ದೇಶ-ವಿದೇಶ

ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಭೂಕಂಪ| ಬೆಳ್ಳಂಬೆಳಗ್ಗೆ ‌ನಡುಗಿದ ವಸುಂಧರೆ

ಸಮಗ್ರ ನ್ಯೂಸ್: ಇಂದು ಮುಂಜಾನೆ 5:07 ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್‌ಬ್ಲೇರ್ ಪ್ರದೇಶದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್‌ಬ್ಲೇರ್ ಪ್ರದೇಶದಲ್ಲಿ ಇಂದು ಮುಂಜಾನೆ 5:07 ರ ಸುಮಾರಿಗೆ ಬೂಮಿಯಿಂದ 10 ಕಿಮೀ ಆಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು NCS ಟ್ವೀಟ್‌ ಮಾಡಿದೆ. ಭೂಕಂಪದಿಂದಾಗಿ ಯಾವುದೇ ಹಾನಿಯ ಬಗ್ಗೆ ಇನ್ನೂ ವರದಿಯಾಗಿಲ್ಲ.

ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಭೂಕಂಪ| ಬೆಳ್ಳಂಬೆಳಗ್ಗೆ ‌ನಡುಗಿದ ವಸುಂಧರೆ Read More »

ಪಿಯುಸಿ ಪರೀಕ್ಷೆ ಹಿನ್ನಲೆ| ಪರೀಕ್ಷೆಗೆ ತೆರಳಲು KSRTC ನಿಂದ ಉಚಿತ ಪ್ರಯಾಣಕ್ಕೆ ಅವಕಾಶ

ಸಮಗ್ರ ನ್ಯೂಸ್: ಮಾರ್ಚ್​ 9 ರಂದು ದ್ವಿತೀಯ ಪಿಯು ಪರೀಕ್ಷೆ ಪ್ರಾರಂಭಗಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಲು ಉಚಿತ ಬಸ್​ ಪ್ರಯಾಣ ಮಾಡಲು ವ್ಯವಸ್ಥೆ ಮಾಡಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳ ಕೇಂದ್ರಗಳ ಹೊರತಾಗಿ ಬೇರೆ ಸ್ಥಳಗಳಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಸಂಚರಿಸಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಲಭ್ಯವಾಗಲಿದೆ. ಈ ಹಿಂದೆಯೇ ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯು ಉಚಿತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ದಿನಗಳಲ್ಲಿ ಉಚಿತ

ಪಿಯುಸಿ ಪರೀಕ್ಷೆ ಹಿನ್ನಲೆ| ಪರೀಕ್ಷೆಗೆ ತೆರಳಲು KSRTC ನಿಂದ ಉಚಿತ ಪ್ರಯಾಣಕ್ಕೆ ಅವಕಾಶ Read More »

ಮಾ.9 ರಿಂದ ಪಿಯುಸಿ ಪರೀಕ್ಷೆ| ಹಿಜಾಬ್ ಧರಿಸಿದ ವಿದ್ಯಾರ್ಥಿ, ಅಧಿಕಾರಿಗಳಿಗೂ ನೋಎಂಟ್ರಿ – ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್: ಮಾ.9 ರಿಂದ ಆರಂಭವಾಗಲಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ನೀಡುವಂತೆ ವಿದ್ಯಾರ್ಥಿನಿಯರು ಮಾಡಿದ ಮನವಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿರಸ್ಕರಿಸಿದ್ದು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಸೂಚಿಸಿದೆ. ‘ಹಿಜಾಬ್‌ ಪ್ರಸ್ತಾವನೆಯು ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ವಾರ್ಷಿಕ ಪರೀಕ್ಷೆಯ ವೇಳೆ ಹಿಜಾಬ್ ಅನುಮತಿಸುವ ಪ್ರಶ್ನೆಯೇ ಉದ್ಬಾವಿಸುವುದಿಲ್ಲ. ಈ ಕಾರಣಕ್ಕೆ ಯಾವ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗುತ್ತಾರೆ ಎಂಬುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’

ಮಾ.9 ರಿಂದ ಪಿಯುಸಿ ಪರೀಕ್ಷೆ| ಹಿಜಾಬ್ ಧರಿಸಿದ ವಿದ್ಯಾರ್ಥಿ, ಅಧಿಕಾರಿಗಳಿಗೂ ನೋಎಂಟ್ರಿ – ಸಚಿವ ಬಿ.ಸಿ ನಾಗೇಶ್ Read More »

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ| ಐಬಿಎ ನಿಂದ ಉದ್ಯೋಗಿಗಳ ಬೇಡಿಕೆಗೆ ತಾತ್ವಿಕ ಒಪ್ಪಿಗೆ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಐದು ದಿನ ಮಾತ್ರ ಕಾರ್ಯನಿರ್ವಹಿಸಿ ಎರಡು ದಿನ ರಜೆ ನೀಡಬೇಕೆಂಬ ಉದ್ಯೋಗಿಗಳ ಬೇಡಿಕೆಗೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್(ಐಬಿಎ) ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಒಪ್ಪಿದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಖಾಸಗಿ ಕಂಪನಿಗಳಲ್ಲಿ ವಾರಕ್ಕೆ 5 ದಿನಕ್ಕೆ ವೀಕೆಂಡ್ ರಜೆ ಇರುವಂತೆ ಬ್ಯಾಂಕಿಂಗ್ ವಲಯದಲ್ಲಿಯೂ ವಾರಕ್ಕೆ ಐದು ದಿನ ಕೆಲಸ, ಎರಡು ದಿನ ರಜೆ ನೀಡಬೇಕೆಂಬ ಬೇಡಿಕೆ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯಿಸ್

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ| ಐಬಿಎ ನಿಂದ ಉದ್ಯೋಗಿಗಳ ಬೇಡಿಕೆಗೆ ತಾತ್ವಿಕ ಒಪ್ಪಿಗೆ Read More »

ಗೃಹಬಳಕೆಯ ಎಲ್ ಪಿಜಿ ದರದಲ್ಲಿ ಭಾರೀ ಏರಿಕೆ| ಇಂದಿನಿಂದಲೇ ಹೊಸ ದರ ಜಾರಿ

ಸಮಗ್ರ ನ್ಯೂಸ್: ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಮತ್ತೆ ಹೆಚ್ಚಳವಾಗಿದೆ. ನೂತನ ದರ ಇಂದಿನಿಂದ ಜಾರಿಗೆ ಬರಲಿದೆ. ಪ್ರತಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳವಾಗಿದೆ. 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು, ನೂತನ ದರ ಇಂದಿನಿಂದ ಜಾರಿಗೆ ಬರಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 1103 ರೂ. ಆಗಿದ್ದು, ಎಂಟು ತಿಂಗಳ ಬಳಿಕ ಗೃಹ ಬಳಕೆಯ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದೆ. ಜುಲೈ 6

ಗೃಹಬಳಕೆಯ ಎಲ್ ಪಿಜಿ ದರದಲ್ಲಿ ಭಾರೀ ಏರಿಕೆ| ಇಂದಿನಿಂದಲೇ ಹೊಸ ದರ ಜಾರಿ Read More »

ವಿಶ್ವಸಂಸ್ಥೆ ಸಭೆಯಲ್ಲಿ ಕೈಲಾಸದ ಪ್ರತಿನಿಧಿ| ಭಾರತದ ವಿರುದ್ಧ ನಿತ್ಯಾನಂದನ ದೂರು

ಸಮಗ್ರ ನ್ಯೂಸ್: ವಿವಾದಿತ ಸ್ವಯಂ ಘೋಷಿತ ದೇವಮಾನ ಬಿಡದಿ ನಿತ್ಯಾನಂದ ಇದೀಗ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ಹಲವು ಆರೋಪಗಳನ್ನು ಹೊತ್ತು ಭಾರತದಿಂದ ಪರಾರಿಯಾಗಿ ದ್ವೀಪ ರಾಷ್ಟ್ರ ಖರೀದಿಸಿ ಕೈಲಾಸ ಎಂದು ಹೆಸರಿಟ್ಟು ಆಡಳಿತ ನಡೆಸುತ್ತಿರುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಸೃಷ್ಟಿಯಾದ ಕೈಲಾಸ ದೇಶ ಇದೀಗ ವಿಶ್ವಸಂಸ್ಥೆಯ ಮಹತ್ವದ ಸಮ್ಮೇಳನದಲ್ಲಿ ಭಾಗಿಯಾಗಿದೆ. ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಗಳು ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಇಷ್ಟೇ ಅಲ್ಲ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ನಿಂತಿರುವ ನಿತ್ಯಾನಂದನಿಗೆ ಭಾರತದಲ್ಲಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಹಿಂದೂ

ವಿಶ್ವಸಂಸ್ಥೆ ಸಭೆಯಲ್ಲಿ ಕೈಲಾಸದ ಪ್ರತಿನಿಧಿ| ಭಾರತದ ವಿರುದ್ಧ ನಿತ್ಯಾನಂದನ ದೂರು Read More »

ಹಳೆಯ ಲೋಗೊ ಬದಲಾಯಿಸಿದ ನೋಕಿಯಾ| 60 ವರ್ಷಗಳ ಬಳಿಕ ಹೊಸ ರೂಪದತ್ತ ಟೆಲಿಕಾಂ ದೈತ್ಯ

ಸಮಗ್ರ ನ್ಯೂಸ್: ಕಳೆದ 60 ವರ್ಷದಲ್ಲಿ ಇದೇ ಮೊದಲ ಬಾರಿಗೆ ತನ್ನ ಸಾಂಪ್ರದಾಯಿಕ ಲೋಗೋವನ್ನು ಬದಲಾಯಿಸುವ ಮೂಲಕ ಪ್ರಸಿದ್ಧ ಟೆಲಿಕಾಂ ಸಾಧನ ಉತ್ಪಾದಕ ಸಂಸ್ಥೆ ಹೊಸ ಕಾರ್ಯತಂತ್ರದ ಸೂಚನೆ ನೀಡಿದೆ. ಹೊಸ ಲೋಗೋದಲ್ಲಿ ‘ನೋಕಿಯಾ’ ಪದದ ಐದು ಅಕ್ಷರಗಳು ಐದು ವಿಭಿನ್ನ ಆಕಾರದಲ್ಲಿವೆ.‌ಹಳೆಯ ಲೋಗೋದ ವಿಶಿಷ್ಟ ನೀಲಿ ಬಣ್ಣವನ್ನು ಬಳಕೆಯ ಅನುಗುಣವಾಗಿ ಬಣ್ಣಗಳ ಶ್ರೇಣಿಗೆ ಕೈಬಿಡಲಾಗಿದೆ. ‘ಈ ಹಿಂದೆ ಸ್ಮಾರ್ಟ್ ಫೋನ್ ಗಳಿಗೆ ಸಂಬಂಧಿಸಿದ ನಮ್ಮ ಸಂಸ್ಥೆ ಇಂದು ವ್ಯಾಪಾರ ತಂತ್ರಜ್ಞಾನದ ಸಂಸ್ಥೆಯಾಗಿದೆ. 2020ರ ಬಿಕ್ಕಟ್ಟಿನ ಬಳಿಕ

ಹಳೆಯ ಲೋಗೊ ಬದಲಾಯಿಸಿದ ನೋಕಿಯಾ| 60 ವರ್ಷಗಳ ಬಳಿಕ ಹೊಸ ರೂಪದತ್ತ ಟೆಲಿಕಾಂ ದೈತ್ಯ Read More »

ನಾಳೆ(ಫೆ.27) ರಾಜ್ಯಕ್ಕೆ ಮತ್ತೊಮ್ಮೆ ಪಿಎಂ ಮೋದಿ ಭೇಟಿ| ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ| ಬೆಳಗಾವಿಯಲ್ಲಿ ಕಿಸಾನ್ ಸಮ್ಮಾನ್ ಕಂತು ಬಿಡುಗಡೆ

ಸಮಗ್ರ ನ್ಯೂಸ್: ಫೆಬ್ರವರಿ 27ರಂದು ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:35ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಳಗ್ಗೆ 11:45 ರಿಂದ 11:55 ರ ವರೆಗೆ ಶಿವಮೊಗ್ಗದಲ್ಲಿ ಟರ್ಮಿನಲ್ ಬಿಲ್ಡಿಂಗ್ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 1.15 ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1:30 ಕ್ಕೆ ಶಿವಮೊಗ್ಗದಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 2.20 ಕ್ಕೆ ಬೆಳಗಾವಿ ವಿಮಾನ

ನಾಳೆ(ಫೆ.27) ರಾಜ್ಯಕ್ಕೆ ಮತ್ತೊಮ್ಮೆ ಪಿಎಂ ಮೋದಿ ಭೇಟಿ| ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ| ಬೆಳಗಾವಿಯಲ್ಲಿ ಕಿಸಾನ್ ಸಮ್ಮಾನ್ ಕಂತು ಬಿಡುಗಡೆ Read More »

ಮದ್ಯ‌ಹಗರಣ; ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ‌ ಅರೆಸ್ಟ್

ಸಮಗ್ರ ನ್ಯೂಸ್: ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ಈ ಹಿಂದೆ ಸಿಬಿಐ ಈ ಪ್ರಕರಣದಲ್ಲಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಅವರು (ಮನೀಶ್ ಸಿಸೋಡಿಯಾ) ಅಬಕಾರಿ ನೀತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಕೆಲವು ಸೂಚನೆಗಳನ್ನು ನೀಡಿದ್ದರು ಎಂದು ಅವರು ಹೇಳಿದರು ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ಆಪ್‌ ಬೆಂಬಲಿಗರ ಭಾರಿ ಬೆಂಬಲದೊಂದಿಗೆ ಸಿಸೋಡಿಯಾ ಅವರು ಭಾನುವಾರ ದಿಲ್ಲಿಯ ಸಿಬಿಐ ಪ್ರಧಾನ ಕಚೇರಿಗೆ ಬೆಳಗ್ಗೆ

ಮದ್ಯ‌ಹಗರಣ; ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ‌ ಅರೆಸ್ಟ್ Read More »

ಅರುಣ್ ಜೇಟ್ಲಿ ಪುತ್ರನಿಂದ ಲೈಂಗಿಕ ದೌರ್ಜನ್ಯ ಆರೋಪ| ಬಿಸಿಸಿಐ ಗೆ ದೂರು ನೀಡಿದ ಮಹಿಳೆ

ಸಮಗ್ರ ನ್ಯೂಸ್: ದೆಹಲಿ ಡಿಸ್ಟ್ರಿಕ್ಟ್​​ ಕ್ರಿಕೆಟ್​​ ಅಸೋಸಿಯೇಷನ್​ ಅಧ್ಯಕ್ಷ ರೋಹಿತ್​ ಜೇಟ್ಲಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಜ್ಯೋತ್ಸ್ನಾ ಸಹ್ನಿ ಎಂಬ ಮಹಿಳೆ ರೋಹನ್ ಜೇಟ್ಲಿ ವಿರುದ್ಧ ಈ ಆರೋಪವನ್ನು ಮಾಡಿದ್ದು ಬಿಸಿಸಿಐಗೆ ದೂರು ನೀಡಿದ್ದಾರೆ. 3 ಪುಟಗಳ ಈಮೇಲ್‌ನಲ್ಲಿ ಮದುವೆಯ ನೆಪದಲ್ಲಿ ರೋಹನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಡಿಡಿಸಿಎ ನಿಧಿ ದುರ್ಬಳಕೆಯ ಆರೋಪ ಮಾಡಿದ್ದು, ತನಗೆ ಜೀವ ಬೆದರಿಕೆಯನ್ನು ಕೂಡ ಒಡ್ಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಸಂತ್ರಸ್ತ

ಅರುಣ್ ಜೇಟ್ಲಿ ಪುತ್ರನಿಂದ ಲೈಂಗಿಕ ದೌರ್ಜನ್ಯ ಆರೋಪ| ಬಿಸಿಸಿಐ ಗೆ ದೂರು ನೀಡಿದ ಮಹಿಳೆ Read More »