ಇಳಿಕೆಯ ಹಾದಿಯತ್ತ ಚಿನ್ನದ ದರ| ಆಭರಣ ಪ್ರಿಯರಿಗೆ ದಿಲ್ ಖುಷ್

ಸಮಗ್ರ ನ್ಯೂಸ್: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ ಮುಂದುವರಿದಿದೆ. ಕಳೆದ ಹತ್ತು ದಿನದಲ್ಲಿ ಈ ಎರಡೂ ಬೆಲೆಗಳು ಸಿಕ್ಕಾಪಟ್ಟೆ ಕುಸಿದಿವೆ. ಆಭರಣ ಚಿನ್ನದ ಬೆಲೆ (gold rate) 12,170 ರೂ ಇದ್ದದ್ದು 11,225 ರೂಗೆ ಇಳಿದಿದೆ. ಹತ್ತು ದಿನದಲ್ಲಿ ಶೇ.7-8ರಷ್ಟು ಬೆಲೆ ಕುಸಿತವಾಗಿದೆ. 

. Ad Widget . Ad Widget . Ad Widget

ಬೆಳ್ಳಿ ಬೆಲೆಯಂತೂ ಇನ್ನೂ ಭಯಂಕರ ಕುಸಿತ ಕಂಡಿದೆ. ಅತಿರೇಕವಾಗಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಅಷ್ಟೇ ಅತಿರೇಕವಾಗಿ ಕುಸಿಯುತ್ತಿದೆ. ಹತ್ತು ದಿನಗಳ ಹಿಂದೆ 190 ರೂಗಳ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಅದರ ಬೆಲೆ ಶೇ. 20ರಷ್ಟು ಕುಸಿದು 151 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,12,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,22,460 ರುಪಾಯಿ ಆಗಿದೆ.

. Ad Widget .

100 ಗ್ರಾಮ್ ಬೆಳ್ಳಿ ಬೆಲೆ 15,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,12,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,500 ರೂ ಇದೆ..

ಕೆಲವೇ ತಿಂಗಳುಗಳಲ್ಲಿ ಚಿನ್ನದ ಬೆಲೆ ಸುಮಾರು 75,000 ರೂ.ಗಳಿಂದ 1.30 ಲಕ್ಷ ರೂ.ಗಳಿಗೆ ಏರಿಕೆಯಾದ ನಂತರ ಈ ಕುಸಿತವು ನಿರೀಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಸುಮಾರು 10-15% ರಷ್ಟು ಇಳಿಕೆ ನಿರೀಕ್ಷಿಸಲಾಗಿತ್ತು, ಈ ಬೆಲೆಗಳು 10 ಗ್ರಾಂಗೆ 1.15 ಲಕ್ಷ ರೂ.ಗಳಿಗೆ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದೆ.

Leave a Comment

Your email address will not be published. Required fields are marked *