ಎಷ್ಟೇ ಗೋಗರೆದರೂ ಕರಗದ ಪ್ರಿಯಕರನ ಮನ | ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಅಂಗಲಾಚಿದ ಪ್ರೇಯಸಿ | ಇಲ್ಲಿದೆ ಮನಕರಗಿಸುವ ವಿಡಿಯೋ
ಮಧ್ಯಪ್ರದೇಶ: ತನ್ನನ್ನು ಪ್ರೀತಿಸಿದ ಯುವಕ ಬೇರೊಬ್ಬಳು ಯುವತಿಯೊಂದಿಗೆ ವಿವಾಹವಾಗುತ್ತಿರುವ ವಿಷಯ ತಿಳಿದ ಯುವತಿಯೊಬ್ಬಳು ಮನನೊಂದು ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಗೋಗರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ರಾಜ್ಯದ ಹೋಶಂಗಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯುವಕ ಮತ್ತು ಕಾನ್ಪುರ ಮೂಲದ ಯುವತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬೊರನ್ನೊಬ್ಬರು ಬಿಟ್ಟಿರದ ಇಬ್ಬರೂ, ಬಹಳ ಅನ್ಯೋನ್ಯವಾಗಿದ್ದರು. ಆದರೆ ಕೊನೆಯಲ್ಲಿ ಯುವಕ ಕೈಕೊಟ್ಟಿದ್ದಾನೆ. ಯುವಕ ತನಗೆ ಮೋಸ ಮಾಡಿ ಬೇರೊಬ್ಬಳ ಜೊತೆ ಮದುವೆಯಾಗುತ್ತಿರುವ ವಿಷಯ ಇತ್ತೀಚೆಗೆ […]










