ಇರಾನ್ ನ ಚಾಬಹಾರ್ ಬಂದರು ಮೇಲೆ ಅಮೇರಿಕಾ ದಾಳಿ

ಸಮಗ್ರ ನ್ಯೂಸ್: ಅಮೆರಿಕ ಬುಧವಾರ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಆಗ್ನೇಯ ಬಂದರು ನಗರವಾದ ಚಬಹಾರ್ ಅನ್ನು ಗುರಿಯಾಗಿಸಿಕೊಂಡು ಹೊಸ ದಾಳಿಗಳನ್ನು ನಡೆಸಿದೆ. ಇಲ್ಲಿನ ಆಯಕಟ್ಟಿನ ಶಾಹಿದ್ ಕಲಾಂತರಿ ಬಂದರಿನಲ್ಲಿರುವ ಕಾವಲುಗೋಪುರಕ್ಕೆ ಕ್ಷಿಪಣಿ ಅಪ್ಪಳಿಸಿದ್ದು, ಬೃಹತ್ ಪ್ರಮಾಣದ ಹೊಗೆ ಮತ್ತು ಜ್ವಾಲೆ ಆಕಾಶಕ್ಕೆ ಚಿಮ್ಮಿವೆ.

. Ad Widget . Ad Widget

ಒಮಾನ್ ಗಲ್ಫ್ ತೀರದ ಸಿಸ್ತಾನ್ ಮತ್ತು ಬಲುಚೆಸ್ತಾನ್ ಪ್ರಾಂತದಲ್ಲಿರುವ ಚಬಹಾರ್ ಕಾವಲುಗೋಪುರದ ಮೇಲೆ ಅಮೆರಿಕ ನಡೆಸಿದ ಎರಡನೇ ಕ್ಷಿಪಣಿ ದಾಳಿ ಇದಾಗಿದೆ. ಈ ಗೋಪುರವು ಕಡಲ ಭದ್ರತೆ ಮತ್ತು ಮೀನುಗಾರರ ಹುಡುಕಾಟ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಬಳಸಲಾಗುವ ನಾಗರಿಕ ಸೌಲಭ್ಯವಾಗಿದೆ.

. Ad Widget . . Ad Widget . Ad Widget

ಸಿಸ್ತಾನ್ ಮತ್ತು ಬಲುಚೆಸ್ತಾನ್ ಪ್ರಾಂತದಾದ್ಯಂತ ಮಂಗಳವಾರ ತಡರಾತ್ರಿ ನಡೆದ ದಾಳಿಯಲ್ಲಿ 260ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ ನ ಆರೋಗ್ಯ ಸಚಿವಾಲಯ ವರದಿ ಮಾಡಿದೆ.

Leave a Comment

Your email address will not be published. Required fields are marked *