ದೇಶ-ವಿದೇಶ

ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ| 104 ಮಂದಿ ಸಾವು

ಸಮಗ್ರ ನ್ಯೂಸ್: ಸಹಜ ಸ್ಥಿತಿಗೆ ಮರಳುತ್ತಿದ್ದ ಗಾಜಾಪಟ್ಟಿಯಲ್ಲಿ ಹಮಾಸ್‌ ಕದನ ವಿರಾಮ ಉಲ್ಲಂಘಿಸಿದೆ ಎಂದು ಇಸ್ರೇಲ್‌ ಮಂಗಳವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿ ಕನಿಷ್ಠ 104 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಗಾಜಾದಲ್ಲಿ ಕದನ ವಿರಾಮ ಜಾರಿಯಲ್ಲಿದೆ. ಹಮಾಸ್‌ ಇಸ್ರೇಲ್‌ ಮೇಲೆ ದಾಳಿ ನಡೆಸಿದರೆ, ಇಸ್ರೇಲ್‌ ಪ್ರತಿದಾಳಿ ನಡೆಸುವ ಹಕ್ಕಿದೆ ಎಂದು ಹೇಳಿದ್ದಾರೆ. ಜತೆಗೆ ಮಧ್ಯಪ್ರಾಚ್ಯದಲ್ಲಿ ಹಮಾಸ್‌ ಒಂದು ಸಣ್ಣ ಭಾಗ. ಅದು ಮತ್ತೆ ಬಾಲ ಬಿಚ್ಚಲು […]

ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ| 104 ಮಂದಿ ಸಾವು Read More »

ಅಮೇರಿಕಾ ನಿರ್ಬಂಧ| ರಷ್ಯಾದಿಂದ ತೈಲ‌ ಖರೀದಿ ಸ್ಥಗಿತಕ್ಕೆ ಭಾರತ‌ ನಿರ್ಧಾರ

ಸಮಗ್ರ ನ್ಯೂಸ್: ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿ ನಿಲ್ಲಿಸಿದೆ. ಅಮೆರಿಕ ನಿರ್ಬಂಧದ ಪರಿಣಾಮ, ಪಾವತಿ ವಿಧಾನ ಕುರಿತ ಗೊಂದಲ ಬಗೆಹರಿಯುವವರೆಗೂ ರಷ್ಯಾದ ರೋಸ್‌ನೆಫ್ಟ್‌ ಮತ್ತು ಲುಕೋಯಿಲ್‌ನಿಂದ ತೈಲ ಖರೀದಿ ಸ್ಥಗಿತಕ್ಕೆ ನಿರ್ಧರಿಸಿವೆ. ಆದರೆ ತಕ್ಷಣದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೀರ್ಘ ಕಾಲೀನ ಒಪ್ಪಂದದದ ಬದಲಾಗಿ ಸ್ಪಾಟ್‌ ಮಾರ್ಕೆಟ್‌ನಿಂದ ತೈಲ ಖರೀದಿಗೆ ದೇಶದ ಅತಿದೊಡ್ಡ ತೈಲ ಉದ್ಯಮವಾದ ಇಂಡಿಯನ್‌

ಅಮೇರಿಕಾ ನಿರ್ಬಂಧ| ರಷ್ಯಾದಿಂದ ತೈಲ‌ ಖರೀದಿ ಸ್ಥಗಿತಕ್ಕೆ ಭಾರತ‌ ನಿರ್ಧಾರ Read More »

ಅಯೋಧ್ಯೆ: ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ

ಸಮಗ್ರ ನ್ಯೂಸ್: ನಿತ್ಯ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿರುವ ಅಯೋಧ್ಯೆಯ ಐತಿಹಾಸಿಕ ರಾಮಮಂದಿರದ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸೋಮವಾರ ಘೋಷಿಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಟ್ರಸ್ಟ್‌, ‘ಪ್ರಭು ಶ್ರೀರಾಮನ ಎಲ್ಲಾ ಭಕ್ತರಿಗೆ ಮಂದಿರ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಇದರಲ್ಲಿ ಮುಖ್ಯಮಂದಿರ ಮತ್ತು ಆವರಣದೊಳಗಿನ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಭಗವತಿ ಮತ್ತು ಅನ್ನಪೂರ್ಣ ದೇವರ 6 ಮಂದಿರಗಳು ಸೇರಿವೆ. ಜೊತೆಗೆ ಶೇಷಾವತಾರ ಮಂದಿರವೂ ಪೂರ್ಣಗೊಂಡಿದೆ.

ಅಯೋಧ್ಯೆ: ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ Read More »

ಇಳಿಕೆಯ ಹಾದಿಯತ್ತ ಚಿನ್ನದ ದರ| ಆಭರಣ ಪ್ರಿಯರಿಗೆ ದಿಲ್ ಖುಷ್

ಸಮಗ್ರ ನ್ಯೂಸ್: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ ಮುಂದುವರಿದಿದೆ. ಕಳೆದ ಹತ್ತು ದಿನದಲ್ಲಿ ಈ ಎರಡೂ ಬೆಲೆಗಳು ಸಿಕ್ಕಾಪಟ್ಟೆ ಕುಸಿದಿವೆ. ಆಭರಣ ಚಿನ್ನದ ಬೆಲೆ (gold rate) 12,170 ರೂ ಇದ್ದದ್ದು 11,225 ರೂಗೆ ಇಳಿದಿದೆ. ಹತ್ತು ದಿನದಲ್ಲಿ ಶೇ.7-8ರಷ್ಟು ಬೆಲೆ ಕುಸಿತವಾಗಿದೆ.  ಬೆಳ್ಳಿ ಬೆಲೆಯಂತೂ ಇನ್ನೂ ಭಯಂಕರ ಕುಸಿತ ಕಂಡಿದೆ. ಅತಿರೇಕವಾಗಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಅಷ್ಟೇ ಅತಿರೇಕವಾಗಿ ಕುಸಿಯುತ್ತಿದೆ. ಹತ್ತು ದಿನಗಳ ಹಿಂದೆ 190 ರೂಗಳ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಅದರ

ಇಳಿಕೆಯ ಹಾದಿಯತ್ತ ಚಿನ್ನದ ದರ| ಆಭರಣ ಪ್ರಿಯರಿಗೆ ದಿಲ್ ಖುಷ್ Read More »

ಪ್ರಧಾನಿ ಮೋದಿ ಹತ್ಯೆಗೆ ಸಂಚು ನಡೆದಿತ್ತೇ? ಕಾದು ಕುಳಿತು ಮೋದಿಯನ್ನು ಪುಟಿನ್ ಕರೆದೊಯ್ದಿದ್ದೇಕೆ? ಯುಎಸ್ ಅಧಿಕಾರ ಬಿಚ್ಚಿಟ್ಟ ಸ್ಪೋಟಕ ಸತ್ಯ!!

ಸಮಗ್ರ ನ್ಯೂಸ್: ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಬಹಿರಂಗವಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ವಿರುದ್ಧ ಇಂಥಹದ್ದೊಂದು ಆರೋಪ ಕೇಳಿಬರುತ್ತಿದ್ದು, ಈ ಕುರಿತಂತೆ ಸಾಕಷ್ಟು ಮಾಧ್ಯಮಗಳು ವರದಿಗಳನ್ನು ಪ್ರಕಟಿಸುತ್ತಿದೆ. ಅಮೆರಿಕ ಭಾರತದ ಮೇಲೆ ರಷ್ಯಾ ತೈಲ ಖರೀದಿಸದಂತೆ ಒತ್ತಡ ಹೇರುತ್ತಿರುವುದು ಹಾಗೂ ಭಾರತದ ಕೃಷಿ, ಹಾಲಿನ ಮಾರುಕಟ್ಟೆಯನ್ನು ತನಗೆ ಮುಕ್ತಮಾಡಿಕೊಡಬೇಕೆಂಬ ಬೇಡಿಕೆಗೆ ಭಾರತ ಈ

ಪ್ರಧಾನಿ ಮೋದಿ ಹತ್ಯೆಗೆ ಸಂಚು ನಡೆದಿತ್ತೇ? ಕಾದು ಕುಳಿತು ಮೋದಿಯನ್ನು ಪುಟಿನ್ ಕರೆದೊಯ್ದಿದ್ದೇಕೆ? ಯುಎಸ್ ಅಧಿಕಾರ ಬಿಚ್ಚಿಟ್ಟ ಸ್ಪೋಟಕ ಸತ್ಯ!! Read More »

ಭಾರತದ ಬಳಿಕ ಅಫ್ಘಾನಿಸ್ತಾನದಿಂದಲೂ ಪಾಕಿಸ್ತಾನಕ್ಕೆ ಜಲಕಂಟಕ| ಹೊಸ ಅಣೆಕಟ್ಟು ನಿರ್ಮಿಸಲು ತಾಲಿಬಾನ್ ನಿರ್ಧಾರ

ಸಮಗ್ರ ನ್ಯೂಸ್: ಭಾರತದ ನಂತರ ಇದೀಗ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಿಂದಲೂ ಪಾಕಿಸ್ತಾನಕ್ಕೆ ‘ಜಲಬಾಂಬ್’ ಹಾಕಲಾಗಿದೆ. ಅಣೆಕಟ್ಟು ನಿರ್ಮಿಸಲು ಮತ್ತು ಪಾಕಿಸ್ತಾನಕ್ಕೆ ನದಿ ನೀರನ್ನು ನಿರ್ಬಂಧಿಸಲು ಯೋಜಿಸುತ್ತಿದೆ. ಕುನಾರ್ ನದಿಗೆ “ಸಾಧ್ಯವಾದಷ್ಟು ಬೇಗನೆ ಅಣೆಕಟ್ಟನ್ನು ನಿರ್ಮಿಸುವ ಆದೇಶವನ್ನು ತಾಲಿಬಾನ್ ಸುಪ್ರೀಂ ನಾಯಕ ಮೌಲಾವಿ ಹಿಬತುಲ್ಲಾ ಅಖುಂದ್ಜಾದಾ ಹೊರಡಿಸಿದ್ದಾರೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಇತ್ತೀಚಿಗೆ ನಡೆದ ಯುದ್ಧದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಈ ಆದೇಶ ಬಂದಿದೆ. ಪಾಕಿಸ್ತಾನದೊಂದಿಗೆ ನೀರು ಹಂಚಿಕೆಯ ಬಗ್ಗೆ ಭಾರತದ ನಿರ್ಧಾರದಂತೆ ಇದೀಗ ಅಪ್ಘಾನಿಸ್ತಾನವೂ

ಭಾರತದ ಬಳಿಕ ಅಫ್ಘಾನಿಸ್ತಾನದಿಂದಲೂ ಪಾಕಿಸ್ತಾನಕ್ಕೆ ಜಲಕಂಟಕ| ಹೊಸ ಅಣೆಕಟ್ಟು ನಿರ್ಮಿಸಲು ತಾಲಿಬಾನ್ ನಿರ್ಧಾರ Read More »

ಮುಧೋಳ‌ ಹೌಂಡ್, ರಾಮ್ ಪುರ ದೇಸೀ ತಳಿಯ 150 ಶ್ವಾನಗಳು ಬಿಎಸ್ಎಫ್ ಗೆ ಸೇರ್ಪಡೆ

ಸಮಗ್ರ ನ್ಯೂಸ್: : ಕರ್ನಾಟಕದ ಮುಧೋಳ ಹೌಂಡ್‌ ಹಾಗೂ ಉತ್ತರ ಪ್ರದೇಶದ ರಾಮ್‌ಪುರ ಎಂಬ ದೇಸಿ ತಳಿಯ 150 ನಾಯಿಗಳಿಗೆ ಇದೇ ಮೊದಲ ಬಾರಿಗೆ ಗಡಿ ರಕ್ಷಣಾ ಪಡೆ (BSF) ತರಬೇತಿ ನೀಡುತ್ತಿದೆ. ಭಾರತದ ಪೂರ್ವ ಹಾಗೂ ಪಶ್ಚಿಮ ಭಾಗದ ಗಡಿಗಳಲ್ಲಿ ಮತ್ತು ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳುವ ಅತ್ಯಂತ ಅಪಾಯಕಾರಿ ಕಮಾಂಡೊ ಕಾರ್ಯಾಚರಣೆಯಲ್ಲಿ ಈ ಎರಡು ತಳಿಯ ನಾಯಿಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ಟೆಕಾನ್ಪುರ ಎಂಬಲ್ಲಿರುವ ಬಿಎಸ್‌ಎಫ್‌ನ ರಾಷ್ಟ್ರೀಯ ತರಬೇತಿ ಕೇಂದ್ರಕ್ಕೆ

ಮುಧೋಳ‌ ಹೌಂಡ್, ರಾಮ್ ಪುರ ದೇಸೀ ತಳಿಯ 150 ಶ್ವಾನಗಳು ಬಿಎಸ್ಎಫ್ ಗೆ ಸೇರ್ಪಡೆ Read More »

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ| ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದ ಚೀನಿವಾರಪೇಟೆ

ಸಮಗ್ರ ನ್ಯೂಸ್: ಚಿನ್ನದ ಬೆಲೆಯ (gold rate) ಏರಿಳಿಕೆ ಆಟ ನಡೆಯುತ್ತಿದೆ. ಹಳದಿ ಲೋಹದ ಬೆಲೆ ಗ್ರಾಮ್​ಗೆ 500ಕ್ಕೂ ಹೆಚ್ಚು ರೂಗಳಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಂತೂ ಭರ್ಜರಿ ಇಳಿಕೆ ಮುಂದುವರಿಸಿದೆ. ಇಂದು ಅದರ ಬೆಲೆ ಗ್ರಾಮ್​ಗೆ ಬರೋಬ್ಬರಿ 8 ರೂಗಳಷ್ಟು ಕಡಿಮೆ ಆಗಿದೆ. 162 ರೂಗೆ ಬೆಲೆ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,16,600 ರುಪಾಯಿ ಇದೆ.

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ| ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದ ಚೀನಿವಾರಪೇಟೆ Read More »

ಶಬರಿಮಲೆ‌ಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸಮಗ್ರ ನ್ಯೂಸ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಲೆ ಮೇಲೆ ಇರುಮುಡಿ ಹೊತ್ತು, ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಮಹಿಳಾ ರಾಷ್ಟ್ರಪತಿಯಾಗಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ ಮೊದಲಿಗರು ಎಂದು ಮುರ್ಮು ದಾಖಲೆ ಬರೆದಿದ್ದಾರೆ. ಅಲ್ಲದೆ ಅಯ್ಯಪ್ಪ ಸನ್ನಿಧಿಗೆ ಭೇಟಿ ನೀಡಿದ ಭಾರತದ ಎರಡನೇ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಇಂದು

ಶಬರಿಮಲೆ‌ಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು Read More »

ರಾಜ್ಯದಲ್ಲಿ SSLC, ಪಿಯುಸಿ ಉತ್ತೀರ್ಣಕ್ಕೆ‌ 33 ಅಂಕ‌ ಸಾಕು – ಮಧು ಬಂಗಾರಪ್ಪ

ಸಮಗ್ರ ನ್ಯೂಸ್: ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂಬಂತೆ ಪಾಸ್ ಆಗುವ ಕನಿಷ್ಟ ಅಂಕವನ್ನು ಇಳಿಕೆ ಮಾಡಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು 600 ಕ್ಕೆ 198 ಅಂಕ ಪಡೆದರೆ ಪಾಸ್ ಆಗುತ್ತಾರೆ .ಇನ್ನು ಮುಂದೆ ಉತ್ತೀರ್ಣ ಅಂಕವನ್ನು 33ಕ್ಕೆ ನಿಗದಿ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಇನ್ನು ಮುಂದೆ ಉತ್ತೀರ್ಣ ಅಂಕವನ್ನು 33ಕ್ಕೆ ನಿಗದಿ ಮಾಡಲಾಗುವುದು . ಕನ್ನಡ ಭಾಷೆಗೆ ನಿಗದಿ ಮಾಡಿರುವ 125 ಅಂಕವನ್ನು 100ಕ್ಕೆ

ರಾಜ್ಯದಲ್ಲಿ SSLC, ಪಿಯುಸಿ ಉತ್ತೀರ್ಣಕ್ಕೆ‌ 33 ಅಂಕ‌ ಸಾಕು – ಮಧು ಬಂಗಾರಪ್ಪ Read More »