ದೇಶ-ವಿದೇಶ

ಪಂಚರಾಜ್ಯ ಕದನ: ಬಿಜೆಪಿ, ಆಪ್ ಮುನ್ನಡೆ

ಸಮಗ್ರ ನ್ಯೂಸ್: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತಎಣಿಕೆ ಆರಂಭವಾಗುತ್ತಿದ್ದಂತೆ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ ಗಳಿಸಿದೆ.

ಪಂಚರಾಜ್ಯ ಕದನ: ಬಿಜೆಪಿ, ಆಪ್ ಮುನ್ನಡೆ Read More »

ನಾಳೆ(ಮಾ.10) ಪಂಚರಾಜ್ಯ ಚುನಾವಣಾ ಫಲಿತಾಂಶ| ಪ್ರತಿಷ್ಟೆಯ ಕದನದಲ್ಲಿ ಗೆಲ್ಲೋರ್ಯಾರು?

ಸಮಗ್ರ ನ್ಯೂಸ್: ಐದು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಗುರುವಾರ(ಮಾ.೧೦) ನಡೆಯಲಿದ್ದು, ಸಂಜೆ ವೇಳೆ ಪ್ರಸ್ತುತ ನಾಲ್ಕು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗಲಿದೆ. ಮಾರ್ಚ್ 10 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತಗಳ ಎಣಿಕೆಯಲ್ಲಿ ಮೊದಲು ಬ್ಯಾಲೆಟ್ ಪೇಪರ್ ಮತಗಳನ್ನು ಎಣಿಕೆ ಮಾಡಲಾಗುವುದು, ನಂತರ

ನಾಳೆ(ಮಾ.10) ಪಂಚರಾಜ್ಯ ಚುನಾವಣಾ ಫಲಿತಾಂಶ| ಪ್ರತಿಷ್ಟೆಯ ಕದನದಲ್ಲಿ ಗೆಲ್ಲೋರ್ಯಾರು? Read More »

ಉಕ್ರೇನ್ ನಿಂದ ರಕ್ಷಿಸಲ್ಪಟ್ಟ ಪಾಕಿಸ್ತಾನಿ ಹುಡುಗಿಯಿಂದ ಮೋದಿಗೆ ಥ್ಯಾಂಕ್ಸ್| ನಮ್ಮವರು ಗುಲಾಬಿ ಕೊಟ್ರೂ ತಗೊಳ್ಳಲ್ವಾ ಮರ್ರೆ..!

ಸಮಗ್ರ ನ್ಯೂಸ್: ಯುದ್ಧಪೀಡಿತ ಉಕ್ರೇನ್ ದೇಶದಿಂದ ಭಾರತೀಯರನ್ನು ಕರೆತರುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಆಪರೇಶನ್ ಗಂಗಾ ಕಾರ್ಯಾಚರಣೆ ಮೂಲಕ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಈ ನಡುವೆ ಕೀವ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಾಯದಿಂದ ಪಾಕಿಸ್ತಾನಿ ಹುಡುಗಿ ಅಸ್ಮಾ ಶಫೀಕ್ ಎಂಬ ವಿದ್ಯಾರ್ಥಿನಿಯನ್ನು ಉಕ್ರೇನ್‌ನ ಯುದ್ಧ ವಲಯದಿಂದ ಸ್ಥಳಾಂತರಿಸಲಾಗಿದೆ. ವೀಡಿಯೊವೊಂದರಲ್ಲಿ, ಅವರು “ಬಹಳ ಕಷ್ಟಕರ ಪರಿಸ್ಥಿತಿ” ಯಿಂದ ಪಾರಾಗಲು ಸಹಾಯ ಮಾಡಿದ್ದಕ್ಕಾಗಿ ಭಾರತೀಯ ರಾಯಭಾರ ಕಚೇರಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ

ಉಕ್ರೇನ್ ನಿಂದ ರಕ್ಷಿಸಲ್ಪಟ್ಟ ಪಾಕಿಸ್ತಾನಿ ಹುಡುಗಿಯಿಂದ ಮೋದಿಗೆ ಥ್ಯಾಂಕ್ಸ್| ನಮ್ಮವರು ಗುಲಾಬಿ ಕೊಟ್ರೂ ತಗೊಳ್ಳಲ್ವಾ ಮರ್ರೆ..! Read More »

ಕೊನೆಗೂ‌ ಕೂಡಿ ಬಂತು ಕಾಲ| ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಬರೋಬ್ಬರಿ ಎರಡು ವರ್ಷಗಳ ಬಳಿಕ ಅನುಮತಿ| ಮಾ.27ರಿಂದ ಸೇವೆಗಳು ಪುನರಾರಂಭ|

ಸಮಗ್ರ ನ್ಯೂಸ್: ಕೊರೋನಾ ಕಾರಣ ಕಳೆದೆರಡು ವರ್ಷದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್ ಆಗಿದ್ದು, ಇದೀಗ ಮತ್ತೆ ಸಂಚಾರವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಅನುಮತಿಸಿದೆ. ಕೋವಿಡ್ ವೈರಸ್ ಹಾವು ಏಣಿ ಆಟವಾಡುತ್ತಿದ್ದ ಕಾರಣ ಭಾರತ ವಿಮಾನಯಾನ ಸಚಿವಾಲಯ ನಿರ್ಬಂಧ ವಿಧಿಸುತ್ತಲೇ ಬಂದಿತ್ತು. ಮಾರ್ಚ್ 27 ರಿಂದ ವಾಣಿಜ್ಯ ಹಾಗೂ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಳ್ಳಲಿದೆ ಎಂದು ವಿಮಾನಯಾನ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಫೆಬ್ರವರಿ 28 ರಂದು ವಿಮಾನಯಾನ ಸಚಿವಾಲಯ ಕೊರೋನಾ ಕಾರಣ ವಿಧಿಸಿದ್ದ ನಿರ್ಬಂಧವನ್ನು ಮತ್ತೆ

ಕೊನೆಗೂ‌ ಕೂಡಿ ಬಂತು ಕಾಲ| ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಬರೋಬ್ಬರಿ ಎರಡು ವರ್ಷಗಳ ಬಳಿಕ ಅನುಮತಿ| ಮಾ.27ರಿಂದ ಸೇವೆಗಳು ಪುನರಾರಂಭ| Read More »

ಚೆನ್ನೈ: ಉಕ್ರೇನ್ ಸೇನೆಯಲ್ಲಿ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಸಾಯಿನಿಕೇಶ್!; ಭಾರತೀಯ ಸೇನಾ ನೇಮಕಾತಿಯಿಂದ ತಿರಸ್ಕೃತನಾದವ ಉಕ್ರೇನ್ ಸೈನ್ಯ ಸೇರಿದ್ಹೇಗೆ?

ಸಮಗ್ರ ನ್ಯೂಸ್: ತಮಿಳುನಾಡಿನ ವಿದ್ಯಾರ್ಥಿಯೋರ್ವ ಇದೀಗ ಉಕ್ರೇನ್ ಸೇರಿ ರಷ್ಯಾ ವಿರುದ್ಧ ಹೋರಾಡುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿದ್ದಾನೆ. ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರನ್ನು ವಿಚಾರಿಸಿದ್ದು, ಈ ವೇಳೆ ಸಾಯಿನಿಕೇಶ್ ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದರು ಆದರೆ ಅವರನ್ನು 2 ಬಾರಿ ತಿರಸ್ಕರಿಸಲಾಗಿತ್ತು ಎಂಬ ವಿಚಾರ ತಿಳಿದುಬಂದಿದೆ. 2018 ರಲ್ಲಿ,

ಚೆನ್ನೈ: ಉಕ್ರೇನ್ ಸೇನೆಯಲ್ಲಿ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಸಾಯಿನಿಕೇಶ್!; ಭಾರತೀಯ ಸೇನಾ ನೇಮಕಾತಿಯಿಂದ ತಿರಸ್ಕೃತನಾದವ ಉಕ್ರೇನ್ ಸೈನ್ಯ ಸೇರಿದ್ಹೇಗೆ? Read More »

ಉಕ್ರೇನ್ ನಲ್ಲಿ ನವೀನ್ ಮೃತದೇಹ‌ ಪತ್ತೆ| ತಾಯ್ನಾಡಿಗೆ ಕರೆತರುವ ಪ್ರಯತ್ನದಲ್ಲಿ ಸಿಎಂ ಬೊಮ್ಮಾಯಿ|

ಸಮಗ್ರ ನ್ಯೂಸ್: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಮೃತಪಟ್ಟಿದ್ದ ಕನ್ನಡಿಗ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ನವೀನ್ ಮೃತದೇಹ ತರುವ ವಿಚಾರವಾಗಿ, ಕೇಂದ್ರ ಸಚಿವ ಜೈಶಂಕರ್ ಜತೆ ಮಾತನಾಡಿದ್ದೇನೆ. ನವೀನ್ ಮೃತದೇಹ ಉಕ್ರೇನ್ ಶವಾಗಾರದಲ್ಲಿ ಇರಿಸಲಾಗಿದೆ. ಯುದ್ಧ ಇನ್ನೂ ನಡೆಯುತ್ತಿರುವುದರಿಂದ ತಕ್ಷಣ ಮೃತದೇಹ ತರಲು ಸಾಧ್ಯವಾಗಿಲ್ಲ. ಆದರೆ ಮೃತದೇಹ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಉಕ್ರೇನ್ ನಲ್ಲಿ ನವೀನ್ ಮೃತದೇಹ‌ ಪತ್ತೆ| ತಾಯ್ನಾಡಿಗೆ ಕರೆತರುವ ಪ್ರಯತ್ನದಲ್ಲಿ ಸಿಎಂ ಬೊಮ್ಮಾಯಿ| Read More »

ರಷ್ಯಾ ಮಿಲಿಟರಿ ಪಡೆ ಜನರಲ್ ನ ಹತ್ಯೆಗೈದ ಉಕ್ರೇನ್

ಸಮಗ್ರ ನ್ಯೂಸ್: ಸೋಮವಾರ ದಂದು ಖಾರ್ಕಿವ್ ಯುದ್ಧದಲ್ಲಿ ರಷ್ಯಾದ ಇನ್ನೊಬ್ಬ ಜನರಲ್ ವಿಟಾಲಿ ಗೆರಾಸಿಮೊವ್ ಕೊಲ್ಲಲ್ಪಟ್ಟರು ಎಂದು ಉಕ್ರೇನಿಯನ್ ರಕ್ಷಣಾ ವರದಿ ಮಾಡಿದೆ. ‘ಆಕ್ರಮಿತ ಸೇನೆಯ ಹಿರಿಯ ಕಮಾಂಡ್ ಸಿಬ್ಬಂದಿಯಲ್ಲಿ ಮತ್ತೊಂದು ನಷ್ಟ’ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ. ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರಷ್ಯಾದ ಕೇಂದ್ರ ಮಿಲಿಟರಿ ಜಿಲ್ಲೆಯ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದರು. ಉಕ್ರೇನಿಯನ್ ರಕ್ಷಣಾ ಸಚಿವಾಲಯದ ಪ್ರಕಾರ, ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ

ರಷ್ಯಾ ಮಿಲಿಟರಿ ಪಡೆ ಜನರಲ್ ನ ಹತ್ಯೆಗೈದ ಉಕ್ರೇನ್ Read More »

ಮುಗಿದ ಚುನಾವಣೆ| ಇಂದು ಮಧ್ಯರಾತ್ರಿಯಿಂದ ತೈಲ‌ ಬೆಲೆಯಲ್ಲಿ ಭಾರೀ ಏರಿಕೆ!?

ಸಮಗ್ರ ನ್ಯೂಸ್: ಪಂಚರಾಜ್ಯಗಳ ಚುನಾವಣೆಗಳು ಪೂರ್ಣಗೊಂಡಿದ್ದು, ಇಂದು ಮಧ್ಯರಾತ್ರಿಯಿಂದಲೇ ತೈಲ ಬೆಲೆ ಏರಿಸಲು ಸರ್ಕಾರಿ ಸ್ವಾಮ್ಯದ ತೈಲ‌ಕಂಪೆನಿಗಳು ನಿರ್ಧರಿಸಿವೆ ಎನ್ನಲಾಗಿದೆ. ಉಕ್ರೇನ್ ವಿರುದ್ಧ ರಷ್ಯಾದ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ತೈಲ ಬೆಲೆಗಳು 2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಕಂಡುಬರದ ಹಂತವನ್ನು ತಲುಪಿದೆ. ಕಚ್ಚಾ ತೈಲ ಬೆಲೆಯಲ್ಲಿ ಜಾಗತಿಕ ದಾಖಲೆಯ ಏರಿಕೆಯಿಂದಾಗಿ, ಡಾಲರ್ ಮೌಲ್ಯದ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದರೊಂದಿಗೆ ತೈಲ ಬೆಲೆಯೂ ಏರಿಕೆಯಾಗಿದೆ. ಇಂಡಿಯನ್ ಆಯಿಲ್‌ನ ಮಾಜಿ ಕಾರ್ಯನಿರ್ವಾಹಕ ಪ್ರೊಫೆಸರ್ ಸುಧೀರ್ ಬಿಶ್ಟ್

ಮುಗಿದ ಚುನಾವಣೆ| ಇಂದು ಮಧ್ಯರಾತ್ರಿಯಿಂದ ತೈಲ‌ ಬೆಲೆಯಲ್ಲಿ ಭಾರೀ ಏರಿಕೆ!? Read More »

‘ಆಪರೇಷನ್ ಗಂಗಾ’ ಯಶಸ್ವಿ| 16 ಸಾವಿರ ಭಾರತೀಯ ವಿದ್ಯಾರ್ಥಿಗಳ ಏರ್ ಲಿಪ್ಟ್ ಪೂರ್ಣ|

ಸಮಗ್ರ ನ್ಯೂಸ್: ಯುದ್ಧಭೂಮಿ ಉಕ್ರೇನ್ ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್ ಗಂಗಾ’ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ ನಂತರ ಬುಡಾಪೆಸ್ಟ್ ನಿಂದ ಕೊನೆಯ ಬ್ಯಾಚಿನ 6, 711 ಭಾರತೀಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹಂಗೇರಿಯಿಂದ ನವದೆಹಲಿಗೆ ವಾಪಸ್ಸಾದರು. ಈ ಕುರಿತು ಟ್ವೀಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಸಚಿವರು, ದೇಶದ ಯುವ ಜನರು, ಇದೀಗ ತಮ್ಮ ತಮ್ಮ ಸ್ಥಳಗಳಿಗೆ ತೆರಳಬಹುದಾಗಿದೆ. ತಮ್ಮ ಪೋಷಕರು ಮತ್ತು ಕುಟುಂಬಸ್ಥರನ್ನು ಸೇರಬಹುದಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವಾರದಲ್ಲಿ,

‘ಆಪರೇಷನ್ ಗಂಗಾ’ ಯಶಸ್ವಿ| 16 ಸಾವಿರ ಭಾರತೀಯ ವಿದ್ಯಾರ್ಥಿಗಳ ಏರ್ ಲಿಪ್ಟ್ ಪೂರ್ಣ| Read More »

ಮುಜುರಾಯಿ‌ ಸಚಿವರ ಮಗಳು ಪ್ರಿಯಕರನೊಂದಿಗೆ ಎಸ್ಕೇಪ್| ಮಂತ್ರಿ ಮಗಳಿಗೆ ಲೈನ್ ಹಾಕಿದ್ದ ಕಿಲಾಡಿ ಯಾರ್ ಗೊತ್ತಾ?

ಸಮಗ್ರ ನ್ಯೂಸ್: ಮುಜುರಾಯಿ ಸಚಿವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಾಜ್ಯದ ಮುಜರಾಯಿ ಸಚಿವ ಶೇಖರ್ ಬಾಬು ಮಗಳು ಮದುವೆಯಾಗಿದ್ದಾರೆ. ಪ್ರಿಯಕರ ಸತೀಶ್ ಕುಮಾರ್ ಹಾಗೂ ಮುಜರಾಯಿ ಸಚಿವ ಶೇಖರ್ ಬಾಬು ಮಗಳು ಜಯ ಕಲ್ಯಾಣಿ, ಪ್ರೇಮ ಪ್ರಕರಣ ತಮಿಳುನಾಡಿನಲ್ಲಿ ಗದ್ದಲ ಸೃಷ್ಟಿ ಮಾಡಿದ್ದು, ಯುವತಿ ರಕ್ಷಣೆ ಕೋರಿ ಪ್ರಿಯಕರ ಸತೀಶ್ ಕುಮಾರ್ ಜೊತೆ ಕರ್ನಾಟಕಕ್ಕೆ ಬಂದಿದ್ದಾರೆ. ಕರ್ನಾಟಕದ ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿರುವ ಈ ಜೋಡಿ ಸದ್ಯ, ಬೆಂಗಳೂರಿನ

ಮುಜುರಾಯಿ‌ ಸಚಿವರ ಮಗಳು ಪ್ರಿಯಕರನೊಂದಿಗೆ ಎಸ್ಕೇಪ್| ಮಂತ್ರಿ ಮಗಳಿಗೆ ಲೈನ್ ಹಾಕಿದ್ದ ಕಿಲಾಡಿ ಯಾರ್ ಗೊತ್ತಾ? Read More »