ದೇಶ-ವಿದೇಶ

2004-2014 ಹಗರಣಗಳ‌ ದಶಕ| ಕಾಂಗ್ರೆಸ್ ವಿರುದ್ದ ಸಂಸತ್ತಿನಲ್ಲಿ ಪ್ರಧಾನಿ ವಾಗ್ದಾಳಿ

ಸಮಗ್ರ ನ್ಯೂಸ್: ಬಜೆಟ್​ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಪಾಲ್ಗೊಂಡು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಟೀಕಾಪ್ರಹಾರ ಎಸಗಿದರು. ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾ ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ನಡೆಸಿದರು. ಯುಪಿಎ ಸರ್ಕಾರದ ಅವಧಿಯ ಆಡಳಿತವನ್ನು ಪ್ರಸ್ತಾಪಿಸಿ, “ಆ 10 ವರ್ಷಗಳಲ್ಲಿ ದೇಶದಲ್ಲಿ ಕೇವಲ ಹತ್ಯೆಗಳು, ಭಯೋತ್ಪಾದನೆ ಹಾಗು ಹಗರಣಗಳೇ ತುಂಬಿದ್ದವು. ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿ […]

2004-2014 ಹಗರಣಗಳ‌ ದಶಕ| ಕಾಂಗ್ರೆಸ್ ವಿರುದ್ದ ಸಂಸತ್ತಿನಲ್ಲಿ ಪ್ರಧಾನಿ ವಾಗ್ದಾಳಿ Read More »

ಅಬಕಾರಿ ಇಲಾಖೆಯಲ್ಲಿ‌1100 ಹುದ್ದೆಗಳಿಗೆ ಅರ್ಜಿ‌ ಆಹ್ವಾನ

ಸಮಗ್ರ ನ್ಯೂಸ್: ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ

ಅಬಕಾರಿ ಇಲಾಖೆಯಲ್ಲಿ‌1100 ಹುದ್ದೆಗಳಿಗೆ ಅರ್ಜಿ‌ ಆಹ್ವಾನ Read More »

ಕುತೂಹಲ ಮೂಡಿಸಿದ‌ ಮೈಲಾರ ಗೊರವಯ್ಯನ ಕಾರ್ಣಿಕ ನುಡಿ| ಅಂಬಲಿ ಹಳಸೀತು, ಕಂಬಳಿ ಬೀಸಿತಲೇ ಎಂದ ಗೊರವಯ್ಯ| ಏನಿದರ ಒಳ ಮರ್ಮ?

ಸಮಗ್ರ ನ್ಯೂಸ್: ತೀವ್ರ ಕೂತುಹಲ ಕೆರಳಿಸಿದ್ದ ಈ ಬಾರಿಯ ಮೈಲಾರ ಕಾರ್ಣಿಕೋತ್ಸವವನ್ನು ಮಂಗಳವಾರ ಗೊರವಯ್ಯ ನುಡಿದಿದ್ದಾರೆ. ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್ ಎಂಬ ದೈವನುಡಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಅನ್ನದಾತರಿಗೆಲ್ಲಾ ಆನಂದ ತಂದಿದ್ದರೆ, ರಾಜಕೀಯ ಪಕ್ಷಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಹೊಂದಿರುವ ಐತಿಹಾಸಿಕ ಸುಕ್ಷೇತ್ರ ಮೈಲಾರ ಕಾರ್ಣಿಕೋತ್ಸವ ಅದ್ದೂರಿಯಾಗಿ ಜರುಗಿತು. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಭಂಡಾರದ ಒಡೆಯ ದೈವವಾಣಿಯನ್ನು ಲಕ್ಷಾಂತರ ಜನರು ಆಲಿಸಿದರು‌. ಭರತ ಹುಣ್ಣಿಮೆ ನಂತರ

ಕುತೂಹಲ ಮೂಡಿಸಿದ‌ ಮೈಲಾರ ಗೊರವಯ್ಯನ ಕಾರ್ಣಿಕ ನುಡಿ| ಅಂಬಲಿ ಹಳಸೀತು, ಕಂಬಳಿ ಬೀಸಿತಲೇ ಎಂದ ಗೊರವಯ್ಯ| ಏನಿದರ ಒಳ ಮರ್ಮ? Read More »

ಟರ್ಕಿ ಭೂಕಂಪ; ಹೆಚ್ಚಾಗುತ್ತಿರುವ ಸಾವಿನ ಸಂಖ್ಯೆ; ಅಪಾರ ಹಾನಿ| ಸಹಾಯಹಸ್ತ ಚಾಚಿದ ಭಾರತ

ಸಮಗ್ರ ನ್ಯೂಸ್: ಟರ್ಕಿಯಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಎರಡು ಗಂಟೆಗಳಲ್ಲಿ ಟರ್ಕಿಯಲ್ಲಿ 7.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಆಗ್ನೇಯ ಟರ್ಕಿಯಲ್ಲಿ 14 ದಶಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ಇದು ದೊಡ್ಡ ವಿಪತ್ತು ಎಂದು ಹೇಳಲಾಗಿದೆ. 21,103 ಜನರು ಗಾಯಗೊಂಡಿದ್ದಾರೆ, ಸುಮಾರು 6000 ಕಟ್ಟಡಗಳು ಕುಸಿದಿವೆ, 3 ವಿಮಾನ ನಿಲ್ದಾಣಗಳಿಗೆ ಹಾನಿಯಾಗಿದೆ ಎಂದು ಭಾರತದಲ್ಲಿನ ಟರ್ಕಿ ರಾಯಭಾರಿ ತಿಳಿಸಿದ್ದಾರೆ. ಇನ್ನು ಸಹಾಯಕ್ಕಾಗಿ ನಿನ್ನೆ, ಭಾರತವು ಉಪಕರಣಗಳೊಂದಿಗೆ ರಕ್ಷಣಾ ಮತ್ತು ಶೋಧ ತಂಡಗಳನ್ನು ಹೊತ್ತು ಟರ್ಕಿಗೆ ವಾಹಕಗಳನ್ನು

ಟರ್ಕಿ ಭೂಕಂಪ; ಹೆಚ್ಚಾಗುತ್ತಿರುವ ಸಾವಿನ ಸಂಖ್ಯೆ; ಅಪಾರ ಹಾನಿ| ಸಹಾಯಹಸ್ತ ಚಾಚಿದ ಭಾರತ Read More »

ಮುಂದುವರಿದ ಮರಣ ಮೃದಂಗ| ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ| ಕಂಪಿಸುತ್ತಲೇ ಇದೆ ಟರ್ಕಿ..!

ಸಮಗ್ರ ನ್ಯೂಸ್: ಟರ್ಕಿ ಹಾಗೂ ಸಿರಿಯಾದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪ ಸಂಭವಿಸಿದ್ದು ಮೃತಪಟ್ಟವರ ಸಂಖ್ಯೆ 1200ಕ್ಕೆ ಏರಿಕೆಯಾಗಿದ್ದು, ಪ್ರಬಲ ಭೂಕಂಪನದ ನಂತರ ಸುಮಾರು 40 ಬಾರಿ ಕಂಪನಗಳು ಸಂಭವಿಸಿವೆ. ಈಜಿಪ್ಟನ್ ನ ಸೈಪ್ರಸ್ ಎಂಬ ದ್ವೀಪದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದ್ದು, ಭೂಮಿಯಿಂದ 17.9 ಕಿ.ಮೀ. ಆಳದಲ್ಲಿ ಭೂಮಿ ನಡುಗಿದೆ. ಭೂಕಂಪನದಲ್ಲಿ ಟರ್ಕಿಯಲ್ಲಿ 1720ಕ್ಕೂ ಹೆಚ್ಚು ಕಟ್ಟಡಗಳು ಧರೆಗುರುಳಿದಿದ್ದು, 912 ಮಂದಿ ಮೃತಪಟ್ಟಿದ್ದಾರೆ. 8 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 130 ಕಟ್ಟಡಗಳು ಭಾಗಶಃ ಹಾನಿಯಾಗಿದ್ದರೆ,

ಮುಂದುವರಿದ ಮರಣ ಮೃದಂಗ| ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ| ಕಂಪಿಸುತ್ತಲೇ ಇದೆ ಟರ್ಕಿ..! Read More »

ಟರ್ಕಿ, ಸಿರಿಯಾದಲ್ಲಿ 7.8 ತೀವ್ರತೆಯ ಭೀಕರ ಭೂಕಂಪ| 100ಕ್ಕೂ ಹೆಚ್ಚು ಮಂದಿ ಸಾವು| ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ; ಅಪಾರ ಹಾನಿ

ಸಮಗ್ರ ನ್ಯೂಸ್: ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಅನೇಕರು ಮಲಗಿದ್ದಾಗಲೇ ಕಟ್ಟಡಗಳು ನೆಲಚ್ಚಿದ್ದು ಭೂಮಿ ಸೈಪ್ರಸ್ ಮತ್ತು ಈಜಿಪ್ಟ್​ವರೆಗೆ ಕಂಪಿಸಿದೆ. ಟರ್ಕಿಯಲ್ಲಿನ ತುರ್ತು ಸೇವಾ ಅಧಿಕಾರಿಗಳು ಆರಂಭಿಕ ಸಾವಿನ ಸಂಖ್ಯೆಯನ್ನು 76 ಎಂದು ಹೇಳಿದ್ದು, ಇದು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ರಾತ್ರಿಯ ದುರಂತ, ಪ್ರಮುಖ ನಗರಗಳಲ್ಲಿ ಅನೇಕ ಕಟ್ಟಡಗಳು ನೆಲಸಮ ಆಗಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಿರಿಯಾದ ಸರ್ಕಾರದ ನಿಯಂತ್ರಣ ಇರುವ ಭಾಗಗಳಲ್ಲಿ ಮತ್ತು

ಟರ್ಕಿ, ಸಿರಿಯಾದಲ್ಲಿ 7.8 ತೀವ್ರತೆಯ ಭೀಕರ ಭೂಕಂಪ| 100ಕ್ಕೂ ಹೆಚ್ಚು ಮಂದಿ ಸಾವು| ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ; ಅಪಾರ ಹಾನಿ Read More »

ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ವಿಚಾರ| ಕೇಂದ್ರಕ್ಕೆ ನೊಟೀಸ್ ಜಾರಿ‌ ಮಾಡಿದ ಸುಪ್ರೀಂ

ಸಮಗ್ರ ನ್ಯೂಸ್: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. 2002 ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಷನ್’ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಯೂಟ್ಯೂಬ್​ನಲ್ಲಿ ತೆಗೆದುಹಾಕುವ ನಿರ್ಧಾರದ ಕುರಿತು ದಾಖಲೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ

ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ವಿಚಾರ| ಕೇಂದ್ರಕ್ಕೆ ನೊಟೀಸ್ ಜಾರಿ‌ ಮಾಡಿದ ಸುಪ್ರೀಂ Read More »

9600 ಕೋಟಿ‌ ಭೂಹಗರಣ ಆರೋಪ| ರಾಬರ್ಟ್ ವಾದ್ರಾ, ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತಕ್ಕೆ ಬಿಜೆಪಿ ದೂರು

ಸಮಗ್ರ ನ್ಯೂಸ್: ಬೆಂಗಳೂರು ಮತ್ತು ಸುತ್ತಮುತ್ತಲಿನ 1,100 ಎಕರೆ ಭೂಮಿಯನ್ನು ಅಕ್ರಮವಾಗಿ 9,600 ಕೋಟಿ ರೂ. ಸ್ವಾಧೀನಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ಈ ಸಂಬಂಧ ರಮೇಶ್ 120 ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಹಗರಣ ನಡೆದಿದೆ. ಅವರು

9600 ಕೋಟಿ‌ ಭೂಹಗರಣ ಆರೋಪ| ರಾಬರ್ಟ್ ವಾದ್ರಾ, ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತಕ್ಕೆ ಬಿಜೆಪಿ ದೂರು Read More »

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ| ರಾಜ್ಯದಲ್ಲಿ ಮೋಡಕವಿದ ವಾತಾವರಣ|

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಶ್ರೀಲಂಕಾ, ಕೇರಳ, ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯು ಇಂದೂ ಕೂಡ ಮುಂದುವರೆಯಲಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಿರುವರೂರು ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದಲ್ಲದೆ, ನಾಗಪಟ್ಟಣಂ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಶ್ರೀಲಂಕಾ, ತಮಿಳುನಾಡು ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇದೆ. ತಮಿಳುನಾಡು ಮತ್ತು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ| ರಾಜ್ಯದಲ್ಲಿ ಮೋಡಕವಿದ ವಾತಾವರಣ| Read More »

1105 ಹುದ್ದೆಗಳ ಭರ್ತಿಗಾಗಿ UPSC ನಿಂದ ನೊಟಿಫಿಕೇಶನ್ ರಿಲೀಸ್|

ಸಮಗ್ರ ನ್ಯೂಸ್: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ದೇಶದ ಅತ್ಯುನ್ನತ ಸೇವೆಗಳಿಗೆ ನೇಮಕಾತಿಗಾಗಿ ಪ್ರತಿ ವರ್ಷ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ. ಈ ವರ್ಷ 1105 ಅಭ್ಯರ್ಥಿಗಳು ನೇಮಕಗೊಳ್ಳಲಿದ್ದಾರೆ. ಅದಕ್ಕಾಗಿ UPSC ನಾಗರಿಕ ಸೇವಾ ಪರೀಕ್ಷೆ 2023 ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಫೆಬ್ರವರಿ 21 ಸಂಜೆ 6:00 ರವರೆಗೆ upsc.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಮೇ 28 ರಂದು ಮೇನ್ಸ್ ಸ್ಕ್ರೀನಿಂಗ್ ಟೆಸ್ಟ್ ಸಿವಿಲ್ ಸರ್ವೀಸಸ್ ಪರೀಕ್ಷೆ (Preliminary) ನಡೆಸಲಾಗುವುದು. ಅಧಿಕೃತ ಅಧಿಸೂಚನೆಯ ಪ್ರಕಾರ,

1105 ಹುದ್ದೆಗಳ ಭರ್ತಿಗಾಗಿ UPSC ನಿಂದ ನೊಟಿಫಿಕೇಶನ್ ರಿಲೀಸ್| Read More »