಗ್ಯೂ, ಹಾನಿ ಪ್ರಮಾಣ ತೀವ್ರ ಕಳವಳಕಾರಿಯಾಗಿಲಿದೆ ಎಂಬ ಆತಂಕ ಹೊರಹಾಕಿವೆ.








