ಸಮಗ್ರ ನ್ಯೂಸ್: ರಾಜ್ಯದಲ್ಲಿ ನಕಲಿ ನೋಟು ತಯಾರಿಸುತ್ತಿದ್ದ ಬೃಹತ್ ಜಾಲಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಡಿಂಜೆ ಎಂಬಲ್ಲಿ ಪೊಲೀಸರು ದಾಳಿ ನಡೆಸಿದ್ದು ನಕಲಿ ನೋಟು ತಯಾರಿಸಲು ಬಳಸುತ್ತಿದ್ದ ಮುದ್ರಣ ಯಂತ್ರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಅಲ್ಲದೆ ಉಪ್ಪಿನಂಗಡಿ ಪೊಲೀಸರು 7 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 7 ಆರೋಪಿಗಳ ಬಂಧನವಾಗಿದ್ದು ನಕಲಿ ನೋಟು ತಯಾರಿಸಲು, ಹಾಗೂ ಬಳಸುತ್ತಿದ್ದ ಕಾಗದ ಬಂಡಲ್ ಸೀಜ್ ಮಾಡಿದ್ದಾರೆ. ಗುಣಮಟ್ಟದ ಕಾಗದ ಬಂಡಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದು ವೇಳೆ ನಕಲಿ ನೋಟು ತಯಾರಿಸುವ ಜಾಲ ಬೆಳಕೆಗೆ ಬಾರದೆ ಹೋಗಿದ್ದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ನಕಲಿ ನೋಟು ಮಾರುಕಟ್ಟೆಗೆ ಸೇರುವ ಸಾಧ್ಯತೆ ಇತ್ತು.
ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಠಾಣೆಪಡಿಸಿರುವ ದಾಳಿ ಮಾಡಿದ್ದಾರೆ. ಈ ಜಾಲದ ಬಗ್ಗೆ ಪೊಲೀಸರು ತೀವ್ರತೆ ನಡೆಸುತ್ತಿದ್ದಾರೆ. ನಿರ್ಜನ ಪ್ರದೇಶದಲ್ಲಿ ಇರುವ ಬಾಡಿಗೆ ಮನೆಯಲ್ಲಿ ಈ ಒಂದು ನಕಲಿ ನೋಟಿನ ದಂಧೆ ಅಕ್ರಮ ನಡೆಯುತ್ತಿತ್ತು ಎನ್ನಲಾಗಿದೆ.
ದಾಳಿಯ ವೇಳೆ ನೋಟು ತಯಾರಿಕೆಗೆ ಬಳಸುತ್ತಿದ್ದ ಅತ್ಯಾಧುನಿಕ ಸ್ಕ್ಯಾನರ್ ಕಂ ಮುದ್ರಣ ಯಂತ್ರಗಳು (Printing Machines), ಅಸಲಿ ನೋಟುಗಳನ್ನೇ ಹೋಲುವ ವಿಶೇಷ ಗುಣಮಟ್ಟದ ಕಾಗದದ ಬಂಡಲ್‌ಗಳು (Premium Quality Paper Bundles) ಹಾಗೂ ಈಗಾಗಲೇ ಮುದ್ರಿಸಲಾಗಿದ್ದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.







