ಶೀಘ್ರದಲ್ಲೇ ಗೃಹಲಕ್ಷ್ಮಿ 31ನೇ ಕಂತಿನ‌ ಹಣ ಬಿಡುಗಡೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಹಣವನ್ನು ಪಲಾನುಭವಿಗಳ ಖಾತೆಗೆ ವರ್ಗಾಯಿಸಲು 2400 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

Ad Widget ... .. Ad Widget .

ಇದುವರೆಗೆ ರಾಜ್ಯದ 1.24 ಕೋಟಿ ಫಲಾನುಭವಿಗಳಾದ ಮನೆ ಯಜಮಾನಿಯರಾದ ಬ್ಯಾಂಕ್ ಖಾತೆಗೆ 30 ಕಂತುಗಳಲ್ಲಿ ತಲಾ ಎರಡು ಸಾವಿರ ರೂ.ಗಳಂತೆ 60 ಸಾವಿರ ರೂ.ಗಳನ್ನು ಡಿಪಿಟಿ ಮೂಲಕ ಜಮಾ ಮಾಡಲಾಗಿತ್ತು.

Ad Widget

ಇದೀಗ 31ನೇ ಕಂತಿನ ಹಣವನ್ನು ಪಾವತಿಸಲು 2400 ಕೋಟಿ ರೂ.ಗಳನ್ನು ಸರ್ಕಾರ ಸಂಬಂಧಿಸಿದ ಇಲಾಖೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯ ಸರ್ಕಾರ ಇದುವರೆಗೆ 74,650 ಕೋಟಿ ರೂಪಾಯಿ ವ್ಯಯಿಸಿದ್ದು, ಫಲಾನುಭವಿಗಳ ಖಾತೆಗೆ ಒಟ್ಟು 62 ಸಾವಿರ ರೂ. ಪಾವತಿಸಿದಂತಾಗುತ್ತದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

Leave a Comment

Your email address will not be published. Required fields are marked *