ರಾಷ್ಟ್ರೀಯ

ಪ್ರಧಾನಿ ಭಾಷಣದ ವೇಳೆ ಪೆಂಡಾಲ್ ನಿಂದ ಬೋಲ್ಟ್ ತೆಗೆದ ಭೂಪ| ಆರೋಪಿಯನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಗುಜರಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವಾಗಲೇ ಸಾರ್ವಜನಿಕವಾಗಿ ಹಾಕಲಾದ ಪೆಂಡಾಲ್‌ನಿಂದ ಬೋಲ್ಟ್ ಅನ್ನು ತೆಗದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 31ರಂದು ಥರಾಡ್‌ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯಲ್ಲಿನ ವಿಡಿಯೋವೊಂದು ವೈರಲ್ ಆಗಿತ್ತು. ಒಂದು ಕಡೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಸಾರ್ವಜನಿಕ ಸಭೆಗಾಗಿ ಹಾಕಿದ್ದ ಮಂಟಪದ ಬೋಲ್ಟ್ ಅನ್ನು ಬಿಚ್ಚಿ, ತೆಗೆಯುತ್ತಿರುವುದು ವಿಡಿಯೋದಲ್ಲಿ ಗೋಚರಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ […]

ಪ್ರಧಾನಿ ಭಾಷಣದ ವೇಳೆ ಪೆಂಡಾಲ್ ನಿಂದ ಬೋಲ್ಟ್ ತೆಗೆದ ಭೂಪ| ಆರೋಪಿಯನ್ನು ಬಂಧಿಸಿದ ಪೊಲೀಸರು Read More »

‘ಹೊಡಿತಾಳೆ, ಬಡೀತಾಳೆ ನನ್ ಹೆಂಡ್ತಿ’ | ಕಾಟ ತಾಳಲಾರದೆ ಮೋದಿಗೆ ಮೊರೆಯಿಟ್ಟ ಪತಿ ಮಹಾಶಯ

ಸಮಗ್ರ ನ್ಯೂಸ್: ನಾವು ಹೆಚ್ಚಾಗಿ ಗಂಡ ಹೆಂಡತಿಗೆ ಹಿಂಸೆ ಕೇಳುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ, ಆದರೆ ಇಲ್ಲಿ ವಿರುದ್ಧ ಪತ್ನಿ ಕಿರುಕುಳ ನೀಡುತ್ತಾಳೆ ಎಂದು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ ಪತಿರಾಯ ಸಹಾಯಕ್ಕೆ ಮೊರೆಯಿಟ್ಟಿದ್ದಾನೆ. ಸದ್ಯ ಈತನ ಪೋಸ್ಟ್ ವೈರಲ್ ಆಗಿದೆ. ನನ್ನ ಪತ್ನಿ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂಬುದು ಟ್ವಿಟ್ಟರ್ ಮೂಲಕ ಪ್ರಧಾನಿ ಮೋದಿ, ಕಾನೂನು ಸಚಿವ ಕಿರಣ್ ರಿಜುಜು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದಾನೆ. ಈತನ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ

‘ಹೊಡಿತಾಳೆ, ಬಡೀತಾಳೆ ನನ್ ಹೆಂಡ್ತಿ’ | ಕಾಟ ತಾಳಲಾರದೆ ಮೋದಿಗೆ ಮೊರೆಯಿಟ್ಟ ಪತಿ ಮಹಾಶಯ Read More »

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ| ನಾಳೆಯಿಂದ ಹೊಸ ದರ ಜಾರಿ

ಸಮಗ್ರ ನ್ಯೂಸ್: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಲಾಗಿದೆ. ತೈಲ ಕಂಪನಿಗಳು ದರಪರಿಷ್ಕರಣೆ ಮಾಡಿದ್ದು, ಪ್ರತಿ ಲೀಟರ್ ಗೆ ಪೆಟ್ರೋಲ್ ಹಾಗೂ ಡೀಸೆಲ್ ಗೆ 40 ಪೈಸೆ ಕಡಿಮೆ ಮಾಡಲಾಗಿದೆ. ಹೊಸ ಬೆಲೆಗಳು ಮಂಗಳವಾರ(ನ.1)ದಿಂದ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿವೆ. ನವದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 96.72 ರೂ., ಮುಂಬೈನಲ್ಲಿ 106.31 ರೂ.ಕೊಲ್ಕತ್ತಾ ದಲ್ಲಿ ಪೆಟ್ರೋಲ್ ಗೆ 106.03 ರೂ., ಚೆನ್ನೈನಲ್ಲಿ 102.63 ರೂ ಆಗಿದೆ. ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ| ನಾಳೆಯಿಂದ ಹೊಸ ದರ ಜಾರಿ Read More »

ಪ್ರೆಂಚ್ ಓಪನ್ ಡಬಲ್ಸ್ | ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಜೋಡಿ

ಸಮಗ್ರ ನ್ಯೂಸ್: ಫ್ರೆಂಚ್ ಓಪನ್ ಸೂಪರ್ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ವಿರುದ್ಧ ನೇರ ಗೇಮ್‌ಗಳ ಜಯದೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 48 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ವಿಶ್ವದ ಎಂಟನೇ ಶ್ರೇಯಾಂಕದ ಜೋಡಿ 25ನೇ ಶ್ರೇಯಾಂಕದ ಲು ಮತ್ತು ಯಾಂಗ್‌ರನ್ನು 21-13, 21-19 ಅಂತರದಿಂದ ಮಣಿಸಿದರು.

ಪ್ರೆಂಚ್ ಓಪನ್ ಡಬಲ್ಸ್ | ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಜೋಡಿ Read More »

ನಾಳೆ(ನ.1) ದೇಶದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಿಡುಗಡೆ| 9 ಬ್ಯಾಂಕ್ ಗಳಿಗೆ ಮಾನ್ಯತೆ

ಸಮಗ್ರ ನ್ಯೂಸ್: ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಮೊದಲ ಪೈಲಟ್ ಡಿಜಿಟಲ್ ರೂಪಾಯಿ (ಸಗಟು ವಿಭಾಗ) ಅನ್ನು ಸರ್ಕಾರಿ ಸೆಕ್ಯುರಿಟಿಗಳಲ್ಲಿನ ವಹಿವಾಟುಗಳಿಗಾಗಿ ಮಂಗಳವಾರ ಬಿಡುಗಡೆ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಸರ್ಕಾರಿ ಸೆಕ್ಯುರಿಟಿಗಳಲ್ಲಿ ದ್ವಿತೀಯ ಮಾರುಕಟ್ಟೆ ವಹಿವಾಟುಗಳನ್ನು ಇತ್ಯರ್ಥಪಡಿಸುವುದು ಪೈಲಟ್ಗೆ ಬಳಕೆಯಾಗಿದೆ ಎಂದು ಆರ್ಬಿಐ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್,

ನಾಳೆ(ನ.1) ದೇಶದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಿಡುಗಡೆ| 9 ಬ್ಯಾಂಕ್ ಗಳಿಗೆ ಮಾನ್ಯತೆ Read More »

ಗುಜರಾತ್ ನಲ್ಲೊಂದು ಘೋರ ದುರಂತ| ಕೇಬಲ್ ಸೇತುವೆ ಕುಸಿದು 400 ಮಂದಿ ನದಿಪಾಲು!!

ಸಮಗ್ರ ನ್ಯೂಸ್: ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ಭಾರೀ ದೊಡ್ಡ ದುರಂತವೊಂದು ಸಂಭವಿಸಿದ್ದು, ಇಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೇಬಲ್ ಸೇತುವೆ ಕುಸಿದಿದ್ದರಿಂದ ಸುಮಾರು 400ರಷ್ಟು ಜನರು ನದಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಸ್ಥಳೀಯ ಮಾಹಿತಿಗಳ‌ ಪ್ರಕಾರ, ಮಚ್ಚು ನದಿಗೆ ನಿರ್ಮಿಸಲಾದ ಈ ಕೇಬಲ್ ಸೇತುವೆ ಸಾಕಷ್ಟು ಹಳೆಯದಾಗಿದ್ದು, ಇದನ್ನು ಪಾರಂಪರಿಕ ಸೇತುವೆಯಲ್ಲಿ ಸೇರಿಸಲಾಗಿತ್ತು. ದೀಪಾವಳಿಯ ನಂತರ, ಗುಜರಾತಿ ಹೊಸ ವರ್ಷದಂದು ರಿಪೇರಿ ಮಾಡಿದ ನಂತರ ಅದನ್ನ ಮತ್ತೆ ಸೇತುವೆಯನ್ನು ಜನರ ಉಪಯೋಗಕ್ಕೆ ತೆರೆಯಲಾಗಿತ್ತು. ಸದ್ಯ

ಗುಜರಾತ್ ನಲ್ಲೊಂದು ಘೋರ ದುರಂತ| ಕೇಬಲ್ ಸೇತುವೆ ಕುಸಿದು 400 ಮಂದಿ ನದಿಪಾಲು!! Read More »

ಕೂದಲೆಳೆಯಲ್ಲಿ ತಪ್ಪಿತು ಘೋರ ದುರಂತ| ಪೈಲಟ್ ನ ಸಮಯಪ್ರಜ್ಞೆ ಉಳಿಸಿತು ಪ್ರಯಾಣಿಕರ ಪ್ರಾಣ

ಸಮಗ್ರ ನ್ಯೂಸ್: ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ್ದು, ಇಂಡಿಗೋ ವಿಮಾನದ ಪೈಲಟ್ ನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ. ದೆಹಲಿಯಿಂದ ಬೆಂಗಳೂರಿಗೆ ಹೊರಟ್ಟಿದ ಇಂಡಿಗೋ ವಿಮಾನದ ಇಂಜಿನ್​ನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಪೈಲೆಟ್​ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಕಳೆದ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ 6E-2131 ನಂಬರಿನ ಇಂಡಿಗೋ ವಿಮಾನ ಟೇಕಾಫ್‌ ಆಗುತ್ತಿತ್ತು. ಆದರೆ ಟೇಕಾಫ್​​ ಆಗುತ್ತಿದ್ದಂತೆ ವಿಮಾನದ ಬಲಭಾಗದ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್​​ ಬೆಂಕಿ ಕಾಣಿಸಿಕೊಳ್ತಿದ್ದಂತೆ ಪೈಲೆಟ್ ತಕ್ಷಣವೇ ವಿಮಾನವನ್ನ

ಕೂದಲೆಳೆಯಲ್ಲಿ ತಪ್ಪಿತು ಘೋರ ದುರಂತ| ಪೈಲಟ್ ನ ಸಮಯಪ್ರಜ್ಞೆ ಉಳಿಸಿತು ಪ್ರಯಾಣಿಕರ ಪ್ರಾಣ Read More »

ಕಾಸರಗೋಡು: ನಿಯಂತ್ರಣ ತಪ್ಪಿ ಸ್ಕೂಟರ್ ಪಲ್ಟಿ; ಸವಾರ ಸಾವು

ಸಮಗ್ರ ನ್ಯೂಸ್: ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು , ಇಬ್ಬರು ಗಾಯಗೊಂಡ ಘಟನೆ ಶನಿವಾರ ಸಂಜೆ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಪೇರಾಲ್ – ಕಣ್ಣೂರು ರಸ್ತೆಯಲ್ಲಿ ನಡೆದಿದೆ. ಪೆರುವಾಡ್ ಕಡಪ್ಪುರದ ಅನಾಸ್ ( ೨೭) ಮೃತಪಟ್ಟವರು. ಜೊತೆಗಿದ್ದ ಮೊಗ್ರಾಲ್ ರಹಮತ್ ನಗರದ ಮುಹಮ್ಮದ್ ಪುಳಿಕ್ಕೂರಿನ ಮುಹಮ್ಮದ್ ( ೨೦) ಮತ್ತು ಸುಹೈಲ್ ( ೨೮) ಗಾಯಗೊಂಡಿದ್ದಾರೆ. ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಸುಹೈಲ್ ನ ಸ್ಥಿತಿ

ಕಾಸರಗೋಡು: ನಿಯಂತ್ರಣ ತಪ್ಪಿ ಸ್ಕೂಟರ್ ಪಲ್ಟಿ; ಸವಾರ ಸಾವು Read More »

‘ಟ್ವಿಟರ್’ ಅನ್ನು ಸುಪರ್ದಿಗೆ ಪಡೆದುಕೊಂಡ ಎಲಾಮ್ ಮಸ್ಕ್| ಸಿಇಒ ಪರಾಗ್ ಅಗರ್ ವಾಲ್ ಸೇರಿ‌ ಹಲವರಿಗೆ ಗೇಟ್ ಪಾಸ್

ಸಮಗ್ರ ನ್ಯೂಸ್: ಟೆಸ್ಲಾ ಸಿಇಒ ಎಲಾನ್ ಮಸ್ಕ್() ಅವರು ಟ್ವಿಟರ್‌ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಅದರ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದಾರೆ ಎಂದು ಯುಎಸ್ ಮಾಧ್ಯಮ ಗುರುವಾರ ತಡವಾಗಿ ವರದಿ ಮಾಡಿದೆ. ಮಸ್ಕ್ ಅವರು ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮತ್ತು ಕಾನೂನು ನೀತಿ, ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥರನ್ನು ವಜಾಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೂಲಗಳ ಪ್ರಕಾರ, ಮಸ್ಕ್‌ ಅವರೇ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಟ್ವಿಟ್ಟರ್‌

‘ಟ್ವಿಟರ್’ ಅನ್ನು ಸುಪರ್ದಿಗೆ ಪಡೆದುಕೊಂಡ ಎಲಾಮ್ ಮಸ್ಕ್| ಸಿಇಒ ಪರಾಗ್ ಅಗರ್ ವಾಲ್ ಸೇರಿ‌ ಹಲವರಿಗೆ ಗೇಟ್ ಪಾಸ್ Read More »

ನಾವು ಸತ್ತ ಮೇಲೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳು ಏನಾಗುತ್ತೆ ಗೊತ್ತಾ? ಇಲ್ಲಿದೆ ಉತ್ತರ…

ಸಮಗ್ರ ನ್ಯೂಸ್: ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್ , ಇನ್​​ಸ್ಟಾಗ್ರಾಮ್ ಅಥವಾ ಟ್ವಿಟರ್ ಖಾತೆ ಏನಾಗುತ್ತದೆ?. ಈ ರೀತಿಯ ಅನೇಕ ಪ್ರಶ್ನೆಗಳು ಬಹುತೇಕರಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ಪರಿಣಾಮ ಬೀರಿರುವುದು ನಿಜ. ಹೆಚ್ಚಿನ ಜನರಲ್ಲಿ ಕನಿಷ್ಠ ಯಾವುದಾದರೂ ಒಂದು ರೀತಿಯ ಸಾಮಾಜಿಕ ಜಾಲತಾಣದ ಖಾತೆ ಇದ್ದೇ ಇರುತ್ತದೆ. ಆದರೆ ನಿಮ್ಮ ಸಾವಿನ ಬಳಿಕ ಈ ಖಾತೆ ಏನಾಗುವುದು ಎಂದು ನಿಮಗೆ ತಿಳಿದಿದೆಯಾ?. ಸತ್ತ ಮೇಲೆ

ನಾವು ಸತ್ತ ಮೇಲೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳು ಏನಾಗುತ್ತೆ ಗೊತ್ತಾ? ಇಲ್ಲಿದೆ ಉತ್ತರ… Read More »