ಹುಲಿಗಳು ಹಾದುಹೋಗಲೆಂದೇ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ| ಭಾರತೀಯ ಹೆದ್ದಾರಿ ಪ್ರಾಧಿಕಾರದ ಸೂಪರ್ ಐಡಿಯಾ
ಸಮಗ್ರ ನ್ಯೂಸ್: ಭೂಮಿ ಮೇಲೆ ಬದುಕಲು ಮನುಷ್ಯರಿಗೆಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಪ್ರಾಣಿಗಳಿಗಿದೆ. ಆದರೆ ಮನುಷ್ಯರು ಕಾಡಿನೊಳಕ್ಕೆ ನುಗ್ಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ಮತ್ತೊಂದೆಡೆ ಅದರ ಆಹಾರವನ್ನು ಕಸಿದುಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಮತ್ತೊಂದೆಡೆ ಅದರ ವಾಸಸ್ಥಾನವಾದ ಕಾಡಿನತ್ತ ರಸ್ತೆಗಳು ಹಾದು ಹೋಗುತ್ತಿವೆ. ಇದರಿಂದ ವಾಹನಕ್ಕೆ ಸಿಲುಕಿ ವರ್ಷಕ್ಕೆ ಅದೆಷ್ಟೋ ಪ್ರಾಣಿಗಳು ಅಪಘಾತದಲ್ಲಿ ಸಾವನ್ನಪ್ಪುತ್ತಿವೆ. ಆದರೆ ಇಂತಹ ಸನ್ನಿವೇಷ ಎದುರಾಗಬಾರದು ಎಂಬ ಕಾರಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಹಾದು ಹೋಗುವ










